ಆದಾಯ ಹಂಚಿಕೆ ಮಾಹಿತಿ ನೀಡದ 7ಸಕ್ಕರೆ ಕಾರ್ಖಾನೆಗೆ ನೋಟಿಸ್
Team Udayavani, Jan 25, 2019, 1:07 AM IST
ಬೆಂಗಳೂರು: ಕಬ್ಬು ಹಂಗಾಮಿನ ಬಳಿಕ ಆದಾಯ ಹಂಚಿಕೆ ಮಾಹಿತಿ ನೀಡದ ಏಳು ಸಕ್ಕರೆ ಕಾರ್ಖಾನೆಗಳಿಗೆ ಈಗಾಗಲೇ ನೋಟಿಸ್ ಮೂಲಕ ಎಚ್ಚರಿಕೆ ನೀಡಲಾಗಿದ್ದು, ಶೀಘ್ರವೇ ಮಾಹಿತಿ ನೀಡುವಂತೆ ಸೂಚಿಸಲಾಗಿದೆ ಎಂದು ಸಕ್ಕರೆ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.
ವಿಕಾಸಸೌಧದಲ್ಲಿ ಗುರುವಾರ ಪ್ರಥಮ ಬಾರಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಕಬ್ಬು ಹಂಗಾಮಿನ ಬಳಿಕ ಜಮಖಂಡಿಯ ಜಮಖಂಡಿ ಶುಗರ್, ಮುಧೋಳದ ನಿರಾಣಿ ಶುಗರ್, ಜಮಖಂಡಿಯ ಸಾಯಿ ಪ್ರಿಯ ಶುಗರ್, ವಿಜಯಪುರದ ಜಮಖಂಡಿ ಶುಗರ್, ವಿಜಯಪುರದ ಭೀಮಾಶಂಕರ್ ಶುಗರ್, ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ, ಬೆಳಗಾವಿಯ ಸೌಭಾಗ್ಯ ಲಕ್ಷ್ಮೀ ಶುಗರ್ ಕಾರ್ಖಾನೆಗಳು ಈವರೆಗೆ ಆದಾಯ ಹಂಚಿಕೆ ಮಾಹಿತಿ ನೀಡಿಲ್ಲ. ಆ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದರು.
ಕಬ್ಬಿಗೆ ನ್ಯಾಯ ಮತ್ತು ಗೌರವಯುತ ದರದ (ಎಫ್ಆರ್‌ಪಿ) ಮೇಲೆ ಆದಾಯ ಹಂಚಿಕೆಯ ಪ್ರಮಾಣ ನಿಗದಿ ಮಾಡಲಾಗುವುದು. ಹಾಗೆಯೇ ಬಿತ್ತನೆ ಹಾಗೂ ಸಾಗಣೆ ವಿಷಯದಲ್ಲಿ ರೈತರು ಹಾಗೂ ಕಾರ್ಖಾನೆಗಳ ನಡುವೆ ಸಮಸ್ಯೆ ಇದೆ. ಮಹಾರಾಷ್ಟ್ರದ ವ್ಯವಸ್ಥೆ ಉತ್ತಮವಾಗಿದೆ ಎಂಬ ಮಾತಿದೆ. ಈ ಹಿನ್ನೆಲೆಯಲ್ಲಿ ಸಮಿತಿ ರಚನೆಯಾಗಿದ್ದು, ಮಹಾರಾಷ್ಟ್ರದ ವ್ಯವಸ್ಥೆಯನ್ನು ಪರಿಶೀಲಿಸಿ ವರದಿ ನೀಡಲಿದೆ ಎಂದು ತಿಳಿಸಿದರು.
