“ಪೇಜಾವರ ಶ್ರೀಗಳಿಗೆ ಲಿಂಗಾಯತರ ಭಯವೇಕೆ’
Team Udayavani, Oct 21, 2017, 10:12 AM IST
ಬೆಂಗಳೂರು: “ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಪೇಜಾವರ ಶ್ರೀಗಳಿಗೆ ಭಯವೇಕೆ’ ಎಂದು ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ. ಜಾಮದಾರ ಪ್ರಶ್ನಿಸಿದ್ದಾರೆ. “ಲಿಂಗಾಯತರು ಹಿಂದೂ ಧರ್ಮದ ಭಾಗವೇ ಆಗಿದ್ದಾರೆ’ ಎಂದು ಹೇಳಿಕೆ ನೀಡಿರುವ ಪೇಜಾವರ ಶ್ರೀಗಳ ಹೇಳಿಕೆ ಬಗ್ಗೆ ಕಿಡಿಕಾರಿರುವ ಅವರು, “ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದ ಬಗ್ಗೆ ಪೇಜಾವರ ಶ್ರೀಗಳು ಅನಗತ್ಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರು ಲಿಂಗಾಯತ ಹೋರಾಟಕ್ಕೆ ಭಯಗೊಂಡಿರುವರೇ ಅಥವಾ ಇದರ ಹಿಂದೆ ಏನಾದರೂ ಹುನ್ನಾರ ಇದೆಯೇ’ ಎಂದು ಪ್ರಶ್ನಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಬೌದ್ಧ, ಜೈನ, ಸಿಖ್ ಧರ್ಮಗಳಿಗೆ ಮಾನ್ಯತೆ ನೀಡುವ ಸಂದರ್ಭದಲ್ಲಿ ಮಾತನಾಡದ ಸಂಘ ಪರಿವಾರ, ಬಿಜೆಪಿ ನಾಯಕರು ಹಾಗೂ ಪೇಜಾವರ ಶ್ರೀಗಳು ಈಗ ಅಷ್ಟೊಂದು ಪ್ರತಿಕ್ರಿಯೆ ನೀಡುತ್ತಿರುವುದೇಕೆ? ಲಿಂಗಾಯತರು ಭಯೋತ್ಪಾದಕರಲ್ಲ, ದೇಶ ದ್ರೋಹಿಗಳೂ ಅಲ್ಲ. 850 ವರ್ಷಗಳಿಂದಲೂ ಲಿಂಗಾಯತರು ಹಿಂದೂ ಧರ್ಮದ ಭಾಗವಾಗಿಲ್ಲ. ಈಗ ಹೊರಹೋಗುವ ಪ್ರಶ್ನೆಯೇ ಬರುವುದಿಲ್ಲ’ ಎಂದು ಹೇಳಿದರು. ಲಿಂಗಾಯತರು ಶಿವನ ಪೂಜೆ ಮಾಡುವುದರಿಂದ ಅವರೂ ಹಿಂದೂಗಳೆ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ. ಲಿಂಗಾಯತರ ಶಿವನಿಗೂ ಹಿಂದುಗಳ ಶಿವನಿಗೂ ವ್ಯತ್ಯಾಸವಿದೆ. ಹಿಂದುಗಳ ಶಿವನಿಗೆ ಆಕಾರ, ಮದುವೆ ಮಕ್ಕಳು ಎಲ್ಲ ಇದ್ದಾರೆ. ಲಿಂಗಾಯತರ ಶಿವನು ನಿರಾಕಾರನಾಗಿದ್ದು ಅವನಿಗೆ ಮದುವೆ, ಮಕ್ಕಳು ಯಾರೂ ಇಲ್ಲ ಎಂದು ಪ್ರತಿಪಾದಿಸಿದರು.
