Polling station ಗೊಂದಲವೇ? ಸ್ಕ್ಯಾನ್‌ ಮಾಡಿ ನೋಡಿ: ಉದಯವಾಣಿ ಸಂವಾದದಲ್ಲಿ ಸಿಇಒ ಮೀನಾ

ಲೋಕ ಸಮರ: ಮತದಾನ ಪ್ರಮಾಣ ಗುರಿ ಶೇ.72

Team Udayavani, Mar 8, 2024, 6:20 AM IST

1-wqewq-eq

ಬೆಂಗಳೂರು: ದೇಶದ 18ನೇ ಲೋಕಸಭೆ ಚುನಾವಣೆಗೆ ಮುಹೂರ್ತ ನಿಗದಿಗೆ ದಿನಗಣನೆ ಆರಂಭವಾಗಿದೆ. ಯಾವುದೇ ಕ್ಷಣದಲ್ಲೂ ಚುನಾವಣೆ ಘೋಷಣೆ ಯಾದರೂ ಅದಕ್ಕಾಗಿ ಚುನಾವಣ ಆಯೋಗ ಸರ್ವಸನ್ನದ್ಧವಾಗಿದ್ದು, ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡು ವೇಳಾಪಟ್ಟಿ ಪ್ರಕಟನೆಗೆ ಎದುರು ನೋಡುತ್ತಿದೆ ಎಂದು ಇಡೀ ಚುನಾವಣ ಪ್ರಕ್ರಿಯೆಯ “ಚಾಲಕ’ ಸ್ಥಾನದಲ್ಲಿರುವ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ಹೇಳಿದ್ದಾರೆ.

ಬೆಂಗಳೂರು “ಉದಯವಾಣಿ’ ಕಚೇರಿಯಲ್ಲಿ ಗುರುವಾರ ಏರ್ಪ ಡಿಸಿದ್ದ ವಿಶೇಷ “ಸಂವಾದ’ದಲ್ಲಿ ಪಾಲ್ಗೊಂಡು ಚುನಾವಣ ಪೂರ್ವ ಸಿದ್ಧತೆಗಳ ಕುರಿತು ಮಾಹಿತಿ ಹಂಚಿ ಕೊಂಡ ಅವರು, ತಮ್ಮ ಮುಂದಿ ರುವ ಸವಾಲುಗಳ ಬಗ್ಗೆಯೂ ಹೇಳಿ ಕೊಂಡರು. 2019ರ ಲೋಕಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಶೇ.68 ಆಗಿತ್ತು. ಈ ಬಾರಿ ಅದನ್ನು ಶೇ.72ಕ್ಕೆ ತಲುಪಿಸುವ ಗುರಿ ಇಟ್ಟುಕೊಳ್ಳಲಾಗಿದ್ದು, ಆ ದಿಸೆಯಲ್ಲಿ ಪ್ರಯತ್ನಗಳು ಸಾಗಿವೆ. ವಿಶೇಷವಾಗಿ ನಗರ ಪ್ರದೇಶದ ಮತದಾರರನ್ನು ಮತಗಟ್ಟೆಗೆ ಕರೆತರಲು ಹತ್ತು ಹಲವು ವಿನೂತನ ಕ್ರಮಗಳನ್ನು ಪರಿಚಯಿಸಲಾಗಿದೆ. ಚುನಾವಣ ಅಕ್ರಮಗಳನ್ನು ತಡೆಯಲು ನಾಗರಿಕರ ಹೆಚ್ಚಿನ ಸಹಭಾಗಿತ್ವವನ್ನು ಆಯೋಗ ಆಪೇಕ್ಷಿಸುತ್ತಿದೆ ಎಂದು ಮೀನಾ ಹೇಳಿದರು.

