ಆಪರೇಷನ್ ವಿಫಲ : ಕೈ ನಾಯಕರು ಖುಷ್
Team Udayavani, Jan 17, 2019, 12:40 AM IST
ಬೆಂಗಳೂರು: ಸಂಕ್ರಾಂತಿ ಅನಂತರ ರಾಜ್ಯ ರಾಜಕಾರಣದಲ್ಲಿ ಕ್ರಾಂತಿ ಮಾಡುವ ಬಿಜೆಪಿಯವರ ಪ್ರಯತ್ನಕ್ಕೆ ತಡೆಯೊಡ್ಡುವಲ್ಲಿ ಕಾಂಗ್ರೆಸ್ ನಾಯಕರು ಒಂದು ಹಂತದ ಯಶಸ್ಸು ಸಾಧಿಸಿದ್ದು, ಸರಕಾರ ಪತನವಾಗುತ್ತದೆ ಎಂಬ ಆತಂಕ ದೂರವಾಗಿದೆ.
ಬಿಜೆಪಿಯ ಆಪರೇಷನ್ ಕಮಲದ ತೀವ್ರತೆಗೆ ಆತಂಕಗೊಂಡಿದ್ದ ಕಾಂಗ್ರೆಸ್ ಹೈಕಮಾಂಡ್ ನೇರವಾಗಿ ಮಧ್ಯ ಪ್ರವೇಶ ಮಾಡಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರನ್ನು ಬೆಂಗಳೂರಿಗೆ ಕಳುಹಿಸಿ, ತತ್‌ಕ್ಷಣ ಅತೃಪ್ತರನ್ನು ಸಂಪರ್ಕಿಸಿ ಸಮಾಧಾನಪಡಿಸುವ ಕಾರ್ಯದಲ್ಲಿ ಬಹುತೇಕ ಯಶಸ್ವಿಯಾಗಿದೆ.
ರಾಜ್ಯ ನಾಯಕರ ಪ್ರಯತ್ನದ ಹಿನ್ನೆಲೆ ಯಲ್ಲಿ ಮಂಗಳವಾರ ಹೊಸಪೇಟೆ ಶಾಸಕ ಆನಂದ್ ಸಿಂಗ್, ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ವೇಣು ಗೋಪಾಲ್ ಅವರನ್ನು ಭೇಟಿ ಮಾಡಿ ದ್ದರು. ಆದರೂ ಕಾಂಗ್ರೆಸ್ ನಾಯಕರಿಗೆ ಆತಂಕ ದೂರವಾಗಿರಲಿಲ್ಲ. ಬುಧ ವಾರ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಹಗರಿ ಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ, ಕುಷ್ಠಗಿ ಶಾಸಕ ಅಮರೇಗೌಡ ಬಯ್ನಾ ಪೂರ, ಸುರಪುರ ಶಾಸಕ ಶರಣಬಸಪ್ಪ ದರ್ಶನಾಪೂರ ಅವರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾಧ್ಯಮಗಳಿಗೂ ಕಾಣಿಸಿಕೊಳ್ಳುವ ಮೂಲಕ ತಾವು ಎಲ್ಲಿಯೂ ಹೋಗಿಲ್ಲ ಎಂದು ಸಮಜಾಯಿಷಿ ನೀಡುವ ಪ್ರಯತ್ನ ಮಾಡಿದರು.
ಬಿಜೆಪಿ ಆಪರೇಷನ್ ಕಮಲಕ್ಕೆ ಪ್ರಯತ್ನಿಸಿದ್ದ ಅರ್ಧದಷ್ಟು ಶಾಸಕರನ್ನು ವಾಪಸ್ ಕರೆಯಿಸಿ ಮನವೊಲಿಸುವಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಯಶಸ್ವಿ ಯಾಗಿದ್ದು, ಸಮಾಧಾನಗೊಂಡ ಕೆ.ಸಿ. ವೇಣುಗೋಪಾಲ್ ಹೈದರಾಬಾದ್‌ಗೆ ತೆರಳಿದರು.
