Oil Price; ಗ್ರಾಹಕರಿಗೆ ಖಾದ್ಯ ತೈಲ ಬೆಲೆಯೇರಿಕೆ ಬಿಸಿ
ಹಬ್ಬಗಳ ಸರಣಿ ಸನಿಹದಲ್ಲೇ ಲೀಟರ್‌ಗೆ 25 ರೂ. ದಿಢೀರ್ ಏರಿಕೆ!
Team Udayavani, Sep 15, 2024, 6:45 AM IST
ಗದಗ: ದಸರಾ-ದೀಪಾವಳಿ ಸಹಿತ ಸರಣಿ ಹಬ್ಬಗಳ ಸಂಭ್ರಮದಲ್ಲಿರುವ ಜನತೆಗೆ ಅಡುಗೆ ಎಣ್ಣೆ ದರಗಳ ದಿಢೀರ್ ಏರಿಕೆ ಆಘಾತ ನೀಡಿದೆ. ಲೀಟರ್ ಎಣ್ಣೆಗೆ 20ರಿಂದ 25 ರೂ.ವರೆಗೆ ಏರಿಕೆಯಾಗಿದ್ದು, ಗ್ರಾಹಕರಿಗೆ ಹೊರೆಯಾಗಿದೆ.
ಒಂದು ವಾರದಿಂದ ಹಾವು-ಏಣಿಯಾಟ ನಡೆಸಿದ್ದ ಅಡುಗೆ ಎಣ್ಣೆ ದರ ಶನಿವಾರ ದಿಢೀರ್ ಗಗನಕ್ಕೇರಿದೆ. ತಾಳೆ ಎಣ್ಣೆ, ಸೋಯಾಬೀನ್ ಎಣ್ಣೆ ಹಾಗೂ ಸೂರ್ಯಕಾಂತಿ ರಿಫೈನ್x ಎಣ್ಣೆ ದರ ಒಂದೇ ದಿನದಲ್ಲಿ ಹೆಚ್ಚಳವಾಗಿದೆ. ಅಡುಗೆ ಎಣ್ಣೆ ಈಗಾಗಲೇ ಜಿಎಸ್‌ಟಿ ವ್ಯಾಪ್ತಿಗೆ ಸೇರಿದೆ. ಆದರೆ ಹೆಚ್ಚುವರಿಯಾಗಿ ಶೇ. 20ರಷ್ಟು ಆಮದು ಸುಂಕ ಹೇರಿದ್ದರಿಂದ ದರ ಹಠಾತ್ ಏರಿಕೆಯಾಗಿದೆ ಎಂಬುದು ವ್ಯಾಪಾರಿಗಳ ಅಭಿಪ್ರಾಯ.
ದ್ವಿತೀಯ ಶನಿವಾರ, ರವಿವಾರ ಹಾಗೂ ಸೋಮವಾರ ಈದ್-ಮಿಲಾದ್ ಹಿನ್ನೆಲೆಯಲ್ಲಿ ಸತತ ಮೂರು ದಿನ ಸರಕಾರಿ ರಜೆ ಇರುವ ಕಾರಣ ಮಂಗಳವಾರವೇ ಸುಂಕ ಕುರಿತು ನಿಖರ ಮಾಹಿತಿ ಜತೆಗೆ ಅಡುಗೆ ಎಣ್ಣೆ ದರದಲ್ಲಿ ಏರಿಕೆ ಹಾಗೂ ಇಳಿಕೆಯ ಸ್ಪಷ್ಟತೆ ತಿಳಿಯಲಿದೆ ಎನ್ನಲಾಗಿದೆ.
ಎರಡು ದಿನಗಳ ಹಿಂದೆ 15 ಲೀಟರ್ ಪ್ಯಾಕೆಟ್‌ಗಳಿರುವ ತಾಳೆ ಎಣ್ಣೆ ಬಾಕ್ಸ್‌ಗೆ 1,450 ರೂ. ಇತ್ತು. ಆದರೆ ಶುಕ್ರವಾರ ಸಂಜೆ ವೇಳೆಗೆ ಶೇ. 20ರಷ್ಟು ಆಮದು ಸುಂಕ ಹೆಚ್ಚಳದಿಂದ ಕೇವಲ 24 ತಾಸುಗಳ ಒಳಗೆ ಪ್ರತೀ ಬಾಕ್ಸ್‌ಗೆ 200ರಿಂದ 250 ರೂ. ಅಂದರೆ 1,650ರಿಂದ 1,700 ರೂ. ವರೆಗೆ ಏರಿಕೆಯಾಗಿದೆ.
