ಪೈಲಟ್ ಸಮಯ ಪ್ರಜ್ಞೆಯಿಂದತಪ್ಪಿದ ಭಾರೀ ಅನಾಹುತ
Team Udayavani, Feb 3, 2018, 9:53 AM IST
ನಾಗಮಂಗಲ: ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಶುಕ್ರವಾರ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಇದ್ದ ಹೆಲಿಕಾಪ್ಟರ್ ಪೈಲಟ್‌ನ ಸಮಯ ಪ್ರಜ್ಞೆಯಿಂದ ಸಂಭವಿಸಬಹುದಾಗಿದ್ದ ಭಾರೀ ಅನಾಹುತವೊಂದು ತಪ್ಪಿತು.
ಡಿ.ಕೆ.ಶಿವಕುಮಾರ್ ಶುಕ್ರವಾರ ನಾಗಮಂಗಲ ತಾಲೂಕಿನಲ್ಲಿ ಪ್ರವಾಸ ಕೈಗೊಂಡಿದ್ದರು. ಕಾರ್ಯಕ್ರಮ ಮುಗಿಸಿ ವಾಪಸ್ ತೆರಳಲು ತಾಲೂಕು ಕ್ರೀಡಾಂಗಣದಲ್ಲಿ ಹೆಲಿಪ್ಯಾಡ್‌ಗೆ ವ್ಯವಸ್ಥೆ ಮಾಡಲಾಗಿತ್ತು.ಇದರ ಅರಿವಿಲ್ಲದ ಕಾರಣ ಪೊಲೀಸ್ ಭದ್ರತೆ ಕೊರತೆ ಇತ್ತು. ಡಿ.ಕೆ. ಶಿವಕುಮಾರ್ ಇದ್ದ ಹೆಲಿಕಾಪ್ಟರ್ ತಾಲೂಕು ಕ್ರೀಡಾಂಗಣದಲ್ಲಿ ಇಳಿದ ಕೂಡಲೇ ಅಭಿಮಾನಿಗಳು, ಸಾರ್ವಜನಿಕರು ಶಿವಕುಮಾರ್‌ರನ್ನು ಸ್ವಾಗತಿಸಲು ಹೆಲಿಕಾಪ್ಟರ್ ಇದ್ದ ಸ್ಥಳಕ್ಕೆ ದೌಡಾಯಿಸಿದರು. ಆ ಸಮಯಕ್ಕೆ ಹೆಲಿಕಾಪ್ಟರ್‌ನ ರೆಕ್ಕೆಗಳು ಇನ್ನೂ ನಿಂತಿರಲಿಲ್ಲ. ರೆಕ್ಕೆಗಳು ಬೀಸುವ ರಭಸಕ್ಕೆ ಧೂಳು ಮೇಲೆದ್ದಿತು. ಅದರ ನಡುವೆ ಜನರು ನುಗ್ಗಿ ಬರುತ್ತಿರುವುದನ್ನು ಕಂಡ ಪೈಲೆಟ್ ಕೂಡಲೇ ಹೆಲಿಕಾಪ್ಟರನ್ನು ಮತ್ತೆ ಟೇಕಾಫ್ ತೆಗೆದುಕೊಂಡರು. ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಜನರನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ಆ ವೇಳೆಗೆ ಪೈಲೆಟ್ ಒಂದು ಸುತ್ತು ಬಂದು ಹೆಲಿಕಾಪ್ಟರ್‌ನ್ನು ಕೆಳಗಿಳಿಸಿದರು.
ಕುಮಾರಸ್ವಾಮಿಯನ್ನು ಸಿಎಂ ಮಾಡಿದ್ದಕ್ಕೆ ನಮ್ಮ ತಕರಾರೇನೂ ಇಲ್ಲ. ಮನುಷ್ಯನಿಗೆ ಅವಕಾಶ ಸಿಕ್ಕಿದಾಗ ಸಹಾಯ ಮಾಡಬೇಕು. ಅದನ್ನು ಚೆಲುವರಾಯಸ್ವಾಮಿ ಮತ್ತವರ ಸ್ನೇಹಿತರು ಮಾಡಿದ್ದಾರೆ. ಚೆಲುವರಾಯಸ್ವಾಮಿ ಒಬ್ಬ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡುವ ಸಾಮರ್ಥ್ಯ ಹೊಂದಿದ್ದರು ಎಂದರೆ ಅವರ ಶಕ್ತಿ ಎಷ್ಟು ಎಂಬುದನ್ನು ನೀವೇ ಅರ್ಥ ಮಾಡಿಕೊಳ್ಳಿ.
●ಡಿ.ಕೆ.ಶಿವಕುಮಾರ್, ಸಚಿವ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.