ಕರ್ನಾಟಕದಲ್ಲಿ ಬಿಜೆಪಿ ಬಿರುಗಾಳಿ ಇದೆ:ಸಂತೇಮರಹಳ್ಳಿಯಲ್ಲಿ ಪ್ರಧಾನಿ
Team Udayavani, May 1, 2018, 12:19 PM IST
ಚಾಮರಾಜನಗರ: ಕರ್ನಾಟಕದಲ್ಲಿ ಬಿಜೆಪಿಯ ಬಿರುಗಾಳಿ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ.
ಚಾಮರಾಜನಗರದ ಸಂತೇಮರಹಳ್ಳಿಯಲ್ಲಿ ಬೃಹತ್ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕನ್ನಡದಲ್ಲೇ ಭಾಷಣ ಆರಂಭಿಸಿದ ಚಾಮರಾಜನಗದದ ದೇವರುಗಳು ಮತ್ತು ನಾಡಿನ ಪ್ರಮುಖರನ್ನು ಸ್ಮರಿಸಿದರು.
‘ಇಲ್ಲಿ ನೆರೆದಿರೋ ಕನ್ನಡ ನಾಡಿನ್ ಜನತೆಗೆ ನನ್ನ ನಮಸ್ಕಾರಗಳು. ಭಗವಾನ್ ಮಂಟೇಸ್ವಾಮಿ , ದೇವಿ ಮಾರವ್ವ, ದೇವಿ ಬಿಳಗಿರಿ ರಂಗನಾಥ, ಚಾಮರಾಜೇಶ್ವರ, ಹಿಮವದ್ ಗೋಪಾಲ ಸ್ವಾಮಿ, ಎಲ್ಲಾ ದೇವರುಗಳಿಗೆ ನನ್ನ ಭಕ್ತಿ ಪೂರ್ವಕ ನಮನಗಳು. ಕನಕಾದಿ ಯತಿಶ್ರೇಷ್ಠರಿಗೆ ನನ್ನ ನಮನಗಳು .ಚಾಮರಾಜ ಒಡೆಯರ್ , ಜಿ.ಪಿ.ರಾಜರತ್ನಂ, ಡಾ. ರಾಜ್‌ಕುಮಾರ್ ಇತ್ಯಾದಿ ಮಹಾಪುರುಗರಿಗೆ ನನ್ನ ನಮಸ್ಕಾರಗಳು’ ಎಂದು ಕನ್ನಡದಲ್ಲೇ ಹೇಳಿದರು.
‘ಕರ್ನಾಟಕದಲ್ಲಿ ಭಾಜಪ ಹವಾ ಇದೆ ಎಂದು ದೆಹಲಿಯಲ್ಲಿ ಹೇಳುತ್ತಿದ್ದರು. ಆದರೆ ನನ್ನ ಪ್ರಥಮ ಪ್ರಚಾರ ಸಭೆ ಇದು. ಇಲ್ಲಿ ಭಾಜಪ ಹವಾ ಅಲ್ಲ ಬಿರುಗಾಳಿ ಇದೆ. ಹೊರಗಡೆ ಬಿಸಿಲಲ್ಲೂ ಜನರು ನಿಂತಿದ್ದಾರೆ. ನಿಮ್ಮ ತಪಸ್ಸನ್ನು ವ್ಯರ್ಥ ಮಾಡುವುದಿಲ್ಲ. ನಿಮ್ಮ ಕನಸು ಸಕಾರಗೊಳಿಸುತ್ತೇವೆ’ ಎಂದರು.
ಕಾಂಗ್ರೆಸ್ ವಿರುದ್ಧ ಕಿಡಿ
ರಾಹುಲ್ ಗಾಂಧಿಯವರನ್ನು ನಾಮ್‌ಧಾರ್ ಎಂದು ಕರೆದ ಮೋದಿ ತಮ್ಮ ಯಾವುದೇ ಮಾತಿನಿಂದ ಘಾಸಿಗೊಳ್ಳುವುದಿಲ್ಲ. ಅನೇಕ ವರ್ಷಗಳಿಂದ ಇದನ್ನು ಸಹಿಸಿಕೊಂಡೇ ಬಂದಿದ್ದೇವೆ.
ನಮ್ಮ ಅವಧಿಯಲ್ಲಿ 18,000 ಹಳ್ಳಿಗಳಿಗೆ ವಿದ್ಯುತ್ ನೀಡಿದ್ದೇವೆ. ಸ್ವಾತಂತ್ರ್ಯ ಬಂದು 50 ವರ್ಷಗಳ ಕಾಲ 4 ಕೋಟಿ ಕುಟುಂಬಗಳನ್ನು ಕತ್ತಲೆಯಲ್ಲಿ ಇರಿಸಿದರು.