ಕ್ಯೂಆರ್‌ ಕೋಡ್‌

ಮತಗಟ್ಟೆ ಹುಡುಕಲು ಇದೇ ಮೊದಲ ಬಾರಿಗೆ ಚುನಾವಣ ಆಯೋಗ ಕ್ಯೂಆರ್‌ ಕೋಡ್‌ ಪರಿಚಯಿಸಿದೆ. ವಿಶೇಷವಾಗಿ ನಗರ ಪ್ರದೇಶದಮತದಾರರನ್ನು ಗಮನದಲ್ಲಿ ಇರಿಸಿ ಕೊಂಡು ಇದನ್ನು ಪರಿಚಯಿಸಲಾಗು ತ್ತಿದೆ ಎಂದು ರಾಜ್ಯ ಮುಖ್ಯ ಚುನಾ ವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ತಿಳಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಮತಗಟ್ಟೆಗೆ ತಲುಪಲು ಅಷ್ಟೊಂದು ಕಷ್ಟ ಆಗದು.ಆದರೆ ನಗರ ಪ್ರದೇಶದಲ್ಲಿ ಸಮಸ್ಯೆ ಇರುತ್ತದೆ. ವಿಶೇಷವಾಗಿ ಬೆಂಗಳೂರಿನ ಮತದಾರರು ಸ್ವಲ್ಪ ಅಡಚಣೆಯಾ ದರೂ ಮತಗಟ್ಟೆಗೆ ಬರುವುದಿಲ್ಲ. ಇದು ಮತದಾನದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಮತದಾನದ ಒಂದು ವಾರ ಮುನ್ನ ಆಯೋಗ
ದಿಂದ ಹಂಚಲಾಗುವ ಮತದಾರರ ಚೀಟಿ (ವೋಟರ್‌ ಸ್ಲಿಪ್‌)ಯಲ್ಲಿ ಕ್ಯುಆರ್‌ ಕೋಡ್‌ ಅಳವಡಿಸಲಾಗಿರುತ್ತದೆ. ಅದನ್ನು ಸ್ಕ್ಯಾನ್‌ ಮಾಡಿ ಮತಗಟ್ಟೆಯನ್ನು ಸುಲಭವಾಗಿ ತಲುಪಬಹುದು ಎಂದು ಮೀನಾ ಹೇಳಿದ್ದಾರೆ.

ಬೆಂಗಳೂರು ಸಹಿತ ರಾಜ್ಯದ 43 ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಈ ಕ್ಯೂಆರ್‌ ಕೋಡ್‌ ವ್ಯವಸ್ಥೆ ಜಾರಿಗೆ ತರಲಾ ಗುತ್ತಿದೆ. ಇತ್ತೀಚೆಗೆ ನಡೆದ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಪ್ರಾಯೋಗಿಕ ವಾಗಿ ಇದನ್ನು ಪರಿಚಯಿಸಲಾಗಿತ್ತು. ಇದೇ ಮೊದಲ ಬಾರಿಗೆ ಲೋಕಸಭೆ ಚುನಾವಣೆಯಲ್ಲಿ ಪೂರ್ಣ ಪ್ರಮಾಣ ದಲ್ಲಿ ಪರಿಚಯಿಸಲಾಗುತ್ತಿದೆ ಎಂದರು.

