ಈ ಸಾವಯವ ಸಿಗರೇಟ್ ಸಾಯಿಸುವುದಿಲ್ಲ!
Team Udayavani, Jan 19, 2019, 1:10 AM IST
ಬೆಂಗಳೂರು: ರೋಗ ನಿವಾರಕ ಐಸ್‌ಕ್ರೀಂ ರುಚಿ ನೀವು ಸವಿದಿರಬಹುದು. ಈಗ ಸಾವಯವ ಸಿಗರೇಟ್ ಕೂಡ ಬಂದಿದೆ. ಆದರೆ, ಈ ಸಿಗರೇಟ್ ಸೇವನೆ ಆರೋಗ್ಯಕ್ಕೆ ಹಾನಿಕಾರಕ ಅಲ್ಲ; ಬದಲಿಗೆ ಆರೋಗ್ಯ ವೃದ್ಧಿಗೆ ಪೂರಕ!
ಸಾಮಾನ್ಯವಾಗಿ ಸಿಗರೇಟ್‌ಗಳ ಸೇವನೆಯಿಂದ ಕೆಮ್ಮು, ಕಫ ಬರುತ್ತದೆ. ಆದರೆ, ಸಾವಯವ
ಸಿಗರೇಟ್ ಸೇವನೆಯಿಂದ ಕೆಮ್ಮು, ಕಫ, ಶೀತ ಮತ್ತಿತರ ಕಾಯಿಲೆಗಳು ದೂರವಾಗುತ್ತವೆ. ಜತೆಗೆ ಮನುಷ್ಯ ಕೆಲಸದ ಒತ್ತಡದಿಂದ ಹೊರಬರಲಿಕ್ಕೂ ಈ ಸಾವಯವ ಸಿಗರೇಟ್ ಸಹಕಾರಿಯಾಗಿದೆ. ಅಂದ ಹಾಗೆ, ಇದಕ್ಕೆ ಕೇಂದ್ರ ಆಯುಷ್ ಇಲಾಖೆಯಿಂದ ಮಾನ್ಯತೆಯೂ ದೊರಕಿದೆ. ಇಂತಹದ್ದೊಂದು ವಿನೂತನ ಮಾದರಿಯ ಸಿಗರೇಟ್ ಮಾರುಕಟ್ಟೆ ಪ್ರವೇಶಿಸಿದೆ. ಗೀತಾ ಎಂಟರ್ ಪ್ರೈಸಸ್ ಎಂಬ ಸಂಸ್ಥೆ ಈ ಸಿಗರೇಟ್ ಪರಿಚಯಿಸಿದ್ದು, ಎಲ್ಲೆಡೆ ಬೇಡಿಕೆ ಕೇಳಿಬರುತ್ತಿದೆ. ಇದರಲ್ಲಿ ಯಾವುದೇ ರೀತಿಯ ತಂಬಾಕು, ನಿಕೋಟಿನ್ ಇರುವುದಿಲ್ಲ. ಇದನ್ನು ಪುದೀನ ಎಲೆಗಳು, ಗುಲಾಬಿಯ ದಳಗಳು, ಕ್ಯಾಮೆಲಿಯಾ ಸಿನೆನ್ಸಿಸ್ ಎಂಬ ಎಲೆಯ ಸಾರದ ಮಿಶ್ರಣ ಒಳಗೊಂಡಿದ್ದು, oxymoronic ಎಂಬ ಕಚ್ಚಾ ಕಾಗದದಲ್ಲಿ ಹಾಕಿ ಕೈಯಿಂದಲೇ ಸುರುಳಿ ಸುತ್ತ ಲಾಗಿರುತ್ತದೆ. ಹಾಗಾಗಿ, ಯಾವುದೇ ರೀತಿಯಿಂದ ಇದು ಆರೋಗ್ಯಕ್ಕೆ ಹಾನಿಕಾರಕ ಅಲ್ಲ ಎಂದು ಸಂಸ್ಥೆಯ ಸಂಸ್ಥಾಪಕ ಗಣೇಶ್ “ಉದಯವಾಣಿ’ಗೆ ಮಾಹಿತಿ ನೀಡಿದರು.
