ವಿಧಾನಪರಿಷತ್ತಿನ 133ನೇ ಅಧಿವೇಶನಕ್ಕೆ ತೆರೆ
Team Udayavani, Jun 22, 2017, 3:45 AM IST
ವಿಧಾನಪರಿಷತ್ತು: ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ, ಮಕ್ಕಳ ಹಕ್ಕುಗಳ ಬಗ್ಗೆ ವಿಶೇಷ ಚರ್ಚೆಗೆ ಸಾಕ್ಷಿಯಾದ ವಿಧಾನಪರಿಷತ್ತಿನ 133ನೇ ಅಧಿವೇಶನಕ್ಕೆ ಬುಧವಾರ ತೆರೆ ಬಿತ್ತು. 13 ದಿನಗಳ ಕಾಲ ನಡೆದ ಈ ಅಧಿವೇಶನದಲ್ಲಿ ಸಿಎಜಿ ಸೇರಿದಂತೆ ವಿವಿಧ ವರದಿಗಳನ್ನು ಮಂಡಿಸಲಾಯಿತು. ವಿವಿಧ ನಿಯಮಗಳಡಿ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಒಟ್ಟು ಸ್ವೀಕರಿಸಲಾದ 1,300 ಪ್ರಶ್ನೆಗಳ ಪೈಕಿ ಚುಕ್ಕೆ ಗುರುತಿನ 150 ಪ್ರಶ್ನೆಗಳಲ್ಲಿ 137ಕ್ಕೆ ಸದನದಲ್ಲಿ ಉತ್ತರಿಸಲಾಯಿತು. ಉಳಿದ 1,150 ಚುಕ್ಕೆ ಗುರುತಿಲ್ಲದ ಪ್ರಶ್ನೆಗಳ ಪೈಕಿ 1,019 ಪ್ರಶ್ನೆಗಳಿಗೆ ಸದನದಲ್ಲಿ ಲಿಖೀತ ಉತ್ತರಗಳನ್ನು ಮಂಡಿಸಲಾಯಿತು. ಧನವಿನಿಯೋಗ ಸೇರಿದಂತೆ ಒಟ್ಟು 12 ವಿಧೇಯಕಗಳನ್ನು ಅಂಗೀಕರಿಸಲಾಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.