ಕೇಂದ್ರದ ನೂತನ ಹಾಲ್‌ ಮಾರ್ಕ್‌ ನೀತಿಗೆ ಆಭರಣ ವ್ಯಾಪಾರಿಗಳ ವಿರೋಧ

Team Udayavani, Aug 23, 2021, 11:00 PM IST

ಕೇಂದ್ರದ ನೂತನ ಹಾಲ್‌ ಮಾರ್ಕ್‌ ನೀತಿಗೆ ಆಭರಣ ವ್ಯಾಪಾರಿಗಳ ವಿರೋಧ

ಬೆಂಗಳೂರು: ಕೇಂದ್ರ ಸರ್ಕಾರದ ನೂತ ಹಾಲ್‌ಮಾರ್ಕ್‌ ನೀತಿಗೆ ಕರ್ನಾಟಕ ಜ್ಯುವೆಲ್ಲರ್ಸ್‌ ಅಸೋಸಿಯೇಷನ್‌ ಆಕ್ಷೇಪ ವ್ಯಕ್ತಪಡಿಸಿದೆ. ಆಭರಣ ಕ್ಷೇತ್ರದಲ್ಲಿ  ಪಾರದರ್ಶಕತೆ ತರಲು “ಹಾಲ್‌ ಮಾರ್ಕಿಂಗ್‌ ಯೂನಿಕ್‌ ಐಡಿ’ ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದ್ದು ಇದನ್ನು ಕರ್ನಾಟಕ ಜ್ಯುವೆಲ್ಲರಿ ಅಸೋಸಿಯೇಷನ್‌ ವಿರೋಧಿಸಿದೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಕರ್ನಾಟಕ ಜ್ಯುವೆಲ್ಲರ್ಸ್‌ ಅಸೋಸಿಯೇಷನ್‌ ಅಧ್ಯಕ್ಷ ಟಿ.ಎ.ಶರವಣ, ಹಾಲ್‌ ಮಾರ್ಕಿಂಗ್‌ ವ್ಯವಸ್ಥೆಯನ್ನು ನಾವು ಸ್ವಾಗತಿಸುತ್ತೇವೆ. ಆದರೆ ಯೂನಿಕ್‌ ಐಡಿ ವ್ಯವಸ್ಥೆಯನ್ನು ವಿರೋಧಿಸುತ್ತೇವೆ. ಈ ವ್ಯವಸ್ಥೆಯಿಂದ ಆಭರಣ ವ್ಯಾಪಾರಿಗಳಿಗೆ ಮತ್ತು ಗ್ರಾಹಕರಿಗೆ ತೊಂದರೆ ಉಂಟಾಗಲಿದೆ ಎಂದು ಹೇಳಿದರು.

ಯೂನಿಕ್‌ ಐಡಿ ವ್ಯವಸ್ಥೆಯಿಂದ ಗ್ರಾಹಕರಿಗೆ ಕಿರಿಕಿರಿ ಉಂಟಾಗಲಿದೆ. ಗ್ರಾಹಕರ ಮತ್ತು ಆಭರಣ ಖರೀದಿದಾರರ ನಡುವಿನ ಬಾಂಧವ್ಯಕ್ಕೆ ಧಕ್ಕೆ ಉಂಟಾಗಲಿದೆ. ಎಲ್ಲದಕ್ಕೂ ಮಿಗಿಲಾಗಿ ಖರೀದಿದಾರರ ಖಾಸಗಿ ತನಕ್ಕೆ ಧಕ್ಕೆ ಉಂಟಾಗಲಿದೆ. ಆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ನೂತನ ಹಾಲ್‌ ಮಾರ್ಕ್‌ ನೀತಿಯನ್ನು ವಿರೋಧಿಸುತ್ತಿರುವುದಾಗಿ ತಿಳಿಸಿದರು.

ಈ ವ್ಯವಸ್ಥೆಯನ್ನು ಜಾರಿ ಮಾಡಿ ಕೇಂದ್ರ ಸರ್ಕಾರ ಪರೋಕ್ಷವಾಗಿ ಮಾನಸಿಕ ಒತ್ತಡ ಹೇರುವ ಜತೆಗೆ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗುವಂತಾಗಲು ಸರ್ಕಾರವೇ ಅನುವು ಮಾಡಿಕೊಟ್ಟಂತಿದೆ. ಕೆಲವು ತುರ್ತು ಸಂದರ್ಭದಲ್ಲಿ ಮದುವೆ ಮತ್ತಿತರರ ಸಮಾರಂಭಗಳಿಗೆ ಮಾಂಗಲ್ಯ, ಬಳೆ, ಉಂಗುರ ಮತ್ತಿತರರ ಆಭರಣಗಳನ್ನು ಖರೀದಿಸಲು ಗ್ರಾಹಕರಿಗೆ ತೊಂದರೆ ಆಗುತ್ತಿದೆ ಎಂದು ದೂರಿದರು.

