ಒಕ್ಕಲಿಗ ನಾಯಕ ಯಾರೆಂದು ಜನ ನಿರ್ಧರಿಸುತ್ತಾರೆ: ಸಚಿವ ಆರ್.ಅಶೋಕ್
Team Udayavani, Jul 22, 2022, 10:20 PM IST
ಮದ್ದೂರು: ಒಕ್ಕಲಿಗ ನಾಯಕ ಯಾರೆಂಬುದನ್ನು ಜನ ತೀರ್ಮಾನಿಸಬೇಕು. ನಿಮಗೆ ನೀವೇ ಪ್ರಮಾಣೀಕರಿಸಿಕೊಳ್ಳುವುದಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವ ರಿಗೆ ತಿರುಗೇಟು ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ನಾನೇ ಒಕ್ಕಲಿಗ ನಾಯಕ ಎಂದು ಸ್ವಯಂ ಘೋಷಣೆ ಮಾಡಿಕೊಳ್ಳುವುದರಲ್ಲಿ ಅರ್ಥವಿಲ್ಲ. ಯಾರು ತಮ್ಮ ಸಮುದಾಯದ ನಾಯಕ ಎಂದು ಜನ ತೀರ್ಮಾನ ಮಾಡಬೇಕೆಂದು ಹೇಳಿದರು.
ಕಾಂಗ್ರೆಸ್ ಪಾರ್ಟಿಯಲ್ಲಿ ಒಳ ಜಗಳಕ್ಕೆ ಬೆಂಕಿ ಬಿದ್ದು ಬೀದಿಗೆ ಬಂದಿದೆ. ಜಾತಿ ಆಧಾರದ ಮೇಲೆ ನಾವು ಚುನಾವಣೆ ಮಾಡಿದ್ರೆ ಜನ ಓಟು ಹಾಕ್ತಾರಾ ಎಂದು ಪ್ರಶ್ನಿಸಿದ ಸಚಿವ ಅಶೋಕ್, ಎಲ್ಲಾ ಜಾತಿಯವರೂ ಓಟು ಹಾಕಿದ್ರೆ ಮಾತ್ರ ಮುಖ್ಯಮಂತ್ರಿಯಾಗಲು ಸಾಧ್ಯ. ಜಾತಿ ಹೆಸರಲ್ಲಿ ಕಾರ್ಡ್ ಪ್ಲೇ ಮಾಡಿದ್ರೆ ಅದು ಸಮಾಜ ಒಡೆಯುವಂತಹ ಕೆಲಸ ಎಂದು ಪ್ರತಿಪಾದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.