ಮತಾಂತರವಾದ ದಲಿತರ ಮೀಸಲಿಗೆ ವಿರೋಧ
ನ್ಯಾ| ಕೆ.ಜಿ. ಬಾಲಕೃಷ್ಣನ್ ನೇತೃತ್ವದ ವಿಚಾರಣ ಆಯೋಗಕ್ಕೆ ದಲಿತ ಸಂಘಟನೆಗಳ ಮನವಿ
Team Udayavani, Sep 4, 2024, 6:18 AM IST
ಬೆಂಗಳೂರು: ದಲಿತ ಸಮುದಾಯದಿಂದ ಮುಸ್ಲಿಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ದಲಿತರಿಗೆ ಯಾವುದೇ ಕಾರಣಕ್ಕೂ ಹಿಂದೂ ದಲಿತ ಸಮುದಾಯಗಳಿಗೆ ಸಂವಿಧಾನದತ್ತವಾಗಿ ಕಲ್ಪಿಸಲಾಗಿರುವ ಮೀಸಲಾತಿಯನ್ನು ಮುಂದುವರಿಸಬಾರದು. ಅವರನ್ನು ದಲಿತರು ಎಂದು ಪರಿಗಣಿಸಬಾರದು ಎಂಬ ಹಕ್ಕೊತ್ತಾಯವನ್ನು ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಅವರ ನೇತೃತ್ವದ ವಿಚಾರಣ ಆಯೋಗದ ಮುಂದೆ ರಾಜ್ಯದ ವಿವಿಧ ದಲಿತಪರ ಸಂಘಟನೆಗಳು ಮಂಡಿಸಿದವು.
ಪ. ಜಾತಿಯ ವ್ಯಕ್ತಿಗಳು ಬೇರೆ ಧರ್ಮಗಳಿಗೆ ಮತಾಂತರಗೊಂಡರೆ ಅವರಿಗೆ ಪ. ಜಾತಿ ಸ್ಥಾನ ನೀಡಬೇಕೇ ಎಂಬುದನ್ನು ಪರಿಶೀಲಿಸಲು ಕೇಂದ್ರ ಸರಕಾರವು ನ್ಯಾ| ಬಾಲಕೃಷ್ಣನ್ ನೇತೃತ್ವದಲ್ಲಿ ವಿಚಾರಣ ಆಯೋಗ ನೇಮಿಸಿದೆ. ನಿವೃತ್ತ ಐಎಎಸ್ ಅಧಿಕಾರಿ ಡಾ| ರವೀಂದರ್ ಕುಮಾರ್ ಜೈನ್ ಮತ್ತು ಪ್ರಾಧ್ಯಾಪಕಿ ಸುಷ್ಮಾ ಯಾದವ್ ಸದಸ್ಯರಾಗಿದ್ದಾರೆ. ಈ ಆಯೋಗ ರಾಜ್ಯಕ್ಕೆ ಭೇಟಿ ನೀಡಿದ್ದು, ಮೀಸಲಾತಿ ಮುಂದುವರಿಕೆ ಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಅಭಿಪ್ರಾಯ ಸಂಗ್ರಹಿಸಿತು.
ಅಖಿಲ ಭಾರತ ಬಂಜಾರ ಸಮಿತಿ, ಬೋವಿ ಒಕ್ಕೂಟ, ಮಾದಿಗ ಮೀಸಲಾತಿ ಹೋರಾಟ ಸಮಿತಿ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ಆದಿವಾಸಿ ಸಮುದಾಯ, ಬುಡಕಟ್ಟು ಸಮು ದಾಯ ಸಮಿತಿ ಸೇರಿದಂತೆ ಹಲವು ದಲಿತ ಸಂಘಟನೆಗಳ ಮುಖಂಡರು ಭಾಗವಹಿಸಿ ಮುಸ್ಲಿಂ, ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡವರಿಗೆ ಯಾವುದೇ ಕಾರಣಕ್ಕೂ ಮೀಸಲಾತಿ ನೀಡಬಾರದು ಎಂದು ಆಯೋಗಕ್ಕೆ ಮನವಿ ಸಲ್ಲಿಸಿದರು.
ನಮ್ಮ ಕೋಟಾದ ಮೀಸಲಾತಿ ನೀಡಬೇಡಿ
ವಿಷಯ ಮಂಡಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖಂಡ ಡಿ.ಜಿ. ಸಾಗರ್, ಮುಸ್ಲಿಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಪರಿಶಿಷ್ಟರಿಗೆ ಮೀಸಲಾತಿ ಕಲ್ಪಿಸುವುದಕ್ಕೆ ಆಕ್ಷೇಪ ಇಲ್ಲ. ಆದರೆ ಪರಿಶಿಷ್ಟ ಜಾತಿಗೆ ನಿಗದಿಪಡಿಸಿರುವ ಮೀಸಲಾತಿ ಕೋಟಾದಿಂದ ಕಡಿತಗೊಳಿಸಿ, ದಲಿತ ಕ್ರಿಶ್ಚಿಯನ್, ದಲಿತ ಕ್ರೈಸ್ತರಿಗೆ ನೀಡಬಾರದು. ಯಾವ ಧರ್ಮಕ್ಕೆ ಮತಾಂತರಗೊಂಡಿದ್ದಾರೆಯೋ ಆ ಧರ್ಮಕ್ಕೆ ನಿಗದಿಪಡಿಸಿದ ಮೀಸಲಾತಿ ಕೋಟಾದಿಂದ ಕಡಿತಗೊಳಿಸಿ ಕೊಡುವುದಾದರೆ ನಮ್ಮ ಅಭ್ಯಂತರವಿಲ್ಲ ಎಂದರು.
