ಆನ್‌ಲೈನ್‌ನಲ್ಲೂ ಭೂಮಿ ಯೋಜನೆ ಸೇವೆ
Team Udayavani, Dec 29, 2019, 3:00 AM IST
ಮಂಗಳೂರು: ಭೂಮಿ ಯೋಜನೆಯಡಿ ನೀಡಲಾಗುತ್ತಿರುವ ಸೇವೆಗಳಿಗಾಗಿ ಸಾರ್ವಜನಿಕರು ಭೂಮಿ ಕೇಂದ್ರ ಮತ್ತು ಅಟಲ್‌ಜೀ ಜನಸ್ನೇಹಿ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸುತ್ತಿದ್ದು, ಇನ್ನು ಮುಂದೆ ಇಂಟರ್‌ನೆಟ್ ವ್ಯವಸ್ಥೆ ಇರುವ ಯಾವುದೇ ಸ್ಥಳದಿಂದ http://landrecords.karnataka.gov.in/Service93/url ನಲ್ಲಿ ಲಾಗ್‌ಇನ್ ಆಗಿ ನಿಗದಿತ ಶುಲ್ಕವನ್ನು ಪಾವತಿಸಿ ಅರ್ಜಿ ಸಲ್ಲಿಸಬಹುದು.
ಖಾತೆ ಬದಲಾವಣೆ (ವಿಲ್, ವಿಭಾಗ, ಫೌತಿ, ಮೈನರ್ ಗಾರ್ಡಿಯನ್), ಪೋಡಿ ವಿವರಗಳನ್ನು ಪಹಣಿಯಲ್ಲಿ ದಾಖಲಿಸಲು, ಭೂ ಪರಿವರ್ತನೆ ವಿವರಗಳನ್ನು ಪಹಣಿಯಲ್ಲಿ ಇಂದೀಕರಣಗೊಳಿಸಲು, ಭೂ ಸ್ವಾಧೀನ ವಿವರಗಳನ್ನು ಪಹಣಿಯಲ್ಲಿ ಇಂದೀಕರಣಗೊಳಿಸಲು, ಸಾಲ ತಿರುವಳಿ ವಿವರಗಳನ್ನು ಪಹಣಿಯಲ್ಲಿ ಇಂದೀಕರಣಗೊಳಿಸಲು ಈ ಪೋರ್ಟಲ್‌ನಲ್ಲಿ ಸಾರ್ವಜನಿಕರು ತಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿ ಲಾಗ್‌ಇನ್ ಆಗಬಹುದಾಗಿದೆ.
ಸ್ಕ್ಯಾನ್ ಮಾಡಲಾದ ಪಿಡಿಎಫ್ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಆಧಾರ್ ಸಂಖ್ಯೆ ಬಳಸಿ ಇ-ಸೈನ್ ಮಾಡಿದ ನಂತರ ಸ್ವೀಕೃತಿ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಯನ್ನು https://youtu.be/LqWiHroVfHI ಯೂಟ್ಯೂಬ್ ಲಿಂಕ್‌ನಲ್ಲಿ ಪಡೆಯಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.