ಅತೃಪ್ತರ ಮನವೊಲಿಕೆ: ಮುಂದುವರಿದ ಪ್ರಯತ್ನ
ಮಾಜಿ ಸಚಿವ ರಮೇಶ್ ಜಾರಕಿ ಹೊಳಿ ಅವರೊಂದಿಗೆ ಮುಂಬಯಿ ಯಲ್ಲಿ ವಾಸ್ತವ್ಯ ಹೂಡಿದ್ದಾರೆ ಎನ್ನಲಾದ ಅತೃಪ್ತ ಶಾಸಕರಾದ ಬಳ್ಳಾರಿ ಗ್ರಾಮೀಣ ಶಾಸಕ ಬಿ. ನಾಗೇಂದ್ರ, ಚಿಂಚೊಳ್ಳಿ ಶಾಸಕ ಡಾ| ಉಮೇಶ್ ಜಾಧವ್, ಅಥಣಿ ಶಾಸಕ ಮಹೇಶ್ ಕುಮಠಳ್ಳಿ ಅವರನ್ನೂ ಅವರ ಆಪ್ತರು ಹಾಗೂ ಸಂಬಂಧಿಕರ ಮೂಲಕ ಸಂಪರ್ಕಿಸುವ ಪ್ರಯತ್ನವನ್ನು ರಾಜ್ಯ ಕಾಂಗ್ರೆಸ್ ನಾಯಕರು ಮಾಡಿದ್ದು, ಗುರುವಾರ ಸಂಜೆಯೊಳಗೆ ಬಿ. ನಾಗೇಂದ್ರ, ಉಮೇಶ್ ಜಾಧವ್ ಮುಂಬಯಿಯಿಂದ ವಾಪಸ್ ಬರುವ ವಿಶ್ವಾಸದಲ್ಲಿ ರಾಜ್ಯ ಕಾಂಗ್ರೆಸ್ ನಾಯಕ ರಿದ್ದಾರೆ ಎಂದು ತಿಳಿದು ಬಂದಿದೆ.
ಕಂಪ್ಲಿ ಶಾಸಕ ಗಣೇಶ್, ಮಸ್ಕಿ ಶಾಸಕ ಪ್ರತಾಪ್‌ಗೌಡ ಪಾಟೀಲ್ ಹಾಗೂ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಟಾರ್ ನಡೆಯ ಬಗ್ಗೆ ರಾಜ್ಯ ನಾಯಕರಿಗೆ ಇನ್ನೂ ಸ್ಪಷ್ಟ ಮಾಹಿತಿ ದೊರೆತಂತಿಲ್ಲ. ಆದರೆ ಕಂಪ್ಲಿ ಗಣೇಶ್ ಭೀಮಾನಾಯ್ಕ ಸೂಚನೆ ಮೇರೆಗೆ ಬೆಂಗಳೂರಿಗೆ ಬಂದಿದ್ದಾರೆ ಎಂದು ತಿಳಿದು ಬಂದಿದೆ. ಪ್ರತಾಪ್‌ಗೌಡ ಪಾಟೀಲ್ ಕೂಡ ಕ್ಷೇತ್ರದಲ್ಲಿದ್ದು, ಎಲ್ಲಿಯೂ ಹೋಗುವುದಿಲ್ಲ ಎಂಬ ಭರವಸೆ ನೀಡಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
60 ಕೋಟಿ ರೂ.,ಸಚಿವ ಸ್ಥಾನದ ಆಫರ್!
ಹಾಸನ: ಬಿಜೆಪಿಯವರು ಜೆಡಿಎಸ್ ಶಾಸಕರಿಗೂ ಆಮಿಷ ಒಡ್ಡುತ್ತಿದ್ದಾರೆ. ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್‌ಗೂ 60 ಕೋಟಿ ರೂ., ಮಂತ್ರಿಸ್ಥಾನದ ಆಮಿಷವನ್ನು ಜಗದೀಶ್ ಶೆಟ್ಟರ್ ಅವರೇ
ನೀಡಿದ್ದಾರೆ ಎಂದು ಅರಸೀಕೆರೆ ಜೆಡಿಎಸ್ ಶಾಸಕ ಕೆ.ಎಂ. ಶಿವಲಿಂಗೇಗೌಡ ತಿಳಿಸಿದ್ದಾರೆ.
