ಸಿಎಂ ಸ್ಥಾನಕ್ಕೆ ಈಗಲೇ ಕಚ್ಚಾಡಿದರೆ ಪಕ್ಷಕ್ಕೆ ನಷ್ಟ: ಮಲ್ಲಿಕಾರ್ಜುನ ಖರ್ಗೆ
Team Udayavani, Jul 21, 2022, 6:40 AM IST
ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಇಂದು 80 ನೇ ವರ್ಷಕ್ಕೆ ಕಾಲಿಟ್ಟಿದ್ದು, ತಮ್ಮ ರಾಜಕೀಯ ಜೀವನದಲ್ಲೂ 50 ವರ್ಷಗಳನ್ನು ಪೂರೈಸಿದ್ದಾರೆ. ಈ ಹಿನ್ನೆಲೆಯಲ್ಲಿ ಉದಯವಾಣಿಯೊಂದಿಗೆ ಮಾತನಾಡಿದ್ದಾರೆ.
ರಾಜ್ಯದ ಜನರಿಗೆ ಖರ್ಗೆಯವರು ಸಿಎಂ ಆಗಬೇಕೆಂಬ ಭಾವನೆ ಇದೆ?
ನಾನು ಊಹಾಪೋಹದಲ್ಲಿ ನಂಬಿಕೆ ಇಟ್ಟಿಲ್ಲ. ನನ್ನ ನಂಬಿಕೆ ಇರುವಂತದ್ದು, ನನ್ನ ಪಕ್ಷದ ತತ್ವದ ಉಳಿವಿಗಾಗಿ. ಈ ಐಡಿಯಾ ಲಜಿ ಉಳಿವಿಗೆ ಹೋರಾಡಲು ನಾನು ಸಿದ್ಧ. ಯಾವುದೇ ಒಬ್ಬ ವ್ಯಕ್ತಿ ನಾನು ಇಂಥದ್ದೇ ಮಾಡು ತ್ತೇನೆ ಎಂದು ಹೇಳಿಕೊಂಡು ತಿರು ಗಿದರೆ ಆಗದು. ಮುಖ್ಯಮಂತ್ರಿ ಆಗುವುದು ಪಕ್ಷದ ಹೈಕಮಾಂಡ್ ತೀರ್ಮಾನ.
ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆಯೇ?
ಬಿಜೆಪಿಯ ಭ್ರಷ್ಟಾಚಾರದ ಬಗ್ಗೆ ಜನ ಬೇಸತ್ತಿದ್ದು, ಯೋಜನೆಗಳು ಸರಿಯಾಗಿ ತಲುಪು ತ್ತಿಲ್ಲ. ಆಡಳಿತದಲ್ಲಿ ಬಿಗಿ ಹಿಡಿತ ಇಲ್ಲ. ಕಾಂಗ್ರೆಸ್ ಅಧಿಕಾರ ದಲ್ಲಿದ್ದಾಗ ಉತ್ತಮ ಯೋಜನೆ ನೀಡಿವೆ. ಹೀಗಾಗಿ, ಅವಕಾಶ ಇದೆ.
ಸಿದ್ದರಾಮಯ್ಯ-ಡಿಕೆಶಿ ಮಧ್ಯೆ ಗೊಂದಲದ ಬಗ್ಗೆ ಏನು ಹೇಳುತ್ತೀರಿ ?
ನಾನು ಹೇಳುವುದು ಎಲ್ಲರೂ ಸೇರಿ ಪಕ್ಷ ಕಟ್ಟಬೇಕು. ಆ ರೀತಿ ಮಾಡಬೇಕೆಂ ದಿದ್ದರೆ ನಾನು 50 ವರ್ಷದಲ್ಲಿ ಸಾಕಷ್ಟು ಭಿನ್ನಾಭಿಪ್ರಾಯ ಮಾಡಬಹುದಿತ್ತು. ಅದು ಪಕ್ಷದ ಮೇಲೆ ಪರಿಣಾಮ ಬೀರು ತ್ತದೆ. ಪಕ್ಷ ನಮಗೆ ಏನಾದರೂ ಒಂದು ಕೊಟ್ಟಿದೆ, ಕೆಲವರಿಗೆ ಸಿಎಂ ಸ್ಥಾನ, ಕೆಲವರಿಗೆ ಅಧ್ಯಕ್ಷ ಸ್ಥಾನ, ಡಿಸಿಎಂ ಸ್ಥಾನ ಕೊಟ್ಟಿದೆ. ನೀವೆಲ್ಲರೂ ಸೇರಿ ಪಕ್ಷಕ್ಕೆ ಏನು ಕೊಡುತ್ತೀರಿ ಎನ್ನುವುದು ಮುಖ್ಯ. ಈಗಲೇ ಸಿಎಂ ಸ್ಥಾನಕ್ಕೆ ಪೈ ಪೋಟಿ ಮಾಡಿದರೆ ಪಕ್ಷಕ್ಕೆ ನಷ್ಟ ಆಗಲಿದೆ.
ಕಳೆದ ಚುನಾವಣೆಯಲ್ಲಿ ನಿಮ್ಮನ್ನೇಕೆ ಗುರಿ ಮಾಡಲಾಯಿತು?