ಸಕಲೇಶಪುರದ ಶಾಸಕ ಮಂಜುನಾಥ್ ಮಾತನಾಡಿ, ಹಿಂದೂ ಧರ್ಮದಿಂದ ಬೇರೆ ಧರ್ಮಕ್ಕೆ ಮತಾಂತರವಾದವರಿಗೆ ಮೀಸಲಾತಿ ನೀಡುವುದಕ್ಕೆ ನಮ್ಮ ವಿರೋಧವಿದೆ. ಈ ನೆಲದ ಮೂಲ ಧರ್ಮಗಳಿಗೆ ಮತಾಂತರವಾದರೆ ಮಾತ್ರ ಮೀಸಲಾತಿ ಮುಂದವರಿಸಬಹುದೆಂದು ಅಂಬೇಡ್ಕರ್ ಅವರೇ ಹೇಳಿದ್ದಾರೆ ಎಂದರು.
ಶಿಕ್ಷಕ ಸಂಜೀವಪ್ಪ ಮಾತನಾಡಿ, ಹಿಂದೂ ದಲಿತ ಮಕ್ಕಳು ಬಡ ವರ್ಗದವರಾಗಿದ್ದಾರೆ. ಕನ್ನಡ ಶಾಲೆಗಳಲ್ಲಿ, ಸರಕಾರಿ ಶಾಲಾ ಕಾಲೇಜುಗಳಲ್ಲಿ ಕಲಿಯುತ್ತಿದ್ದಾರೆ. ಆಮಿಷಗಳಿಗೆ ಬಲಿಯಾಗಿಮತಾಂತರಗೊಂಡಿರುವ ವರ ಮಕ್ಕಳುದೊಡ್ಡ ದೊಡ್ಡ ಖಾಸಗಿ ಶಿಕ್ಷಣ ಸಂಸ್ಥೆ ಯಲ್ಲಿ ಕಲಿಯುತ್ತಿದ್ದಾರೆ. ಅವರಿಗೆ ಕ್ರೈಸ್ತ ಮಿಷನರಿಗಳು ಸವಲತ್ತು ನೀಡಿವೆ. ಆರ್ಥಿಕವಾಗಿ ಸಶಕ್ತರಾಗಿದ್ದಾರೆ. ಆ ಮಕ್ಕಳೊಂದಿಗೆ ಸರಕಾರಿ ಶಾಲೆಯಲ್ಲಿ ಕಲಿತಿ ರುವ ನಮ್ಮ ಮಕ್ಕಳು ಪೈಪೋಟಿ ನಡೆಸಲು ಸಾಧ್ಯವಿಲ್ಲ. ನಮ್ಮೆಲ್ಲ ಮೀಸಲಾತಿ ಮತಾಂತರಗೊಂಡವರ ಪಾಲಾಗಲಿದೆ ಎಂಬ ಆತಂಕ ವ್ಯಕ್ತಪಡಿಸಿದರು.
ಹೇಳಿದ್ದನ್ನೆ ಹೇಳಬೇಡಿ: ನ್ಯಾಯಮೂರ್ತಿ ಗರಂ
ಅಹವಾಲು ಸಲ್ಲಿಕೆ ವೇಳೆ ದಲಿತ ಸಮುದಾಯದ ಮುಖಂಡರು ರಾಜಕೀಯ ಭಾಷಣದ ರೀತಿಯಲ್ಲಿ ಮಾತನಾಡುತ್ತಿದ್ದರು. ಒಬ್ಬರು ಹೇಳಿ ದ್ದನ್ನೇ ಮತ್ತೂಬ್ಬರು ಪುನರಾವರ್ತನೆ ಮಾಡುತ್ತಿದ್ದರು. ಇದರಿಂದ ಸಿಟ್ಟಾದ ನ್ಯಾ| ಬಾಲಕೃಷ್ಣನ್, ಮತಾಂತರದ ಬಗ್ಗೆ ರಾಜಕೀಯ ವಿಚಾರಗಳನ್ನು ತರಬೇಡಿ. ಮತಾಂತರಗೊಂಡವರಿಗೆ ಮೀಸಲಾತಿ ಮುಂದುವರಿಸ ಬೇಕೇ, ಬೇಕಾದರೆ ಏಕೆ ಬೇಕು, ಬೇಡವಾದರೆ ಏಕೆ ಬೇಡ ಎಂದಷ್ಟೇ ಹೇಳಿ. ಒಬ್ಬರು ಹೇಳಿದ್ದನ್ನೇ ಮತ್ತೆ ಮತ್ತೆ ಹೇಳಬೇಡಿ ಎಂದು ಗರಂ ಆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಪೊಲೀಸರ ಬೇಟೆ; 26 ಕೋಟಿ ರೂ. ಮಾದಕ ವಸ್ತು ವಶ
Life Partner ಹೇಗಿರಬೇಕು: ನಟಿ ರಶ್ಮಿಕಾ ಮಂದಣ್ಣ ಮನದ ಮಾತು
Karavali Utsava: ಡಿ.21-ಜ.19: ಮಂಗಳೂರಿನಲ್ಲಿ ಕರಾವಳಿ ಉತ್ಸವ; ದ.ಕ ಜಿಲ್ಲಾಧಿಕಾರಿ ಮಾಹಿತಿ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
Shirva: ಏಷ್ಯನ್ ಜೂನಿಯರ್ ವೇಟ್‌ಲಿಫ್ಟಿಂಗ್ ತೀರ್ಪುಗಾರರಾಗಿ ಶಿರ್ವದ ಕೃಷ್ಣರಾಜ್.ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.