ರಾಜ್ಯದಲ್ಲಿ ಶೇ. 27 ಪ್ರೌಢಶಾಲಾ ಶಿಕ್ಷಕ ಹುದ್ದೆ ಖಾಲಿ! ಕಲ್ಯಾಣ ಕರ್ನಾಟಕದಲ್ಲಿಯೇ ಹೆಚ್ಚು
11,796 ಮಂದಿ ಖಾಯಂ ಶಿಕ್ಷಕರ ಕೊರತೆ
Team Udayavani, Jan 3, 2025, 7:20 AM IST
ಬೆಂಗಳೂರು: ರಾಜ್ಯದ ಪ್ರೌಢಶಾಲೆಗಳಲ್ಲಿ 11,796 ಮಂದಿ ಖಾಯಂ ಶಿಕ್ಷಕರ ಕೊರತೆ ಇದ್ದು, ಹೈಸ್ಕೂಲ್‌ನ ಪಠ್ಯ ಚಟುವಟಿಕೆ ಮತ್ತು ಎಸೆಸೆಲ್ಸಿ ಫಲಿತಾಂಶದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಎಸೆಸೆಲ್ಸಿ ಪರೀಕ್ಷೆಯಲ್ಲಿ ಹಿಂದುಳಿದಿರುವ ಜಿಲ್ಲೆಗಳಲ್ಲಿ, ಸಾಮಾನ್ಯವಾಗಿ ವಿದ್ಯಾರ್ಥಿಗಳಿಗೆ ಕಠಿಣವಾಗಿರುವ ವಿಜ್ಞಾನ, ಇಂಗ್ಲಿಷ್ ವಿಷಯಗಳಲ್ಲಿಯೂ ಶಿಕ್ಷಕರ ತೀವ್ರ ಕೊರತೆ ಇದೆ.
ರಾಜ್ಯದಲ್ಲಿ ಒಟ್ಟು 4,871 ಸರಕಾರಿ ಶಾಲೆಗಳಿದ್ದು, ಪ್ರತೀ ಶಾಲೆ 2ರಿಂದ 3 ಶಿಕ್ಷಕರ ಕೊರತೆ ಎದುರಿಸುತ್ತಿದೆ. ಅದರಲ್ಲಿಯೂ ಶೈಕ್ಷಣಿಕವಾಗಿ ಹಿಂದುಳಿದಿರುವ ಮತ್ತು ಎಸೆಸೆಲ್ಸಿ ಫಲಿತಾಂಶದಲ್ಲಿ ಕಳಪೆ ಸಾಧನೆ ತೋರುವ ಕಲ್ಯಾಣ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಶೇ. 50ರಷ್ಟು ಪ್ರೌಢಶಾಲಾ ಶಿಕ್ಷಕರ ಕೊರತೆಯಿದೆ. ಒಟ್ಟಾರೆ ರಾಜ್ಯದಲ್ಲಿ ಶಿಕ್ಷಕರ ಕೊರತೆ ಪ್ರಮಾಣ ಶೇ. 27ರಷ್ಟಿದೆ.
ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಹಿಂದುಳಿದಿರುವಿಕೆಗೆ ಆಡಳಿತಶಾಹಿ ನಿರ್ಲಕ್ಷ್ಯ ತೋರುತ್ತಿರುವುದಕ್ಕೆ ಹಿಡಿದ ಕೈ ಗನ್ನಡಿಯಾಗಿದೆ. ಕಳೆದ ಎಸೆಸೆಲ್ಸಿ ಪರೀಕ್ಷೆಯಲ್ಲಿ ಕೊನೆಯ ಸ್ಥಾನಗಳಲ್ಲಿರುವ ಯಾದಗಿರಿ, ಕಲಬುರಗಿ, ಬೀದರ್, ಕೊಪ್ಪಳ, ರಾಯಚೂರು, ಬಳ್ಳಾರಿ ಜಿಲ್ಲೆಗಳಲ್ಲಿ ಶಿಕ್ಷಕರ ತೀವ್ರ ಕೊರತೆ ಇರುವುದನ್ನು ಅಂಕಿ-ಅಂಶಗಳು ಸಾರುತ್ತಿವೆ.