ಶೇ.48ರಷ್ಟು ಹಣ ಪಾವತಿ: 2013-14ನೇ ಸಾಲಿನಿಂದ 2017-18ನೇ ಸಾಲಿನವರೆಗೆ ಎರಡು ಸಕ್ಕರೆ ಕಾರ್ಖಾನೆಗಳಷ್ಟೇ 22.54 ಕೋಟಿ ರೂ. ಬಾಕಿ ಉಳಿಸಿಕೊಂಡಿವೆ. ಈ ಪೈಕಿ ಒಂದು ಸಹಕಾರ ಸಕ್ಕರೆ ಕಾರ್ಖಾನೆಯಾಗಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ಮತ್ತೂಂದು ಮಲಪ್ರಭಾ ಶುಗರ್ ಕಾರ್ಖಾನೆಯು ಬಾಕಿ ಉಳಿಸಿಕೊಂಡಿದ್ದು, ಕಾರ್ಖಾನೆಯಲ್ಲಿನ ಸಕ್ಕರೆಯನ್ನು ಇ- ಟೆಂಡರ್ ಮೂಲಕ ಹರಾಜಿಗೆ ಯತ್ನಿಸಿದರೂ ಸ್ಪಂದನೆ ಸಿಕ್ಕಿಲ್ಲ. ಹಾಗಾಗಿ ಸಾರ್ವಜನಿಕ ಹರಾಜಿಗೆ ಪ್ರಯತ್ನ ನಡೆದಿದೆ. 2018-19ನೇ ಹಣಕಾಸು ವರ್ಷದಲ್ಲಿ ಈವರೆಗೆ ರೈತರಿಗೆ ಶೇ.48ರಷ್ಟು ಮೊತ್ತ ಪಾವತಿಯಾಗಿದೆ. ವಿಳಂಬ ತೋರಿದ್ದ ಕಾರ್ಖಾನೆಗಳಿಗೆ ನೋಟಿಸ್ ನೀಡಿ ತ್ವರಿತವಾಗಿ ಪಾವತಿಸುವಂತೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಆಪತ್ ನಿಧಿಗೆ ಚಿಂತನೆ: ಕಬ್ಬಿಗೆ ಎಫ್ಆರ್‌ಪಿ ನಿಗದಿ ನಂತರವೂ ಉಂಟಾಗುವ ನಷ್ಟವನ್ನು ಭರಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿಲ್ಲ. ಹಾಗಾಗಿ ಸಕ್ಕರೆ ಕಾರ್ಖಾನೆಗಳ ಅನುಕೂಲಕ್ಕಾಗಿ ಆಪತ್ ನಿಧಿ ರೂಪಿಸಲು ಚಿಂತಿಸಲಾಗಿದೆ. ಕಾರ್ಖಾನೆಗಳು ಶೇ.80ರಷ್ಟು ಸಾಲ ಪಡೆಯುತ್ತಿದ್ದು, ಉಳಿದ ಶೇ.20ರಷ್ಟು ಸಾಲವನ್ನು ಕಡಿಮೆ ಬಡ್ಡಿ ದರದಲ್ಲಿ ನೀಡಲು ಚಿಂತನೆ ನಡೆದಿದೆ. ಹಾಗೆಯೇ ಕೋ-ಜನ್‌ನಿಂದ ಉತ್ಪಾದಿಸುವ ವಿದ್ಯುತ್ ಖರೀದಿ ದರ ಹೆಚ್ಚಳಕ್ಕೆ ಸಂಬಂಧಪಟ್ಟಂತೆ ಇಂಧನ ಇಲಾಖೆಯೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಹೇಳಿದರು.
ಸಕ್ಕರೆ ಉತ್ಪಾದನೆ ಹೆಚ್ಚಳ
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ (ಎಂಎಸ್‌ಎಂಇ ಮತ್ತು ಗಣಿ) ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ, ಸಕ್ಕರೆ ಕಾರ್ಖಾನೆಗಳು 15 ದಿನದಲ್ಲಿ ರೈತರಿಗೆ ಹಣ ಪಾವತಿಸಬೇಕೆಂಬ ನಿಯಮವಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಈವರೆಗೆ ಶೇ.48ರಷ್ಟು ಹಣ ಪಾವತಿಯಾಗಿದೆ. ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ ಶೇ.20ರಿಂದ ಶೇ.25ರಷ್ಟು ಹಣವಷ್ಟೇ ಪಾವತಿಯಾಗಿದೆ. ಹಣ ಪಾವತಿಸದ ಕಾರ್ಖಾನೆಗಳಿಗೆ ನೋಟಿಸ್ ನೀಡಲಾಗಿದ್ದು, ಸ್ಪಂದಿಸದಿದ್ದರೆ ಸಕ್ಕರೆ ಜಫ್ತಿಗೂ ಕ್ರಮ ವಹಿಸಲಾಗುವುದು ಎಂದರು. ದೇಶದಲ್ಲಿ ಸಕ್ಕರೆ ಉತ್ಪಾದನೆ ಹೆಚ್ಚಾಗಿದೆ. ಬಳಕೆ ಸುಮಾರು 25 ಲಕ್ಷ ಟನ್ ಇದ್ದರೆ, ಉತ್ಪಾದನೆ 35ರಿಂದ 40 ಲಕ್ಷ ಟನ್ ಆಗುವ ನಿರೀಕ್ಷೆ ಇದೆ. ಕಳೆದ ವರ್ಷದ ಬಾಕಿ 10 ಲಕ್ಷ ಟನ್ ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಕಬ್ಬಿನ ದರ ಇಳಿಕೆಯಾಗಿರುವುದರಿಂದ ಉದ್ಯಮ ಸಂಕೀರ್ಣ ಸ್ಥಿತಿಯಲ್ಲಿದೆ ಎಂದರು.