ಲೀಟರ್ ಪ್ಯಾಕೆಟ್‌ಗೆ 98 ರೂ. ಇದ್ದ ಬೆಲೆ ಈಗ 120 ರೂ. ಆಗಿದೆ. ಇನ್ನೊಂದೆಡೆ 10 ಲೀ. ಪ್ಯಾಕೆಟ್‌ಗಳ ಸೂರ್ಯಕಾಂತಿ ಎಣ್ಣೆ ಬಾಕ್ಸ್‌ಗೆ 1,050 ರೂ. ಇದ್ದ ದರ ಈಗ 150ರಿಂದ 200 ರೂ. ಹೆಚ್ಚಳವಾಗಿ 1,220ರಿಂದ 1,300 ರೂ. ಆಗಿದೆ. ಲೀಟರ್ ಪ್ಯಾಕೆಟ್‌ಗೆ 105 ರೂ. ಇದ್ದ ಬೆಲೆ ಈಗ 125ಕ್ಕೇರಿದೆ ಎನ್ನಲಾಗಿದೆ.
ಲೀಟರ್ ಅಡುಗೆ ಎಣ್ಣೆಗೆ 20ರಿಂದ 25 ರೂ. ದರ ಹೆಚ್ಚಿಸಿರುವುದು ಗ್ರಾಹಕರ ಮೇಲೆ ಬರೆ ಎಳೆದಂತಾಗಿದೆ. ಈ ದರ ಇಳಿಕೆಯಾಗದಿದ್ದರೆ ಮುಂಬರುವ ದಸರಾ ಹಾಗೂ ದೀಪಾವಳಿ ಹಬ್ಬಗಳು ಬಡವರ ಪಾಲಿಗೆ ಹೊರೆಯಾಗಿ ಪರಿಣಮಿಸಲಿವೆ.
-ಸೋಮಶೇಖರ ಕರಸಿದ್ದಿಮಠ, ಗ್ರಾಹಕರು
ತಾಳೆ ಎಣ್ಣೆ, ಸೂರ್ಯಕಾಂತಿ ರಿಫೈನ್ಡ್ ಎಣ್ಣೆ ಸಹಿತ ಅಡುಗೆ ಎಣ್ಣೆ ಈಗಾಗಲೇ ಜಿಎಸ್‌ಟಿ ವ್ಯಾಪ್ತಿಗೆ ಸೇರಿತ್ತು. ಆಮದು ಸುಂಕವನ್ನು ಸೊನ್ನೆಗೆ ಇಳಿಸಲಾಗಿತ್ತು. ಶುಕ್ರವಾರ ಸಂಜೆ ಏಕಾಏಕಿ ಶೇ. 20ರಷ್ಟು ಆಮದು ಸುಂಕ ಹೇರಿದ್ದರಿಂದ ಅಡುಗೆ ಎಣ್ಣೆ ದರದಲ್ಲಿ ಭಾರೀ ಏರಿಕೆಯಾಗಿದೆ. ಮಂಗಳವಾರ ಮಧ್ಯಾಹ್ನದ ವರೆಗೆ ದರದಲ್ಲಿ ಯಾವುದೇ ವ್ಯತ್ಯಾಸ ಕಾಣದು. ಅಂದೇ ಅಡುಗೆ ಎಣ್ಣೆ ದರದಲ್ಲಿ ಏರಿಕೆ ಅಥವಾ ಇಳಿಕೆ ಕುರಿತು ತಿಳಿಯಲಿದೆ.
-ಹಿಮಾಂಶು ಜೈನ್, ವ್ಯಾಪಾರಸ್ಥರು
ಅರುಣಕುಮಾರ ಹಿರೇಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಚರ್ಚೆ ಆಗ್ತಿರೋದು ಸತ್ಯ:ಸತೀಶ್ ಜಾರಕಿಹೊಳಿ
Renukaswamy Case: ಪವಿತ್ರಾ ಗೌಡ ಜಾಮೀನಿಗೆ ವಾದ ಮಂಡನೆ.. ವಿಚಾರಣೆ ಮುಂದೂಡಿದ ಹೈಕೋರ್ಟ್
Belagavi: ಬಸ್ ಸೀಟಿಗಾಗಿ ಜಗಳ: ದಂಪತಿಗೆ ಮನಸೋ ಇಚ್ಛೆ ಥಳಿಸಿದ ಯುವಕರ ತಂಡ
Electoral Bond Case: ನಿರ್ಮಲಾ, ನಡ್ಡಾ, ನಳಿನ್ ವಿರುದ್ದದ FIR ರದ್ದು ಮಾಡಿದ ಹೈಕೋರ್ಟ್
Fengal Cyclone: ಶಿವಮೊಗ್ಗದಲ್ಲೂ ಎಲ್ಲೊ ಅಲರ್ಟ್; ಶಾಲೆ- ಕಾಲೇಜುಗಳಿಗೆ ರಜೆ ಘೋಷಣೆ
MUST WATCH
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.