ಆನ್‌ಲೈನ್ ಕಲಿಕೆಗಾಗಿ ಮಕ್ಕಳ ಕೈಗೆ ಮೊಬೈಲ್: ಚಟವಾಗದಿರಲು ಏನು ಮಾಡಬೇಕು?
ಒತ್ತಡ ನಿರ್ವಹಣೆ ಹೇಗೆ? ಪರಿಣತರ ಸಲಹೆ
Team Udayavani, Oct 16, 2020, 5:32 AM IST
ಸಾಂದರ್ಭಿಕ ಚಿತ್ರ
ಆನ್‌ಲೈನ್ ಕಲಿಕೆ ಕುರಿತು ಇರುವ ಸ್ಪಷ್ಟತೆಗಿಂತ ಗೊಂದಲವೇ ಹೆಚ್ಚು. ಹಾಗೆ ನೋಡುವುದಾದರೆ ಇದು ಪೂರ್ಣ ಪ್ರಮಾಣದ ಆನ್‌ಲೈನ್ ಕಲಿಕೆಯೂ ಅಲ್ಲ; ಆಂಶಿಕವಷ್ಟೇ. ಬಹಳ ಸರಳವಾಗಿ ಹೇಳುವುದಾದರೆ “ವೀಡಿಯೋ ತರಗತಿಗಳು’. ಇದು ಸೃಷ್ಟಿಸುತ್ತಿರುವ ಒತ್ತಡವೇ ಬೇರೆ ತೆರನಾದದ್ದು. ಈ ದಿಶೆಯಲ್ಲಿ ಇಂದು ಪೋಷಕರ ಒತ್ತಡ ಮತ್ತು ನಿರ್ವಹಣೆ ಬಗೆಗಿನ ವಿವರ ನೀಡಲಾಗಿದೆ. ಇದನ್ನು ಹೊರತುಪಡಿಸಿ ಪ್ರಶ್ನೆಗಳಿದ್ದರೆ ವಾಟ್ಸಾಪ್ ಮಾಡಿ. 7618774529
ಆನ್‌ಲೈನ್ ಕಲಿಕೆಯ ಅನಿವಾರ್ಯಕ್ಕೆ ಕಟ್ಟುಬಿದ್ದು ಪೋಷಕರು ಮಕ್ಕಳಿಗೆ ತಮ್ಮದೇ ಮೊಬೈಲ್ ಇಲ್ಲವೇ ಹೊಸ ಮೊಬೈಲ್ ಖರೀದಿಸಿ ನೀಡಿದ್ದಾರೆ. ಮಕ್ಕಳು ಅಪರೂಪಕ್ಕೊಮ್ಮೆ ತಮ್ಮ ಕೈಗೆ ಸ್ಮಾರ್ಟ್‌ಫೋನ್ ಸಿಕ್ಕಿದಾಗಲೂ ಗೇಮಿಂಗ್ ಆ್ಯಪ್‌ಗ್ಳ ಕಡೆಗೆ ಕಣ್ಣು ಹಾಯಿಸದೇ ಬಿಡುವುದಿಲ್ಲ ಎಂಬ ಸತ್ಯ ಹೆತ್ತವರಿಗೂ ತಿಳಿದಿರುವಂಥದ್ದೆ. ಹೀಗಿರುವಾಗ ಆನ್‌ಲೈನ್ ಕಲಿಕೆಗಾಗಿ ಸ್ವಂತ ಮೊಬೈಲ್ ಹೊಂದಿದ ಮಕ್ಕಳ ಭವಿಷ್ಯದ ಬಗ್ಗೆ ಹೆತ್ತವರಿಗೆ ಆತಂಕ ಇಲ್ಲದಾದೀತೇ? ಕಲಿಕೆಗಾಗಿ ನೀಡಿದ ಮೊಬೈಲ್ ಚಟವಾಗಿ ಬೆಳೆಯಬಹುದೆಂಬ ಭಯ ಸಹಜ. ಅದು ಚಟವಾಗಿ ಬೆಳೆದರೆ ಆಗುವ ಪರಿಣಾಮಗಳೇನು, ಚಟವಾಗದಿರಲು ಹೆತ್ತವರು ವಹಿಸಬೇಕಾದ ಮುನ್ನೆಚ್ಚರಿಕೆಗಳೇನು ಎಂಬ ಬಗ್ಗೆ ಮನೋವೈದ್ಯೆ ಡಾ| ಪ್ರೀತಿ ಶಾನುಭಾಗ್ ವಿವರಿಸಿದ್ದಾರೆ.
