![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Aug 10, 2022, 10:54 PM IST
ಬೆಂಗಳೂರು: ಪಿಜಿ ನೀಟ್-2022ರ ಅಖಿಲ ಭಾರತೀಯ ಕೋಟಾ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಸೀಟು ಹಂಚಿಕೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಕಾಮೆಡ್-ಕೆ ಪ್ರಕಟಿಸಿದೆ.
ಮೊದಲನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಆ. 30ರಿಂದ ಸೆ. 13ರ ವರೆಗೆ, 2ನೇ ಸುತ್ತಿನ ಸೀಟು ಹಂಚಿಕೆಯು ಸೆ. 17ರಿಂದ ಅ. 1ರ ವರೆಗೆ ಮತ್ತು ಮಾಪ್‌ಅಪ್ ಸುತ್ತಿನ ಹಂಚಿಕೆಯು ಅ. 4ರಿಂದ 18ರ ವರೆಗೆ ನಡೆಯಲಿದೆ.
ಮೊದಲ ಸುತ್ತಿನಲ್ಲಿ ಆ. 30ರಂದು ಕಾಲೇಜುಗಳ ಸೀಟ್ ಮ್ಯಾಟ್ರಿಕ್ಸ್ ಬಿಡುಗಡೆ ಮಾಡಲಾಗುತ್ತದೆ. ಸೆ. 1ರಿಂದ 4ರ ವರೆಗೆ ನೋಂದಣಿ, ಸೆ. 2ರಿಂದ 5ರ ವರೆಗೆ ಸೀಟುಗಳ ಆಯ್ಕೆ, ಸೆ. 5ರಂದು ಸಂಬಂಧಪಟ್ಟ ವಿಶ್ವವಿದ್ಯಾಲಯ/ಶಿಕ್ಷಣ ಸಂಸ್ಥೆಗಳಿಂದ ಪರಿಶೀಲನೆ, ಸೆ. 6-7 ರಂದು ಸೀಟು ಹಂಚಿಕೆ ಪ್ರಕ್ರಿಯೆ, ಸೆ. 8ರಂದು ಫಲಿತಾಂಶ ಪ್ರಕಟಿಸಲಾಗುತ್ತದೆ ಮತ್ತು ಸೆ. 9ರಿಂದ 13ರ ಒಳಗೆ ಕಾಲೇಜಿಗೆ ಪ್ರವೇಶ ಪಡೆದುಕೊಳ್ಳಲು ಸಮಯ ನೀಡಲಾಗಿದೆ.
2ನೇ ಸುತ್ತಿನ ಪ್ರಕ್ರಿಯೆಯು ಸೆ. 17-18ರಂದು ಸೀಟು ಮ್ಯಾಟ್ರಿಕ್ಸ್ ಬಿಡುಗಡೆ ಮಾಡಲಾಗುತ್ತದೆ. ವಿದ್ಯಾರ್ಥಿಗಳು ಸೆ. 19ರಿಂದ 21ರ ವರೆಗೆ ನೋಂದಣಿ, 22ರ ವರೆಗೆ ಸೀಟು ಆಯ್ಕೆ, ಸೆ. 23 ಮತ್ತು 24ರಂದು ಸೀಟು ಹಂಚಿಕೆ ಪ್ರಕ್ರಿಯೆ, ಸೆ. 25ರಂದು ಫಲಿತಾಂಶ ಪ್ರಕಟವಾಗಲಿದ್ದು, ಸೆ. 26ರಿಂದ ಅ. 1ರ ವರೆಗೆ ಕಾಲೇಜು ಪ್ರವೇಶ ಪಡೆದುಕೊಳ್ಳಲು ಸಮಯ ನೀಡಲಾಗಿದೆ ಎಂದು ಕಾಮೆಡ್-ಕೆ ಪ್ರಕಟನೆ ತಿಳಿಸಿದೆ.
You seem to have an Ad Blocker on.
To continue reading, please turn it off or whitelist Udayavani.