ಆನ್‌ಲೈನ್‌ ಕಲಿಕೆ: ಮಕ್ಕಳು ಲವಲವಿಕೆಯಿಂದಿರಲು ಏನು ಮಾಡಬೇಕು?

ಒತ್ತಡ ನಿರ್ವಹಣೆ ಹೇಗೆ? ಪರಿಣತರ ಸಲಹೆ

Team Udayavani, Oct 13, 2020, 5:50 AM IST

ಆನ್‌ಲೈನ್‌ ಕಲಿಕೆ: ಮಕ್ಕಳು ಲವಲವಿಕೆಯಿಂದಿರಲು ಏನು ಮಾಡಬೇಕು?

ಸಾಂದರ್ಭಿಕ ಚಿತ್ರ

ಆನ್‌ಲೈನ್‌ ಕಲಿಕೆ ಕುರಿತು ಇರುವ ಸ್ಪಷ್ಟತೆಗಿಂತ ಗೊಂದಲವೇ ಹೆಚ್ಚು. ಹಾಗೆ ನೋಡುವುದಾದರೆ ಇದು ಪೂರ್ಣ ಪ್ರಮಾಣದ ಆನ್‌ಲೈನ್‌ ಕಲಿಕೆಯೂ ಅಲ್ಲ; ಆಂಶಿಕವಷ್ಟೇ. ಬಹಳ ಸರಳವಾಗಿ ಹೇಳುವುದಾದರೆ “ವೀಡಿಯೋ ತರಗತಿಗಳು’. ಇದು ಸೃಷ್ಟಿಸುತ್ತಿರುವ ಒತ್ತಡವೇ ಬೇರೆ ತೆರನಾದದ್ದು. ಈ ದಿಸೆಯಲ್ಲಿ ಇಂದು ಪೋಷಕರ ಒತ್ತಡ ಮತ್ತು ನಿರ್ವಹಣೆ ಬಗೆಗಿನ ವಿವರ ನೀಡಲಾಗಿದೆ. ಇದನ್ನು ಹೊರತುಪಡಿಸಿ ಪ್ರಶ್ನೆಗಳಿದ್ದರೆ ವಾಟ್ಸಾಪ್‌ ಮಾಡಿ.
7618774529

ಕೊರೊನಾದಿಂದಾಗಿ ಇಂದು ಮಕ್ಕಳು ಆನ್‌ಲೈನ್‌ ಮೂಲಕ ಮನೆಯಿಂದಲೇ ಕಲಿಯುವಂತಾಗಿದೆ. ಶಾಲೆ ಕಾಲೇಜು ಬಂದ್‌ ಆಗಿ ಮಕ್ಕಳ ಆಟ, ಓಟ, ತಿರುಗಾಟ ಎಲ್ಲದಕ್ಕೂ ಬ್ರೇಕ್‌ ಬಿದ್ದಿದೆ. ಸಹಪಾಠಿಗಳ ಜತೆ ಪ್ರತೀ ದಿನವೂ ಶಾಲೆಗೆ ಹೋಗಿ ನಕ್ಕು – ನಲಿದು ಶಿಕ್ಷಕರ ಒಡನಾಟದಲ್ಲಿ ಪಾಠ ಕಲಿಯುತ್ತಿದ್ದ ಮಕ್ಕಳಿಗೆ ಇಂದು ಶಾಲೆ ಎಂಬುದು ಕನಸಾಗಿ ಉಳಿದಿದೆ. ಶಾಲೆಯ ಗೌಜು – ಗದ್ದಲವಿಲ್ಲದೆ ಮಕ್ಕಳ ಪಾಡು ಹೇಳ ತೀರದಾಗಿದೆ.

ಇದು ಒಂದೆರಡಲ್ಲ, ಇನ್ನೂ 4-5 ತಿಂಗಳು ಹೀಗೆ ಮುಂದುವರಿಯುವ ಲಕ್ಷಣಗಳಿವೆ. ಸದಾ ಲವಲವಿಕೆಯಿಂದ ಇದ್ದವರು ಈಗ ಒಮ್ಮಿಂದೊಮ್ಮೆಲೆ ನಿರುತ್ಸಾಹಿಗಳಾಗಿ, ಮಾನಸಿಕವಾಗಿ ಒತ್ತಡಕ್ಕೆ ಒಳಗಾಗಿ, ಜೀವನೋತ್ಸಾಹವೇ ಕಡಿಮೆಯಾದಂತಿರುವ ಮಕ್ಕಳನ್ನು ಚಟುವಟಿಕೆಯಿಂದಿರುವಂತೆ, ಲವಲವಿಕೆಯಿಂದ, ಕ್ರಿಯಾಶೀಲರಾಗಿರುವಂತೆ ಮಾಡಲು ಒಂದಷ್ಟು ಸಲಹೆಗಳನ್ನು ಉಡುಪಿಯ ಮನೋರೋಗ ತಜ್ಞರಾದ ಡಾ| ಪಿ.ವಿ. ಭಂಡಾರಿ ನೀಡಿದ್ದಾರೆ.