– ಮನೆಯಲ್ಲಿ ಇಬ್ಬರು ಮಕ್ಕಳಿದ್ದರೆ ಮಕ್ಕಳಿಗಾಗಿಯೇ ಎರಡು ಮೊಬೈಲ್ ಬೇಕೆಂಬ ಅನಿವಾರ್ಯವನ್ನು ಆನ್‌ಲೈನ್ ತರಗತಿ ತಂದಿಟ್ಟಿದೆ. ಹೆತ್ತವರು ಕೆಲಸಕ್ಕೆ ಹೋಗುವವರಾದರೆ ಅವರ ಮೊಬೈಲ್ ಅವರ ಬಳಿಯೇ ಇರಬೇಕು. ಮಕ್ಕಳಿಬ್ಬರಿಗೂ ಒಂದೇ ಸಮಯಕ್ಕೆ ತರಗತಿ ಇದ್ದರೆ ಒಂದೇ ಮೊಬೈಲ್‌ನಿಂದ ಇಬ್ಬರೂ ನಿಭಾಯಿಸಲಾಗುವುದಿಲ್ಲ. ನಿಭಾಯಿಸುವ ಅವಕಾಶವಿದ್ದರೂ ಪ್ರತ್ಯೇಕ ಬೇಕೆಂಬ ಕಚ್ಚಾಟ ಆರಂಭವಾಗುತ್ತದೆ.
– ಹೆತ್ತವರು ಉದ್ಯೋಗಿಗಳಾಗಿದ್ದಲ್ಲಿ ಮಕ್ಕಳ ಮೇಲೆ 24×7 ನಿಗಾ ಇರಿಸುವುದಕ್ಕೆ ಆಗುವುದಿಲ್ಲ. ಮನೆಯಲ್ಲೇ ಇರುವವರಾದರೂ ಹೆಚ್ಚಿನ ಹೆತ್ತವರಿಗೆ ಈಗಿನ ಸ್ಮಾರ್ಟ್‌ಫೋನ್ ಬಳಕೆ ಬಗ್ಗೆ ಅಷ್ಟಾಗಿ ಜ್ಞಾನ ಇರುವುದಿಲ್ಲ. ಎರಡೂ ವಿಧದ ಹೆತ್ತವರಿಗೂ ಮಕ್ಕಳು ಆನ್‌ಲೈನ್ ತರಗತಿ ಹೊರತುಪಡಿಸಿ ಮೊಬೈಲ್‌ನಲ್ಲಿ ಇನ್ನೇನು ಹುಡುಕುತ್ತಿದ್ದಾರೆ ಎಂಬುದು ತಿಳಿಯುವುದಿಲ್ಲ. ಹೆತ್ತವರ ಈ ಪರಿಸ್ಥಿತಿಯನ್ನು ಮಕ್ಕಳು ಬಳಸಿ ಮೊಬೈಲ್ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು. ಅಗತ್ಯಕ್ಕಿಂತ ಜಾಸ್ತಿ ಮೊಬೈಲ್ ನೋಡುವುದರಿಂದ ಮಾನಸಿಕ ಮತ್ತು ದೈಹಿಕ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಗಳಿವೆ.
ಮೊಬೈಲ್ ಚಟ: ಸಮಸ್ಯೆಗಳೇನು?
ಆನ್‌ಲೈನ್ ವೀಡಿಯೋ ಗೇಮ್ ಚಟ
ಇದರಲ್ಲಿ ಸಿಗುವ ಪಾಯಿಂಟ್‌ಗಳು ಮಕ್ಕಳನ್ನು ಮತ್ತಷ್ಟು ಸೆಳೆಯುತ್ತವೆ. ಪದೇ ಪದೆ ಆಡುತ್ತ ಅದೊಂದು ಚಟವಾಗುತ್ತದೆ. ಪರಿಣಾಮ ಸಾಮಾಜಿಕವಾಗಿ ಬೆರೆಯುವಿಕೆಯ ಆಸಕ್ತಿಯನ್ನು ಮಕ್ಕಳು ಕಳೆದುಕೊಳ್ಳುತ್ತಾರೆ. ಮಾತೂ ಕಡಿಮೆಯಾಗಿ ಸದಾ ಮೊಬೈಲ್‌ನಲ್ಲೇ ಬೆರಳಾಡಿಸುವ ಸ್ಥಿತಿ ಎದುರಾಗುತ್ತದೆ.