ಆಭರಣ ವ್ಯಾಪಾರಿಗಳು 2ಲಕ್ಷ ರೂ.ಗೂ ಹೆಚ್ಚು ಮೊತ್ತದ ಖರೀದಿ ಮಾಡುವವರಿಂದ ಸೂಕ್ತ ದಾಖಲೆ ಪಡೆದು ಆಭರಣ ಮಾರಾಟ ಮಾಡಲಾಗುತ್ತದೆ. ಕೇಂದ್ರ ಸರ್ಕಾರದ ಈ ಆದೇಶದ ವಿರುದ್ಧ ಆಭರಣ ಅಸೋಸಿಯೇಷನ್‌ ನ್ಯಾಯಾಲಯದ ಮೆಟ್ಟಿಲನ್ನು ಏರಲಿದೆ ಎಂದು ಹೇಳಿದರು. ಜ್ಯುವೆಲ್ಲರಿ ಅಸೋಸಿಯೇಷನ್‌ ಬೆಂಗಳೂರು ಅಧ್ಯಕ್ಷ ವೈ.ಎಸ್‌.ರವಿಕುಮಾರ್‌, ಕೇಂದ್ರ ಸರ್ಕಾರ ಈ ವ್ಯವಸ್ಥೆಯನ್ನು ಜಾರಿಗೊಳಿಸುವ ಮೊದಲು ಇದರ ಸಾಧಕ ಬಾಧಕಗಳ ಬಗ್ಗೆ ಸರ್ಕಾರ ಗಮನಹರಿಸಬೇಕಾಗಿತ್ತು. ಆಭರಣ ಹಾಲ್‌ ಮಾರ್ಕ್‌ ಕೇಂದ್ರಗಳನ್ನು ಸೂಸುತ್ರವಾಗಿ ತೆರೆದು ಆ ನಂತರ ಹಾಲ್‌ಮಾರ್ಕ್‌ ಐಡಿ ಜಾರಿಗೆ ಮುಂದಾಗಬೇಕಾಗಿತ್ತು ಎಂದು ತಿಳಿಸಿದರು.

ಕೇಂದ್ರ ಸರ್ಕಾರ ಜನವಿರೋಧಿ ಹಾಲ್‌ಮಾರ್ಕ್‌ ಪದ§ತಿಯನ್ನು ಹಿಂಪಡಯಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ  ಇದರ ವಿರುದ್ಧ ಬೀದಿ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ಸಂಘದ ಪದಾಧಿಕಾರಿಗಳಾದ ರವಿಕುಮಾರ್‌,ಪ್ರಕಾಶ್‌, ನೇಮಿಚಂದ್ರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Kinnigoli ಬಳ್ಕುಂಜೆ ಮನೆಯಲ್ಲಿ ಚಿನ್ನಾಭರಣ ಕಳವು

Kinnigoli ಬಳ್ಕುಂಜೆ ಮನೆಯಲ್ಲಿ ಚಿನ್ನಾಭರಣ ಕಳವು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Mangaluru ದರೋಡೆ ಪ್ರಕರಣ: 6 ಆರೋಪಿಗಳು ಪೊಲೀಸ್‌ ಕಸ್ಟಡಿಗೆ

Mangaluru ದರೋಡೆ ಪ್ರಕರಣ: 6 ಆರೋಪಿಗಳು ಪೊಲೀಸ್‌ ಕಸ್ಟಡಿಗೆ

Fraud Case ಷೇರು ಟ್ರೇಡಿಂಗ್‌ ಹೆಸರಿನಲ್ಲಿ 74.18 ಲಕ್ಷ ರೂ. ವಂಚನೆ

Fraud Case ಷೇರು ಟ್ರೇಡಿಂಗ್‌ ಹೆಸರಿನಲ್ಲಿ 74.18 ಲಕ್ಷ ರೂ. ವಂಚನೆ

Kundapura ಮುಳ್ಳಿಕಟ್ಟೆ: ಸಕ್ಕರೆ ಲಾರಿ ಪಲ್ಟಿ; ಚಾಲಕ ಪಾರು

Kundapura ಮುಳ್ಳಿಕಟ್ಟೆ: ಸಕ್ಕರೆ ಲಾರಿ ಪಲ್ಟಿ; ಚಾಲಕ ಪಾರು

Madikeri ಕಾಡಾನೆ ದಾಳಿ: ಕೂದಲೆಳೆ ಅಂತರದಲ್ಲಿ ಪಾರಾದ ವ್ಯಕ್ತಿ

Madikeri ಕಾಡಾನೆ ದಾಳಿ: ಕೂದಲೆಳೆ ಅಂತರದಲ್ಲಿ ಪಾರಾದ ವ್ಯಕ್ತಿ

rain 3

RED alert; ಜು.6 ರಂದು ಉಡುಪಿ ಜಿಲ್ಲಾದ್ಯಂತ ಪಿಯುಸಿವರೆಗೆ ರಜೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sudhamurthy