ಪೋಷಕರ ಜವಾಬ್ದಾರಿಯೇನು?
ಒಂದೆಡೆ ಕೊರೊನಾ ಭಯ, ಮತ್ತೂಂದು ಕಡೆ ಮನೆಯಿಂದಲೇ ಕೆಲಸ ಮಾಡುವ ಒತ್ತಡ, ಇನ್ನೊಂದು ಕಡೆ ಮಕ್ಕಳನ್ನು ನಿಭಾಯಿಸುವ ಹೊಣೆ. ಇವೆಲ್ಲವನ್ನು ನಿಭಾಯಿಸುವ ಮಹತ್ತರ ಜವಾಬ್ದಾರಿ ಈಗ ಪೋಷಕರದ್ದು. ಅದರಲ್ಲೂ ಆಟ, ಓಟ, ಶಾಲೆಯ ಚಟುವಟಿಕೆಯಿಂದ ದೂರವಿರುವ ಮಕ್ಕಳ ಬಗ್ಗೆ ಪೋಷಕರು ಹಿಂದೆಂದಿಗಿಂತ ಹೆಚ್ಚಿನ ಕಾಳಜಿ ವಹಿಸಬೇಕಾಗಿರುವುದು ಅವಶ್ಯ. ಪೋಷಕರು ಎಲ್ಲ ವಿಚಾರದಲ್ಲೂ ಮಕ್ಕಳಿಗೆ ತುಂಬಾ ಸಹಕಾರಿಯಾಗಿರಬೇಕು. ತುಂಬಾ ಕಟ್ಟುನಿಟ್ಟಾಗಿ ಮಕ್ಕಳನ್ನು ಅಭ್ಯಾಸ ಮಾಡುವಂತೆ ಒತ್ತಡ ಹೇರಬೇಡಿ. ಇದರಿಂದ ನಿಮ್ಮ ಮಗುವಿಗೆ ಮಾನಸಿಕವಾಗಿ ಹೆಚ್ಚಿನ ಒತ್ತಡ, ಆತಂಕ ಆರಂಭವಾಗುತ್ತದೆ. ಇದು ಓದು ಸಹಿತ ಎಲ್ಲದರ ಮೇಲೂ ಪರಿಣಾಮ ಬೀರಬಹುದು.

ಓದು ಮಾತ್ರವಲ್ಲ…
ಈಗ ಪೋಷಕರು ಮಕ್ಕಳಿಗೆ ಓದು, ಓದು ಅಂತ ಬರೀ ಓದಿನ ಬಗ್ಗೆಯೇ ಹೆಚ್ಚು ಒತ್ತಡ ಹಾಕುತ್ತಾರೆ. ಆದರೆ ಉತ್ತಮವಾಗಿ ಓದುವುದಕ್ಕೆ ಮಕ್ಕಳು ರಿಲ್ಯಾಕ್ಸ್‌ ಆಗುವುದು ಅತ್ಯಂತ ಆವಶ್ಯಕ. ಈಗಾಗಲೇ ಮಕ್ಕಳಿಗೆ ಒತ್ತಡ ಜಾಸ್ತಿಯಿದೆ. ಹಾಗಾಗಿ ಆದಷ್ಟು ಮಕ್ಕಳನ್ನು ಖುಷಿಯಿಂದ ಇರುವಂತೆ ನೋಡಿಕೊಳ್ಳಬೇಕು.

ಸಲಹೆಗಳೇನು?
ಮಕ್ಕಳು ದಿನವಿಡೀ ಮನೆಯಲ್ಲಿಯೇ ಇರುವುದ ರಿಂದ ಒಂದು ವೇಳಾಪಟ್ಟಿ ತಯಾರಿಸಿ. ಒಂದು ಗಂಟೆ ಆನ್‌ಲೈನ್‌ ತರಗತಿ, ಮತ್ತೂಂದು ಗಂಟೆ ಪುಸ್ತಕ ಓದುವಿಕೆ, ಮತ್ತೂಂದು ಗಂಟೆ ಕತೆ, ಇನ್ನಿತರ ವ್ಯಕ್ತಿ ಪರಿಚಯ ಪುಸ್ತಕಗಳ ಓದುವಿಕೆ, ಮತ್ತೆ ಒಂದು ಗಂಟೆ ಮೊಬೈಲ್‌, ಟಿವಿ ನೋಡುವುದು – ಹೀಗಿರಲಿ. ಆಟಕ್ಕೆ ಇಂತಿಷ್ಟು ಸಮಯ ಕೊಡಿ.

