ಕಲೆ, ವಾಣಿಜ್ಯಕ್ಕೂ ಪ್ರಾಯೋಗಿಕ ತರಗತಿ?

ಲಿಖಿತ, ಆಂತರಿಕ ಅಂಕಗಳ ಹೊಸ ಪದ್ಧತಿ; ಸರಕಾರದ ಸ್ಪಂದನೆ ಸಾಧ್ಯತೆ

Team Udayavani, Jul 4, 2023, 7:40 AM IST

ಕಲೆ, ವಾಣಿಜ್ಯಕ್ಕೂ ಪ್ರಾಯೋಗಿಕ ತರಗತಿ?

ಬೆಂಗಳೂರು: ಇದುವರೆಗೆ ವಿಜ್ಞಾನ ವಿದ್ಯಾರ್ಥಿಗಳಿಗಷ್ಟೇ ಸೀಮಿತವಾಗಿದ್ದ 30 ಅಂಕಗಳ ಪ್ರಾಯೋಗಿಕ ಪರೀಕ್ಷೆ ಇನ್ನು ಮುಂದೆ ಪಿಯುಸಿಯ ಕಲಾ, ವಾಣಿಜ್ಯ ಸಹಿತ ಎಲ್ಲ ವಿಭಾಗಗಳಿಗೂ ಅನ್ವಯವಾಗಲಿದೆ. ಪಿಯುಸಿಯಲ್ಲಿ ಲಿಖಿತ ಮತ್ತು ಆಂತರಿಕ ಅಂಕಗಳನ್ನು ಪರಿಗಣಿಸುವ 80:20 ಮಾದರಿಯ ಹೊಸ ಪರೀಕ್ಷಾ ವ್ಯವಸ್ಥೆ ಜಾರಿಗೆ ಸರಕಾರ ಮುಂದಾಗಿದೆ.

ವಿಜ್ಞಾನದಲ್ಲಿ ಈಗಾಗಲೇ 70:30ರ ಮಾದರಿಯ ಪರೀಕ್ಷಾ ವ್ಯವಸ್ಥೆ ಜಾರಿಯಲ್ಲಿದೆ. ಕಲಾ ಮತ್ತು ವಾಣಿಜ್ಯ ವಿಭಾಗಗಳಿಗೆ ಇದೇ ಮಾದರಿಯಲ್ಲಿ 80:20 ಅಂಕ ಹಂಚುವ ಬಗ್ಗೆ ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ಸರಕಾರದ ಮಟ್ಟದಲ್ಲಿ ಗಂಭೀರ ಚಿಂತನೆ ನಡೆದಿದೆ. ಈ ಬಗ್ಗೆ ಇಲಾಖೆ ಈಗಾಗಲೇ ತನ್ನ ಅಭಿಪ್ರಾಯ ಸಲ್ಲಿಸಿದ್ದು, ಸರಕಾರ ಸಕಾರಾತ್ಮಕವಾಗಿ ಸ್ಪಂದಿಸುವ ನಿರೀಕ್ಷೆಯನ್ನು ಮೂಲಗಳು ವ್ಯಕ್ತಪಡಿಸಿಸಿವೆ.

ರಾಜ್ಯವು ಪಿಯುಸಿಯಲ್ಲಿ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್‌ (ಎನ್‌ಸಿಇಆರ್‌ಟಿ)ನ ಪಠ್ಯಕ್ರಮವನ್ನು ಅಳವಡಿಸಿಕೊಂಡಿದ್ದು, ಅದರಂತೆ ಗಣಿತ, ಭೌತಶಾಸ್ತ್ರ, ಜೀವಶಾಸ್ತ್ರ, ರಸಾಯನಶಾಸ್ತ್ರ, ಪಠ್ಯ ಚಟುವಟಿಕೆಗಳು ನಡೆಯುತ್ತಿವೆ.ಎನ್‌ಸಿಇಆರ್‌ಟಿ ಪಠ್ಯಕ್ರಮ ಅಳವಡಿಸಿ ಕೊಂಡಿ ರುವ ಬಹುತೇಕ ರಾಜ್ಯಗಳಲ್ಲಿ ಗಣಿತದಲ್ಲಿಯೂ ಪ್ರಾಯೋಗಿಕ ಯಾ ಆಂತರಿಕ ಅಂಕ ಪದ್ಧತಿ ಜಾರಿಯಲ್ಲಿದೆ.