Sudha Murthy 30 ವರ್ಷದಿಂದ ಒಂದೂ ಸೀರೆ ಖರೀದಿಸಿಲ್ಲವೇಕೆ ಗೊತ್ತಾ?

RadhaMohan-das

BJP Incharge: ರಾಜ್ಯ ಬಿಜೆಪಿಗೆ ಉಸ್ತುವಾರಿ, ಸಹ ಉಸ್ತುವಾರಿ ನೇಮಕ

Sedam: ಮಹಿಳೆಯರ ರಕ್ಷಣೆ ಮರೆತ ಪಶ್ಚಿಮ ಬಂಗಾಳ: ಸದಾಶಿವ ಶ್ರೀ ಬೇಸರ

Sedam: ಮಹಿಳೆಯರ ರಕ್ಷಣೆ ಮರೆತ ಪಶ್ಚಿಮ ಬಂಗಾಳ: ಸದಾಶಿವ ಶ್ರೀ ಬೇಸರ

Channapatna Bypoll; I am the candidate of alliance party…: What did CP Yogeshwar say?

Channapatna Bypoll; ಮೈತ್ರಿ ಪಕ್ಷದ ಅಭ್ಯರ್ಥಿ ನಾನೇ…: ಸಿ.ಪಿ ಯೋಗೇಶ್ವರ್ ಹೇಳಿದ್ದೇನು?

MUDA; ಯಾಕೆ ಬೀದಿಯಲ್ಲಿ ಮಾನ ಮರ್ಯಾದೆ ಕಳೆದುಕೊಳ್ತೀರಿ..: ಸಿದ್ದುಗೆ ವಿಶ್ವನಾಥ್ ಕಿವಿಮಾತು

MUDA; ಯಾಕೆ ಬೀದಿಯಲ್ಲಿ ಮಾನ ಮರ್ಯಾದೆ ಕಳೆದುಕೊಳ್ತೀರಿ..: ಸಿದ್ದುಗೆ ವಿಶ್ವನಾಥ್ ಕಿವಿಮಾತು

MUST WATCH

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

udayavani youtube

ಅಬ್ಬಬ್ಬಾ ನೀವೆಂದೂ ಕಂಡಿರದ Coin Collection ನೋಡಿ

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

ಹೊಸ ಸೇರ್ಪಡೆ

Kinnigoli ಬಳ್ಕುಂಜೆ ಮನೆಯಲ್ಲಿ ಚಿನ್ನಾಭರಣ ಕಳವು

Kinnigoli ಬಳ್ಕುಂಜೆ ಮನೆಯಲ್ಲಿ ಚಿನ್ನಾಭರಣ ಕಳವು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Mangaluru ದರೋಡೆ ಪ್ರಕರಣ: 6 ಆರೋಪಿಗಳು ಪೊಲೀಸ್‌ ಕಸ್ಟಡಿಗೆ

Mangaluru ದರೋಡೆ ಪ್ರಕರಣ: 6 ಆರೋಪಿಗಳು ಪೊಲೀಸ್‌ ಕಸ್ಟಡಿಗೆ

Fraud Case ಷೇರು ಟ್ರೇಡಿಂಗ್‌ ಹೆಸರಿನಲ್ಲಿ 74.18 ಲಕ್ಷ ರೂ. ವಂಚನೆ

Fraud Case ಷೇರು ಟ್ರೇಡಿಂಗ್‌ ಹೆಸರಿನಲ್ಲಿ 74.18 ಲಕ್ಷ ರೂ. ವಂಚನೆ

Kundapura ಮುಳ್ಳಿಕಟ್ಟೆ: ಸಕ್ಕರೆ ಲಾರಿ ಪಲ್ಟಿ; ಚಾಲಕ ಪಾರು

Kundapura ಮುಳ್ಳಿಕಟ್ಟೆ: ಸಕ್ಕರೆ ಲಾರಿ ಪಲ್ಟಿ; ಚಾಲಕ ಪಾರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.