ಹೆಚ್ಚುವರಿ 250 ರೂ.ಗೆ ಮನವಿ
ಸಭೆ ಬಳಿಕ ಪ್ರತಿಕ್ರಿಯಿಸಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಕೇಂದ್ರ ಸರ್ಕಾರ ನಿಗದಿಪಡಿಸಿರುವ ಎಫ್ಆರ್‌ಪಿ ದರದ ಮೇಲೆ 250 ರೂ. ಹೆಚ್ಚುವರಿಯಾಗಿ ನೀಡಬೇಕು ಎಂದು ಮನವಿ ಮಾಡಲಾಗಿದೆ. ಮುಖ್ಯಮಂತ್ರಿಗಳು ಶುಕ್ರವಾರ ಕರೆದಿರುವ ಸಭೆಯಲ್ಲೂ ಈ ಬಗ್ಗೆ ಪ್ರಸ್ತಾಪಿಸಲಾಗುವುದು. ಎಸ್‌ಎಪಿ ಕಾಯ್ದೆಗೆ ತಿದ್ದುಪಡಿ ತಂದು ನಿಯಮ ಉಲ್ಲಂಘಿಸುವವರಿಗೆ ಜೈಲು ಶಿಕ್ಷೆ ಹಾಗೂ ದುಬಾರಿ ದಂಡ ವಿಧಿಸುವ ಅಂಶ ಸೇರಿಸುವಂತೆ ಕೋರಲಾಗಿದೆ ಎಂದರು. ರೈತರಿಗೆ ಕಬ್ಬು ಇಳುವರಿ ಪ್ರಮಾಣ, ತೂಕದಲ್ಲಿ ವಂಚನೆಯಾಗುತ್ತಿದೆ. ಹಾಗಾಗಿ ರೈತರ ಹೊಲದಲ್ಲೇ ಕಬ್ಬಿನ ದರ ನಿಗದಿಪಡಿಸಿ ಕಟಾವು ಹಾಗೂ ಸಾಗಣೆಯನ್ನು ಕಾರ್ಖಾನೆಯೇ ಕೈಗೊಳ್ಳುವ ವ್ಯವಸ್ಥೆ ತರಬೇಕು ಎಂದು ಕೋರಲಾಯಿತು. ಈ ಬಗ್ಗೆ ಪರಿಶೀಲನೆಗೆ ಅಧ್ಯಯನ ಸಮಿತಿ ರಚಿಸುವುದಾಗಿ ಹೇಳಿದ್ದು, ತಿಂಗಳಲ್ಲಿ ವರದಿ ನೀಡಲಿದೆ. 2.60 ಕೋಟಿ ಟನ್ ಕಬ್ಬು ಅರೆಯಲಾಗಿದ್ದು, ಈವರೆಗೆ ಅರ್ಧದಷ್ಟು ಹಣವೂ ರೈತರಿಗೆ ಪಾವತಿಯಾಗಿಲ್ಲ. ಕೂಡಲೇ ಬಾಕಿ ಪಾವತಿಸುವಂತೆ ಒತ್ತಾಯಿಸಲಾಯಿತು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Waqf: ರೈತರಿಗೆ ನೀಡಿರುವ ನೋಟಿಸ್ ತಕ್ಷಣ ವಾಪಸ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
Waqf Issue: ನ.4ರಂದು ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ
High Court: ಕ್ರಿಮಿನಲ್ ಕೇಸ್ ಡೈರಿ ಪ್ರತೀ ಪುಟಕ್ಕೆ ಸಹಿ:ಅರ್ಜಿ ವಜಾಗೊಳಿಸಿದ ಹೈಕೋರ್ಟ್
Bengaluru: ಸುವರ್ಣ ಸಂಭ್ರಮದಲ್ಲಿ ರಾಜ್ಯೋತ್ಸವ ವೈಭವ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.