Prajwal Revanna Case ಸಹಾಯವಾಣಿ ಇದ್ದರೂ ದೂರಿಗೆ ನಕಾರ!
ಅಶ್ಲೀಲ ವೀಡಿಯೋ: ಸಹಾಯವಾಣಿಗೆ ಓರ್ವ ಸಂತ್ರಸ್ತೆಯಿಂದಷ್ಟೇ ದೂರು
Team Udayavani, Sep 16, 2024, 7:15 AM IST
ಬೆಂಗಳೂರು: ಹಾಸನದ ಅಶ್ಲೀಲ ವೀಡಿಯೋ ವೈರಲ್ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ತೆರೆದಿದ್ದ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಲು ಸಂತ್ರಸ್ತೆಯರು ಹಿಂದೇಟು ಹಾಕಿದ್ದಾರೆ.
ಹತ್ತಾರು ಮಹಿಳೆ ಯರ ಜತೆಗಿರುವ ನೂರಾರು ಖಾಸಗಿ ವೀಡಿಯೋ ವೈರಲ್ ಆಗಿರುವ ಆರೋಪ ಕೇಳಿ ಬಂದಿದ್ದರೂ ಪ್ರಜ್ವಲ್ ವಿರುದ್ಧ ಇದುವರೆಗೆ ದೂರು ನೀಡಿದ್ದು ಒಟ್ಟು ಕೇವಲ ನಾಲ್ವರು ಮಹಿಳೆಯರು ಮಾತ್ರ!
ಎಸ್‌ಐಟಿ ತೆರೆದಿದ್ದ ಸಹಾಯವಾಣಿಗೆ ಮೊದಲ ಒಂದು ವಾರದಲ್ಲಿ ಮೇಲಿಂದ ಮೇಲೆ ಕರೆಗಳು ಬರಲಾರಂಭಿಸಿದ್ದು, ಸಲಹೆ ನೀಡಲಷ್ಟೇ ಸೀಮಿತವಾಗಿತ್ತು. ಇತ್ತ ತನಿಖಾಧಿಕಾರಿಗಳು ನಿರ್ಭೀತಿಯಿಂದ ದೂರು ನೀಡಿ ಎಂದ ಕೂಡಲೇ ಅತ್ತ ಕರೆ ಕಡಿತಗೊಳಿಸುತ್ತಿದ್ದರು. ಸಹಾಯವಾಣಿ ಮೂಲಕ ಇದುವರೆಗೆ ಓರ್ವ ಮಹಿಳೆ ಯಷ್ಟೇ ಪ್ರಜ್ವಲ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿ ದೂರು ನೀಡಿದ್ದಾರೆ.
ಸಹಾಯವಾಣಿಯೂ ಸ್ವಿಚ್ ಆಫ್!
ನೂರಾರು ಅಶ್ಲೀಲ ವೀಡಿಯೋಗಳು ವೈರಲ್ ಆಗಿವೆ ಎಂಬ ಸುದ್ದಿ ಬಿರುಗಾಳಿಯಂತೆ ಹರಿದಾಡಿದರೂ ಇದುವರೆಗೆ ಕೇವಲ ನಾಲ್ವರು ಮಹಿಳೆಯರಷ್ಟೇ ಪ್ರಜ್ವಲ್ ವಿರುದ್ಧ ಕೊಟ್ಟ ದೂರುಗಳ ಆಧಾರದಲ್ಲಿ 4 ಪ್ರತ್ಯೇಕ ಎಫ್ಐಆರ್ ದಾಖಲಾಗಿವೆ. ಸದ್ಯ ಸಹಾಯವಾಣಿ ನಂಬರ್ ಕೂಡ ಸ್ವಿಚ್ ಆಫ್ ಆಗಿದೆ.
ತನಿಖಾಧಿಕಾರಿಗಳು ಹತ್ತಾರು ಮಹಿಳೆಯರು ದೂರು ನೀಡಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಮುಜುಗರಕ್ಕೊಳಗಾಗಿ ದೂರು ನೀಡದಿದ್ದಾಗ ಸ್ವತಃ ಎಸ್‌ಐಟಿ ತನಿಖಾಧಿಕಾರಿಗಳೇ ವೀಡಿಯೋದಲ್ಲಿರುವ ಮಹಿಳೆಯರ ಮುಖಚಹರೆ ಪತ್ತೆ ಹಚ್ಚಿ ಗೌಪ್ಯವಾಗಿ ಸಂಪರ್ಕಿಸಿ ಪ್ರಶ್ನಿಸಲು ಮುಂದಾಗಿದ್ದರು. ಇನ್ನು ಕೆಲವು ಸರ್ಕಾರಿ ನೌಕರಿಯಲ್ಲಿದ್ದ ಮಹಿಳೆಯರಿಗೆ ನೋಟಿಸ್ ಕಳುಹಿಸಲಾಗಿತ್ತು. ಆದರೆ ಈ ಪೈಕಿ ಬಹುತೇಕ ಮಹಿಳೆಯರು ತಾವು ಸ್ವ ಇಚ್ಛೆಯಿಂದಲೇ ಲೈಂಗಿಕ ಸಂಪರ್ಕ ಹೊಂದಿರುವುದಾಗಿ ಹೇಳಿ ಪ್ರಕರಣದಿಂದ ನುಣುಚಿಕೊಂಡು ತಮ್ಮ ಹೆಸರು ಮುನ್ನೆಲೆಗೆ ಬಾರದಂತೆ ಎಚ್ಚರಿಕೆ ವಹಿಸಿದ್ದಾರೆ. ಇನ್ನು ಕೆಲವು ಮಹಿಳೆಯರು ಮುಜುಗರಕ್ಕೆ ಒಳಗಾಗಿ ತನಿಖಾಧಿಕಾರಿಗಳ ಮುಂದೆ ದಯವಿಟ್ಟು ನಮ್ಮ ಬಳಿ ಬರಬೇಡಿ ಎಂಬಿತ್ಯಾದಿ ಹೇಳಿಕೆ ಕೊಟ್ಟು ಪ್ರಕರಣದಿಂದ ದೂರ ಉಳಿದಿದ್ದಾರೆ ಎಂದು ತಿಳಿದು ಬಂದಿದೆ.