ವೀರಶೈವರು ಲಿಂಗಾಯತರಲ್ಲ: ವೀರಶೈವರು ಲಿಂಗಾಯತರೇ ಅಲ್ಲ. ಅವರು ಹಿಂದೂ ಧರ್ಮದ ಎಲ್ಲ ಆಚರಣೆಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ವೀರಶೈವರನ್ನು ಪ್ರತ್ಯೇ ಕವಾಗಿ ಬಿಟ್ಟರೆ ನಾವು ಸ್ವತಂತ್ರ ಧರ್ಮ ಪಡೆದುಕೊಳ್ಳುತ್ತೇವೆ. ವೀರಶೈವರನ್ನು ಲಿಂಗಾಯತ ರೊಂದಿಗೆ ಸೇರಿಸಿಕೊಂಡು ಹೋಗುವ ಪ್ರಯತ್ನ ನಡೆಯುತ್ತಿದೆ. ಅದಕ್ಕಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ ಎಂದರು. ಪ್ರತ್ಯೇಕ ಧರ್ಮದ ಮಾನ್ಯತೆಗೆ ತಜ್ಞರ ಸಮಿತಿ ರಚಿಸುವ ಬದಲು ರಾಜ್ಯ ಸರ್ಕಾರ ನೇರವಾಗಿ ಅಲ್ಪ ಸಂಖ್ಯಾತರ ಆಯೋಗಕ್ಕೆ ನಮ್ಮ ಮನವಿಗಳನ್ನು ಕಳುಹಿಸಿ ಕೊಟ್ಟರೆ, ನಾವು ನಮ್ಮ ವಾದವನ್ನು ಅಲ್ಲಿ ಮಾಡುತ್ತೇವೆ. ಆಯೋಗದ
ಮುಂದೆ ಯಾರು ದಾಖಲೆಗಳನ್ನು ನೀಡುತ್ತಾರೆ, ಆ ಹೆಸರಿನಲ್ಲಿ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ದೊರೆಯಲಿದೆ ಎಂದು ಹೇಳಿದರು.
ಧರ್ಮ ಹೋರಾಟಕ್ಕೆ ವಿಚಾರವಾದಿಗಳ ಹತ್ಯೆ ಪ್ರತ್ಯೇಕ ಲಿಂಗಾಯತ ಧರ್ಮದ ಪರವಾಗಿ ಧ್ವನಿ ಎತ್ತಿದ ಸಂಶೋಧಕ ಎಂ.ಎಂ. ಕಲಬುರ್ಗಿ, ಸಾಹಿತಿ ಲಿಂಗಣ್ಣ ಸತ್ಯಂಪೇಟೆ ಹಾಗೂ ಪರ್ತಕರ್ತೆ ಗೌರಿ ಲಂಕೇಶ್ ಹತ್ಯೆ ನಡೆದಿದೆ ಎಂಬ ಸಂಶಯ ಇದೆ ಎಂದು ಜಾಮದಾರ್ ಹೊಸ ಬಾಂಬ್ ಸಿಡಿಸಿದರು. ಕಲಬುರ್ಗಿ ಮತ್ತು ಲಿಂಗಣ್ಣ ಸತ್ಯಂಪೇಟೆ ಲಿಂಗಾಯತ ಪ್ರತ್ಯೇಕ ಧರ್ಮದ ಪ್ರಬಲ ಪ್ರತಿಪಾದಕರಾಗಿದ್ದರು, ಗೌರಿ ಲಂಕೇಶ್ ಕೂಡ ತಮ್ಮ ಪತ್ರಿಕೆಯಲ್ಲಿ ಇಪ್ಪತ್ತು ಪುಟಗಳಷ್ಟು ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಬರೆದಿದ್ದರು. ಆ ಕಾರಣಕ್ಕಾಗಿಯೇ ಅವರ ಹತ್ಯೆ ನಡೆದಿದೆ ಎಂಬ ಅನುಮಾನ ಮೂಡುತ್ತಿದೆ. ನನಗೂ ಜೀವ ಬೆದರಿಕೆ ಇದೆ. ಪ್ರತ್ಯೇಕ ಧರ್ಮಕ್ಕಾಗಿ ನಡೆಯುವ ಹೋರಾಟದಲ್ಲಿ ನಾವು ಯಾವುದೇ ಬೆದರಿಕೆಗೆ ಬಗ್ಗುವುದಿಲ್ಲ. ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ತಿಳಿಸಿದರು.