ಕಳೆದ ಬಾರಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಕೊನೆಯ ಸ್ಥಾನದಲ್ಲಿದ್ದ ಯಾದಗಿರಿಯಲ್ಲಿ 1,431 ಮಂಜೂರಾದ ಹುದ್ದೆಗಳಿದ್ದರೆ ಈ ಪೈಕಿ ಬರೋಬ್ಬರಿ 734 ಹುದ್ದೆಗಳು ಅಂದರೆ ಶೇ. 52 ಹುದ್ದೆಗಳು ಖಾಲಿ ಉಳಿದಿದ್ದು, ಆ ಭಾಗದ ಶೈಕ್ಷಣಿಕ ಪ್ರಗತಿಗೆ ತೊಡರುಗಾಲಾಗಿದೆ. ರಾಯಚೂರಿನ 2,239 ಮಂಜೂರಾದ ಹುದ್ದೆಯಲ್ಲಿ 1,040 ಹುದ್ದೆ, ಉಳಿದಂತೆ ಕಲಬುರಗಿಯಲ್ಲಿ 2,507 ಮಂಜೂರಾದ ಹುದ್ದೆಯಲ್ಲಿ 566, ಕೊಪ್ಪಳದ 1,688 ಮಂಜೂರಾದ ಹುದ್ದೆಯಲ್ಲಿ 565, ಬೀದರ್‌ನ 1,520ರಲ್ಲಿ 417 ಹುದ್ದೆ, ಬಳ್ಳಾರಿಯ 1,170ರಲ್ಲಿ 547 ಹುದ್ದೆಗಳು ಖಾಲಿ ಉಳಿದಿವೆ. ಒಟ್ಟಾರೆ ಕಲ್ಯಾಣ ಕರ್ನಾಟಕದಲ್ಲಿ ಮುಂಜೂರಾದ ಹೈಸ್ಕೂಲ್ ಶಿಕ್ಷಕರಲ್ಲಿ ಶೇ. 37 ಹುದ್ದೆಗಳು ಖಾಲಿ ಇವೆ.
ಚಿಕ್ಕೋಡಿಯಲ್ಲಿ 1,287 ಮಂಜೂರಾದ ಹುದ್ದೆ ಯಲ್ಲಿ 564, ಮಂಡ್ಯದ 1,783 ಹುದ್ದೆಗಳಲ್ಲಿ 533, ಹಾಸನದ 1,999ರಲ್ಲಿ 583 ಹುದ್ದೆಗಳು ಖಾಲಿ ಇವೆ.
ಬಾಗಲಕೋಟೆಯಲ್ಲಿ 346, ಬೆಳಗಾವಿ -313, ಬೆಂಗಳೂರು ಗ್ರಾಮಾಂತರ -207, ಬೆಂಗಳೂರು ಉತ್ತರ -58, ಬೆಂಗಳೂರು ದಕ್ಷಿಣ-155, ಚಾಮರಾಜನಗರ – 223, ಚಿಕ್ಕಬಳ್ಳಾಪುರ – 234, ಚಿಕ್ಕಮಗಳೂರು-238, ಚಿತ್ರದುರ್ಗ- 159, ದಕ್ಷಿಣ ಕನ್ನಡ-359, ದಾವಣಗೆರೆ – 162, ಧಾರವಾಡ- 164, ಗದಗ-282, ಹಾವೇರಿ-327, ಕೊಡಗು-128, ಕೋಲಾರ -411, ಮೈಸೂರು-349, ರಾಮನಗರ-301, ಶಿವಮೊಗ್ಗ-239,. ತುಮಕೂರು-307, ಮಧುಗಿರಿ-271, ಉಡುಪಿ-211, ಉತ್ತರ ಕನ್ನಡ -40, ಶಿರಸಿ-187, ವಿಜಯನಗರ-232 ಮತ್ತು ವಿಜಯಪುರ-244 ಶಿಕ್ಷಕರ ಕೊರತೆಯಿದೆ.
