ಆನ್‌ಲೈನ್ ಪಾಠಕ್ಕೆ ಅಸ್ತು ; ಶ್ರೀಧರ್ ನೇತೃತ್ವದ ತಜ್ಞರ ಸಮಿತಿಯಿಂದ 10 ಶಿಫಾರಸು
Team Udayavani, Jul 8, 2020, 6:40 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಬೆಂಗಳೂರು: ಪ್ರಾಥಮಿಕ ಶಾಲೆಗೆ ಅರ್ಧ ತಾಸಿಗಿಂತ ಹೆಚ್ಚು ಒಂದು ಪೀರಿಯಡ್ ಇರಬಾರದು; ದಿನಕ್ಕೆ ಗರಿಷ್ಠ ನಾಲ್ಕು ಪೀರಿಯಡ್ ಮಾತ್ರ ನಡೆಸಬೇಕು ಎಂಬ ಷರತ್ತುಗಳೊಂದಿಗೆ ಪೂರ್ವ ಪ್ರಾಥಮಿಕ ತರಗತಿಯಿಂದಲೇ ಆನ್‌ಲೈನ್ ಪಾಠಕ್ಕೆ ಡಾ| ಎಂ.ಕೆ. ಶ್ರೀಧರ್ ನೇತೃತ್ವದ ತಜ್ಞರ ಸಮಿತಿ ಒಪ್ಪಿಗೆ ನೀಡಿದೆ.
ಆನ್‌ಲೈನ್ ಪಾಠದ ಕುರಿತು ಸರಕಾರ ರಚಿಸಿದ್ದ ಸಮಿತಿಯ ಸದಸ್ಯರು 10 ಶಿಫಾರಸುಗಳನ್ನು ಒಳಗೊಂಡ ತಂತ್ರಜ್ಞಾನ ಆಧಾರಿತ ಶಿಕ್ಷಣ ವರದಿಯನ್ನು ಮಂಗಳವಾರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಹಸ್ತಾಂತರಿಸಿದರು.
ಎರಡನೇ ತರಗತಿಯವರೆಗಿನ ಮಕ್ಕಳ ಆನ್‌ಲೈನ್ ತರಗತಿಯಲ್ಲಿ ಪಾಲಕ ಅಥವಾ ಪೋಷಕರು ಕಡ್ಡಾಯವಾಗಿ ಹಾಜರಿರಬೇಕು. ಅಲ್ಲದೆ ಆನ್‌ಲೈನ್ ತರಗತಿಯಲ್ಲಿ ಭಾಗವಹಿಸುವಂತೆ ಮಕ್ಕಳು ಅಥವಾ ಹೆತ್ತವರು, ಪೋಷಕರಿಗೆ ಒತ್ತಡ ಹೇರುವಂತಿಲ್ಲ. ನಿರ್ದಿಷ್ಟ ಸ್ಕ್ರೀನ್ ಸಮಯಮಿತಿ ಇರಿಸಿಕೊಂಡೇ ತರಗತಿ ನಡೆಸಬೇಕು ಎಂದು ವರದಿ ಸೂಚಿಸಿದೆ.
ಶಿಕ್ಷಣದ ಪ್ರಮುಖ ಪಾಲುದಾರರಾದ ಮಕ್ಕಳ ಹಿತವನ್ನೇ ಗಮನದಲ್ಲಿ ಇರಿಸಿಕೊಂಡು ವರದಿ ಸಿದ್ಧಪಡಿಸಿ, ಸರಕಾರಕ್ಕೆ ಸಲ್ಲಿಸಿದ್ದೇವೆ. ಕೋವಿಡ್ 19 ಸಾಂಕ್ರಾಮಿಕ ಕಾಲಘಟ್ಟದಲ್ಲಿ ಮಕ್ಕಳ ಶಿಕ್ಷಣ ಮುಂದುವರಿಕೆಗೆ ತೊಂದರೆಯಾಗಬಾರದು ಮತ್ತು ಅದನ್ನು ಹೇಗೆ ಮುಂದುವರಿಸುವುದು, ಮಕ್ಕಳ ಮಾನಸಿಕ ಆರೋಗ್ಯದಲ್ಲಿ ವ್ಯತ್ಯಯವಾಗದಂತೆ ಯಾವ ರೀತಿ ಮುಂದುವರಿಸಬೇಕೆಂಬುದನ್ನು ಗಮನದಲ್ಲಿ ಇರಿಸಿಕೊಂಡು ಸಮಿತಿ ವರದಿ ಸಲ್ಲಿಸಿದೆ ಎಂದು ಡಾ| ಎಂ.ಕೆ. ಶ್ರೀಧರ್ ಹೇಳಿದ್ದಾರೆ.
