ಪಡುಬಿದ್ರಿ: ಪತ್ನಿಯಿಂದ ಸಾಲ ಮಾಡಿಸಿ ವಿಷವುಣಿಸಿದ ಪತಿ
ಆಕೆಯನ್ನು ಕೊಂದರೆ ಸಾಲ ತೀರುತ್ತದೆಂದು ಪ್ಲ್ಯಾನ್!
Team Udayavani, Sep 7, 2022, 8:42 PM IST
ಪಡುಬಿದ್ರಿ: ಹೆಂಡತಿ ಹೆಸರಲ್ಲಿ ಮಾಡಿದ ಸಾಲವನ್ನು ತೀರಿಸದೆ ಅದರಿಂದ ಪಾರಾಗಲು ಹೆಂಡತಿಯೊಂದಿಗೆ ಆತ್ಮಹತ್ಯೆ ನಾಟಕ ವಾಡಿ ಕೊಲೆ ಮಾಡಿರುವುದಾಗಿ ಪತಿ ಹಾಗೂ ಆತನ ಮನೆಯವರ ವಿರುದ್ಧ ಮೃತ ಮಹಿಳೆಯ ಅಕ್ಕ ಪಡುಬಿದ್ರೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಿದ್ಯಾ ( 29 ) ಮೃತಪಟ್ಟ ಮಹಿಳೆ. ವಿದ್ಯಾ ಅವರು ಬಡಾ ಗ್ರಾಮದ ಮುಳ್ಳುಗುಡ್ಡೆ ನಿವಾಸಿ ಯತಿನ್ ರಾಜ್ ಎಂಬಾತನನ್ನು ಪ್ರೀತಿಸಿ 2017 ರ ಫೆ .28 ರಂದು ವಿವಾಹವಾಗಿದ್ದರು. ಗಂಡನ ಮನೆಯಲ್ಲಿ ಯತಿನ್ ರಾಜ್, ಮಾವ ರಾಘು, ಅತ್ತೆ ಗೀತಾ ಮತ್ತು ಮೈದುನ ಯಕ್ಷಿತ್ ಎಂಬವರು ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರು ಹಾಗೂ ಯತಿನ್ ರಾಜ್ ನು ಸರಿಯಾಗಿ ಕೆಲಸ ಮಾಡದೇ ವಿದ್ಯಾಳಿಂದ ಹಲವು ಬ್ಯಾಂಕ್, ಸೊಸೈಟಿ ಸಂಘ, ಸಂಸ್ಥೆಗಳಿಂದ ಸಾಲ ತೆಗೆಸಿ ಅದನ್ನು ಖರ್ಚು ಮಾಡುತ್ತಿದ್ದನು. ಮಾತ್ರವಲ್ಲದೆ ವಿದ್ಯಾ ಅವರ ತಂದೆ ಕೊಟ್ಟ ಹಣವನ್ನೂ ಖರ್ಚು ಮಾಡಿ, ಚಿನ್ನವನ್ನು ಮಾರಾಟ ಮಾಡಿ ಖರ್ಚು ಮಾಡಿದ್ದಾನೆ. ಇದರ ಜೊತೆಗೆ ಇನ್ನೂ ಹೆಚ್ಚಿನ ಸಾಲ ತೆಗೆದುಕೊಡುವಂತೆ ಒತ್ತಾಯಿಸಿ ಕಿರುಕುಳ ನೀಡುತ್ತಾ ದೈಹಿಕ ಹಿಂಸೆ ನೀಡುತ್ತಿದ್ದನು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇದನ್ನೂ ಓದಿ:ಶರದ್ ಪವಾರ್ ಭೇಟಿ ಮಾಡಿದ ನಿತೀಶ್: ಪ್ರಧಾನಿ ಅಭ್ಯರ್ಥಿ ಕುರಿತು ಹೇಳಿದ್ದೇನು?
ಪತಿಯ ನಾಟಕ
ಗಂಡನ ಮನೆಯವರ ಕಿರುಕುಳವು ಹೆಚ್ಚಾಗಿ ಅದನ್ನು ತಡೆಯಲಾರದೆ ಯತಿನ್‌ರಾಜ್ ಜತೆ ಮನೆಯಿಂದ ಹೊರಬಂದು ಕಳೆದೆರಡು ತಿಂಗಳ ಹಿಂದೆ ಉಚ್ಚಿಲದಲ್ಲಿ ಹಾಗೂ ಕಳೆದೊಂದು ತಿಂಗಳುಗಳಿಂದ ಕಾಪು ಲೈಟ್‌ಹೌಸ್ ಬಳಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಅಲ್ಲೂ ಆರೋಪಿ ಗಂಡನ ಕಿರುಕುಳ ತಪ್ಪಿರಲಿಲ್ಲ. ಇನ್ನು ಮುಂದಕ್ಕೆ ಸಾಲ ಮಾಡಿಕೊಡುವುದಿಲ್ಲ ಎಂದು ವಿದ್ಯಾ ಹೇಳಿದ್ದರಿಂದ ವಿದ್ಯಾರನ್ನು ಕೊಂದರೆ ಅವರಿಂದ ಮಾಡಿಸಿದ ಸಾಲ ತೀರುತ್ತದೆ ಎಂಬ ಕಾರಣಕ್ಕೆ ಯತಿನನು ಯೋಜನೆ ರೂಪಿಸಿ ಇಬ್ಬರೂ ವಿಷ ಸೇವಿಸಿ ಸಾಯೋಣವೆಂದು ಪತ್ನಿಯನ್ನು ನಂಬಿಸಿ, ಅವಳಿಗೆ ಹೆಚ್ಚಿನ ಪ್ರಮಾಣದಲ್ಲಿ ವಿಷ ಕುಡಿಸಿ, ಬಳಿಕ ತನ್ನ ಮೇಲೆ ಅನುಮಾನ ಬರಬಾರದೆಂದು ತಾನೂ ಸ್ವಲ್ಪ ಪ್ರಮಾಣದಲ್ಲಿ ವಿಷ ಸೇವಿಸಿ ನಾಟಕ ಮಾಡುತ್ತಿರುವುದಾಗಿ ಪಡುಬಿದ್ರಿ ಪೊಲೀಸರಿಗೆ ಈ ಕುರಿತಾಗಿ ದೂರನ್ನಿತ್ತಿರುವ ವಿದ್ಯಾಳ ಅಕ್ಕ ಲೀಲಾವತಿ ತಿಳಿಸಿದ್ದಾರೆ.
ಆರೋಪಿ ಯತಿನ್‌ರಾಜ್ ಉಡುಪಿಯ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.