ಜನರೊಂದಿಗೆ ಹೆಚ್ಚು ಬೆರೆಯುವುದನ್ನು ಕಲಿಸಿ. ಸಂಬಂಧಗಳ ಮಹತ್ವವನ್ನು ತಿಳಿಸಿ. ಮಕ್ಕಳೊಂದಿಗೆ ಮುಕ್ತವಾಗಿ ಎಲ್ಲ ವಿಚಾರಗಳ ಬಗ್ಗೆಯೂ ಮಾತನಾಡಿ. ಜನ ಸಮೂಹ ಕಡಿಮೆ ಇರುವ ಕಡೆ, ಹತ್ತಿರದ ಯಾವುದಾದರೂ ಪ್ರವಾಸಿ ತಾಣಗಳಿಗೆ ಕರೆದುಕೊಂಡು ಹೋಗಿ.

ಮಕ್ಕಳಿಗೆ ಈಗ ದೈಹಿಕ ವ್ಯಾಯಾಮ ಕಡಿಮೆ. ಶಾಲೆ ಇದ್ದಾಗ ಆಟ, ನಡಿಗೆ, ಇನ್ನಿತರ ವ್ಯಾಯಾಮ ಗಳು ಸಿಗುತ್ತಿದ್ದವು. ಅವರು ದೈಹಿಕವಾಗಿ ಸಕ್ರಿಯ ರಾಗಿರು ವಂತೆ ನೋಡಿಕೊಳ್ಳಿ. ಮನೆಯಲ್ಲಿ ಅಂಗಳ, ಗಾರ್ಡನ್‌ ಇದ್ದರೆ ಒಂದಷ್ಟು ಹೊತ್ತು ಆಟ ಆಡಲು ಬಿಡಿ. ಯೋಗ, ಧ್ಯಾನ, ಭಜನೆ ಮಾಡಲು ಹೇಳಿ ಕೊಡಬಹುದು. ಚೆಸ್‌, ಕೇರಂ ಮತ್ತಿತರ ಒಳಾಂಗಣ ಆಟಗಳು ಅವರನ್ನು ಬೌದ್ಧಿಕವಾಗಿ ಸುದೃಢ ರನ್ನಾಗಿಸುತ್ತವೆ. ನೃತ್ಯ ಕಲಿಸಬಹುದು.

ಮನೆಯನ್ನೇ ಶಾಲೆಯಂತೆ ಕಟ್ಟುನಿಟ್ಟಾಗಿಸಬೇಡಿ. ಶಾಲೆಯ ವ್ಯವಸ್ಥೆಯೇ ಬೇರೆ, ಮನೆಯೇ ಬೇರೆ. ಪ್ರತೀ ದಿನ ಮಕ್ಕಳಿಗೆ ಏನಾದರೊಂದು ಹೊಸತನ್ನು ಕಲಿಸಿ ಕೊಡಿ.

ಕೃಷಿಯಿದ್ದರೆ ಮಕ್ಕಳನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಅದರ ಬಗ್ಗೆ ತಿಳಿಸಿಕೊಡಿ. ಅವರನ್ನು ಭಾಗಿಯಾಗುವಂತೆ ಮಾಡಿ. ಹೂವಿನ ಗಿಡಗಳಿದ್ದರೆ ಅವುಗಳಿಗೆ ನೀರು ಹಾಕುವುದು, ಬುಡದ ಹುಲ್ಲು ತೆಗೆಯುವುದು ಈ ರೀತಿಯ ಸಣ್ಣಪುಟ್ಟ ಕೆಲಸವನ್ನು ಮಾಡಲು ಹೇಳಿ.
ಮನೆಯ ಸ್ವತ್ಛತೆ, ಕಸ ಗುಡಿಸುವುದು, ನೆಲ ಒರೆಸುವುದು, ಇನ್ನಿತರ ಕೆಲಸಗಳನ್ನು ಮಾಡಲು ಹೇಳಿ ಕೊಡಿ. ಅದಕ್ಕೀಗ ಬಹಳಷ್ಟು ಸಮಯವೂ ಇದೆ. ಸ್ವಲ್ಪ ದೊಡ್ಡವರಾದರೆ ಅಡುಗೆ ಕೆಲಸ ಕೂಡ ಹೇಳಿಕೊಡಬಹುದು.