ಇವಿಎಂ ಗೊಂದಲ ಮುಗಿದ ಅಧ್ಯಾಯ
ಇವಿಎಂ ಗೊಂದಲ ಈಗ ಮುಗಿದ ಅಧ್ಯಾಯ. ಅದರ ತಾಂತ್ರಿಕ ಸಾಚಾತನ ಮತ್ತು ಪಾರದರ್ಶಕತೆ ಎಲ್ಲವೂ ಋಜುವಾತು ಆಗಿದೆ. ತಮಗೆ ತದ್ವಿರುದ್ಧ ಫ‌ಲಿತಾಂಶ ಬಂದಾಗ ಇವಿಎಂ ಬಗ್ಗೆ ದೂರುವುದು ಸಹಜ. ಈ ಬಾರಿ ಯಾವುದೇ ರಾಜಕೀಯ ಪಕ್ಷಗಳು ನೇರವಾಗಿ ದೂರು ನೀಡಿಲ್ಲ. ಇವಿಎಂ ವೇರ್‌ಹೌಸ್‌ನಿಂದ ಮತಗಟ್ಟೆಗೆ ಅವುಗಳನ್ನು ತರುವ ಪ್ರತೀ ಹಂತದಲ್ಲೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಉಪಸ್ಥಿತಿ ಕಡ್ಡಾಯವಿರುತ್ತದೆ. ಅವರ ಸಮ್ಮುಖದಲ್ಲೇ ಪ್ರಾಥಮಿಕ ಹಂತದ ಪರಿಶೀಲನೆ (ಎಫ್ಎಸ್‌ಎಲ್‌), ಅಣಕು ಮತದಾನ, ಯಾವ ಇವಿಎಂ ಯಾವ ಮತಗಟ್ಟೆಗೆ ಹೋಗಿದೆ ಎಂಬ ಪಟ್ಟಿ, ಅವುಗಳ ವಿಶೇಷ ನಂಬರ್‌ನ ಮಾಹಿತಿಯನ್ನು ರಾಜಕೀಯ ಪಕ್ಷಗಳಿಗೆ ಕೊಡಲಾಗುತ್ತದೆ ಎಂದು ಮೀನಾ ಹೇಳಿದ್ದಾರೆ.

ಈ ಬಾರಿಯ ಲೋಕಸಭೆ ಚುನಾವಣೆಗೆ ನಮಗೆ ಬೇಕಾಗುವ ಇವಿಎಂ, ವಿವಿಪ್ಯಾಟ್‌ಗಳನ್ನು ಸಜ್ಜುಗೊಳಿಸಲಾಗಿದೆ. ಹೆಚ್ಚುವರಿ ಶೇ. 125 ಇವಿಎಂಗಳನ್ನು ಹಾಗೂ ಹೆಚ್ಚುವರಿ ಶೇ. 135 ವಿವಿಪ್ಯಾಟ್‌ಗಳನ್ನು ಹೊಂದಿಸಿಕೊಳ್ಳಲಾಗಿದೆ. ಸಂಸತ್ತಿನಲ್ಲಿ ಕಾನೂನು ತಿದ್ದುಪಡಿ ತಂದು ಬ್ಯಾಲೆಟ್‌ ಪೇಪರ್‌ನಿಂದ ಇವಿಎಂ ಪರಿಚಯಿಸಲಾಗಿದೆ. ಹಳೆಯ ಪದ್ಧತಿಯೇ ಬೇಕೆಂದಾದರೆ ಅದು ಸಂಸತ್ತಿನಲ್ಲೇ ಆಗಬೇಕು ಎಂದು ಮೀನಾ ಸ್ಪಷ್ಟಪಡಿಸಿದರು.

ಭಾರತ ಚುನಾವಣ ಆಯೋಗ ಈ ಬಾರಿ ಚುನಾವಣೆಗೆ “ಚುನಾವಣ ಪರ್ವ ದೇಶದ ಗರ್ವ’ ಎಂದು ಘೋಷವಾಕ್ಯ ನೀಡಿದೆ. ಅದಕ್ಕೆ ಪೂರಕವಾಗಿ ಕ್ರಮಗಳನ್ನು ಕೈಗೊಳ್ಳ ಲಾಗುತ್ತಿದೆ. ಮತದಾರರ ಪಟ್ಟಿ ಪರಿ ಷ್ಕರಣೆ ಕಾರ್ಯ ಕಳೆದ ವರ್ಷದ ಆರಂಭದಿಂದಲೇ ನಡೆದಿತ್ತು. ಉಳಿದಂತೆ ಚುನಾವಣ ಸಿಬಂದಿಗೆ ತರ ಬೇತಿ, ಇವಿಎಂಗಳನ್ನು ಹೊಂದಿಸಿ ಕೊಳ್ಳುವುದು, 58,834 ಮತಗಟ್ಟೆ ಗಳನ್ನು ಸಿದ್ಧವಾಗಿಸುವ ಕೆಲಸ 6 ತಿಂಗಳಿಂದಲೇ ಆರಂಭವಾಗಿದೆ.