ವಿಜ್ಞಾನ ವಿಷಯಗಳಿಗೆ ಒಟ್ಟು 13,090 ಹುದ್ದೆ ಮಂಜೂರಾಗಿದ್ದು ಈ ಪೈಕಿ 1,794 ಹುದ್ದೆಗಳು ಖಾಲಿ ಇವೆ. ಈ ಪೈಕಿ ರಾಯಚೂರಿನಲ್ಲಿ 247, ಯಾದಗಿರಿಯಲ್ಲಿ 207, ಕಲಬುರಗಿ 120, ಚಿಕ್ಕೋಡಿ 109, ಕೊಪ್ಪಳ 102 ಹುದ್ದೆಗಳು ಖಾಲಿ ಉಳಿದಿವೆ.
ಕನ್ನಡ ಮಾಧ್ಯಮದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆಯಾಗಿರುವ ಆಂಗ್ಲ ಭಾಷೆಯ ಶಿಕ್ಷಕರ ಕೊರತೆ ತೀವ್ರವಾಗಿದೆ. ಮಂಜೂರಾದ 5,597 ಹುದ್ದೆಗಳಲ್ಲಿ 1,750 ಹುದ್ದೆಗಳು ಖಾಲಿ ಉಳಿದಿವೆ. ರಾಯಚೂರಿನಲ್ಲಿ 153, ಯಾದಗಿರಿ 110, ಬಳ್ಳಾರಿ 96, ಕಲಬುರಗಿ-94, ಕೊಪ್ಪಳ- 90 ಹುದ್ದೆ ಖಾಲಿ ಇದೆ.
ಕಲಾ ವಿಷಯದಲ್ಲಿ ಮಂಜೂರಾಗಿರುವ 6,659 ಹುದ್ದೆಗಳಲ್ಲಿ ಬರೋಬ್ಬರಿ 2,374 ಹುದ್ದೆ ಖಾಲಿ ಇದೆ. ರಾಯಚೂರು -182, ಚಿಕ್ಕೋಡಿ- 159, ಹಾಸನ- 135, ಬಳ್ಳಾರಿ-108 ಶಿಕ್ಷಕರ ಕೊರತೆಯಿದೆ.
ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಖಾಯಂ ಹುದ್ದೆ ಭರ್ತಿ ಆಗುವವರೆಗೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುತ್ತಿದ್ದೇವೆ. ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ ಖಾಲಿ ಇರುವ ಹುದೆಗಳಲ್ಲಿ 385 ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ನೀಡಿದ್ದೇವೆ. ಇನ್ನು ಸಚಿವ ಸಂಪುಟವು ಸಿವಿಲ್ ಸೇವೆಗಳಲ್ಲಿನ ಮೀಸಲಾತಿ ಅನ್ವಯವಾಗುವ ವೃಂದಗಳಿಗೆ ನೇರ ನೇಮಕಾತಿ ಮಾಡಲು ಹೊಸ ಅಧಿಸೂಚನೆ ಹೊರಡಿಸಬಾರದು ಎಂದು ಸೂಚಿಸಿದೆ.
– ಮಧು ಬಂಗಾರಪ್ಪ,
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ
-ರಾಕೇಶ್ ಎನ್.ಎಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Private Bus fare: ಶೀಘ್ರದಲ್ಲೇ ಖಾಸಗಿ ಬಸ್ ಪ್ರಯಾಣ ದರವೂ ಏರಿಕೆ?
Minimum Temperature: ಬೆಂಗಳೂರಿನಲ್ಲಿ ಶೀಘ್ರ 11 ಡಿಗ್ರಿ ತಾಪ?: 12 ವರ್ಷದಲ್ಲೇ ದಾಖಲೆ
Report: ಐಸಿಯು ಗಲೀಜು, ಟ್ಯಾಂಕ್‌ನಲ್ಲಿ ಪಾಚಿ: ಸರಕಾರಿ ಆಸ್ಪತ್ರೆಗಳ ದುಃಸ್ಥಿತಿ!
JDS: ಆಂತರಿಕ ಚುನಾವಣೆ ಮೂಲಕವೇ ರಾಜ್ಯಾಧ್ಯಕ್ಷರ ಆಯ್ಕೆ: ಎಚ್.ಡಿ.ಕುಮಾರಸ್ವಾಮಿ
Contracter Case: ಗುತ್ತಿಗೆದಾರ ಆತ್ಮಹತ್ಯೆ: ಸಚಿವ ಪ್ರಿಯಾಂಕ್ ರಾಜೀನಾಮೆಗೆ ಬಿಜೆಪಿ ಆಗ್ರಹ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.