ಶಾಲೆ ಆರಂಭಕ್ಕೆ ಮೊದಲ ಹೆಜ್ಜೆ
ಈ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳ ಆರಂಭಕ್ಕೆ ಅಗತ್ಯ ಪೂರ್ವಸಿದ್ಧತೆ ಕೈಗೊಳ್ಳುವಂತೆ ಸಮಿತಿ ಶಿಫಾರಸು ಮಾಡಿದೆ. ಗ್ರಾಮೀಣ ಅಥವಾ ನಗರ, ಜನದಟ್ಟಣೆ ಅಥವಾ ವಿರಳ ಜನದಟ್ಟಣೆ ಶಾಲೆಗಳು ಮತ್ತು ಶಾಲೆಗಳು ಕಾರ್ಯನಿರ್ವಹಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರಮಾಣಿತ ಕಾರ್ಯಾಚರಣೆ ಕಾರ್ಯವಿಧಾನಗಳನ್ನು (ಎಸ್‌ಒಪಿ) ಅಭಿವೃದ್ಧಿಪಡಿಸಬೇಕು ಎಂದು ಶಿಫಾರಸು ಮಾಡಿದೆ.
ಸಿಬಿಎಸ್‌ಇ ಪಠ್ಯಕ್ರಮ ಕಡಿತ
ಹೊಸದಿಲ್ಲಿಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್‌ಇ) 9ರಿಂದ 12ನೇ ತರಗತಿಯ ಪಠ್ಯಕ್ರಮವನ್ನು ಶೇ. 30ರಷ್ಟು ಕಡಿತಗೊಳಿಸುವುದಾಗಿ ಕೇಂದ್ರ ಮಾನವ ಸಂಪದಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ತಿಳಿಸಿದ್ದಾರೆ. ಕೇವಲ ಆನ್‌ಲೈನ್‌ನಲ್ಲೇ ತರಗತಿಗಳು ಮುಂದುವರಿದರೆ, 2021ರ ಮಂಡಳಿ ಪರೀಕ್ಷೆಗಳ ಹೊತ್ತಿಗೆ ಪಠ್ಯಕ್ರಮ ಪೂರ್ಣಗೊಳ್ಳುವುದೋ ಇಲ್ಲವೋ ಎಂಬ ಆತಂಕ ಇತ್ತು. ಹಾಗಾಗಿ ಎಷ್ಟು ಬೇಕೋ ಅಷ್ಟು ಪಠ್ಯಕ್ರಮವನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಶೇ. 30ರಷ್ಟು ಪಠ್ಯವನ್ನು ಇಳಿಸಲಾಗಿದೆ. ಇದರಿಂದ ನಿಗದಿತ ಸಮಯದಲ್ಲಿ ಪಠ್ಯಕ್ರಮ ಪೂರ್ಣಗೊಳಿಸಲು ಇದು ಸಹಕಾರಿಯಾಗಲಿದೆ ಎಂದು ಪೋಖ್ರಿಯಾಲ್ ತಿಳಿಸಿದ್ದಾರೆ.
ಮಾರ್ಗಸೂಚಿ
– ಆನ್‌ಲೈನ್ ತರಗತಿಯ ಸ್ಕ್ರೀನ್ ಸಮಯ ಗರಿಷ್ಠ 30 ನಿಮಿಷ (6ರಿಂದ ಅನಂತರದ ತರಗತಿಗಳಿಗೆ ಹೆಚ್ಚುವರಿ 15 ನಿಮಿಷ).
– ವಯಸ್ಸಿನ ಪ್ರಕಾರ ದಿನಕ್ಕೆ ಗರಿಷ್ಠ 1ರಿಂದ 4 ಪೀರಿಯಡ್.
– ಎಲ್ಲ ತರಗತಿಗಳಿಗೂ ಸ್ಕ್ರೀನ್ ಸಮಯ ಪಾಲಿಸಿ, ಗರಿಷ್ಠ ಮಿತಿ ಹೆಚ್ಚದಂತೆ ನಡೆಸಬೇಕು.
– 2ನೇ ತರಗತಿವರೆಗೆ ಆನ್‌ಲೈನ್ ತರಗತಿಯಲ್ಲಿ ಹೆತ್ತವರು /ಪೋಷಕರ ಉಪಸ್ಥಿತಿ ಕಡ್ಡಾಯ.
– ಸಿಂಕ್ರೋನಸ್ (ನೇರ ಪ್ರಸಾರದ ಆನ್‌ಲೈನ್ ತರಗತಿ) ಮತ್ತು ಅಸಿಂಕ್ರೋನಸ್ (ಪೂರ್ವ ಮುದ್ರಿತ ಪಠ್ಯಗಳ ಮೂಲಕ) ಕಲಿಕೆಗೆ ಅನುಮತಿ ನೀಡಿದೆ.