ಸಾಮಾಜಿಕ ತಾಣಗಳ ಮೂಲಕ ಖನ್ನತೆ ಸ್ನೇಹಿತರು ಪ್ರವಾಸ ಹೋಗಿರುವುದು, ಹೊಸ ಬಟ್ಟೆ ಹಾಕಿರುವುದು, ಸಮಾರಂಭಗಳಿಗೆ ತೆರಳಿರುವ ಫೋಟೋಗಳನ್ನು ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ಗಳಲ್ಲಿ ಹಾಕುವುದರಿಂದ ಹೋಲಿಕೆ ಮಾಡಿಕೊಳ್ಳುವುದು. ನನಗೆ ಜೀವನದಲ್ಲಿ ಅಂತಹ ಖುಷಿಗಳಿಲ್ಲ ಎಂದು ಮರುಗುವುದು. ಇದರಿಂದ ಖನ್ನತೆ ಜಾಸ್ತಿಯಾಗುತ್ತದೆ. ತನಗೂ ಬೇಕೆಂಬ ಬೇಡಿಕೆ ಹೆಚ್ಚುತ್ತದೆ. ಹೆತ್ತವರಿಗೆ ಮಕ್ಕಳನ್ನು ನಿಯಂತ್ರಿಸುವುದೇ ಇಲ್ಲಿ ಸವಾಲಾಗುತ್ತದೆ.
ಏಕಾಗ್ರತೆ ಕೊರತೆ
ಆನ್‌ಲೈನ್ ತರಗತಿ ಆರಂಭವಾಗುವುದಕ್ಕಿಂತ ಮುಂಚೆ ಮಕ್ಕಳು ಶಾಲೆಗೆ ಹೋಗಿ ಬಂದ ಮೇಲಷ್ಟೇ ಮೊಬೈಲ್ ನೋಡುತ್ತಿದ್ದರು. ಆದರೆ ಈಗ ದಿನವಿಡೀ ಮೊಬೈಲ್ ಕೈಯಲ್ಲಿರುವುದರಿಂದ ಊಟ, ನಿದ್ದೆಯೂ ತಪ್ಪುತ್ತದೆ. ಮಕ್ಕಳು ರಾತ್ರಿ ಮೊಬೈಲ್ ಜತೆಗಿಟ್ಟುಕೊಂಡೇ ಮಲಗುತ್ತಾರೆ. ಏಕಾಗ್ರತೆಯ ಕೊರತೆ, ಚಿಕ್ಕ ಮಕ್ಕಳಲ್ಲಿ ಗಮನದ ಕೊರತೆ ಜಾಸ್ತಿಯಾಗುತ್ತದೆ.
ಪೋಷಕರು ಏನು ಮಾಡಬೇಕು?
– ಮಕ್ಕಳಿಗೆ ಆನ್‌ಲೈನ್ ಜತೆಗೆ ಆಫ್‌ಲೈನ್ ತರಗತಿಗಳು ಕೂಡ ಇರುತ್ತವೆ. ಹೆತ್ತವರು ಮೊದಲಾಗಿ ಮಕ್ಕಳೊಂದಿಗೆ ಕುಳಿತು ಸ್ಕೀನ್ ಟೈಂ ಮತ್ತು ನಾನ್-ಸ್ಕೀನ್ ಟೈಂ ಎಂಬುದಾಗಿ ವೇಳಾಪಟ್ಟಿ ರಚಿಸಬೇಕು. ಶಿಕ್ಷಕರು ಆನ್‌ಲೈನ್‌ಗೆ ಬರುವ ಸಂದರ್ಭಕ್ಕೆ ಮಾತ್ರ ಆನ್‌ಲೈನ್‌ಗೆ
ಹೋಗಬೇಕು. ಉಳಿದಂತೆ ಆಫ್‌ಲೈನ್ ಶಿಕ್ಷಣದಡಿ ಹೋಂ ವರ್ಕ್‌ಗಳನ್ನು ಮಾಡಬೇಕು ಎಂಬ ಸ್ಪಷ್ಟ ವೇಳಾಪಟ್ಟಿಯನ್ನು ಹಾಕಿಕೊಡಬೇಕು.
– ಇಬ್ಬರು ಮಕ್ಕಳಿಗೆ ಒಂದೇ ಸಮಯಕ್ಕೆ ಆನ್‌ಲೈನ್ ತರಗತಿ ಇಲ್ಲವೆಂದಾದಲ್ಲಿ ಒಂದು ಮೊಬೈಲನ್ನು ಮಾತ್ರ ಅವರಿಗೆ ನೀಡಬೇಕು. ಇದರಿಂದ ಒಬ್ಬನ ತರಗತಿ ಮುಗಿದ ಅನಂತರ ಇನ್ನೊಬ್ಬ ಬಳಸಬಹುದು. ಆ ನಡುವಿನ ಸಮಯದಲ್ಲಿ ಸುದೀರ್ಘ ಓರ್ವನೇ ಮೊಬೈಲ್ ಕೈಯಲ್ಲಿ ಹಿಡಿದುಕೊಳ್ಳುವುದು ತಪ್ಪುತ್ತದೆ.
