ಗೃಹಿಣಿಯರಿಗೆ ಕಣ್ಣೀರು ತರಿಸಿದ್ದ ಈರುಳ್ಳಿ ಬೆಲೆ ದಿಢೀರ್ ಕುಸಿತ
Team Udayavani, Jul 26, 2022, 9:42 AM IST
ಬೆಂಗಳೂರು: ಈ ಹಿಂದೆ ಬೆಲೆ ಏರಿಕೆ ವಿಚಾರದಲ್ಲಿ ಗೃಹಿಣಿಯರ ಕಣ್ಣಲ್ಲಿ ಕಣ್ಣೀರು ತರಿಸಿದ್ದ ಈರುಳ್ಳಿ ಬೆಲೆ ಇದೀಗ ಮಾರುಕಟ್ಟೆಯಲ್ಲಿ ದಿಢೀರ್ ಕುಸಿತ ಕಂಡಿದೆ.
ಪ್ರತಿ ಕೆ.ಜಿ.ಗೆ 100 ರೂ.ವರೆಗೂ ಏರಿಕೆ ಕಂಡಿದ್ದ ಈರುಳ್ಳಿ ಇದೀಗ 10 ರೂ.ಗೆ ಇಳಿಕೆಯಾಗಿದೆ. ಈ ವರ್ಷ ಅಧಿಕ ಪ್ರಮಾಣದಲ್ಲಿ ರೈತರು ಈರುಳ್ಳಿ ಬೆಳೆ ಬೆಳೆದಿದ್ದು, ಜತೆಗೆ ಮಹಾರಾಷ್ಟ್ರದಿಂದಲೂ ಹೆಚ್ಚು ಮಾರುಕಟ್ಟೆಗೆ ಪೂರೈಕೆಯಾಗುತ್ತಿ ರುವುದರಿಂದ ಈರುಳ್ಳಿ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ.
ಕಳೆದ 2-3 ತಿಂಗಳಿಂದ ಪ್ರತಿ ಕ್ವಿಂಟಲ್ಗೆ 2500ರೂ.ರಿಂದ 2800ರೂ. ವರೆಗೂ ಮಾರಾಟವಾಗಿದ್ದ ಈರುಳ್ಳಿ ಇದೀಗ 600 ರೂ. ದಿಂದ 800ರೂ. ವರೆಗೂ ಮಾರಾಟವಾಗುತ್ತಿದೆ. ಯಶವಂತಪುರ ಮಾರುಟ್ಟೆಗೆ ಅಧಿಕ ಪ್ರಮಾಣದಲ್ಲಿ ಈರುಳ್ಳಿ ರಫ್ತಾಗುತ್ತಿದೆ. ನೆರೆ ರಾಜ್ಯ ಮಹಾರಾಷ್ಟ್ರದಲ್ಲಿ ಉತ್ತಮ ಫಸಲು ಬಂದಿರುವುದರಿಂದ ನಿತ್ಯ 98 ಲಾರಿಗಳಲ್ಲಿ ಈರುಳ್ಳಿ ಪೂರೈಕೆಯಾಗಿದೆ ಎಂದು ಹೋಲ್ ಸೇಲ್ ಈರುಳ್ಳಿ ವ್ಯಾಪಾರಿ ರವಿಶಂಕರ್ ತಿಳಿಸಿದರು.
