ಮದುವೆ ಸಮಾರಂಭಗಳಲ್ಲಿ ನೂರು ಜನ ಮೀರಬಾರದು: ಸಚಿವ ಸುಧಾಕರ್
Team Udayavani, Apr 16, 2021, 2:43 PM IST
ಬೆಂಗಳೂರು: ಕೋವಿಡ್ 19 ಸೋಂಕು ನಿಯಂತ್ರಣಕ್ಕಾಗಿ ಅತಿ ಹೆಚ್ಚು ಜನ ಒಂದೆಡೆ ಸೇರುವಂತಿಲ್ಲ. ಒಳಾಂಗಣ ಮದುವೆ ಸಮಾರಂಭಕ್ಕೆ ನೂರು ಜನ ಮತ್ತು ಹೊರಾಂಗಣ ಮದುವೆ ಸಮಾರಂಭಕ್ಕೆ ಇನ್ನೂರು ಜನರಿಗಿಂತ ಹೆಚ್ಚು ಮಂದಿ ಸೇರಬಾರದು ಎಂದು ಸಚಿವ ಕೆ.ಸುಧಾಕರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಮೈಕ್ರೋ ಕಂಟೋನ್ಮೆಂಟ್ ಹೆಚ್ಚಳ ಮಾಡುತ್ತೇವೆ ಎಂದರು.
ಇದನ್ನೂ ಓದಿ:ಸಿಎಂ ಯಡಿಯೂರಪ್ಪಗೆ ಕೋವಿಡ್ ಪಾಸಿಟಿವ್: ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್
ಎರಡನೇ ಅಲೆಯಲ್ಲಿ ಶೇ.95 ರಷ್ಟು ಜನರಿಗೆ ಆಸ್ಪತ್ರೆ ಚಿಕಿತ್ಸೆ ಬೇಕಿಲ್ಲ. ಕೇವಲ ಶೇ.5ರಷ್ಟು ಜನರಿಗೆ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಅಗತ್ಯವಿದೆ. ಎಲ್ಲರೂ ಸೇರಿ ಸೋಂಕು ನಿಯಂತ್ರಣ ಮಾಡೋಣ. ಅದಷ್ಟು ಬೇಗ ಎರಡನೇ ಅಲೆ ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜನ್ಮದಿನ ಹಾಗೂ ಇತರೆ ಆಚರಣೆಗಳು: ತೆರೆದ ಪ್ರದೇಶಗಳಲ್ಲಿ 50 ಜನ ಮೀರಬಾರದು, ಹಾಗೂ ಸಭಾಂಗಣ, ಹಾಲ್ ಗಳು ಇತ್ಯಾದಿ ಮುಚ್ಚಿದ ಪ್ರದೇಶಗಳಲ್ಲಿ 25 ಮಂದಿಗಿಂತ ಹೆಚ್ಚು ಜನ ಸೇರಬಾರದು.
ರಾಜಕೀಯ ಆಚರಣೆಗಳು ಹಾಗೂ ಸಮಾರಂಭಗಳಲ್ಲಿ, ತೆರೆದ ಪ್ರದೇಶಗಳಲ್ಲಿ 200ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ಹಾಗೂ ಧಾರ್ಮಿಕ, ಆಚರಣೆಗಳು ಹಾಗೂ ಸಮಾರಂಭಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಕೋವಿಡ್ ಲಸಿಕೆ ಹಾಕಿಸಿಕೊಂಡ ಮೇಲೂ ಕೆಲವರಿಗೆ ಸೋಂಕು ಬಂದಿದೆ. ಬರುವುದಿಲ್ಲವೆಂದು ನಾವು ಹೇಳಿಲ್ಲ. ಆದರೆ ಸಾವಿನ ಪ್ರಮಾಣ ಕಡಿಮೆ ಆಗಲಿದೆ. ಮುಂದೆ ಬರುವ ಮೂರನೇ ಅಲೆಯನ್ನು ಇದರಿಂದ ತಪ್ಪಿಸಿಕೊಳ್ಳಬಹುದು ಎಂದು ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಸುಧಾಕರ್ ಹೇಳಿದರು.
ಇದನ್ನೂ ಓದಿ: ಆತಂಕದ ಸ್ಥಿತಿ! ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆ ಮುನ್ಸೂಚನೆ ನೀಡಿದ ಸಚಿವ ಸುಧಾಕರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.