![‘Y’ security: ತಮಿಳು ನಟ ವಿಜಯ್‌ಗೆ ಭದ್ರತೆ ಕೊಟ್ಟ ಕೇಂದ್ರ ಸರ್ಕಾರ](https://www.udayavani.com/wp-content/uploads/2025/02/vijay-1-415x234.jpg)
![‘Y’ security: ತಮಿಳು ನಟ ವಿಜಯ್‌ಗೆ ಭದ್ರತೆ ಕೊಟ್ಟ ಕೇಂದ್ರ ಸರ್ಕಾರ](https://www.udayavani.com/wp-content/uploads/2025/02/vijay-1-415x234.jpg)
Team Udayavani, Jan 29, 2025, 6:40 AM IST
ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಹಗರಣದ ವಿಚಾರಣೆಗೆ ರಾಜ್ಯ ಸರ್ಕಾರ ನೇಮಿಸಿರುವ ಏಕಸದಸ್ಯ ನ್ಯಾಯಾಂಗ ಆಯೋಗದ ನೇತೃತ್ವ ವಹಿಸಿರುವ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪಿ.ಎನ್. ದೇಸಾಯಿ ಅವರನ್ನು 3 ವರ್ಷಗಳ ಕಾಲ ಎಲ್ಲ ಸರ್ಕಾರಿ ನೇಮಕಾತಿ ಹಾಗೂ ನಿಯೋಜನೆಗಳಿಂದ ಡಿಬಾರ್ ಮಾಡಿ ಕೇಂದ್ರ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ರಾಜ್ಯ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ನ್ಯಾ. ದೇಸಾಯಿ ಅವರನ್ನು ಕೇಂದ್ರ ಸರ್ಕಾರ ಹೈದರಾಬಾದ್ ಸಿಎಟಿ ಪೀಠಕ್ಕೆ ನ್ಯಾಯಾಂಗ ಸದಸ್ಯರನ್ನಾಗಿ ನೇಮಕ ಮಾಡಿತ್ತು. ಆದರೆ, ಮುಡಾ ಹಗರಣದ ವಿಚಾರಣೆ ವಹಿಸಿರುವುದರಿಂದ 6 ತಿಂಗಳ ಬಳಿಕ ಸಿಎಟಿ ಜವಾಬ್ದಾರಿ ವಹಿಸಿಕೊಳ್ಳುವುದಾಗಿ ನ್ಯಾ. ದೇಸಾಯಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಆಗ, ಸಿಎಟಿ ನೇಮಕಾತಿ ರದ್ದುಪಡಿಸಿದ್ದಲ್ಲದೆ, ಸರ್ಕಾರದ ಯಾವುದೇ ಸ್ವಾಯತ್ತ, ಶಾಸನಬದ್ಧ ಪ್ರಾಧಿಕಾರಿಗಳಿಗೆ 3 ವರ್ಷಗಳ ಕಾಲ ನೇಮಕ ಮಾಡದಂತೆ ಡಿಬಾರ್ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ನ್ಯಾ. ದೇಸಾಯಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ 2024ರ ನವೆಂಬರ್ 7ರಂದು ಹೊರಡಿಸಿದ್ದ “ಡಿಬಾರ್’ ಆದೇಶ ಪ್ರಶ್ನಿಸಿ ನ್ಯಾ. ಪಿ.ಎನ್. ದೇಸಾಯಿ ಸಲ್ಲಿಸಿದ್ದ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಕೇಂದ್ರ ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶಿಸಿತು. ಅಲ್ಲದೆ, ಅರ್ಜಿ ಸಂಬಂಧ ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯಕ್ಕೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಫೆಬ್ರವರಿ 6ಕ್ಕೆ ಮುಂದೂಡಿತು.