– ಹೆತ್ತವರು ಮನೆಯಲ್ಲಿದ್ದಷ್ಟೂ ಹೊತ್ತು ಆಟ, ಇತರ ಹವ್ಯಾಸಗಳನ್ನು ಬೆಳೆಸಲು ಪ್ರಯತ್ನಿಸಬೇಕು. ಮನೆಯ ಇತರ ಸದಸ್ಯರೊಂದಿಗೆ ಆ ಆಟಗಳನ್ನು ಆಡಿ ಗೆಲುವು ಮಕ್ಕಳಿಗೇ ಸಿಗುವಂತೆ ನೋಡಿಕೊಳ್ಳುವುದು. ಆಗ ಸಹಜವಾಗಿ ಮಕ್ಕಳು ಆಟದ ಕಡೆಗೆ ಆಸಕ್ತಿ ತೋರಿಸುತ್ತಾರೆ.
– ಮಕ್ಕಳು ಆನ್‌ಲೈನ್ ಕಲಿಕೆ ಹೊರತಾಗಿ ಮೊಬೈಲ್ ಬಳಸುವಾಗ ಮನೆಯಲ್ಲಿ ಇತರ ಸದಸ್ಯರು ಯಾರಾದರೂ ಇದ್ದಲ್ಲಿ ಸ್ವಲ್ಪ ನಿಗಾ ವಹಿಸಲು ಹೇಳಬೇಕು. ಮಕ್ಕಳನ್ನು ಅನುಮಾನದ ದೃಷ್ಟಿಯಿಂದ ನೋಡದೆ, ಆದಷ್ಟು ಪ್ರೀತಿಯಿಂದ ತಿದ್ದಲು ಪ್ರಯತ್ನಿಸಬೇಕು.
ಮಕ್ಕಳು ಮೊಬೈಲ್‌ನಲ್ಲಿ ಆಡುವುದು ಹೊಸತಲ್ಲ. ಆದರೆ ಶಾಲೆಗೆ ಹೋಗು ತ್ತಿದ್ದಾಗ ಸಂಜೆ ಮನೆಗೆ ಬಂದ ಅನಂತರವಷ್ಟೇ ಅವರ ಕೈಗೆ ಮೊಬೈಲ್ ಸಿಗುತ್ತಿತ್ತು. ಆಗ ಹೆತ್ತವರೂ ಮನೆಯಲ್ಲಿ ಇರು ತ್ತಿದ್ದರು. ಪ್ರಸ್ತುತ ಆನ್‌ಲೈನ್ ಶಿಕ್ಷಣ ದಿಂದಾಗಿ ಮಕ್ಕಳಿಗೆ ಮೊಬೈಲ್ ವರದಾನ ವಾದಂತಾಗಿದೆ. ಹೆತ್ತವರು ಉದ್ಯೋಗಕ್ಕೆ ತೆರಳಿದರೆ ಮಕ್ಕಳ ಕಡೆಗೆ ಗಮನಹರಿಸಲು ಸಾಧ್ಯ ವಾಗುವುದಿಲ್ಲ. ಜಾಸ್ತಿ ಮೊಬೈಲ್ ವೀಕ್ಷಣೆ ಮಾಡಿದರೆ ಚಟವಾಗಿ ಬೆಳೆಯುವ ಸಾಧ್ಯತೆ ಇದೆ. ಹೀಗಾಗಿ ಹೆತ್ತವರು ಆದಷ್ಟು ಮಕ್ಕಳನ್ನು ಮೊಬೈಲ್‌ನಿಂದ ಹೊರಗೆಳೆದು ಆಟ, ಇತರ ಹವ್ಯಾಸಗಳನ್ನು ಕಲಿಸಲು ಪ್ರಯತ್ನಿಸಬೇಕು.
-ಡಾ| ಪ್ರೀತಿ ಶಾನುಭಾಗ್, ಮನೋವೈದ್ಯರು, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
Congress: ಸಿದ್ದರಾಮಯ್ಯ ಮಾಸ್ ಲೀಡರ್, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್
Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್
By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್.ಯಡಿಯೂರಪ್ಪ ಭವಿಷ್ಯ
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.