ಬನ್ರೋ ಮುಂಡೇವಾ ಬಸ್ತೀಮೆ ಸವಾಲ್ ಅಂದ್ರಾ ಇಬ್ರಾಹಿಮ್ ಸಾಬ್ರು
Team Udayavani, Apr 17, 2022, 12:05 PM IST
ಅಮಾಸೆ: ನಮ್‌ಸ್ಕಾರ ಸಾ….
ಚೇರ್ಮನ್ರು: ಏನ್ಲಾ ಅಮಾಸೆ ಆಳೆ ಕಾಣೆ, ಎಲ್ ಗ್ಲಾ ನಿನ್ ಹೆಂಡ್ರು ಚಂದ್ರೀನ್ ಕರ್ಕೊಂಡ್ ಒಂಟಿದ್ದೀಯಾ
ಅಮಾಸೆ: ಎಲ್‌ಗೋಗುಮಾ ಸಾ… ಅದೆಂತದೋ ಬೂಸ್ಟ್ ಡೋಸ್ ಕೊಡ್ತಾರಂತೆ ತಕ್ಕಂಡ್ ಬರೂಮಾ ಅಂತಾ. ಇಲ್ಲಾಂದ್ರೆ ಡೇಂಜರ್ ಅಂತೆ
ಚೇರ್ಮನ್ರು: ಡಬಲ್ ಡೋಸ್ ಆಗೈತೇನ್ಲಾ ನಿಂದು
ಅಮಾಸೆ: ಸಿಂಗಲ್ ಡೋಸ್ ಆಗೈತೆ, ಡಬಲ್ ಡೋಸ್ ಮಿಸ್ ಆಗೋಗೈತೆ. ಅದ್ಕೆ ಬೂಸ್ಟ್ ಡೋಸ್ ತಕ್ಕಂಡ್ರೆ ಸರೋಯ್ತದೆ ಅಂತಾ.
ಚೇರ್ಮನ್ರು: ಬೂಸ್ಟ್ ಡೋಸ್ ಅಲ್ಲಾ ಕಣ್ಲಾಅಮಾಸೆ, ಬೂಸ್ಟರ್ ಡೋಸ್. ಡಬಲ್ ಡೋಸ್ ತಕ್ಕಂಡಿದ್ರೆ ನೈನ್ ಮಂತ್ಸ್ ಆಗಿದ್ರೆ ಹಾಕ್ತಾರೆ ಅಷ್ಟೆಯಾ
ಚಂದ್ರಿ: ಇವ್ನ್ ಮಕ್ಕೆ, ನಾನ್ ಹೇಳಿದ್ರು ಕೇಳಿಲ್ಲಾ ಅಯ್ನಾರೆ. ಆಕಾಸಾ ಬಿಧ್ದೋದಂಗೆ ವತ್ತಾರೆ ಎದ್‌ಬುಟ್ಟು ಬೂಸ್ಟ್ ತಕ್ಕಳ್ಳೋಮಾ ಅಂತಾ ಹಟ್ಟಿನಾಗ್ ಕೆಲ್ಸ ಬುಟ್ಟು ಕರ್ಕೊಂಡ್ ಹೋಯ್ತಾವ್ನೆ.
ಅಮಾಸೆ: ನಿಂಗ್ ಗೊತ್ತಾಕಾಗಿಲ್ಲಾ ಸುಮ್ಕಿರು, ಇನ್ಮೇ ಗೌರ್ನ್ಮೆಂಟ್ ಪೆಸಿಲಿಟಿ ಬೇಕ್ ಅಂದ್ರೆ ಡೋಸ್ ಸಲ್ಟಿಪಿಕೇಟ್ ಇರ್ಬೇಕ್
ಚಂದ್ರಿ: ಒಂದಪಾ ಹಾಕ್ಸಿ ಇನ್ನೊಂದಪಾ ಎಲ್ರೂ ಹಾಕ್ಸ್ ತಾವ್ರೆ ಬಾ ಅಂದಾಗಾ ಅದೇನೂ ವರ್ಕ್ ಔಟ್ ಆಗಲ್ಲಾ ಅಂತೇಳಿ ಗಡಂಗ್‌ಗೋಗಿ ಮಕ್ಕಂಡಿದ್ ಸಾಲ್ನೆ. ನಿನ್ ನಂಬಕಂಡ್ರೆ ಅಷ್ಟೇಯಾ. ನಾನ್ ಹಟ್ಟಿಗೋಯ್ತಿನಿ.
