ತುಂಗಭದ್ರಾ ಡ್ಯಾಂಗೆ 24 ತಾಸುಗಳಲ್ಲಿ 1 ಲಕ್ಷ ಕ್ಯೂಸೆಕ್ಸ್ ಗೂ ಅಧಿಕ ಒಳಹರಿವು
Team Udayavani, Jul 26, 2023, 5:04 PM IST
ಹೊಸಪೇಟೆ: ಕಲ್ಯಾಣ ಕರ್ನಾಟಕದ ರೈತರ ಜೀವನಾಡಿ ತುಂಗಭದ್ರಾ ಜಲಾಶಯದಲ್ಲಿ ಒಳಹರಿವು ಹೆಚ್ಚಳ ಬುಧವಾರವೂ ಕೂಡ ಮುಂದುವರೆದಿದೆ. ಕಳೆದ 24 ತಾಸುಗಳಲ್ಲಿ ತುಂಗಭದ್ರಾ ಜಲಾಶಯದ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಬಿದ್ದಿದ್ದು, ಜಲಾಶಯಕ್ಕೆ ಒಳಹರಿವಿನ ಪ್ರಮಾಣದಲ್ಲಿ ಭಾರೀ ಪ್ರಮಾಣದ ಏರಿಕೆ ಕಂಡು ಬಂದಿದೆ. ಕಳೆದ 24 ತಾಸಿನಲ್ಲಿ ಒಳ ಹರಿವಿನ ಪ್ರಮಾಣ 1 ಲಕ್ಷ ಕ್ಯೂಸೆಕ್ ನಷ್ಟು ಏರಿಕೆ ಆಗಿದೆ. ಒಳ ಹರಿವು ಹೆಚ್ಚಾಗಿರುವುದು ಅವಳಿ ಜಿಲ್ಲೆಗಳ ರೈತರ ಸಂತಸಕ್ಕೆ ಕಾರಣವಾಗಿದೆ.
ಕಳೆದ 24 ತಾಸಿನಲ್ಲಿ ಸರಾಸರಿ 9 ಟಿಎಂಸಿಯಷ್ಟು ನೀರು ಜಲಾಶಯಕ್ಕೆ ಹರಿದು ಬಂದಿದ್ದು, ಪ್ರಸಕ್ತ ವರ್ಷದ ಪೈಕಿ ಅತಿ ಹೆಚ್ಚು ಒಳಹರಿವಿನ ಪ್ರಮಾಣ ಇದಾಗಿದೆ. ಸದ್ಯ ಜಲಾಶಯಕ್ಕೆ 1 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 41 ಟಿಎಂಸಿಯಷ್ಟು ನೀರು ಸದ್ಯ ಸಂಗ್ರಹ ಆಗಿದೆ.ಸದ್ಯ ಜಲಾಶಯಕ್ಕೆ 1 ಲಕ್ಷ 14 ಸಾವಿರದ 19 ಕ್ಯೂಸೆಕ್ ನೀರು ಹರಿದು ಬರುತ್ತಿದೆ.ಕಳೆದ 24 ಗಂಟೆಯೊಳಗೆ ಸರಾಸರಿ 98,357 ಕ್ಯೂಸೆಕ್ ನೀರು ಒಳಹರಿವು ಬಂದಿದೆ.
105 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿರುವ ತುಂಗಭದ್ರಾ ಜಲಾಶಯದಲ್ಲಿ ಸದ್ಯ 40.136 ಟಿಎಂಸಿ ಸಂಗ್ರಹ ಇದ್ದು, ಜಲಾಶಯ ಭರ್ತಿಗೆ ಇನ್ನೂ 85 ಟಿಎಂಸಿ ನೀರು ಅಗತ್ಯವಿದೆ.
ವಿಜಯನಗರ, ಬಳ್ಳಾರಿ, ಕೊಪ್ಪಳ, ರಾಯಚೂರು ಒಟ್ಟು ನಾಲ್ಕು ಜಿಲ್ಲೆಗಳ 3.5 ಲಕ್ಷ ಎಕ್ಟರ್ ಹಾಗೂ ನೆರೆಯ ಆಂಧ್ರ, ತೆಲಂಗಾಣ ರಾಜ್ಯಗಳ 1.46 ಲಕ್ಷ ಎಕ್ಟರ್ ಪ್ರದೇಶದ ಕೃಷಿ ಭೂಮಿಗಳಿಗೆ ಜಲಾಶಯ ನೀರುಣಿಸುತ್ತಿದೆ. ಅಲ್ಲದೆ, ಕೈಗಾರಿಕೆ ಹಾಗೂ ಕುಡಿಯುವ ನೀರಿಗೂ ಆಧಾರವಾಗಿದೆ. ಕಳೆದ ಎಂಟು ದಿನಗಳ ಹಿಂದಷ್ಟೇ ಡೆಡ್ ಸ್ಟೋರೇಜ್ ಗೆ ತುಲಪಿದ್ದ ಜಲಾಶಯದಲ್ಲಿ ಇದೀಗ 40 ಟಿಎಂಸಿಗೂ ಅಧಿಕ ನೀರು ಸಂಗ್ರಹವಾಗಿದೆ. ಇದೇ ಪ್ರಮಾಣದಲ್ಲಿ ಒಳಹರಿವು ಹರಿದು ಬಂದಲ್ಲಿ ಆಗಷ್ಟ್ ಮೊದಲ ವಾರದಲ್ಲಿ ಜಲಾಶಯ ಭರ್ತಿಯಾಗಲಿದೆ.
ನೀರಿನ ಮಾಹಿತಿ:
ತುಂಗಭದ್ರಾ ಜಲಾಶಯದ ಇಂದಿನ ಮಟ್ಟ
ಅಣೆಕಟ್ಟು ಮಟ್ಟ: 1633.00 ಅಡಿ
ಪ್ರಸ್ತುತ ಮಟ್ಟ: 1611.27 ಅಡಿ
ಒಟ್ಟು ಶೇಖರಣಾ ಸಾಮರ್ಥ್ಯ: 105.788 ಟಿಎಂಸಿ
ಪ್ರಸ್ತುತ ಸಂಗ್ರಹಣೆ : 40.136 ಟಿಎಂಸಿ
ಸರಾಸರಿ ಒಳಹರಿವು (ಕಳೆದ 24 ಗಂಟೆಗಳು): 98357 ಕ್ಯೂಸೆಕ್
ತತ್ಕ್ಷಣ(ಲೈವ್)ಒಳಹರಿವು: 108019 ಕ್ಯೊಸೆಕ್
ಸರಾಸರಿ ಹೊರಹರಿವುಗಳು (ಕಳೆದ 24 ಗಂಟೆಗಳು): 198 ಕ್ಯೂಸೆಕ್
ಹಿಂದಿನ ವರ್ಷ:
ಮಟ್ಟ: 1632.75 ಅಡಿ
ಕ್ಯಾಪ್:104.784 ಟಿಎಂಸಿ
ಒಳಹರಿವು: 31362 ಕ್ಯೂಸೆಕ್
ಹೊರಹರಿವು: 32328 ಕ್ಯೂಸೆಕ್
ಕಳೆದ 10 ವರ್ಷಗಳ ಸರಾಸರಿ
ಮಿತಿ: 59.215 ಟಿಎಂಸಿ
ಒಳಹರಿವು: 54059 ಕ್ಯೂಸೆಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.