ಶಕ್ತಿ ಯೋಜನೆಗೆ ಅಧಿಕೃತ ಚಾಲನೆ: ಸಾಂಕೇತಿಕವಾಗಿ ಐವರಿಗೆ Smart Card ವಿತರಣೆ
Team Udayavani, Jun 11, 2023, 12:54 PM IST
ಬೆಂಗಳೂರು: ಸರ್ಕಾರದ ಮೊದಲ ಗ್ಯಾರಂಟಿ ಮಹಿಳೆಯರಿಗೆ ಉಚಿತ ಪ್ರಯಾಣ ಸೇವೆ ‘ಶಕ್ತಿ’ ಯೋಜನೆಗೆ ಭಾನುವಾರ ಚಾಲನೆ ದೊರೆಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಸಚಿವರು, ಅಧಿಕಾರಿಗಳು ಈ ಕ್ಷಣಗಳಿಗೆ ಸಾಕ್ಷಿಯಾದರು.
ಯೋಜನೆ ಅಡಿ ಮಹಿಳಾ ಪ್ರಯಾಣಿಕರಿಗೆ ನೀಡಲಿರುವ ಶಕ್ತಿ ಸ್ಮಾರ್ಟ್ ಕಾರ್ಡ್ ಮಾದರಿಯನ್ನು ಸಾಂಕೇತಿಕವಾಗಿ ಐವರು ಫಲಾನುಭವಿಗಳಿಗೆ ವಿತರಿಸಲಾಯಿತು.
ಇದನ್ನೂ ಓದಿ:ಗಿಲ್ OUT or NOT OUT? ಟಿವಿ ಅಂಪೈರ್ ವಿವಾದಾತ್ಮಕ ನಿರ್ಧಾರ; ಐಸಿಸಿ ನಿಯಮದಲ್ಲಿ ಏನಿದೆ?
ಸುಮಿತ್ರಾ, ರಾಧಾ, ಪ್ರೇಮಾ, ಕಲಾವತಿ, ಪವಿತ್ರಾ ಸ್ಮಾರ್ಟ್ ಕಾರ್ಡ್ ನ ಮೊದಲ ಫಲಾನುಭವಿಗಳಾದರು.
ನೇರಳೆ, ಹಸಿರು, ಕೆಂಪು, ಬಿಳಿ ಬಣ್ಣದ ಯೋಜನೆ ಲಾಂಛನವನ್ನೂ ಈ ವೇಳೆ ಬಿಡುಗಡೆ ಮಾಡಲಾಯಿತು.
ಮುಂದಿನ ಮೂರು ತಿಂಗಳಲ್ಲಿ ಯೋಜನೆ ಸ್ಮಾರ್ಟ್ ಕಾರ್ಡ್ ವಿತರಿಸಲಿದ್ದು, ಇದಕ್ಕಾಗಿ ಸೇವಾ ಸಿಂಧು ಅಡಿ ಅರ್ಜಿ ಸಲ್ಲಿಸಬೇಕಿದ್ದು, ಅದೂ ಉಚಿತ ಆಗಿರುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.