ವೀಕೆಂಡ್ ಕರ್ಫ್ಯೂ: ಎಲ್ಲವೂ ಬಂದ್.. ಆದರೆ ಪ್ರವಾಸಕ್ಕೆ ಹೋಗಲು ಇದೆ ಅನುಮತಿ! ನಿಯಮಗಳ ಅನ್ವಯ
Team Udayavani, Jan 8, 2022, 9:09 AM IST
ಬೆಂಗಳೂರು: ಕೋವಿಡ್ ಹಾಗೂ ಒಮಿಕ್ರಾನ್ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಶುಕ್ರವಾರ ರಾತ್ರಿಯಿಂದ ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಲಾಗಿದೆ. ಸೋಮವಾರ ಬೆಳಗ್ಗೆ 5 ಗಂಟೆವರೆಗೆ ಕರ್ಫ್ಯೂ ಜಾರಿಯಲ್ಲಿದ್ದು ಅಗತ್ಯ ಸೇವೆ ಹೊರತುಪಡಿಸಿ, ಉಳಿದೆಲ್ಲವೂ ಬಂದ್ ಆಗಿದೆ. ತುರ್ತು ಅಗತ್ಯ ಇದ್ದರೆ ಮಾತ್ರ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಇದರ ನಡುವೆ ವಾರಾಂತ್ಯ ಕರ್ಫ್ಯೂ ಸಮಯದಲ್ಲಿ ಹೋಟೆಲ್/ರೆಸಾರ್ಟ್‌ಗಳಲ್ಲಿ ತಂಗುವುದಕ್ಕೆ ಪ್ರವಾಸಿಗರ ಚಲನವಲನ ಮತ್ತು ಅರಣ್ಯ ಪ್ರದೇಶಗಳಲ್ಲಿ ಸಫಾರಿಗೆ ಯಾವುದೇ ನಿರ್ಬಂಧವಿಲ್ಲ ಎಂದು ಪ್ರವಾಸೋದ್ಯಮ ಇಲಾಖೆ ಸ್ಪಷ್ಟನೆ ನೀಡಿದೆ.
ಅದರಂತೆ, ವಾರಾಂತ್ಯಕ್ಕೆ ಬುಕ್ಕಿಂಗ್ ಮಾಡಿ, ಅಧಿಕೃತ ದಾಖಲೆ ಗಳನ್ನು ಹೊಂದಿರುವ ಪ್ರವಾಸಿಗರು ತಮ್ಮ ಕಾರುಗಳು/ಟ್ಯಾಕ್ಸಿ ಮತ್ತು ಇತರೆ ಸಾರಿಗೆ ವಿಧಾನಗಳ ಮೂಲಕ ಪ್ರಯಾಣಿಸಲು ಅನುಮತಿಸಲಾಗಿದೆ. ಹೊಟೇಲ್/ರೆಸಾರ್ಟ್‌ಗಳಲ್ಲಿ ತಂಗಿರುವಂಥ ಅತಿಥಿಗಳಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಅನುಮತಿ ಇದೆ. ಬುಕ್ಕಿಂಗ್ ಮಾಡಿರುವ ದಾಖಲೆಯೊಂದಿಗೆ ಅತಿಥಿಗಳು ಹೋಟೆಲ್‌ಗಳಲ್ಲಿ ಚೆಕ್-ಇನ್, ಚೆಕ್-ಔಟ್ ಮಾಡಬಹುದು.
ಇದನ್ನೂ ಓದಿ:ಇಂದು ರಾಕಿಂಗ್ ಸ್ಟಾರ್ ಯಶ್ ಬರ್ತ್‌ಡೇ: ಮುಂದಿನ ಸಿನಿಮಾ ಬಗ್ಗೆ ಹೆಚ್ಚಿದ ಕುತೂಹಲ
ಜೊತೆಗೆ, ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಿ, ಅರಣ್ಯ ಪ್ರದೇಶಗಳನ್ನು ಮತ್ತು ಅಭಯಾರಣ್ಯಗಳಲ್ಲಿ ಸಫಾರಿಗೆ ಅನುಮತಿಯನ್ನು ನೀಡಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.