ಆದರೆ ಹಲವು ಶಿಕ್ಷಣ ಕ್ರಾಂತಿಗಳ ತವರಾಗಿರುವ ಕರ್ನಾಟಕ ಈ ಪದ್ಧತಿ ಅನುಸರಿಸಲು ಹಿಂದೇಟು ಹಾಕುತ್ತಿದೆ. ಗಣಿತಕ್ಕೆ ಪ್ರಾಯೋಗಿಕ ಪರೀಕ್ಷೆ ನಡೆಸಲು ಮುಂದಾದರೆ ಅದಕ್ಕೆ ತಕ್ಕಂತೆ ಕಾಲೇಜುಗಳಲ್ಲಿ ಪ್ರಯೋಗಾಲಯ ನಿರ್ಮಿಸಲು ಹಣದ ಸಮಸ್ಯೆ ಆಗುತ್ತದೆ ಎಂಬುದು ಇದಕ್ಕೆ ಕಾರಣ ಎನ್ನಲಾಗಿದೆ. ಗಣಿತಕ್ಕೂ ಪ್ರಾಯೋಗಿಕ ಪರೀಕ್ಷೆ ಇರಬೇಕು ಎಂಬ ಒತ್ತಾಯ ಶಿಕ್ಷಣ ತಜ್ಞರು, ಶಿಕ್ಷಕರಿಂದ ಹಲವು ಬಾರಿ ಕೇಳಿಬಂದಿತ್ತು. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಪಿಯು ಗಣಿತ ಮಂಡಳಿ 2019ರಲ್ಲೇ ಹಲವು ರಾಜ್ಯಗಳ ಪರೀಕ್ಷಾ ಕ್ರಮಗಳ ಅಧ್ಯಯನ ನಡೆಸಿ 70:30 ಮಾದರಿಯಲ್ಲಿ ಗಣಿತ ಪರೀಕ್ಷೆ ನಡೆಸುವಂತೆ ವರದಿ ಮತ್ತು ಮನವಿ ಸಲ್ಲಿಸಿತ್ತು. ಉಳಿದ ವಿಜ್ಞಾನ ವಿಷಯಗಳ ಮಾದರಿಯಲ್ಲಿ ಗಣಿತ ಮತ್ತು ಕಲಾ, ವಾಣಿಜ್ಯ ವಿಷಯಗಳಿಗೆ 70:30 ಮಾದರಿ ಅಳವಡಿಸಲು ಸರಕಾರ ಆಸಕ್ತಿ ತೋರಿಲ್ಲ. ಬದಲಾಗಿ 80:20 ಮಾದರಿ ಜಾರಿಗೆ ಒಲವು ತೋರಿದೆ.

20 ಅಂಕಗಳ ಹಂಚಿಕೆ ಹೇಗೆ?
ಮೊದಲ ಮತ್ತು ಎರಡನೇ ಪರೀಕ್ಷೆ ತಲಾ 40 ಅಂಕಗಳು ಮತ್ತು ಮಧ್ಯವಾರ್ಷಿಕ ಪರೀಕ್ಷೆ 80 ಅಂಕ ಗಳಿಗೆ ನಡೆಸಬೇಕು. ಮೊದಲ ಪರೀಕ್ಷೆ ಮತ್ತು ಮಧ್ಯ ವಾರ್ಷಿಕ ಅಥವಾ ಮಧ್ಯವಾರ್ಷಿಕ ಮತ್ತು ಎರಡನೇ ಪರೀಕ್ಷೆ ಇವುಗಳಲ್ಲಿ ಒಂದು ಜತೆಯನ್ನು ಆರಿಸಿ ಕೊಂಡು ಅವುಗಳ ಒಟ್ಟು ಅಂಕವಾದ 120ನ್ನು ಹತ್ತು ಅಂಕಗಳಿಗೆ ಪರಿವರ್ತಿಸಬೇಕು. ಎನ್‌ಸಿಇಆರ್‌ಟಿಯ ಪ್ರಯೋ ಗಾಲಯ ಕೈಪಿಡಿ ನೀಡಿರುವ ಯಾವು ದಾದರೂ ಹತ್ತು ಚಟುವಟಿಕೆಗಳನ್ನು ನಡೆಸ ಬೇಕಿದ್ದು, ಇದಕ್ಕೆ ಉಳಿದ ಹತ್ತು ಅಂಕಗಳನ್ನು ಮೀಸಲಿರಿಸ ಲಾಗುತ್ತದೆ. ಚಟುವಟಿಕೆ ಮತ್ತು ರೆಕಾರ್ಡ್ಸ್‌ಗೆ 5 ಅಂಕ, ಪ್ರಸ್ತುತ ಪಡಿಸುವಿಕೆಗೆ 3 ಅಂಕ ಮತ್ತು ಎರಡು ವೈವಾಕ್ಕೆ ತಲಾ ಒಂದು ಅಂಕ ನಿಗದಿ ಪಡಿಸಲಾಗಿದೆ.