ಇದಕ್ಕೂ ಮೊದಲು ನ್ಯಾ.ದೇಸಾಯಿ ಪರ ವಾದ ಮಂಡಿಸಿದ ಹಿರಿಯ ವಕೀಲ ಉದಯ ಹೊಳ್ಳ, ನ್ಯಾ. ದೇಸಾಯಿ ಅವರು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯಾಗಿದ್ದು, ಹೈದಾರಾಬಾದ್ ಪೀಠದ ಸಿಎಟಿ ನ್ಯಾಯಾಂಗ ಸದಸ್ಯರನ್ನಾಗಿ ನೇಮಕ ಮಾಡಿದ್ದಕ್ಕೆ ರಾಷ್ಟ್ರಪತಿ ಮತ್ತು ಭಾರತ ಸರ್ಕಾರಕ್ಕೆ ಧನ್ಯವಾದ ತಿಳಿಸಿ ಕಳೆದ ಆಗಸ್ಟ್ 14ರಂದು ಪತ್ರ ಬರೆದಿದ್ದಾರೆ. ಇದರಲ್ಲಿ ಮುಡಾ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ನೀಡಿರುವ ಜವಾಬ್ದಾರಿ ನಿಭಾಯಿಸುತ್ತಿದ್ದು, 6 ತಿಂಗಳಲ್ಲಿ ಜವಾಬ್ದಾರಿ ಮುಗಿಯಲಿದೆ. ಹೀಗಾಗಿ, ಸದ್ಯಕ್ಕೆ ಕೇಂದ್ರ ಸರ್ಕಾರದ ನೇಮಕಾತಿಯನ್ನು ನಿರಾಕರಿಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದ್ದರು ಎಂದರು.
ಡಿಬಾರ್‌ಗೂ ಮುನ್ನ ನೋಟಿಸ್ ಕೂಡ ನೀಡಿಲ್ಲ
ನೇಮಕಾತಿ ಪ್ರಸ್ತಾವವನ್ನು ಸಂಪುಟ ನೇಮಕಾತಿ ಸಮಿತಿಗೆ ಕಳುಹಿಸುವುದಕ್ಕೂ ಮುನ್ನ ಆಯ್ಕೆಯಾಗಿರುವವರ ಒಪ್ಪಿಗೆ ಪಡೆಯಬೇಕಿತ್ತು. ಆದರೆ, ಅದನ್ನು ಮಾಡಲಾಗಿಲ್ಲ. ಇದಾದ ಬಳಿಕ 30 ದಿನಗಳಲ್ಲಿ ನೇಮಕವಾದವರು ಕರ್ತವ್ಯಕ್ಕೆ ಹಾಜರಾಗದಿದ್ದರೆ 15 ದಿನಗಳ ಕಾಲಾವಕಾಶ ನೀಡಿ ನೋಟಿಸ್ ಜಾರಿ ಮಾಡಬೇಕು. ಅದಾಗ್ಯೂ ಅವರು ಜವಾಬ್ದಾರಿ ತೆಗೆದುಕೊಳ್ಳದಿದ್ದರೆ ಡಿಬಾರ್ ಮಾಡಬಹುದು. ಆದರೆ ಇಲ್ಲಿ, ನ್ಯಾ. ದೇಸಾಯಿ ಅವರಿಗೆ ಆಯ್ಕೆಯಾದ ಬಳಿಕ ಅವರ ಒಪ್ಪಿಗೆ ಪಡೆದಿಲ್ಲ, ಡಿಬಾರ್ ಮಾಡುವುದಕ್ಕೂ ಮುನ್ನ ನೋಟಿಸ್ ಸಹ ನೀಡಿಲ್ಲ. ನ್ಯಾ. ದೇಸಾಯಿ ಅವರನ್ನು ಸಿಎಟಿ ನ್ಯಾಯಾಂಗ ಸದಸ್ಯರನ್ನಾಗಿ ನೇಮಕ ಮಾಡುವುದರಿಂದ ಡಿಬಾರ್ ಮಾಡಲಾಗಿದೆ ಎಂಬ ಮಾಹಿತಿಯನ್ನು ಮಾಧ್ಯಮಗಳು ಪ್ರಕಟಿಸಿವೆ. ಹೀಗಾಗಿ, ಡಿಬಾರ್ ಮಾಡಿರುವ ಆದೇಶಕ್ಕೆ ತಡೆಯಾಜ್ಞೆ ವಿಧಿಸಬೇಕು ಎಂದು ವಕೀಲರು ಮನವಿ ಮಾಡಿದರು.
