ವೃದ್ಧೆಯನ್ನು ಕಚ್ಚಿ ಕೊಂದ ಹುಚ್ಚು ನಾಯಿ
Team Udayavani, Jun 6, 2019, 3:00 AM IST
ಭಟ್ಕಳ: ತಾಲೂಕಿನ ಮುಂಡಳ್ಳಿ ಜೋಗಿಮನೆ ಮಜಿರೆಯಲ್ಲಿ ಹುಚ್ಚು ನಾಯಿಯೊಂದು ಐವರ ಮೇಲೆ ದಾಳಿ ಮಾಡಿದ್ದು, ತೀವ್ರವಾಗಿ ಗಾಯಗೊಂಡಿದ್ದ ವೃದ್ಧೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಜಟ್ಟಮ್ಮ ಕುಪ್ಪಯ್ಯ ದೇವಾಡಿಗ (90) ಮೃತರು. ಇವರ ಪುತ್ರ ಶ್ರೀನಿವಾಸ (40), ಪಕ್ಕದ ಮನೆಯ ರಿತೇಶ್ (18) ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಇಲ್ಲಿನ ತಾಲೂಕಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ. ಲಕ್ಷ್ಮೀ ಹಾಗೂ ಜ್ಯೋತಿ ಎನ್ನುವವರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ.
ಜಟ್ಟಮ್ಮ, ಮನೆಯ ಹೊರಗೆ ಹೋಗಿದ್ದಾಗ ಏಕಾಏಕಿ ದಾಳಿ ಮಾಡಿದ ನಾಯಿ, ಅವರ ಕುತ್ತಿಗೆ, ಮುಖಕ್ಕೆ ತೀವ್ರವಾಗಿ ಗಾಯ ಮಾಡಿತ್ತು. ಅವರು ಕೂಗಿಕೊಂಡಿದ್ದನ್ನು ಕೇಳಿ ಮನೆಯವರು ಹಾಗೂ ಪಕ್ಕದ ಮನೆಯವರು ಹೊರಗೆ ಬಂದು ನಾಯಿ ದಾಳಿಯಿಂದ ತಪ್ಪಿಸಲು ಹೋದಾಗ ಅವರ ಮೇಲೂ ನಾಯಿ ದಾಳಿ ಮಾಡಿ, ಅವರೆಲ್ಲರನ್ನೂ ತೀವ್ರವಾಗಿ ಗಾಯಗೊಳಿಸಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.