4ನೇ ಪ್ರಕರಣದ
ತನಿಖೆ ಯಾವ ಹಂತದಲ್ಲಿದೆ?
ಪ್ರಜ್ವಲ್ ಲೈಂಗಿಕ ಕಿರುಕುಳ ನೀಡಿರುವುದಾಗಿ ಸಹಾಯವಾಣಿ ಮೂಲಕ ಸಂತ್ರಸ್ತೆ ನೀಡಿರುವ ದೂರಿನ ಆಧಾರದ ಮೇಲೆ ಎಸ್‌ಐಟಿಯು ಐಪಿಸಿ ಸೆಕ್ಷನ್ 354ರಡಿ ದಾಖಲಿಸಿಕೊಂಡ ಪ್ರಕರಣದಲ್ಲಿ ಲೈಂಗಿಕ ಕಿರುಕುಳ ನೀಡಿರುವ ವೀಡಿಯೋ, ಸಂತ್ರಸ್ತೆಯ ಹೇಳಿಕೆ, ಸಿಡಿಆರ್ ಮೂಲಕ ಆಕೆಯ ಜತೆಗೆ ಮೊಬೈಲ್‌ನಲ್ಲಿ ನಡೆಸಿ ರುವ ಸಂಭಾಷಣೆ ದಾಖಲಿಸಿಕೊಳ್ಳಲಾಗಿದೆ. ಶೀಘ್ರದಲ್ಲೇ ಈ ಪ್ರಕರಣದಲ್ಲೂ ದೋಷಾರೋಪ ಪಟ್ಟಿ ಸಲ್ಲಿಸಲು ಎಸ್‌ಐಟಿ ಸಿದ್ಧತೆ ನಡೆಸಿದೆ. ಒಂದೇ ಅಶ್ಲೀಲ ವೀಡಿಯೋದ ಹಲವು ತುಣುಕು ವೈರಲ್ ಮಾಡಿರುವ ಆರೋಪವೂ ಕೇಳಿಬಂದಿದೆ. ಇದನ್ನು ಹೊರತುಪಡಿಸಿ ವೀಡಿಯೋದಲ್ಲಿದ್ದಾರೆ ಎನ್ನಲಾದ ಬಹುತೇಕ ಮಹಿಳೆಯರು ದೂರು ನೀಡದ ಹಿನ್ನೆಲೆಯಲ್ಲಿ ವೈರಲ್ ಆಗಿರುವ ಇತರ ಅಶ್ಲೀಲ ವೀಡಿಯೋ ಗಳು ಗಣನೆಗೆ ಬರುವುದಿಲ್ಲ. ಹೀಗಾಗಿ ಎಸ್‌ಐಟಿ ತನಿಖೆಗೆ ಸ್ವಲ್ಪ ಹಿನ್ನಡೆಯಾಗಿದೆ.
“ಹಾಸನದ ಅಶ್ಲೀಲ ವೀಡಿಯೋ ಪ್ರಕರಣದಲ್ಲಿ ಸೂಕ್ತ ಸಾಕ್ಷ್ಯ ಕಲೆ ಹಾಕಿ ತನಿಖೆ ನಡೆಸಿದ್ದೇವೆ. ಅಶ್ಲೀಲ ವೀಡಿಯೋ ಸೆರೆಹಿಡಿದಿದ್ದಾರೆ ಎನ್ನಲಾದ ನೈಜ ಮೊಬೈಲ್ ಪತ್ತೆಯಾಗಿಲ್ಲ. ಸಹಾಯವಾಣಿಗೆ ಆರಂಭದಲ್ಲಿ ಕರೆಗಳು ಬಂದಿದ್ದವು.”
-ಬಿ.ಕೆ. ಸಿಂಗ್, ಎಸ್‌ಐಟಿ ತಂಡದ ಮುಖ್ಯಸ್ಥ
-ಅವಿನಾಶ್ ಮೂಡಂಬಿಕಾನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್ಸಿ ಸಿ.ಟಿ.ರವಿ
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.