ಕಾಮಗಾರಿ ಪ್ರಯುಕ್ತ ರೈಲು ಸಂಚಾರ ಭಾಗಶಃ ರದ್ದು
Team Udayavani, Nov 5, 2019, 3:00 AM IST
ಹುಬ್ಬಳ್ಳಿ: ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗ ವ್ಯಾಪ್ತಿಯ ಬಾಗಲಕೋಟೆ-ವಿಜಯಪುರ ನಿಲ್ದಾಣಗಳ ಮಧ್ಯದ ಮುಳವಾಡ-ಜುಮ್ನಾಳ ನಿಲ್ದಾಣಗಳ ಮಧ್ಯೆ ಡಬಲ್ ಲೈನ್ ಕಾಮಗಾರಿ ಪ್ರಯುಕ್ತ ಕೆಲ ರೈಲುಗಳ ಸಂಚಾರವನ್ನು ಭಾಗಶಃ ರದ್ದುಪಡಿಸಲಾಗಿದೆ. ನ.10 ಹಾಗೂ 11ರಂದು ಮೈಸೂರು- ಬಾಗಲಕೋಟೆ ಬಸವಾ ಎಕ್ಸ್‌ಪ್ರೆಸ್ (17307) ರೈಲು ಸಂಚಾರವನ್ನು ವಿಜಯಪುರದಿಂದ ಬಾಗಲಕೋಟೆವರೆಗೆ ಭಾಗಶಃ ರದ್ದುಪಡಿಸಲಾಗಿದೆ. ಬಾಗಲಕೋಟೆ-ಮೈಸೂರು (17308) ರೈಲು ಸಂಚಾರವನ್ನು ನ. 11 ಹಾಗೂ 12ರಂದು ಬಾಗಲಕೋಟೆ ಹಾಗೂ ವಿಜಯಪುರ ಮಧ್ಯೆ ಭಾಗಶಃ ರದ್ದುಗೊಳಿಸಲಾಗಿದೆ.
ನ.9, 10, 11 ಹಾಗೂ 12ರಂದು ಹುಬ್ಬಳ್ಳಿ-ವಿಜಯಪುರ (06919/06920) ಪ್ಯಾಸೆಂಜರ್ ರೈಲು ಮಾರ್ಗ ಮಧ್ಯದ ನಿಲ್ದಾಣಗಳಲ್ಲಿ 30 ನಿಮಿಷ ನಿಲುಗಡೆಗೊಳ್ಳುವುದು. ನ. 8ರಂದು ಬಾರ್ಮರ್-ಯಶವಂ ತಪುರ ಎಕ್ಸ್‌ಪ್ರೆಸ್ (14806) ರೈಲು ಮಾರ್ಗಮಧ್ಯದ ನಿಲ್ದಾಣಗಳಲ್ಲಿ 30 ನಿಮಿಷ ನಿಲುಗಡೆಯಾಗುವುದು. ನ. 10ರಂದು ಬಿಕಾನೇರ-ಯಶವಂತಪುರ ಎಕ್ಸ್‌ಪ್ರೆಸ್ (16588) ರೈಲು ಮಾರ್ಗಮಧ್ಯದ ನಿಲ್ದಾಣಗಳಲ್ಲಿ 30 ನಿಮಿಷ ನಿಲುಗಡೆ ಯಾಗುವುದು ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Waqf Property: ಬೀದರ್‌ನ ಬಹುಮನಿ ಕೋಟೆಗೂ ವಕ್ಫ್ ಮೊಹರು!
MUST WATCH
ಹೊಸ ಸೇರ್ಪಡೆ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.