![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, May 10, 2024, 1:52 AM IST
ಬೆಂಗಳೂರು: ಐಷಾರಾಮಿ ಜೀವನ ನಡೆಸುತ್ತಿದ್ದ ಮಾಜಿ ಸಚಿವ ಎಚ್.ಡಿ. ರೇವಣ್ಣ ಬುಧವಾರ-ಗುರುವಾರ ಸಾಮಾನ್ಯ ಕೈದಿಯಂತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ದಿನ ಕಳೆದಿದ್ದಾರೆ. ನ್ಯಾಯಾಲಯವು ಜಾಮೀನು ಅರ್ಜಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ. ಹೀಗಾಗಿ ಮೇ 13ರ ವರೆಗೂ ಅವರಿಗೆ ಜೈಲೇ ಗತಿ!
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ರೇವಣ್ಣ ಇತರ ಕೈದಿಗಳಿಗೆ ನೀಡುವ ಊಟವನ್ನೇ ಸೇವಿಸಿ¨ªಾರೆ. 2 ದಿನವೂ ತಡರಾತ್ರಿಯ ವರೆಗೆ ಚಿಂತೆಯಲ್ಲೇ ಇದ್ದು ಮು¨ªೆ, ಚಪಾತಿ, ಅನ್ನ, ಸಾಂಬಾರ್ ಸೇವಿಸಿದ್ದಾರೆ. ತಡರಾತ್ರಿ 12.30ರ ಅನಂತರ ನಿದ್ದೆ ಹೋದರು.
ಗುರುವಾರ ಮುಂಜಾನೆ 5.30ಕ್ಕೆ ಎಚ್ಚರಗೊಂಡ ಅವರಿಗೆ ಜೈಲು ಸಿಬಂದಿ ಚಹಾ ನೀಡಿದರು. ಅನಂತರ ಪುಳಿಯೋಗರೆ, ಚಹಾ ಸೇವಿಸಿದರು. ರೇವಣ್ಣ ಅವರಿಗೆ ಕನ್ನಡ, ಇಂಗ್ಲಿಷ್ ದಿನಪತ್ರಿಕೆ ನೀಡಲಾಗಿತ್ತು. ಈ ನಡುವೆ ಮನೆಯವರು ತಂದುಕೊಟ್ಟ ಬಟ್ಟೆಯನ್ನು ಪಡೆದಿದ್ದರು. ಮಧ್ಯಾಹ್ನ ಜೈಲಿನ ಊಟ ಸೇವಿಸಿ ಕೊಂಚ ವಿಶ್ರಾಂತಿ ಪಡೆದರು. ಸಂಜೆ ಮತ್ತೆ ಚಹಾ ಕುಡಿದರು.
ರೇವಣ್ಣ ಕುಗ್ಗಿ ಹೋಗಿದ್ದು, ಜೈಲು ಸಿಬಂದಿ ಬಳಿಯೂ ಏನೂ ಮಾತನಾಡದೆ ಮೌನಕ್ಕೆ ಶರಣಾಗಿದ್ದರು. ಜಾಮೀನು ರದ್ದಾಗಿರುವುದರಿಂದ ಈಗ ಮತ್ತಷ್ಟು ಒತ್ತಡ, ಚಿಂತೆಗೆ ಒಳಗಾಗಿದ್ದಾರೆ ಎಂದು ತಿಳಿದು ಬಂದಿದೆ. ಅವರ ಆರೋಗ್ಯ ಸರಿ ಇಲ್ಲದ ಹಿನ್ನೆಲೆಯಲ್ಲಿ ಜೈಲಧಿಕಾರಿಗಳು ಅವರ ಮೇಲೆ ಹೆಚ್ಚಿನ ನಿಗಾ ಇರಿಸಿದ್ದಾರೆ.
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
Water Resource: ನನ್ನ ಜೀವಿತಾವಧಿಯಲ್ಲೇ ನೀರಿನ ಸಮಸ್ಯೆ ಬಗೆಹರಿಯಬೇಕು: ಎಚ್.ಡಿ.ದೇವೇಗೌಡ
Congress Siddu Team: ಸಿದ್ದರಾಮಯ್ಯ ಆಪ್ತರಿಂದ ಈಗ ʼಮಾಸ್ ಲೀಡರ್ʼ ಅಸ್ತ್ರ
You seem to have an Ad Blocker on.
To continue reading, please turn it off or whitelist Udayavani.