ಏರ್ ಶೋ; 277 ಕಾರು ಭಸ್ಮವಾಗಲು ಓವರ್ ಹೀಟೆಡ್ ಸೈಲೆನ್ಸರ್ ಕಾರಣವೇ?
Team Udayavani, Feb 24, 2019, 11:29 AM IST
ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ ಶನಿವಾರ ಏರ್‌ಶೋ ವೇಳೆ ಪಾರ್ಕಿಂಗ್ ಲಾಟ್‌ನಲ್ಲಿ ನಿಲ್ಲಿಸಲಾಗಿದ್ದ 277 ಕಾರುಗಳು ಭಸ್ಮವಾಗಲು ನಿಖರವಾದ ಕಾರಣ ಇದುವರೆಗೆ ತಿಳಿದು ಬಂದಿಲ್ಲ, ಆದರೆ ಅತೀಯಾಗಿ ಬಿಸಿಯಾಗಿದ್ದ ಕಾರೊಂದರ ಸೈಲೆನ್ಸರ್ ಬೆಂಕಿ ಹೊತ್ತಿಕೊಳ್ಳಲು ಕಾರಣವಾಗಿದೆ ಎನ್ನಲಾಗಿದೆ. ಈ ಬಗ್ಗೆ ಭಾನುವಾರ ಅಧಿಕಾರಿಗಳು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.
ನಿರ್ಮಲಾ ಸೀತಾರಾಮನ್ ಅವರು ಭೀಕರ ಅಗ್ನಿ ಅವಘಡ ನಡೆದ ಸ್ಥಳ ಪರಿಶೀಲನೆ ನಡೆಸಿ ಅವಶೇಷಗಳನ್ನು ವೀಕ್ಷಿಸಿದರು. ಈ ವೇಳೆ ವಾಯುಪಡೆಯ ಅಧಿಕಾರಿಗಳು, ಅಗ್ನಿ ಶಾಮಕ ದಳದ ಅಧಿಕಾರಿಗಳು, ವಿಕೋಪ ನಿರ್ವಹಣಾ ತಂಡ ಸಚಿವರಿಗೆ ಘಟನೆಯ ಕುರಿತು ವಿವರಿಸಿದರು.
ಶನಿವಾರ ಪಾರ್ಕಿಂಗ್ ಸ್ಥಳದಲ್ಲಿ ಬೆಂಕಿ ವ್ಯಾಪಿಸಿ 277 ಕಾರುಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದ್ದವು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.