ಏನಿದು ಡಿಬಾರ್ ಆದೇಶ?
ನ್ಯಾ. ದೇಸಾಯಿ ಅವರು ತಮ್ಮ ಅರ್ಜಿಯಲ್ಲಿ ವ್ಯಕ್ತಪಡಿಸಿದ್ದ ಬದ್ಧತೆಯನ್ನು ಗೌರವಿಸುವಲ್ಲಿ ವಿಫಲರಾದ್ದಾರೆ ಎಂದು ಕೇಂದ್ರ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ನೇಮಕಾತಿ ರದ್ದುಪಡಿಸಿತ್ತು. ಡಿಬಾರ್ ಮಾಡುವ ನಿರ್ಧಾರ ಸಂಪುಟದ ನೇಮಕಾತಿ ಸಮಿತಿಯು ಕೈಗೊಂಡಿದೆ. ಸುಪ್ರೀಂಕೋರ್ಟ್ ನಿರ್ದೇಶನದ ಅನ್ವಯ ನ್ಯಾ. ದೇಸಾಯಿ ಅವರನ್ನು ಸರ್ಕಾರದ ಯಾವುದೇ ಸ್ವಾಯತ್ತ, ಶಾಸನಬದ್ಧ ಅಥವಾ ನಿಯಂತ್ರಣಾ ಪ್ರಾಧಿಕಾರಿಗಳಲ್ಲಿ ಸೇವೆ ಸಲ್ಲಿಸಲು 2024ರ ಅಕ್ಟೋಬರ್ 21ರಿಂದ ಪೂರ್ವಾನ್ವಯವಾಗುವಂತೆ ಡಿಬಾರ್ ಮಾಡಿ ಆದೇಶಿಸಲಾಗಿದೆ ಎಂದು ಕೇಂದ್ರ ಸರ್ಕಾರದ ಆದೇಶದಲ್ಲಿ ಹೇಳಲಾಗಿತ್ತು.
DK Shivakumar: ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ನೀನೇನು ಮಾಡಿದ್ದೆ ಹೇಳಪ್ಪಾ?- ಡಿಕೆಶಿ
ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ಕೆಳಗೆ ಬಿದ್ದ ಟಿಪ್ಪರ್… ಓರ್ವ ಮೃತ್ಯು. ಇನ್ನೋರ್ವ ಗಂಭೀರ
Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ
Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…
Bengaluru; ನಗರದಿಂದ ವಿಮಾನ ನಿಲ್ದಾಣಕ್ಕೆ ರೈಲು ಸಂಪರ್ಕ: ಅಶ್ವಿನಿ ವೈಷ್ಣವ್
‘Y’ security: ತಮಿಳು ನಟ ವಿಜಯ್‌ಗೆ ಭದ್ರತೆ ಕೊಟ್ಟ ಕೇಂದ್ರ ಸರ್ಕಾರ
Justice Abhay Oka: ಕೋರ್ಟ್ ಗೆ “ಮಹಾ’ಗಿಂತ ಕರ್ನಾಟಕದಲ್ಲಿ ಹೆಚ್ಚು ಮೂಲಸೌಕರ್ಯ: ಜಡ್ಜ್
Setback: ಕೇಜ್ರಿವಾಲ್‌ಗೆ ಮತ್ತೊಂದು ಶಾಕ್..ಆಪ್‌ನ 3 ಕೌನ್ಸಿಲರ್‌ಗಳು ಬಿಜೆಪಿಗೆ ಸೇರ್ಪಡೆ
Arrested: ಬಾಕಿ ಹಣ ಬಿಡುಗಡೆಗೆ 10 ಲಕ್ಷ ರೂ. ಲಂಚ… ರಕ್ಷಣಾ ಖಾತೆಯ 3 ಮಂದಿ ಬಂಧನ
80 ಸಾವಿರ ಲಂಚ ಸ್ವೀಕರಿಸುವಾಗ ಸಬ್ ಇನ್ಸ್‌ಪೆಕ್ಟರ್ ಲೋಕ ಬಲೆಗೆ
You seem to have an Ad Blocker on.
To continue reading, please turn it off or whitelist Udayavani.