ಅಂತಿಮ ಮತದಾರರ ಪಟ್ಟಿ 2024ರ ಜ. 22ರಂದು ಪ್ರಕಟಿಸ ಲಾಗಿದೆ. ಅದನ್ನು ಕಾಲೋಚಿತ (ಅಪ್‌ಡೇಟ್‌)ಗೊಳಿಸುವ ಕಾರ್ಯ ನಿರಂತವಾಗಿ ನಡೆಯುತ್ತಿದೆ. ಇದು ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕದ 10 ದಿನಗಳ ಮುಂಚಿನ ವರೆಗೆ ನಡೆಯಲಿದೆ. ಅಂತಿಮ ಪಟ್ಟಿ ಪ್ರಕಾರ ಸದ್ಯ 5.40 ಕೋಟಿ ಮತದಾರರಿದ್ದಾರೆ. 3 ವರ್ಷಗಳಿಂದ ಒಂದೇ ಜಿಲ್ಲೆಯಲ್ಲಿದ್ದ ಮತ್ತು ತವರು ಜಿಲ್ಲೆಯಲ್ಲಿದ್ದ ಅಧಿಕಾರಿಗಳನ್ನು ವರ್ಗಾಯಿಸಲಾಗಿದೆ. ಚುನಾವಣ ನೀತಿ ಸಂಹಿತೆ ಜಾರಿ ತಂಡಗಳನ್ನು ರಚಿಸಲಾಗಿದೆ. ರಾಜ್ಯದಲ್ಲಿ ಮುಕ್ತ ಹಾಗೂ ಪಾರದರ್ಶಕ ಚುನಾವಣೆ ನಡೆಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಒಂದೇ ಹಂತದ ಚುನಾವಣೆ?
ವೇಳಾಪಟ್ಟಿ ಪ್ರಕಟಿಸುವುದು ಹಾಗೂ ಚುನಾವಣೆಯ ಹಂತಗಳನ್ನು ನಿರ್ಧರಿಸುವುದು ಭಾರತ ಚುನಾವಣ ಆಯೋಗದ ಪರಮಾಧಿಕಾರ. ವೇಳಾಪಟ್ಟಿ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಗಳು ಹರಿದಾಡುತ್ತಿವೆ. ಆದರೆ ಅದು ನಿಜವಲ್ಲ. 2014ರಲ್ಲಿ ರಾಜ್ಯದಲ್ಲಿ ಒಂದೇ ಹಂತದಲ್ಲಿ ಹಾಗೂ 2019ರಲ್ಲಿ ಎರಡು ಹಂತಗಳಲ್ಲಿ ನಡೆದಿತ್ತು. ಈ ಬಾರಿ ಒಂದೇ ಹಂತದ ಚುನಾವಣೆ ನಡೆಸುವಂತೆ ರಾಜಕೀಯ ಪಕ್ಷಗಳು ಮನವಿ ಮಾಡಿಕೊಂಡಿವೆ. ಅದನ್ನು ಭಾರತ ಚುನಾವಣ ಆಯೋಗದ ಗಮನಕ್ಕೆ ತರಲಾಗಿದೆ. ಅಂತಿಮವಾಗಿ ಆಯೋಗ ತೀರ್ಮಾನಿಸಲಿದೆ ಎಂದು ಮೀನಾ ಸ್ಪಷ್ಟಪಡಿಸಿದರು.

