ಲೂಟಿಗೈಯಲು ಎಂದಿಗೂ ಬಿಡುವುದಿಲ್ಲ; ಧರ್ಮಸ್ಥಳದಲ್ಲಿ ಮೋದಿ
Team Udayavani, Oct 29, 2017, 1:21 PM IST
ಬೆಳ್ತಂಗಡಿ : ‘ನಾನು ಡಾ.ಡಿ.ವಿರೇಂದ್ರ ಹೆಗ್ಗಡೆ ಅವರಿಗೆ ಸನ್ಮಾನ ಮಾಡುವ ಯೋಗ್ಯತೆ ಹೊಂದಿದ್ದೇನೋ ತಿಳಿದಿಲ್ಲ. ಅವರ ಮಹಾ ಸಾಧನೆಗಳ ಎದುರು ನಾನು ತುಂಬಾ ಸಣ್ಣವನು’ಇದು ಪ್ರಧಾನಿ ನರೇಂದ್ರ ಮೋದಿ ಅವರು ಡಾ.ಹೆಗ್ಗಡೆ ಅವರನ್ನು ಶ್ಲಾಘಿಸಿದ ಪರಿ
ಇಲ್ಲಿನ ರತ್ನವರ್ಮ ಕ್ರೀಡಾಂಗಣದಲ್ಲಿ ಭಾನುವಾರ ನಡೆಯುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳಗ್ರಾಮೀಣ ಅಭಿವೃದ್ಧಿ ಯೋಜನೆಯ ಮಹಾ ಸಮಾವೇಶದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ ಜನರು ಕ್ಯಾಶ್ ಲೆಸ್ ಆಗುವತ್ತ ಮುಂದಾಗಲು ಕರೆ ನೀಡಿದರು.
ಕನ್ನಡದಲ್ಲಿ ಭಾಷಣ ಆರಂಭ
‘ನಮೋ ಮಂಜುನಾಥ.. ಧರ್ಮಸ್ಥಳದ ನನ್ನ ಪ್ರೀತಿಯ ಬಂಧು ಭಗಿನಿಯರೇ ನಿಮಗೆಲ್ಲಾ ನನ್ನ ನಮಗಳು, ನನ್ನ ಸಹೋದರಿಯರಿಗೆ ವಿಶೇಷ ಅಭಿನಂದನೆಗಳು’ ಎಂದು ಭಾಷಣ ಆರಂಭಿಸಿದರು.
‘ಜನ ಸೇವೆಯೇ ಪ್ರಭು ಸೇವೆ ಎನ್ನುವುದನ್ನು ಮೈಗೂಡಿಸಿಕೊಂಡಿರುವ ಸರಳತೆಯ ಸಾಧ್ವಿ,ಆಧ್ಯಾತ್ಮಿಕ ಉಚ್ಚ ಪರಂಪರೆಯ ಸಾಧಕ ಡಾ.ಹೆಗ್ಗಡೆ ಅವರೊಂದಿಗೆ ವೇದಿಕೆ ಹಂಚಿಕೊಂಡದ್ದು ನನ್ನ ಸೌಭಾಗ್ಯ’ ಎಂದರು.
’20 ವರ್ಷ ದ ಸಣ್ಣ ಪ್ರಾಯದಲ್ಲೇ ಅಧಿಕಾರ ಪಡೆದು ತ್ಯಾಗ, ತಪಸ್ಸಿನ ಮೂಲಕ ಜೀವನವನ್ನು ವೃತವನ್ನಾಗಿಸಿದ ಅವರಿಗೆ ಸನ್ಮಾನ ಮಾಡಲು ನಾನು ಸಣ್ಣವ. ಆದರೆ ನನ್ನನ್ನು ಕರೆಸಿ ಸನ್ಮಾನಿಸಲು ಅವಕಾಶ ನೀಡಿದ್ದು ನನ್ನಸೌ ಭಾಗ್ಯ.ಒನ್ ಲೈಫ್ ಒನ್ ವಿಷನ್ ಇದೆ ಗುರಿಯಲ್ಲಿ ಸೇವೆಗೆ ತಮ್ಮನ್ನು ತಾವು ಮರ್ಪಿಸಿಕೊಂಡಿದ್ದಾರೆ’ಎಂದರು.
