ನಮ್ಮ ಕುಟುಂಬದ ದೂರವಾಣಿ ಕದ್ದಾಲಿಕೆ: ಎಚ್‌ಡಿಕೆ ಆರೋಪ
ವೀಡಿಯೋ ಬಿಡುಗಡೆ ಮಾಡಿದವರ ವಿರುದ್ದ ಕ್ರಮ ಆಗುತ್ತಿಲ್ಲ
Team Udayavani, May 20, 2024, 11:24 PM IST
ಬೆಂಗಳೂರು: ನಾನು, ರೇವಣ್ಣ ಸಹಿತ ನಮ್ಮ ಕುಟುಂಬ ಹಾಗೂ ನನ್ನ ಸುತ್ತಮುತ್ತ ಇರುವ ಸುಮಾರು 40 ಜನರ ದೂರವಾಣಿಯನ್ನು ಕದ್ದಾಲಿಕೆ ಮಾಡಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಐಟಿ ತನಿಖೆ ಯಾವ ರೀತಿ ನಡೆಯುತ್ತಿದೆ? ಎಫ್ಐಆರ್‌ನಲ್ಲಿ ಏನೆಲ್ಲ ದೋಷಗಳಿವೆ? ಚಿತಾವಣೆಯ ಕಾರಣಕರ್ತರು ಯಾರು ಎಲ್ಲವೂ ಗೊತ್ತಿದೆ. ಬೆಂಗಳೂರಿನಲ್ಲಿ ಡಿಜಿಪಿ ಅಲೋಕ್ ಕುಮಾರ್ ಸಮ್ಮುಖದಲ್ಲೇ ರೇವಣ್ಣ ವಿರುದ್ಧದ ದೂರು ಪ್ರತಿಯನ್ನು ಟೈಪ್ ಮಾಡಿ ಸಿದ್ಧಪಡಿಸಿ ಹೊಳೆನರಸೀಪುರಕ್ಕೆ ಕಳುಹಿಸಲಾಗಿದೆ ಎಂದು ದೂರಿದರು.
ಅಶ್ಲೀಲ ವೀಡಿಯೋಗಳ ಪೆನ್‌ಡ್ರೈವ್ ಬಿಡುಗಡೆ ಮಾಡಿದ ಯಾರ ವಿರುದ್ಧವೂ ಕ್ರಮ ಆಗುತ್ತಿಲ್ಲ. ಸಂತ್ರಸ್ತೆಯರ ಮರ್ಯಾದೆ ಹರಾಜು ಹಾಕಿದವರ ವಿರುದ್ಧವೂ ಕ್ರಮ ಆಗಿಲ್ಲ. ಹೀಗಾಗಿಯೇ ಸಿಬಿಐ ತನಿಖೆಗೆ ಆಗ್ರಹಿಸು ತ್ತಿದ್ದೇವೆ. ನಮ್ಮ ಸಿ.ಡಿ. ಶಿವು ಬಂಡವಾಳ ಹೊರಗೆ ಬರುತ್ತದೆ ಎಂದು ದೇವರಾಜೇಗೌಡರನ್ನೂ ಬಂಧಿಸಲಾಗಿದೆ ಎಂದು ದೂರಿದರು.
ಕದ್ದಾಲಿಸಲು ಎಚ್‌ಡಿಕೆ, ರೇವಣ್ಣ ಭಯೋತ್ಪಾದಕರಾ?
ಬೆಂಗಳೂರು: ದೂರವಾಣಿ ಕದ್ದಾಲಿಸಲು ಎಚ್.ಡಿ. ಕುಮಾರಸ್ವಾಮಿ ಮತ್ತು ಎಚ್.ಡಿ. ರೇವಣ್ಣ ಅವರೇನು ಭಯೋ ತ್ಪಾದಕರೇ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾನ್ಯವಾಗಿ ಭಯೋತ್ಪಾದಕರ ದೂರವಾಣಿ ಗಳನ್ನು ಅನುಮತಿ ಪಡೆದು ಕದ್ದಾಲಿಸ ಲಾಗುತ್ತದೆ. ಇವರು ನಮ್ಮ ರಾಜ್ಯದ ನಾಯಕರು, ಇವರ ದೂರವಾಣಿಗಳನ್ನು ಕದ್ದಾಲಿಸುವ ಅಗತ್ಯ ನಮ್ಮ ಸರಕಾರಕ್ಕಿಲ್ಲ. ಕೇವಲ ಪ್ರಚಾರಕ್ಕಾಗಿ ಇಂತಹ ಸುಳ್ಳು ಆರೋಪ ಮಾಡುತ್ತಿ¨ªಾರೆ. ದೂರವಾಣಿ ಕದ್ದಾಲಿಕೆಯಂಥ ಮುಠಾuಳತನದ ಕೆಲಸವನ್ನು ನಮ್ಮ ಸರಕಾರ ಮಾಡುವುದಿಲ್ಲ ಎಂದರು.