ಅಕ್ರಮ ಕಣ್ಣಿಗೆ ಬಿದ್ದರೆ, ಫೋಟೋ ತೆಗೆದು ಹಾಕಿ
ನ್ಯಾಯಸಮ್ಮತ ಚುನಾವಣೆಗಾಗಿ ನಾಗರಿಕರು ಕೈ ಜೋಡಿಸಬೇಕು. ಸಿ-ವಿಜಿಲ್‌ ಎಂಬ ಆ್ಯಪ್‌ ಇದ್ದು, ಚುನಾವಣ ಅಕ್ರಮ ಕಣ್ಣಿಗೆ ಬಿದ್ದರೆ ಫೋಟೋ/ ವೀಡಿಯೋ ಮಾಡಿ ಅಪ್‌ಲೋಡ್‌ ಮಾಡಬಹುದು. ಯಾರು ಅಪ್‌ಲೋಡ್‌ ಮಾಡುತ್ತಾರೋ ಅವರ ಹೆಸರು, ಭಾವಚಿತ್ರ ಅಥವಾ ದೂರವಾಣಿ ಸಂಖ್ಯೆ ಗೌಪ್ಯವಾಗಿರಲಿದೆ. ಫೋಟೋ ಅಥವಾ ವೀಡಿಯೋ ಅಪ್‌ಲೋಡ್‌ ಆದ 100 ನಿಮಿಷಗಳ ಒಳಗಾಗಿ ಫ್ಲೈಯಿಂಗ್‌ ಸ್ಕ್ವಾಡ್‌ ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸುತ್ತದೆ ಎಂದು ಸಿಇಒ ಮನೋಜ್‌ ಕುಮಾರ್‌ ಮೀನಾ ಅವರು ತಿಳಿಸಿದರು.

ತಲಾ 95 ಲ.ರೂ. ಚುನಾವಣ ವೆಚ್ಚ ನಿಗದಿ
ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಯು ಗರಿಷ್ಠ 95 ಲಕ್ಷ ರೂ.ಗಳನ್ನು ಚುನಾವಣೆಗಾಗಿ ಖರ್ಚು ಮಾಡಲು ನಿಗದಿಪಡಿಸಲಾಗಿದೆ. ಅದಕ್ಕೂ ಮೀರಿ ಖರ್ಚು ಮಾಡುವಂತಿಲ್ಲ.

ಸಾಮಾಜಿಕ ಜಾಲತಾಣ, ಮಾಧ್ಯಮಗಳ ಮೇಲೂ ಕಣ್ಣು
ಜಾಲತಾಣದಲ್ಲಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದರೆ, ಅದಕ್ಕೆ ಹಣ ಖರ್ಚು ಮಾಡುತ್ತಿದ್ದರೆ, ಅಭ್ಯರ್ಥಿಯ ಚುನಾವಣ ವೆಚ್ಚದಡಿ ಸೇರಿಸಲಾಗುತ್ತದೆ. ಅಂತಹ ಜಾಲತಾಣದ ಮೇಲೂ ಕ್ರಮ ಜರಗಿಸಲಾಗುತ್ತದೆ. ಯಾರದ್ದಾದರೂ ವಿರುದ್ಧ ಅಪಪ್ರಚಾರ ಮಾಡುತ್ತಿದ್ದರೆ ಕ್ರಮ ಕೈಗೊಳ್ಳಲಾಗುತ್ತದೆ. ದ್ವೇಷ ಹುಟ್ಟಿಸುವ ಭಾಷಣಗಳ ಬಗ್ಗೆಯೂ ನಿಗಾ ಇಡಲಾಗುತ್ತದೆ. ಕಾಸಿಗಾಗಿ ಸುದ್ದಿ ಪ್ರಕಟಿಸುವ ಮಾಧ್ಯಮಗಳ ಮೇಲೂ ಕಣ್ಣಿಡಲಾಗುತ್ತದೆ.

ಲೋಕಸಭಾ ಚುನಾವಣೆ ಇನ್ನೂ ಘೋಷಣೆ ಆಗಿಲ್ಲ. ಜನರಿಗೆ ಹೇಗೆ ಬೇಕಿದ್ದರೂ ಆಮಿಷವೊಡ್ಡಬಹುದು ಎಂಬ ಯೋಚನೆ ಮಾಡಬೇಡಿ. ಚುನಾವಣೆಗೆ ಮುನ್ನ ದೂರುಗಳು ಬಂದರೆ ಮ್ಯಾಜಿಸ್ಟ್ರೇಟ್‌ ಅನುಮತಿ ಪಡೆದು ಕ್ರಮ ಜರಗಿಸುತ್ತೇವೆ.

ಟಾಪ್ ನ್ಯೂಸ್

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

1-dm

Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

1-dm

Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ

Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.