ಶಿವ ಭಕ್ತರೆಲ್ಲ ಹಿಂದೂಗಳಲ್ಲ: ನಿಡುಮಾಮಿಡಿ ಶ್ರೀ
ಮೈಸೂರು: “ಶಿವ ಭಕ್ತರೆಲ್ಲ ಹಿಂದೂಗಳಲ್ಲ. ಶಿವನನ್ನು ಪೂಜಿಸುವ ಕೆಲವು ಜನರನ್ನು ಮಾತ್ರ ಹಿಂದೂಗಳೆನ್ನಬಹುದು. ಸನಾತನಿಗಳೂ ಶಿವಭಕ್ತರಿದ್ದಾರೆ’ ಎಂದು ಮಾನವ ಧರ್ಮ ಪೀಠದ ನಿಡುಮಾಮಿಡಿ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಭಾರತ ಮೂಲ ನಿವಾಸಿಗಳ ಸಂಸ್ಕೃತಿ, ಸಾಹಿತ್ಯ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ ಇದೇ ಮೊದಲ ಬಾರಿಗೆ
ಶುಕ್ರವಾರ ನಗರದ ಪುರಭವನದಲ್ಲಿ ಆಯೋಜಿಸಿದ್ದ ಬಲಿ ಚಕ್ರವರ್ತಿ ಸ್ಮರಣೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚೆಗೆ ಪೇಜಾವರ ಶ್ರೀಗಳು ಶಿವನನ್ನು ಪೂಜಿಸುವವರೆಲ್ಲ ಹಿಂದೂಗಳು ಎಂದು ಹೇಳುತ್ತಿದ್ದಾರೆ. ಆದರೆ, ಎಲ್ಲ ಶಿವಭಕ್ತರೂ ಹಿಂದೂಗಳು ಎನ್ನುವುದು ಅನ್ಯಾಯ. ಭಾರತದ ಮೂಲ ನಿವಾಸಿಗಳಲ್ಲಿ 18 ಕೋಮುಗಳು ವೈದಿಕ ಮೌಲ್ಯಗಳನ್ನು ನಿರಾಕರಿಸಿ ಶಿವಭಕ್ತರಾಗಿದ್ದಾರೆ ಎಂದರು.
ಶಿವಭಕ್ತರ ಮೇಲೆ ದಾಳಿ ಮಾಡಿ, ಶಿವ ಸಂಸ್ಕೃತಿಯನ್ನು ನಾಶ ಮಾಡುವ ಕೆಲಸವನ್ನು ಸನಾತನಿಗಳು ಪ್ರಾಚೀನ ಕಾಲದಿಂದಲೂ ಮಾಡುತ್ತಾ ಬಂದಿದ್ದಾರೆ. ಆರ್ಯರು ತಮ್ಮ ಹೆಣ್ಣು ಮಕ್ಕಳನ್ನು ಕಮಲ ಮುಖೀ, ಚಂದ್ರಮುಖೀ ಎಂದು ಚಿತ್ರಿಸಿ, ತಮ್ಮವರಲ್ಲದವರ ಹೆಣ್ಣು ಮಕ್ಕಳನ್ನು ಶೂರ್ಪನಖೀ, ಮಂಡೋದರಿ ಎಂದು ಬಿಂಬಿಸಿದ್ದಾರೆ ಎಂದರು. ಬೆಂಗಳೂರಿನಲ್ಲಿ ಶುಕ್ರವಾರ ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ. ಜಾಮದಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.