ಸರಕಾರ ಒಂದು ವರ್ಷ ಐಸಿಯುನಲ್ಲಿತ್ತು ಎಂಬ ಕುಮಾರಸ್ವಾಮಿ ಆರೋಪಕ್ಕೆ ಪ್ರತಿ ಕ್ರಿಯಿ ಸಿದ ಡಿ.ಕೆ.ಶಿ., ಅವರು ಇನ್ನೇನು ಹೇಳಲು ಸಾಧ್ಯ? ಆದರೆ ಇದನ್ನು ಜನ ಹೇಳಬೇಕು; ನಾಯಕರಲ್ಲ. ಈ ಹಿಂದಿನ ಸರಕಾರದ ಕೆಟ್ಟ ಆಡಳಿತ ಹಾಗೂ ಬೆಲೆ ಏರಿಕೆಯಿಂದ ತತ್ತರಿಸಿದ್ದ ಮಹಿಳೆಯರ ಜೀವನದಲ್ಲಿ ನಮ್ಮ ಸರಕಾರದ ಆಡಳಿತದಿಂದ ಬದಲಾವಣೆ ಉಂಟಾಗಿದೆ ಎಂದರು.
ಯಾರ ದೂರವಾಣಿಯನ್ನೂ ಕದ್ದಾಲಿಸಿಲ್ಲ: ಪರಂ
ಹುಬ್ಬಳ್ಳಿ: ರಾಜ್ಯ ಸರಕಾರ ಅಥವಾ ಗೃಹ ಇಲಾಖೆಯಿಂದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಹಿತ ಯಾವುದೇ ನಾಯಕರ ದೂರವಾಣಿಯನ್ನೂ ಕದ್ದಾಲಿಸಿಲ್ಲ. ಒಂದು ವೇಳೆ ಕದ್ದಾಲಿಸಿರುವ ದಾಖಲೆಗಳನ್ನು ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೂರವಾಣಿ ಕದ್ದಾಲಿಸಬೇಕಾದರೆ ಗೃಹ ಇಲಾಖೆ ಕಾರ್ಯದರ್ಶಿಯಿಂದ ಆದೇಶ ಆಗಬೇಕು. ಅಂಥದ್ದೇನಾದರೂ ದಾಖಲೆಗಳನ್ನು ನೀಡಿದರೆ ಕ್ರಮ ತನಿಖೆ ಮಾಡಲಾಗುವುದು. ಒಂದೊಮ್ಮೆ ಖಾಸಗಿಯವರು ಕದ್ದಾಲಿಸುತ್ತಿದ್ದರೆ ನಮಗೆ ಸಂಬಂಧವಿಲ್ಲ. ಈ ಕುರಿತು ದೂರು ನೀಡಿದರೆ ಕ್ರಮ ಕೈಗೊಳ್ಳುತ್ತೇವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf: ರೈತರಿಗೆ ನೀಡಿರುವ ನೋಟಿಸ್ ತಕ್ಷಣ ವಾಪಸ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
Waqf Issue: ನ.4ರಂದು ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ
High Court: ಕ್ರಿಮಿನಲ್ ಕೇಸ್ ಡೈರಿ ಪ್ರತೀ ಪುಟಕ್ಕೆ ಸಹಿ:ಅರ್ಜಿ ವಜಾಗೊಳಿಸಿದ ಹೈಕೋರ್ಟ್
Bengaluru: ಸುವರ್ಣ ಸಂಭ್ರಮದಲ್ಲಿ ರಾಜ್ಯೋತ್ಸವ ವೈಭವ
Bengaluru: ಕೇಂದ್ರದ ತೆರಿಗೆ ಅನ್ಯಾಯ ಮಧ್ಯೆಯೂ ಅಭಿವೃದ್ಧಿ: ಸಿಎಂ
MUST WATCH
ಹೊಸ ಸೇರ್ಪಡೆ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.