ನಾನು ನೆಹರು, ಗಾಂಧಿ, ಬುದ್ಧ ಬಸವ, ನಾರಾಯಣ ಗುರು ಅವರ ಸಿದ್ಧಾಂತ ನಂಬಿದವನು. ಅದರ ವಿರುದ್ಧ ಬರುವ ಬಿಜೆಪಿ ಇರಬಹುದು, ಆರ್‌ಎಸ್‌ಎಸ್ ಇರಬಹುದು ಯಾರೇ ಬಂದರೂ ನನ್ನ ಐಡಿಯಾಲಜಿಯನ್ನು ಜೋಪಾನ ಮಾಡುವುದು ನನ್ನ ಕರ್ತವ್ಯ. ನಾನು ನಂಬಿದ ಸಿದ್ಧಾಂತ ಬೆಂಬಲಿಸುವ ಪಕ್ಷವನ್ನು ಬೆಂಬಲಿಸುವುದು ನನ್ನ ಕರ್ತವ್ಯ. ನನಗೆ 80 ವರ್ಷ ಆಗಿದೆ ಎಂದು ಯಾವಾಗ ನಿವೃತ್ತಿ ಆಗ್ತಿàರಾ ಅಂತ ಕೇಳಿದರು. ನಾನು ನಿವೃತ್ತಿ ಯಾಗಲು ರಾಜಕೀಯಕ್ಕೆ ಬಂದಿಲ್ಲ. ನಮ್ಮ ಪ್ರಜಾಪ್ರಭುತ್ವ, ಸಂವಿಧಾನ ಉಳಿಸಲು ಹೋರಾಟ ಮಾಡುತ್ತಿದ್ದೇನೆ. ಅದಕ್ಕಾಗಿ ನನ್ನ ಟಾರ್ಗೆಟ್ ಮಾಡಿದರು.
ಪಕ್ಷ ನಿಮ್ಮನ್ನು ರಾಜ್ಯಸಭೆ ಸದಸ್ಯರನ್ನಾಗಿ ಮಾಡಿ, ಪ್ರತಿಪಕ್ಷದ ನಾಯಕನನ್ನಾಗಿ ಮಾಡಿದೆಯಲ್ಲಾ ?
ನಾನು ರಾಜ್ಯಸಭೆ ಪ್ರತಿಪಕ್ಷದ ನಾಯ ಕನಾಗಿರುವ ಬಗ್ಗೆ ತೃಪ್ತಿ ಇಲ್ಲ. ಯಾವ ಜನರಿಗಾಗಿ ನಾನು ಸೇವೆ ಮಾಡಿದ್ದೇನೋ ಆ ಜನರು ನನ್ನನ್ನು ಚುನಾಯಿಸಿದ್ದರೆ ತೃಪ್ತಿಯಾಗುತ್ತಿತ್ತು. 50 ವರ್ಷ ರಾಜಕಾರಣ ಮಾಡಿರುವುದಕ್ಕೆ ನನಗೆ ಸಮಾಧಾನ ಇರುತ್ತಿತ್ತು. ನನ್ನ ಸೋಲಿಗೆ 90 ಪರ್ಸೆಂಟ್ ಆರ್‌ಎಸ್‌ಎಸ್, ಬಿಜೆಪಿ ಕಾರಣ.
ಪ್ರಸ್ತುತ ಕೇಂದ್ರ ಸರ್ಕಾರದ ನಡೆಯ ಬಗ್ಗೆ ಏನು ಹೇಳುತ್ತೀರಾ ?
ಬಿಜೆಪಿಯವರು ದೇಶದಲ್ಲಿ ಅಧಿಕಾರದಲ್ಲಿರುವ ಸರ್ಕಾರಗಳನ್ನು ಕೆಡವಿ ತಮ್ಮ ಸರ್ಕಾರ ಅಧಿಕಾರಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ.
ರಾಜಕೀಯದಲ್ಲಿ 50 ವರ್ಷ ಪೂರೈಸುತ್ತಿದ್ದೀರಿ..
ನಾನು ರಾಜಕೀಯಕ್ಕೆ ಬರುವ ಆಸಕ್ತಿ ಇರಲಿಲ್ಲ. ವಿದ್ಯಾರ್ಥಿ ಮುಖಂಡನಾಗಿ ಹೋರಾಟದಲ್ಲಿದ್ದೆ. ನನ್ನ ಹೋರಾಟ ನೋಡಿ ಕಾಂಗ್ರೆಸ್‌ನವರು ಕರೆದು ಟಿಕೆಟ್ ನೀಡಿದರು. ಗುರುಮಿಠಕಲ್‌ನಿಂದ 9 ಬಾರಿ ಶಾಸಕನಾಗಿ ಹಲವು ಇಲಾಖೆಗಳಲ್ಲಿ ಸಚಿವನಾಗಿ ಸೇವೆ ಸಲ್ಲಿಸಿದ್ದೇನೆ.
-ಶಂಕರಪಾಗೋಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
Belagavi;ಕಾಂಗ್ರೆಸ್ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.