ಈಗಾಗಲೇ ಎಂಜಿನಿಯರಿಂಗ್‌ ಮತ್ತು ಡಿಪ್ಲೊಮಾದಲ್ಲಿ ಗಣಿತ ಪ್ರಾಯೋಗಿಕ ಪರೀಕ್ಷೆ ಇದೆ. ದೇಶದ ಬಹುತೇಕ ಎಲ್ಲೆಡೆ ಪಿಯುಸಿಯಲ್ಲಿ ಗಣಿತಕ್ಕೆ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದೆ. ಈ ವರ್ಷದಿಂದ ಪದವಿಪೂರ್ವದಲ್ಲಿ ಗಣಿತ ಸೇರಿದಂತೆ ಎಲ್ಲ ವಿಷಯಗಳಲ್ಲಿ ಲಿಖಿತ ಪರೀಕ್ಷೆಯ ಜತೆ ಪ್ರಾಯೋಗಿಕ ಅಥವಾ ಆಂತರಿಕ ಪರೀಕ್ಷೆ ನಡೆಸಬೇಕು ಎಂಬುದು ನಮ್ಮ ಒತ್ತಾಯ.
– ಎಸ್‌.ಆರ್‌. ವೆಂಕಟೇಶ್‌,
ಕರ್ನಾಟಕ ರಾಜ್ಯ ಗಣಿತ ಮಂಡಳಿ ಅಧ್ಯಕ್ಷ

ಪಿಯುಸಿಯಲ್ಲಿ ಗಣಿತ, ಕಲಾ ಮತ್ತು ವಾಣಿಜ್ಯ ವಿಷಯಗಳ ಪರೀಕ್ಷೆಯನ್ನು 70:30 ಅಥವಾ 80:20 ಮಾದರಿಯಲ್ಲಿ ನಡೆಸಬೇಕು ಎಂಬ ಪ್ರಸ್ತಾವನೆ ಈಗಾಗಲೇ ಸರಕಾರದ ಮುಂದಿದೆ. ಹಲವು ರಾಜ್ಯಗಳಲ್ಲಿ ವಾರ್ಷಿಕ ಪರೀಕ್ಷೆ 70 ಅಥವಾ 80 ಅಂಕಗಳಿಗೆ ನಡೆಯುತ್ತಿದೆ. ಸರಕಾರ ತನ್ನ ನಿರ್ಧಾರ ಪ್ರಕಟಿಸಿದ ತತ್‌ಕ್ಷಣವೇ ಅದನ್ನು ಜಾರಿಗೊಳಿಸಲು ನಾವು ಸಿದ್ಧರಿದ್ದೇವೆ.
– ಸಿಂಧೂ ರೂಪೇಶ್‌,
ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು.

-ರಾಕೇಶ್‌ ಎನ್‌.ಎಸ್‌.

ಟಾಪ್ ನ್ಯೂಸ್

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

CT-Ravi-BJP

Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ

BJP 2

BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?

1-srrrr

English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

7

Malpe: ಮನೆ ಮನೆಗಳಲ್ಲಿ ಕ್ಯಾರೋಲ್‌ ಗಾಯನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

6

Mangaluru: ಕ್ರಿಸ್ಮಸ್‌ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.