ಈಗ ಆನ್‌ಲೈನ್‌ ತರಗತಿಯಿಂದಾಗಿ ಹೆಚ್ಚಿನ ಮಕ್ಕಳು ಮೊಬೈಲ್‌ ಬಳಕೆ ಮಾಡುತ್ತಿದ್ದು, ಅವುಗಳಿಂದ ಕೆಲವು ಒಳ್ಳೆಯ ವಿಚಾರಗಳು ಸಿಗುತ್ತಿವೆ. ಅವುಗಳನ್ನು ಪೋಷಕರು ಹೇಳಿ ಕೊಡಿ. ಯೂಟ್ಯೂಬ್‌ಗಳಲ್ಲಿ ಗುರುರಾಜ ಕರ್ಜಗಿ ಅವರಂಥವರು ಮಾತನಾಡಿರುವ ಉತ್ತಮ ವೀಡಿಯೋಗಳಿವೆ. ಅವುಗಳನ್ನು ವೀಕ್ಷಿಸಬಹುದು.

ಜಾಸ್ತಿ ಕಟ್ಟುನಿಟ್ಟು ಬೇಡ
ಮಕ್ಕಳು ಸೂಕ್ಷ್ಮ ಮನಸ್ಸಿನವ ರಾಗಿರು ತ್ತಾರೆ. ಪೋಷಕರು ಗದರಿ, ಹೆದರಿಸಿ ಯಾವುದೇ ವಿಚಾರದ ಬಗ್ಗೆ ಒತ್ತಡ ಹೇರಬಾರದು. ಇದು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಭಾರೀ ಪರಿಣಾಮ ಬೀರುತ್ತದೆ. ಎಲ್ಲವನ್ನೂ ಪ್ರೀತಿಯಿಂದ, ಶಾಂತ ರೀತಿಯಲ್ಲಿ ಹೇಳಿಕೊಡಿ. ಮಕ್ಕಳೆದರು ನಿಮ್ಮ ಸಿಟ್ಟನ್ನು ತೋರ್ಪಡಿಸಬೇಡಿ. ಹೊಡೆಯುವುದು ಕೂಡ ತರವಲ್ಲ. ಹೆಚ್ಚು ಕಟ್ಟುನಿಟ್ಟು ಈ ಸಮಯದಲ್ಲಿ ಬೇಡ.
 – ಡಾ| ಪಿ.ವಿ. ಭಂಡಾರಿ, ಡಾ| ಎ.ವಿ. ಬಾಳಿಗಾ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರು, ಉಡುಪಿ

ಟಾಪ್ ನ್ಯೂಸ್

10-mambadi

Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23 ಶಾಲೆಗೆ ಬಾಂಬ್ ಬೆದರಿಕೆ ಹಾಕಿದ 12ನೇ ತರಗತಿ ವಿದ್ಯಾರ್ಥಿ

ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ

Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್‌, ಟ್ರಾಫಿಕ್‌ ಜಾಮ್

Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್‌, ಟ್ರಾಫಿಕ್‌ ಜಾಮ್

6-kaup-3

Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು

Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು

Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು

5-bng

Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು

Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು

ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರಕಟ: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಪಾರ್ತಿಸುಬ್ಬ ಪ್ರಶಸ್ತಿ

Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ

Renukaswamy Case: All accused including Darshan appear in court; hearing adjourned

RenukaswamyCase: ದರ್ಶನ್‌ ಸೇರಿ ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರು; ವಿಚಾರಣೆ ಮುಂದೂಡಿಕೆ

Real estate businessman shot while traveling in car

Belagavi: ಕಾರಿನಲ್ಲಿ ಹೋಗುತ್ತಿದ್ದ ರಿಯಲ್‌ ಎಸ್ಟೇಟ್‌ ಉದ್ಯಮಿ ಮೇಲೆ ಗುಂಡಿನ ದಾಳಿ

Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ

Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

10-mambadi

Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ

3(2

Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ

9-kishor

BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್‌ ರಾಯಭಾರಿ

2

Uppinangady: ನೇಜಿಕಾರ್‌ ಅಕ್ಷರ ಕರಾವಳಿ ಕಟ್ಟಡ ಇನ್ನು ನೆನಪಷ್ಟೆ

8-ather

EV ದ್ವಿಚಕ್ರ ವಾಹನ ಮಾರಾಟ: ಏಥರ್‌ ಸಂಸ್ಥೆ ಪಾಲು ಶೇ.25

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.