– ಮಕ್ಕಳು ಅಥವಾ ಹೆತ್ತವರು, ಪೋಷಕರು ನೇರ ಪ್ರಸಾರದ ತರಗತಿಗೆ ಹಾಜರಾಗಲು ಸಾಧ್ಯವಾಗದೆ ಇದ್ದಲ್ಲಿ ಒತ್ತಾಯ ಮಾಡ ಬಾರದು, ನೇರ ಪ್ರಸಾರ ತರಗತಿಗೆ ಸೈಬರ್ ಸುರಕ್ಷೆ ಒದಗಿಸಬೇಕು.
ಪ್ರಮುಖ ಶಿಫಾರಸುಗಳು
– ಶಿಕ್ಷಣದಲ್ಲಿ ತಂತ್ರಜ್ಞಾನ ಬಳಸಿದ್ದರಿಂದ ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗಬಾರದು.
– ವಯಸ್ಸಿಗೆ ಅನುಗುಣವಾದ ಕಲಿಕೆ ವಿಧಾನ ಬಳಸಬೇಕು.
– ಕೋವಿಡ್-19 ಸಂದರ್ಭವನ್ನು ಗಮನದಲ್ಲಿ ಇರಿಸಿಕೊಂಡು, ಪಠ್ಯಕ್ರಮದ ಉದ್ದೇಶವನ್ನು ಪರಿಷ್ಕರಿಸಬೇಕಾಗಿದೆ. ನಿಗದಿತ ಪಠ್ಯವಸ್ತುವನ್ನು ಇರುವ ಹಾಗೆಯೇ ಬೋಧಿಸಬಾರದು. ಪ್ರತೀ ಶಾಲೆಯು ಪರ್ಯಾಯ ಶೈಕ್ಷಣಿಕ ಪಠ್ಯಕ್ರಮ ಕ್ಯಾಲೆಂಡರ್ ರಚಿಸಬೇಕು.
– ಕಲಿಕಾ ಕೌಶಲದೊಂದಿಗೆ ಸಕ್ರಿಯವಾದ ಕಲಿಕಾ ನಿಯೋಗಗಳನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸಬೇಕು.
– ವಿಶೇಷ ಅಗತ್ಯವಿರುವ ಮಕ್ಕಳಿಗೆ ವಿಶೇಷ ಕಾಳಜಿ ವಹಿಸಬೇಕು.
– ಪ್ರತೀ ಮಗುವಿಗೆ ಶಿಕ್ಷಣ ದೊರೆಯಬೇಕು.
ಅವೈಜ್ಞಾನಿಕ ಆನ್‌ಲೈನ್ ಬೋಧನೆಯನ್ನು ತಪ್ಪಿಸಲು ಸರಕಾರ ರಚಿಸಿದ್ದ ತಜ್ಞರ ಸಮಿತಿ ವರದಿ ನೀಡಿದೆ. ಸಮಿತಿಯು ಮಕ್ಕಳ ಹಿತದೃಷ್ಟಿಯಿಂದ ವರದಿ ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಿದೆ. ಮಕ್ಕಳು ತಂತ್ರಜ್ಞಾನ ಆಧಾರಿತ ಶಿಕ್ಷಣದಿಂದ ವಂಚಿತರಾಗದಂತೆ ಯಾವ ಉಪಕ್ರಮಗಳನ್ನು ಉಪಯೋಗಿಸಿ ಕಲಿಕೆ ಮುಂದುವರಿಸಬಹುದು ಎಂಬುದನ್ನು ವರದಿ ತಿಳಿಸಿದೆ.
– ಎಸ್. ಸುರೇಶ್ ಕುಮಾರ್, ಶಿಕ್ಷಣ ಸಚಿವರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gundlupete: ವಿದ್ಯುತ್ ಕಂಬಕ್ಕೆ ಗುದ್ದಿದ್ದ ಕಾರು: ಸ್ಥಳದಲ್ಲೇ ಇಬ್ಬರು ಸಾವು
Lucknow; ಯುವಕನಿಂದ ತಾಯಿ ಮತ್ತು ನಾಲ್ವರು ಸಹೋದರಿಯರ ಬರ್ಬರ ಹ*ತ್ಯೆ!
Aranthodu;ಅರಣ್ಯದಲ್ಲಿ ಹೊಸ ವರ್ಷ ಪಾರ್ಟಿ: 40 ಮಂದಿ ಅರಣ್ಯ ಇಲಾಖೆಯ ವಶಕ್ಕೆ!
BJP ತಪ್ಪುಗಳನ್ನು ಆರ್‌ಎಸ್‌ಎಸ್ ಬೆಂಬಲಿಸುತ್ತದೆಯೇ? ಭಾಗವತ್ ರನ್ನು ಪ್ರಶ್ನಿಸಿದ ಕೇಜ್ರಿವಾಲ್
2025ಕ್ಕೆ 25 ಆಪ್ತ ಸಲಹೆಗಳು: ಸಣ್ಣ ಪುಟ್ಟ ಸಂಗತಿಗಳನ್ನು ಆಸ್ವಾದಿಸೋಣ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.