ಚೇರ್ಮನ್ರು: ಹೋಗ್ಲಿ ಬುಡ್ಲಾ ಇನ್ನೇನ್ಲಾ ಇಸೇಸಾ. ಬುದ್ವಂತ ಬಸಣ್ಣೋರು ಡೆಲ್ಲಿ ಟ್ರಿಪ್ ಏನಂತ್ಲಾ
ಅಮಾಸೆ: ನಡ್ಡಾ ಅವ್ರುತಾವಾ ಹೋದೇಟ್ಗೇ ಅಮಿತ್ ಶಾ ಸಾಬ್‌ಕೋ ದೇಖೋ ಅಂದ್ರಂತೆ. ಶಾ ಸಾಹೇಬ್ರು ದರ್ಶನಾ ಕೊಡ್‌ಲಿಲ್ವಂತೆ. ಅದ್ಕೆ ಖಾಲಿ ಕೈ ನಾಗೆ ವಾಪಸ್ ಆದ್ರಂತೆ
ಚೇರ್ಮನ್ರು: ಶೆಟ್ರಾ ಸಾಹೇಬ್ರು, ಬೆಲ್ಲದ್ ಅಣ್ಣೋರ್ಗೇ ಅಮಿತ್ ಶಾ ಟೇಂ ಕೊಟ್ರಂತೆ.
ಅಮಾಸೆ: ಹೌದೇಳಿ, ಇವ್ನ್ ಹೋದ್ರೆ ಗಪ್‌ಚುಪ್ ಅಂತೆ. ಆದ್ರೂ, ಸೀಟಿ ಅಣ್ಣೋರು ಬೆಂಗ್ಲೂರ್ ವಿಸಿಟ್‌ನಾಗೆ ಟು ಡೇಸ್ ಜತ್ಗೆ ಇದ್ರು ಬುಡಿ ಅಂತಾ ಕಿಂಡಲ್ ಮಾಡವ್ರೆ.
ಚೇರ್ಮನ್ರು: ರಿಯಲ್ ಇಸ್ಯಾ ಏನ್ಲಾ
ಅಮಾಸೆ: ರಾಜಾಹುಲಿ ಯಡ್ನೂರಪ್ನೊರು ಮೈ ಸನ್ ವಿಜಯೇಂದ್ರ ಬಾಹುಬಲಿ ಮಿನಿಸ್ಟ್ರೆ ಆಗ್ಬೇಕ್ ಇಲ್ಲಾಂದ್ರೆ ನಾನ್ ಸುಮ್ಗೆ ಇರಾಕಿಲ್ಲಾ ಅಂತಾ ವರಾತಾ ಮಾಡಿದ್ರಂತೆ. ಅತ್ಲಾಗೆ ಗೋಲ್‌ಗುಂಬಜ್ ಎಕ್ಸ್‌ಪ್ರೆಸ್ ಬಿಜಾಪುರ್ ಯತ್ನಾಳ್ ಸಾಹೇಬ್ರು, ನನ್ ನಸೀಬ್‌ನಾಗೆ ರಾಜ್ ಯೋಗಾ ಐತೆ, ನೋಡ್ತಾ ಇರಿ, ಚೀಪ್ ಮಿನಿಸ್ಟ್ರೆ ಆದ್ರೂ ಆಗ್ಬೋದು ಅಂದ್ರಂತೆ. ಸಿಡಿ ಪ್ಲೆಯರ್ ಜಾರ್ಕಿಹೊಳಿ ಸಾವ್‌ಕಾರ್ರು, ಸೋಲ್ಜರ್ ಯೋಗೇಸ್ವರ್ ಅಣ್ಣೋರು ಡೆಲ್ಲಿನಾಗೆ ಜಾಂಡಾ ಊರಿದ್ರಂತೆ. ಹೊನ್ನಾಳ್ಳಿ ಹೋರಿ ರೇಣುಕಣ್ಣೋರು ನಂಕೂ ಬೇಕ್ ಅಂದ್ರಂತೆ.
ಚೇರ್ಮನ್ರು: ಅಂಗಾರೆ ರೀಸಪಲ್, ಎಕ್ಸ್‌ಪಾನ್ಸನ್ ಹೊಗೆ ಪ್ರೋಗ್ರಾಂನಾ
ಅಮಾಸೆ: ಅಂಗೇನಿಲ್ಲಾ ತಕ್ಕಳಿ. ಓಲ್ಡ್ ಅಂಡ್ ಸೀನಿಯರ್ಗೆ ಪಾಲ್ಟಿ ಬಿಲ್ಟ್ ಮಾಡೋಕ್ ಕಳ್ಸಿ ಯಂಗ್ ಬ್ಲಿಡ್‌ಗೆ ಅವ ಕಾಸಾ ಕೊಡ್ಬೇಕು ಅಂತಾ ಆಗೈತಂತೆ. ಸಿಎಂ, ಪಾಲ್ಟಿ ಪ್ರಸಿ ಡೆಂಟ್ ಇಬ್ರೂ ಚೇಂಜ್ ಆಯ್ತಾರೆ ಅಂತಾ ಸಮ್ ಲೀಡರ್ ಪುಂಗ್‌ತಾವ್ರೆ. ವಿಜಯೇಂದ್ರ ಬಾಹುಬಲಿ ಶಾರ್ಟ್‌ಲಿ ಮಿನಿಸ್ಟ್ರೆ ಆಯ್ತಾರೆ ಅಂತಾ ಪಸರ್ ಐತೆ.