ಅವರಿಗೆ ವಂದೇ ಮಾತರಂಗೂ ಗೌರವ ಕೊಡಲು ಗೊತ್ತಿಲ್ಲ . ದೇಶದ ಮಹಾಪುರುಷರ ಬಗ್ಗೆ ಗೌರವವಿಲ್ಲ ಎಂದು ರಾಹುಲ್ ಗಾಂಧಿ ವಿರುದ್ಧ ವಾಗ್ಧಾಳಿ ನಡೆಸಿದರು.
ಇಟಲಿ ಭಾಷೆಯಲ್ಲಾದ್ರೂ ಸರ್ಕಾರದ ಸಾಧನೆ ಹೇಳಿ
‘ನೀವು ಸಂಸತ್ ನಲ್ಲಿ 15 ನಿಮಿಷ ಮಾತನಾಡುವುದನ್ನು ನಿಲ್ಲಿಸಿ.ನಿಮ್ಮ ಕರ್ನಾಟಕದ ಸರ್ಕಾರದ 5 ವರ್ಷಗಳ ಸಾಧನೆಯನ್ನು 15 ನಿಮಿಷಗಳ ಕಾಲ ಹೇಳಿ. ಯಾವುದೇ ಭಾಷೆಯಲ್ಲಿ ಆದರೂ ಹೇಳಿ , ಬೇಕಾದರೆ ನಿಮ್ಮ ಮಾತ್ರಶ್ರಿಯವರ ಮಾತೃಭಾಷೆಯಲ್ಲೂ ಹೇಳಿ. ಭಾಷಣದಲ್ಲಿ 5 ಸಲ ಶ್ರೀಮಾನ್ ವಿಶ್ವೇಶ್ವರ ಯ್ಯ ಅವರ ಹೆಸರನ್ನು ಹೇಳಿ.ನೀವಿಷ್ಟು ಮಾಡಿದರೆ ನಿಮ್ಮ ಮಾತಿನಲ್ಲಿ ಒಂದು ತೂಕವಿದೆ’ ಎಂದು ಎಂದು ಲೇವಡಿ ಮಾಡಿದರು.
‘ಕರ್ನಾಟಕದಲ್ಲಿ 2+1 ಸರ್ಕಾರವಿದೆ. ಸಿದ್ದರಾಮಯ್ಯ ಅವರಿಗೆ 2 ಕ್ಷೇತ್ರ, ಅವರ ಮಗನಿಗೆ 1 ಕ್ಷೇತ್ರ, ಇನ್ನುಳಿದ ಸಚಿವರಿಗೆ 1+1 ಫಾರ್ಮುಲಾ’ ಎಂದು ಟೀಕಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಭಾರತಾಂಬೆಗೆ ಅವಮಾನ; ಕರ್ನಾಟಕ ವಿಶ್ವವಿದ್ಯಾಲಯದಿಂದ ಪಠ್ಯ ಹಿಂದಕ್ಕೆ
ಮೀಟರ್ ಬಡ್ಡಿ: ಯಾದಗಿರಿಯಲ್ಲಿ ಹಲ್ಲೆಗೊಳಗಾಗಿದ್ದ ಯುವಕ ಬಲಿ
ಮೈಕ್ರೋ ಫೈನಾನ್ಸ್ ಕಿರುಕುಳ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ: ಜಾರಕಿಹೊಳಿ
Monkey disease: ಉಣುಗುಗಳಲ್ಲಿ ಮಂಗನ ಕಾಯಿಲೆ ವಂಶವಾಹಿ ಪ್ರಸರಣ!
Hunsur: ರಾಯರ ದರ್ಶನಕ್ಕೆ ತೆರಳುತ್ತಿದ್ದವರ ವಾಹನ ಅಪಘಾತ… ಚಾಲಕ ಸೇರಿ ಏಳು ಮಂದಿಗೆ ಗಾಯ
MUST WATCH
ಹೊಸ ಸೇರ್ಪಡೆ
ಭಾರತಾಂಬೆಗೆ ಅವಮಾನ; ಕರ್ನಾಟಕ ವಿಶ್ವವಿದ್ಯಾಲಯದಿಂದ ಪಠ್ಯ ಹಿಂದಕ್ಕೆ
ಮೀಟರ್ ಬಡ್ಡಿ: ಯಾದಗಿರಿಯಲ್ಲಿ ಹಲ್ಲೆಗೊಳಗಾಗಿದ್ದ ಯುವಕ ಬಲಿ
BBK11: ಈ ಇಬ್ಬರ ಪೈಕಿ ಒಬ್ಬರು ಬಿಗ್ ಬಾಸ್ ಟ್ರೋಫಿ ಗೆಲ್ಲೋದು ಪಕ್ಕಾ?: ಹೇಗಿದೆ ಟ್ರೆಂಡ್
ಪೆರ್ಡೂರು ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ರಾಮಚಂದ್ರ ಐತಾಳ ವಿಧಿವಶ
ಮೈಕ್ರೋ ಫೈನಾನ್ಸ್ ಕಿರುಕುಳ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ: ಜಾರಕಿಹೊಳಿ