Health Department ನ್ಯುಮೋನಿಯಾ ಮುನ್ನೆಚ್ಚರಿಕೆ ಪ್ರಕಟ; ಇಲ್ಲಿದೆ ಮಾರ್ಗಸೂಚಿ
ಚೀನದಲ್ಲಿ ನಿಗೂಢ ನ್ಯುಮೋನಿಯಾ ವೈರಾಣು ಸೋಂಕು ಹೆಚ್ಚುತ್ತಿರುವ ಹಿನ್ನೆಲೆ
Team Udayavani, Nov 29, 2023, 7:15 AM IST
ಬೆಂಗಳೂರು: ಚೀನದಲ್ಲಿ ನಿಗೂಢ ನ್ಯುಮೋನಿಯಾ ವೈರಾಣು ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಆರೋಗ್ಯ ಇಲಾಖೆಯು ಕೋವಿಡ್ ಸಂದರ್ಭದಲ್ಲಿ ಜಾರಿಯಲ್ಲಿದ್ದ ಸರ್ವೇಕ್ಷಣ ಕಣ್ಗಾವಲು ಪಡೆ ಸಕ್ರಿಯಗೊಳಿಸುವುದು ಸೇರಿದಂತೆ ವಿವಿಧ ಮುನ್ನೆಚ್ಚರಿಕೆ ಕ್ರಮಗಳನ್ನು ಒಳಗೊಂಡ ಹೊಸ ಮಾರ್ಗಸೂಚಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ.
ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗುವ ಎಲ್ಲ ಸಾರಿ ಹಾಗೂ ಐಎಲ್‌ಐ ಪ್ರಕರಣಗಳ ಸಂಪೂರ್ಣ ಮಾಹಿತಿಯನ್ನು ಪ್ರತಿನಿತ್ಯ ಐಡಿಎಸ್‌ಪಿ- ಐಎಚ್‌ಐಪಿ ವೆಬ್‌ಸೈಟ್‌ಗೆ ಆಪ್‌ಲೋಡ್ ಮಾಡಬೇಕು. ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಸೂಚಿಸಲಾಗಿದೆ.
ಕೋವಿಡ್ ಪ್ರಕರಣಗಳ ನಿರ್ವಹಣೆಗೆ ಆಸ್ಪತ್ರೆಯಲ್ಲಿ ಅಳವಡಿಸಿಕೊಳ್ಳಲಾದ ವ್ಯವಸ್ಥೆಯನ್ನು ಮರುಪರಿಶೀಲನೆ ನಡೆಸಬೇಕು. ಜತೆಗೆ ಹಾಸಿಗೆ, ಆಕ್ಸಿಜನ್ ಬೆಡ್, ಐಸಿಯು, ವೆಂಟಿಲೇಟರ್, ಔಷಧ, ಪಿಪಿಇ ಕಿಟ್, ಎನ್95 ಮಾಸ್ಕ್, ಮೆಡಿಕಲ್ ಮಾಸ್ಕ್, ಪ್ರಯೋಗಾಲಯ, ಆ್ಯಂಬುಲೆನ್ಸ್ ಮತ್ತಿತರ ವ್ಯವಸ್ಥೆಯನ್ನು ಮಕ್ಕಳ ಹಾಗೂ ವಯಸ್ಕರ ನ್ಯುಮೋನಿಯಾ ಚಿಕಿತ್ಸೆಗೆ ಸನ್ನದ್ಧಗೊಳಿಸುವಂತೆ ಆದೇಶ ನೀಡಿದೆ.
ಸಮುದಾಯ ಮಟ್ಟದ ಸರ್ವೇಕ್ಷಣ ಕಣ್ಗಾವಲು ಪಡೆ ಸಕ್ರಿಯವಾಗಿ ಕಾರ್ಯಾಚರಿಸಲು ಸೂಚಿಸಿದ್ದು, ಶಂಕಿತ ಪ್ರಕರಣಗಳು ಅಥವಾ ನ್ಯುಮೋನಿಯಾ ಹೆಚ್ಚಾಗಿ ಕಂಡುಬರುವ ಪ್ರದೇಶಗಳನ್ನು ಗುರುತಿಸಿ, ಐಎಚ್‌ಐಪಿಗೆ ವರದಿ ಸಲ್ಲಿಕೆ ಮಾಡಲು ಸೂಚಿಸಿದೆ. ಜತೆಗೆ ಕೋವಿಡ್ ನೆಗೆಟಿವ್ ಬಂದು ಸಾರಿ, ಐಎಲ್‌ಐನಿಂದ ಮೃತಪಟ್ಟ ವ್ಯಕ್ತಿಯ ಮಾದರಿಯನ್ನು ಸಮೀಪದ ಪ್ರಯೋಗ ಶಾಲೆಗೆ ಕಡ್ಡಾಯವಾಗಿ ರವಾನಿಸಬೇಕು. ಪರೀಕ್ಷಾ ವಿವರವನ್ನು ಕಡ್ಡಾಯವಾಗಿ ಆರೋಗ್ಯ ಇಲಾಖೆಗೆ ಸಲ್ಲಿಕೆ ಮಾಡಬೇಕು.