ಚೇರ್ಮನ್ರು: ಬ್ರಿಗೇಡ್ ಈಸ್ವರಫ್ನೋರ್ ಯಾಕ್ಲಾ ಇಂಗ್ ತಗ್ಲಾಕ್ಕಂಡ್ರು
ಅಮಾಸೆ: ತಗ್ಲಾಕವ್ರೆ. ಇದಾನ್‌ಸೌದಾನಾಗೆ ಸಿವ್ ಕುಮಾರಣ್ಣೋರ್ ಮ್ಯಾಗೆ ಆವಾಜ್ ಹಾಕಾಗೆ ಗುನ್ನಾ ಗ್ಯಾರಂಟಿ ಆಗಿತ್ತಂತೆ. ಟೈಂ ನೋಡ್ಕಂಡ್ ಇಟ್ಟೇ ಬುಟ್ಟವ್ನೆ.
ಚೇರ್ಮನ್ರು:ಕುಮಾರಣ್ಣೋರೋ ಫುಲ್ ಜೋಶ್‌ನಾಗೆ ಅವ್ರೆ ಏನ್ಲಾ ಇಸ್ಯಾ
ಅಮಾಸೆ: ಇಬ್ರಾಹಿಮ್ಮು ಸಾಬ್ರು ತೆನೆ ಹೊರ್ತೀನಿ ಅಂದ್ಮೇಕೆ ಫುಲ್ ಜಾಡ್ಸ್‌ತಾವ್ರೆ. ಬಿಜೆಪಿ ಹೈಕ್ಲು ಇದಾಕ್ ಇಂಗಾತೂ ಅಂತಾ ಪರೇಸಾನ್ ಆಗವ್ರೆ
ಚೇರ್ಮನ್ರು: ಸಿದ್ರಾಮಣ್ಣೋರು ಯಾಕ್ಲಾ ಸೈಲಂಟಾಗವ್ರೆ
ಅಮಾಸೆ: ನೋಬಡಿ ಟಾಕಿಂಗ್ ಅಂತಾ ಡಿಕೆ ಸಿವ್ ಕುಮಾರಣ್ಣೋರು ಆವಾಜ್ ಹಾಕವ್ರಂತೆ. ಅದ್ಕೆ ಸುಮ್ಕಾಗವ್ರೆ.
ಚೇರ್ಮನ್ರು: ರಾಹುಲ್ ಎದ್ರುಗೇ ನಮ್ ಸ್ಟಾಂಡ್ ಕ್ಲಿಯರ್ ಇಲ್ಲಾಂತಾ ಹೇಳೇಬಿಟ್ರಂತೆ
ಅಮಾಸೆ: ಹೌದೇಳಿ, ನಾವ್ ಇಂಗೇ ಯಾರೋ ಏನೋ ತಿಳ್ಕೋತಾರೆ ಅಂತಾ ಸಾಫ್ಟ್ ಆಗಿದ್ರೆ ಇರೋರು ಕೈ ಬಿಡ್ತಾರೆ ಅಂತಾ ಹೇಳಿದ್ರು. ಅದ್ಕೆ ರಾಹುಲ್ ಅಣ್ಣೋರು ಸಿವ್ ಕುಮಾರಣ್ಣೋರ್ಗೆ ಡೋಂಟ್ ನೆಗ್‌ಲೆಕ್ಟ್ ಸಿದ್ದಾರಾಮ ಯ್ನಾಜಿ ಅಂತಾ ಹುಕುಂ ಮಾಡವ್ರಂತೆ.
ಚೇರ್ಮನ್ರು: ಕೈ ಪಾಲ್ಟಿ ನೆಕ್ಸ್ಟ್ ಎಲೆಕ್ಸನ್‌ನಾಗೆ ಗೆದ್ರೆ ನನ್ನೇ ಸಿಎಂ ಮಾಡ್ಬೇಕು ಅಂತಾ ಸಿದ್ರಾಮಣ್ಣೋರು ಹೇಳವ್ರಾ
ಅಮಾಸೆ: ಅಂಗಂತಾ ಹೇಳ್ಬೇಕು ಅಂತಾ ಸಿದ್ರಾಮಣ್ಣೋರು ಫಾಲೋಯರ್ ಹೇಳ್ತಾವ್ರೆ. ಸಿವ್‌ಕುಮಾರಣ್ಣೋರು ಸಿಎಂ ಡ್ರೀಮ್‌ನಾಗವ್ರೆ. ನೋಡುಮಾ ಏನಾಯ್ತದೋ ಅಂತಾ. ವಸಿ ಕೈಮಾ ತಕ್ಕಂಡು ಹಟ್ಟಿಗೋಯ್ತೀನಿ. ಆ ಡೋಸ್ ಅಂತೂ ಇಲ್ಲಾ ನಮ್ ಡೋಸ್ ಆದ್ರು ಪೋಟ್ಕಂತೀನಿ ಬತ್ತೀನಿ ಸಾ…
ಎಸ್.ಲಕ್ಷ್ಮಿನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.