ಬಿಎಸ್‌ವೈ ಬಸ್ ಸ್ಟಾಂಡ್ ಲವ್: ಇಬ್ರಾಹಿಂ
ಯಡಿಯೂರಪ್ಪ ಅವರದು ಬಸ್‌ಸ್ಟಾಂಡ್ ಲವ್. ಅವರು ಪತಿವ್ರತೆ ಯರನ್ನು ಕರೆದುಕೊಂಡು ಹೋಗಲು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಬಸ್‌ಸ್ಟಾಂಡ್ ಬಸವಿಯರು ಮಾತ್ರ ಅವರ ಜತೆ ಹೋಗುತ್ತಾರೆ ವಿನಾ ಪತಿವ್ರತೆಯರು ಹೋಗುವುದಿಲ್ಲ ಎಂದು ಸಿ.ಎಂ. ಇಬ್ರಾಹಿಂ ಲೇವಡಿ ಮಾಡಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಸಂಕ್ರಾಂತಿಯ ಹೊಸ ವರ್ಷ ರಾಜಕಾರಣದ ಹೆಸರಿಗೆ ದೊಡ್ಡ ಕಳಂಕ. ಹತ್ತಿಪ್ಪತ್ತು ಶಾಸಕರನ್ನು ಕರೆದುಕೊಂಡು ಹೋಗುವುದು ಸಹಜ. ಆದರೆ ಬಿಜೆಪಿಯವರು 104 ಶಾಸಕರನ್ನು ಕೂಡಿ ಹಾಕಿದ್ದಾರೆ. ನಾರ್ಮಲ್ ಡೆಲಿವರಿ ಮಾಡಿ ಎಂದರೆ ಯಡಿಯೂರಪ್ಪ ಆಪರೇಷನ್ ಮಾಡುತ್ತಿದ್ದಾರೆ. ಈಗ ಗರ್ಭಪಾತವಾಗಿದೆ ಎಂದು ಲೇವಡಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinner Politics: ಮುಖ್ಯಮಂತ್ರಿ ಊಟಕ್ಕೆ ಹೋದ್ರೆ ತಪ್ಪೇನಿದೆ?: ಸಚಿವ ಎಂ.ಬಿ.ಪಾಟೀಲ್
Kolara: ಹೈಕೋರ್ಟ್ ಅನುಮತಿ ಬಳಿಕ ಬಿಗಿ ಭದ್ರತೆಯಲ್ಲಿ ಆರೆಸ್ಸೆಸ್ ಪಥಸಂಚಲನ
Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ
ಮಹಿಳೆಯರಿಗೆ ಉಚಿತ ಕೊಟ್ಟು, ಪುರುಷರಿಗೆ ಬಸ್ ದರ ಏರಿಕೆ ಭಾರ ಸರಿಯಲ್ಲ: ಬಿ.ಎಸ್.ಯಡಿಯೂರಪ್ಪ
Passes Away: ಹಿರಿಯ ಸಾಹಿತಿ ನಾ.ಡಿ’ಸೋಜಾ ವಿಧಿವಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Editorial: ರಾಜ್ಯದ ಸರಕಾರಿ ಆಸ್ಪತ್ರೆಗಳಿಗೆ ಬೇಕಿದೆ ತುರ್ತು ಕಾಯಕಲ್ಪ
Mangaluru: ದಿಢೀರ್ ಆಗಿ ಕಾಣಿಸಿಕೊಂಡ ನಟ ಯಶ್
Gurantee Burden: ಗ್ಯಾರಂಟಿ ಕೊಟ್ಟು, ಇನ್ನೊಂದೆಡೆ ಬೆಲೆ ಹೆಚ್ಚಿಸಿ ಬರೆ: ಸಂಸದ ಕಾರಜೋಳ
Dinner Politics: ಮುಖ್ಯಮಂತ್ರಿ ಊಟಕ್ಕೆ ಹೋದ್ರೆ ತಪ್ಪೇನಿದೆ?: ಸಚಿವ ಎಂ.ಬಿ.ಪಾಟೀಲ್
Assault: ನಾಗಮಂಗಲದಲ್ಲಿ ಎಎಸ್‌ಐಯ ಹಿಡಿದು ಎಳೆದಾಡಿ, ಹಲ್ಲೆ ಮಾಡಿದ ಆರೋಪಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.