ಏನು ಮಾಡಬೇಕು ಮಾಡಬಾರದು?
- ಸೀನುವಾಗ ಹಾಗೂ ಕೆಮ್ಮುವಾಗ ಕರವಸ್ತ್ರ ಬಳಸಬೇಕು.
- ಕೈಗಳನ್ನು ಸಾಬೂನಿನಿಂದ ತೊಳೆಯಬೇಕು.
-ಅನಗತ್ಯವಾಗಿ ಕಣ್ಣು, ಬಾಯಿ, ಮೂಗು ಮುಟ್ಟಿಕೊಳ್ಳುವುದು ಕಡಿಮೆ ಮಾಡಬೇಕು.
- ಜನಸಂದಣಿ ಪ್ರದೇಶಗಳಿಗೆ ದೂರವಿರಬೇಕು.
- ಮಾಸ್ಕ್ ಧರಿಸಬೇಕು.
-ಶಂಕಿತ ವ್ಯಕ್ತಿಗಳು, ಶೀತ, ಜ್ವರ, ನೆಗಡಿ ಲಕ್ಷಣಗಳಿರುವವರಿಂದ ಅಂತರ ಕಾಯ್ದುಕೊಳ್ಳಬೇಕು.
- ಸಾರ್ವಜನಿಕ ಪ್ರದೇಶಗಳಲ್ಲಿ ಉಗುಳಬಾರದು.
- ಪೌಷ್ಟಿಕಾಂಶ ಆಹಾರ ಸೇವಿಸಿ, ರೋಗನಿರೋಧಕ ಶಕ್ತಿ ಹೆಚ್ಚಿಸಿ.
- ಅನಾರೋಗ್ಯದಿಂದ ಬಳಲುವವರು ಪ್ರಯಾಣ ಕಡಿತಗೊಳಿಸಿ.
-ಸತತ 4ರಿಂದ 5 ದಿನಗಳ ಕಾಲ ಶೀತ, ನೆಗಡಿ ಕೆಮ್ಮು ಜ್ವರವಿದ್ದರೆ ತಪಾಸಣೆಗೆ ಒಳಗಾಗಬೇಕು.
- ಗರ್ಭಿಣಿಯರು ಸ್ವಯಂ ಚಿಕಿತ್ಸೆಗೆ ಒಳಗಾಗದೆ ವೈದ್ಯರನ್ನು ಭೇಟಿ ಮಾಡಬೇಕು.
- ಲಕ್ಷಣಗಳಿದ್ದರೆ ಸಮೀಪದ ಆಸ್ಪತ್ರೆಗೆ ತೆರಳಿ ಪರೀಕ್ಷೆಗೆ ಒಳಗಾಗಬೇಕು.
- ಲಕ್ಷಣಗಳಿದ್ದವರು ಮಾಸ್ಕ್ ಧರಿಸಿಕೊಂಡು, ಮನೆಯಲ್ಲಿ ಇರಬೇಕು.
- ಲಕ್ಷಣಗಳಿರುವವರು 7 ದಿನಗಳ ಕಾಲ ಪ್ರತ್ಯೇಕವಾಗಿರಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manvi; ರಾಜಲಬಂಡ ಅಣೆಕಟ್ಟೆಯಲ್ಲಿ ಕಂಡು ಬಂದ ಭಾರಿ ಗಾತ್ರದ ಮೀನುಗಳು
Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ
Namma Metro; ಡಿಸೆಂಬರ್ 31ರಂದು ಮಧ್ಯರಾತ್ರಿ 2 ಗಂಟೆಯವರೆಗೆ ಮೆಟ್ರೋ ಸಂಚಾರ
Robbery: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ “ಮೊಟ್ಟೆ ಗ್ಯಾಂಗ್”
Hubli: ಮನೆ ದರೋಡೆಗೆ ಯತ್ನಿಸಿದ ದರೋಡಕೋರನ ಕಾಲಿಗೆ ಗುಂಡೇಟು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್…
ShivaRajkumar ಮನೆಯ ಮುದ್ದಿನ ಶ್ವಾನ ನೀಮೋ ಇನ್ನಿಲ್ಲ: ಭಾವನಾತ್ಮಕ ಪತ್ರ ಬರೆದ ಗೀತಾ
Manvi; ರಾಜಲಬಂಡ ಅಣೆಕಟ್ಟೆಯಲ್ಲಿ ಕಂಡು ಬಂದ ಭಾರಿ ಗಾತ್ರದ ಮೀನುಗಳು
Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ
Arvind Kejriwal ವಾಗ್ದಾಳಿ: ತನಿಖೆಗೆ ಆದೇಶದ ಬಳಿಕ ಬಿಜೆಪಿ-ಕಾಂಗ್ರೆಸ್ ವಿರುದ್ಧ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.