‘ರುಪೇ ಕಾರ್ಡ್ ಮೂಲಕ ನಾವು ಕ್ಯಾಶ್ ಲೆಸ್ ವ್ಯವಹಾರ ಮಾಡುತ್ತೇವೆ ಎನ್ನುವುದಾಗಿ ಇಂದು 12 ಲಕ್ಷ ತಾಯಂದಿರು ಸಂಕಲ್ಪ ಮಾಡಿದ್ದಾರೆ. ಅವರಿಗಿಂತ ನಾವು ಹಿಂದೆ ಬೀಳಬಾರದು, ಎಲ್ಲರೂ ಕ್ಯಾಶ್ ಲೆಸ್ ಆಗುವತ್ತ ಗಮನ ಹರಿಸಬೇಕು. ಎಲ್ಲರೂ ಭೀಮ್ ಆ್ಯಪ್ ಬಳಸಿ, ರುಪೇ ಕಾರ್ಡ್ ಬಳಸಿ ಅವ್ಯವಹಾರ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ, ಎಂದರು.
‘ಈ ಪುಣ್ಯ ಭೂಮಿಯ ಪಾವಿತ್ರ್ಯತೆಯ ಬಗ್ಗೆ ನನಗೆ ಗೊತ್ತಿದೆ. ಈ ಮಣ್ಣಿನಲ್ಲಿ ನಿಂತು ಹೇಳುತ್ತಿದ್ದೇನೆ ಇಂದು ದೇಶದ ವಿವಿಧೆಡೆ ಸುಮಾರು 57,000 ಕೋಟಿ ರೂಪಾಯಿ ಅವ್ಯವಹಾರ ನಿಂತು ಹೋಗಿದೆ. ಯಾರ ಖಾತೆಗೆ ದಿನಂಪ್ರತಿ ಸಾವಿರ ಕೋಟಿ ರೂಪಾಯಿ ಜಮೆಯಗುತ್ತಿತ್ತೋ, ಅದು ನಿಂತು ಹೋಗಿದೆ. ಅವರು ಮೋದಿಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂದರು.
‘ನಮ್ಮ ಸರ್ಕಾರ ಬರಲಿ, ಹೋಗಲಿ, ಇಲ್ಲಿ ನಿಂತು ಹೇಳುತ್ತಿದ್ದೇನೆ.. ದೇಶವನ್ನು ಲೂಟಿಗೈಯಲು ಎಂದಿಗೂ ಅವಕಾಶ ನೀಡುವಿಲ್ಲ. ನಮ್ಮ ಪರಂಪರೆಯೇ ಹಾಗೆ. ನಮಗಾಗಿ ಬದುಕುವುದಿಲ್ಲ, ನಾವು ಬೇರೆಯವರಿಗಾಗಿ ಬದುಕುವವರು’ ಎಂದು ಭಾಷಣ ಮುಗಿಸಿದರು.
ಭಾಷಣದಲ್ಲಿ ರೈತರ ,ಮೀನುಗಾರ ಮತ್ತು ಅಡಿಕೆ ಬೆಳೆಗಾರರ ಕುರಿತು ವಿಚಾರಗಳನ್ನು ಪ್ರಸ್ತಾವಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi ವಿಮಾನ ನಿಲ್ದಾಣ ಕಂಪೌಂಡ್ ಬಳಿ ಯುವಕನ ಹತ್ಯೆ; ಕಾರಣ ನಿಗೂಢ
Illegal immigrants; ಬಂಧಿತ ಪಾಕ್ ಅಕ್ರಮ ವಲಸಿಗರು ಉಗ್ರರಲ್ಲ!: ಯಾರಿವರು?
Extraodinary; 3.5 ವರ್ಷಕ್ಕೇ ಎಂಜಿನಿಯರಿಂಗ್ ಪದವಿ ಕೊಡಲಿದೆ ವಿಟಿಯು!
Channapatna by-election; ನಿಖಿಲ್ ಗೆ ನಿರೀಕ್ಷೆಗೂ ಮೀರಿ ಗೆಲುವು: ಭವಿಷ್ಯ
CM ಆಗುವ ಅರ್ಹತೆ ಇದ್ದರೂ ಬೇಡದ ಖಾತೆ: ಗುಡುಗಿದ ಮಾದಾರ ಶ್ರೀ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.