ರಾಜ್ಯದ ವಿಜಯಪುರ ಭಾಗದಿಂದ 40-50 ಟ್ರಕ್ ಈರುಳ್ಳಿ ಯಶವಂತಪುರ ಮಾರು ಕಟ್ಟೆಗೆ ರಫ್ತಾಗಿದೆ. ಜತೆಗೆ ಚಿತ್ರ ದುರ್ಗ ಭಾಗದಿಂದ 5 ರಿಂದ 6 ಟ್ರಕ್ ಈರುಳ್ಳಿ ಪೂರೈಕೆ ಆಗುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಸಿದ್ದು ಪಡೆಯ ವಿರುದ್ಧ ಹೈಕಮಾಂಡ್ ಅಸ್ತ್ರ ಪ್ರಯೋಗಿಸಿದ ಡಿಕೆ ಶಿವಕುಮಾರ್
ಮಾರುಕಟ್ಟೆಗೆ 32,362 ಬ್ಯಾಗ್ ಈರುಳ್ಳಿ ಪೂರೈಕೆ
ಸೋಮವಾರ ಬೆಂಗಳೂರು ಮಾರುಕಟ್ಟೆಗೆ 160ಟ್ರಕ್ ಗಳಲ್ಲಿ 32,362 ಬ್ಯಾಗ್ ಈರುಳ್ಳಿ ಪೂರೈಕೆ ಆಗಿದೆ. ಇದರಲ್ಲಿ ಯಶವಂತಪುರ ಮಾರುಕಟ್ಟೆಗೆ 26,890 ಬ್ಯಾಗ್ ಈರುಳ್ಳಿ ಮತ್ತು ದಾಸನಪುರ ಮಾರುಕಟ್ಟೆಗೆ 5,472 ಬ್ಯಾಗ್ ಬಂದಿಳಿದಿದೆಪೂರೈಕೆ ಅಧಿಕ ಮಾರುಕಟ್ಟೆಯಲ್ಲಿ 2 ತಿಂಗಳಿಂದ ಈರುಳ್ಳಿ ಬೆಲೆ ಸ್ಥಿರತೆಯಲ್ಲಿತ್ತು. ಪ್ರತಿ ಕೆ.ಜಿ.ಗೆ 25 ರೂ. 30 ರೂ. ವರೆಗೂ ಖರೀದಿಯಾಗುತ್ತಿತ್ತು. ಆದರೆ, ಕಳೆದ ಕೆಲವು ದಿನಗಳಿಂದ ಈರುಳ್ಳಿ ಬೆಲೆಯಲ್ಲಿ ಕುಸಿತ ಕಂಡು ಬಂದಿದೆ. ಮಹಾರಾಷ್ಟ್ರದಲ್ಲಿ ಹೇರಳವಾಗಿ ಈರುಳ್ಳಿ ಫಸಲು ಬಂದಿದ್ದು, ಇದು ಬೆಲೆ ಇಳಿಕೆ ಕಾರಣ ಎನ್ನಲಾಗುತ್ತಿದೆ. ರಾಜ್ಯದ ವಿಜಯಪುರ ಮತ್ತು ಚಿತ್ರ ದುರ್ಗ ಭಾಗದಿಂದಲೂ ಯಶವಂತ ಪುರ ಮಾರುಕಟ್ಟೆಗೆ ಈರುಳ್ಳಿ ಪೂರೈಕೆ ಆಗುತ್ತಿದೆ ಎಂದು ಯಶವಂತ ಪುರದ ರವಿ ಟ್ರೆಡಿಂಗ್ ಮಾಲೀಕ ಬಿ.ರವಿಶಂಕರ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RTO; ಫಿಟ್ನೆಸ್ ಸರ್ಟಿಫಿಕೇಟ್ಗಿನ್ನು ಆರ್ಟಿಒ ಬೇಕಿಲ್ಲ!
High Court: ತೃತೀಯ ಲಿಂಗಿಗಳ ಜನನ, ಮರಣ ಪ್ರಮಾಣ ಪತ್ರದಲ್ಲಿ ಮಾರ್ಪಾಡು ಮಾಡಿ; ಹೈಕೋರ್ಟ್
Havyaka Sammelana; ಹೆಚ್ಚು ಮಕ್ಕಳನ್ನು ಹೆರಿ, ಮಠ ಸಲಹುತ್ತದೆ: ಸ್ವಾಮೀಜಿ ಕರೆ
Stamp Paper; ನಕಲಿ ಹಾವಳಿಗೆ ತಡೆ: ಎ.1ರಿಂದ ಡಿಜಿಟಲ್ ಪಾವತಿ ಪದ್ಧತಿ ಜಾರಿ
Belagavi; ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ: ಮಾಜಿ ಪ್ರಧಾನಿ ನಿಧನದಿಂದ ಆಘಾತ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.