ಕೊಹ್ಲಿ ಆಟ ನೋಡಲು 8600 ಮೈಲಿ ಪ್ರಯಾಣಿಸಿದ ವೃದ್ಧ ದಂಪತಿ!
Team Udayavani, Jan 10, 2018, 12:09 PM IST
ಕೇಪ್ಟೌನ್: ಭಾರತ ದಕ್ಷಿಣ ಆಫ್ರಿಕಾ ನಡುವಿನ ಮೊದಲನೆ ಟೆಸ್ಟ್ ಕ್ರಿಕೆಟ್ ಪಂದ್ಯ ಮುಗಿದಿದೆ. ಪ್ರವಾಸಿ ಭಾರತ ಹೀನಾಯವಾಗಿ ಸೋತು ಹೋಗಿ ತನ್ನ ಯೋಗ್ಯತೆಯನ್ನು ಬಹಿರಂಗಗೊಳಿಸಿದ್ದು ಆಗಿದೆ.
ಇಂತಹ ಟೆಸ್ಟ್ ನೋಡಲು ವೃದ್ಧ ದಂಪತಿಯೊಬ್ಬರು 8600 ಮೈಲಿ ಪ್ರಯಾಣ ಮಾಡಿ ಇಂಗ್ಲೆಂಡ್ನಿಂದ ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದಾರೆ. ಯಾಕೆ ಅಂತ ಗೊತ್ತಾ? ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ನೋಡಲು! ಆಜೂಬಾಜು 70 ವರ್ಷ ಮುಟ್ಟಿದಂತೆ ಕಾಣುವ ಜಾನ್ ಹಾಗೂ ಕ್ರಿಸ್ಸಿಯಾ ಕೊಹ್ಲಿಯ ಅಭಿಮಾನಿಗಳು. ಅದಕ್ಕೆಂದೆ ಸುರಿಯುವ ಮಳೆಯಲ್ಲಿ ನ್ಯೂಲ್ಯಾಂಡ್ಸ್ ಮೈದಾನದ ಹತ್ತಿರ ನಿಂತಿದ್ದರು. ದುರದೃಷ್ಟವಶಾತ್ ಆ ದಿನ ವಿಪರೀತ ಮಳೆ ಬಂದು ದಿನದಾಟ ನಡೆಯಲಿಲ್ಲ. ಆ ದಂಪತಿಗೆ ನ್ಯೂಲ್ಯಾಂಡ್ಸ್ ಎಂದರೆ ಇಷ್ಟವಂತೆ. ಹಿಂದೆ ಆಫ್ರಿಕಾ ಇಂಗ್ಲೆಂಡ್ ಪಂದ್ಯವಾಗಿದ್ದಾಗಲೂ ಇಲ್ಲಿಗೆ ಬಂದಿದ್ದರಂತೆ. ಅದೇ ವೇಳೆ ಇಲ್ಲಿ ಭಾರತವೂ ಆಡಲಿದೆ ಎಂದು ಗೊತ್ತಾಯಿತು. ಆಗಲೇ ಅವರಿಬ್ಬರೂ ಇಲ್ಲಿಗೆ ಬರಬೇಕೆಂದು ನಿರ್ಧರಿಸಿ ದರು. ಅದಕ್ಕೆ ಕಾರಣ ಕೊಹ್ಲಿ. “ಆತ ಕ್ರಿಕೆಟ್ನ ಅದ್ಭುತ ಆಟಗಾರರಲ್ಲೊಬ್ಬ. ನಮಗಿಬ್ಬರಿಗೂ ಕೊಹ್ಲಿ ಅಚ್ಚುಮೆಚ್ಚು. ಬೇಸರವೆಂದರೆ ಅವರು ಬರೀ 5 ರನ್ಗೆ ಔಟಾಗಿಬಿಟ್ಟರು’ ಆ ದಂಪತಿ ಹೇಳಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Kambala: ಪೆಟಾ ಪಿಐಎಲ್; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್
MUDA Case: ಕೇವಲ 14 ಸೈಟ್ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ
Transport: ಕೆಎಸ್ಸಾರ್ಟಿಸಿ ದಾಖಲೆ: ಒಂದೇ ದಿನ 1.23 ಕೋಟಿ ಮಂದಿ ಪ್ರಯಾಣ
Congress: ಜಮೀರ್ ವಿರುದ್ಧ ಕೈಕಮಾಂಡ್ಗೆ 20ಕ್ಕೂ ಹೆಚ್ಚು ಶಾಸಕರಿಂದ ದೂರು
MUST WATCH
ಹೊಸ ಸೇರ್ಪಡೆ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Super App: ರೈಲು ಬುಕಿಂಗ್, ಟ್ರ್ಯಾಕ್ಗೆ ‘’ಸೂಪರ್ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Kambala: ಪೆಟಾ ಪಿಐಎಲ್; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್
MUDA Case: ಕೇವಲ 14 ಸೈಟ್ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.