ಹೊರ ರಾಜ್ಯಗಳಲ್ಲೂ ಪೂರೈಕೆ: ಇತ್ತೀಚೆಗಷ್ಟೇ ಇದನ್ನು ಪರಿಚಯಿಸಲಾಗಿದ್ದು, ವಾರ್ಷಿಕ 10ರಿಂದ 20 ಸಾವಿರ ಸಾವಯವ ಸಿಗರೇಟ್ ಬಾಕ್ಸ್‌ಗಳು ಮಾರಾಟ ಆಗುತ್ತಿವೆ. ಮಹಾರಾಷ್ಟ್ರ, ಉತ್ತರಾಖಂಡ, ಹಿಮಾಚಲ ಪ್ರದೇಶ, ಕೇರಳ ಸೇರಿದಂತೆ ವಿವಿಧೆಡೆ ಪೂರೈಕೆ ಮಾಡಲಾಗುತ್ತಿದೆ. ನಗರದ ಎಲ್ಲ ಸಾವಯವ ಮಳಿಗೆಗಳಲ್ಲೂ ಇದು ಲಭ್ಯ. ಇದರಲ್ಲಿ ರೆಗ್ಯುಲರ್, ಮೆಂಥಾಲ್ ಮತ್ತು ಮೈಲ್ಡ್ ಎಂಬ ಮೂರು ಪ್ರಕಾರಗಳಿವೆ. ಸಾಮಾನ್ಯ ಸಿಗರೇಟ್ ಸೇವನೆ ನೀಡುವ ಸ್ವಾದವನ್ನೇ ಹೆಚ್ಚು ಕಡಿಮೆ ಸಾವಯವ ಸಿಗರೇಟ್‌ನಲ್ಲೂ ಪಡೆಯಬಹುದು ಎಂದರು.
ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಮೂರು ದಿನಗಳ ಸಾವಯವ ಮತ್ತು ಸಿರಿಧಾನ್ಯಗಳ ಅಂತರರಾಷ್ಟ್ರೀಯ ವಾಣಿಜ್ಯ ಮೇಳದಲ್ಲಿ ಈ ಸಿಗರೇಟ್ ಮಳಿಗೆ ಪ್ರಮುಖ ಆಕರ್ಷಣೆಯಾಗಿದೆ. ಮೇಳಕ್ಕೆ ಭೇಟಿ ನೀಡುವ ಜನ ಮುಗಿಬಿದ್ದು ಇದನ್ನು ಖರೀದಿಸಿ, ಹೊರಗಡೆ ಹೋಗಿ ಒಂದು ಧಮ್ ಎಳೆದುಬರುವುದು ಸಾಮಾನ್ಯವಾಗಿ ಕಂಡುಬರುತ್ತದೆ.
ಒಂದು ಪ್ಯಾಕಿಗೆ 255 ರೂ.!
ಸಾಮಾನ್ಯ ಸಿಗರೇಟಿನ ಬೆಲೆ ಒಂದಕ್ಕೆ 15 ರೂ. ಆದರೆ, ಇದರ ಬೆಲೆ 25 ರೂ. ಒಂದು ಪ್ಯಾಕೆಟ್‌ಗೆ 255 ರೂ. ನಿಗದಿಪಡಿಸಿದ್ದು, ಇದರಲ್ಲಿ 10 ಸಿಗರೇಟ್‌ಗಳಿರುತ್ತವೆ. ಒಮ್ಮೆ ಸೇವನೆ ಮಾಡಿದರೆ, ನಾಲ್ಕು ತಾಸು ಮತ್ತೆ ಸಿಗರೇಟ್ ಹತ್ತಿರಕ್ಕೆ ಹೋಗಲು ಮನಸ್ಸು ಬರುವುದಿಲ್ಲ. ಎಲ್ಲೆಡೆ “ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ’ ಎಂದು ಫಲಕಗಳು ಮತ್ತು ಜಾಗೃತಿ ಫಲಕಗಳಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಫಲ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅದಕ್ಕೆ ಪರ್ಯಾಯವಾಗಿ ಆರೋಗ್ಯಕ್ಕೆ ಪೂರ ಕವಾದ ಸಿಗರೇಟ್ ಯಾಕೆ ಪರಿಚಯಿಸಬಾರದು ಎಂಬ ಚಿಂತನೆ ಹೊಳೆಯಿತು. ಅದರ ಫಲವೇ ಈ “ಆಗ್ಯಾìನಿಕ್ ಸ್ಮೋಕ್ಸ್’ (organic smokes) ಎಂದು ಅವರು ತಿಳಿಸಿದರು.
ವಿಜಯ್ ಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.