![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Jul 30, 2024, 11:39 PM IST
ಬೆಂಗಳೂರು: ಭಾರತಕ್ಕೆ ಅಪಾರ ಪ್ರಮಾಣದಲ್ಲಿ ಶ್ರೀಲಂಕಾದಿಂದ ಅಡಿಕೆ ಕಳ್ಳಸಾಗಣೆ ಆಗುತ್ತಿದೆ. ಶ್ರೀಲಂಕಾದಲ್ಲಿ ಅಷ್ಟು ಪ್ರಮಾಣದಲ್ಲಿ ಅಡಿಕೆ ಬೆಳೆಯದಿದ್ದರೂ ಮಲೇಷ್ಯಾ, ಇಂಡೊನೇಷ್ಯಾ ಮತ್ತು ಕಾಂಬೋಡಿಯಾದಿಂದ ಶ್ರೀಲಂಕಾಕ್ಕೆ ಬಂದು ಅಲ್ಲಿಂದ ಭಾರತಕ್ಕೆ ಕಳ್ಳಸಾಗಣೆ ಆಗುತ್ತಿದೆ ಎಂದು ವ್ಯೂಹಾತ್ಮಕ ವ್ಯವಹಾರಗಳಿಗಾಗಿನ ದಕ್ಷಿಣ ಏಷ್ಯಾದ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕಿ ಪ್ರಭಾ ರಾವ್ ಹೇಳಿದರು.
ನಗರದ ಹೋಟೆಲ್‌ನಲ್ಲಿ ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ಕಾಸ್ಕೆಡ್ ಆಯೋಜಿಸಿದ್ದ “ಅಕ್ರಮ ವ್ಯಾಪಾರದ ಮೇಲೆ ಯುದ್ಧ: ಒಳನೋಟಗಳು, ಸವಾಲುಗಳು ಮತ್ತು ಪರಿಹಾರಗಳು’ ಎಂಬ ವಿಚಾರ ಸಂಕಿರಣ ದಲ್ಲಿ ಪಾಲ್ಗೊಂಡು ಮಾತನಾಡಿದರು.
ಶ್ರೀಲಂಕಾಕ್ಕೆ ಬರುವ ಅಡಿಕೆಯ ಗುಣಮಟ್ಟ ಅಷ್ಟೊಂದು ಉತ್ತಮವಾಗಿ ರುವುದಿಲ್ಲ. ಹೊಳಪು ಬರಲು ಕೆಲವು ರಾಸಾಯನಿಕಗಳನ್ನು ಬಳಸಲಾಗುತ್ತದೆ. ಅವುಗಳು ಅಪಾಯಕಾರಿಯಾಗಿದ್ದು ಕ್ಯಾನ್ಸರ್ ಕಾರಕವಾಗಿವೆ. ಅಡಿಕೆ ಕಳ್ಳ
ಸಾಗಣೆ ಒಂದು ಸಂಘಟಿತ ಅಪರಾಧ ವಾಗಿ ರೂಪುಗೊಂಡಿದೆ ಎಂದರು.
ಉದ್ಯೋಗ ನಷ್ಟ
ಕಳ್ಳಸಾಗಣೆಯಿಂದಾಗಿ ಕರಕುಶಲ ಕರ್ಮಿಗಳು ಸೇರಿದಂತೆ ಹಲವು ಉದ್ಯೋಗ ನಷ್ಟವಾಗುತ್ತದೆ. ನೈಜ ಪಾಶ್ಮಿನಾ ಬಟ್ಟೆಗಳಿಗಿಂತ ನಕಲಿ ಪಾಶ್ಮಿನಾ ಬಟ್ಟೆಗಳು ಮಾರುಕಟ್ಟೆಯಲ್ಲಿದ್ದು ನೈಜ ಪಾಶ್ಮಿನಾ ಬಟ್ಟೆ ತಯಾರಕರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಬನಾರಸ್ ಸಿಲ್ಕ್ ಬಟ್ಟೆ, ಕರ್ನಾಟಕದ ಬಿದರಿ ಕಲೆ ಸೇರಿದಂತೆ ಹಲವು ಕರಕುಶಲ ಕಲೆಗಳು ತೊಂದರೆಗೆ ಸಿಲುಕಿವೆ ಎಂದು ಹೇಳಿದರು.
ಕೈಗಾರಿಕೆ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ ಮಾತನಾಡಿ, ಕಳ್ಳಸಾಗಣೆ ಮತ್ತು ನಕಲು ಭಯೋ ತ್ಪಾದಕ ಗುಂಪುಗಳಿಗೆ ಹಣಕಾಸಿನ ನೆರವು ನೀಡುವುದರ ಜತೆಗೆ ಜಾಗತಿಕ ಭದ್ರತೆಗೆ ಅಪಾಯ ತಂದೊಡ್ಡುತ್ತದೆ. ಔಷಧದಂತಹ ವಸ್ತುಗಳ ನಕಲು ಜನರ ಆರೋಗ್ಯಕ್ಕೆ ಸಂಚಕಾರ ತರಬಲ್ಲದು. ರಾಜ್ಯ ಸರಕಾರವು ನಕಲನ್ನು ತಡೆಯಲು ಹಲವು ಕ್ರಮಗಳನ್ನು ಕೈಗೊಂಡಿದೆ. ರಾಜ್ಯದ 43 ಜಿಐ ಟ್ಯಾಗ್ ಆಗಿರುವ ಉತ್ಪನ್ನಗಳನ್ನು ಅಧಿಕೃತ ವ್ಯಕ್ತಿಗಳಿಂದ ಮಾತ್ರ ಮಾರಾಟ ಮಾಡುವ ಪ್ರಯತ್ನಕ್ಕೆ ಕೈ ಹಾಕಿದೆ ಎಂದರು.
ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್‌ನ ಮಾಜಿ ಮುಖ್ಯಸ್ಥ, ಎಫ್ಐಸಿಸಿಐ ಕಾಸ್ಕೆಡ್‌ನ ಸಲಹೆಗಾರ ಪಿ.ಸಿ. ಝಾ ಮಾತನಾಡಿ, ಶೇ. 65ರಷ್ಟು ಉತ್ಪನ್ನ ನಕಲು ಎಂದು ಗೊತ್ತಿದ್ದೂ ಬಳಸುತ್ತಿ ದ್ದೇವೆ. ಕಳ್ಳಸಾಗಣೆ ಬಗ್ಗೆ ನಾವು ಬಿಲ್ ಕೇಳುವ ಮೂಲಕ ತಡೆಯುವ ಅವಕಾಶವಿದೆ ಎಂದರು.
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
Water Resource: ನನ್ನ ಜೀವಿತಾವಧಿಯಲ್ಲೇ ನೀರಿನ ಸಮಸ್ಯೆ ಬಗೆಹರಿಯಬೇಕು: ಎಚ್.ಡಿ.ದೇವೇಗೌಡ
You seem to have an Ad Blocker on.
To continue reading, please turn it off or whitelist Udayavani.