Prajwal Revanna: ಪ್ರಜ್ವಲ್ ಶೀಘ್ರ ಬಂಧನ: ಡಾ| ಜಿ. ಪರಮೇಶ್ವರ್
Team Udayavani, May 2, 2024, 11:28 PM IST
ಕಲಬುರಗಿ: ಸಂಸದ ಪ್ರಜ್ವಲ್ ಎಸ್‌ಐಟಿ ಎದುರು ವಿಚಾರಣೆಗೆ ಹಾಜರಾಗಲು ತಮ್ಮ ವಕೀಲರ ಮೂಲಕ ಆರು ದಿನಗಳ ಕಾಲಾವಕಾಶ ಕೋರಿದ್ದಾರೆ. ಆದರೆ ಈ ಪ್ರಕರಣದಡಿ ಸೆಕ್ಷನ್ 41ಎ ಪ್ರಕಾರ ಕಾಲಾವಕಾಶ ನೀಡಲು ಸಾಧ್ಯವಿಲ್ಲ. ಹೀಗಾಗಿ ಪ್ರಜ್ವಲ್ ಅವರನ್ನು ಶೀಘ್ರವೇ ಬಂಧಿಸುವ ಸಾಧ್ಯತೆಗಳಿವೆ ಎಂದು ಗೃಹ ಸಚಿವ ಪರಮೇಶ್ವರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಆರೋಪಿತ ಮಾಜಿ ಸಚಿವ ಎಚ್.ಡಿ.ರೇವಣ್ಣ ವಿಚಾರಣೆಗೆ ಹಾಜರಾಗಲು ಒಪ್ಪಿಕೊಂಡಿದ್ದಾರೆ. ಒಂದು ವೇಳೆ ಅವರು ಹಾಜರಾಗದಿ ದ್ದರೆ ಅವರನ್ನು ಕೂಡ ಬಂಧಿ ಸಲಾಗುವುದು. ಪ್ರಜ್ವಲ್‌ಗೆ ಕೇಂದ್ರ ಸರಕಾರವೇ ಡಿಪ್ಲೊ ಮ್ಯಾಟಿಕ್ ಪಾಸ್ ಪೋರ್ಟ್ ನೀಡಿದೆ. ಹೀಗಾಗಿ ಅವರು ಸಲೀಸಾಗಿ ದೇಶ ಬಿಟ್ಟು ಹೋಗಿದ್ದಾರೆ. ಅಲ್ಲದೆ 40 ರಾಷ್ಟ್ರಗಳಲ್ಲಿ ಯಾವುದೇ ಅಡತಡೆ ಇಲ್ಲದೆ ಅವರು ಓಡಾಡಬಹುದು. ಹೀಗಾಗಿ ಅವರನ್ನು ಹಿಡಿದು ತರಲು ತಾಂತ್ರಿಕ ತೊಂದರೆ ಎದುರಾಗ ಬಹುದು. ಆದ್ದರಿಂದ ಸಿಎಂ ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್ ರದ್ದುಪಡಿಸುವಂತೆ ಪ್ರಧಾನಿಗೆ ಪತ್ರ ಬರೆದಿದ್ದಾರೆ ಎಂದರು.
ಇನ್ನೊಬ್ಬ ಮಹಿಳೆಯಿಂದ ದೂರು:
ಒಬ್ಬ ಮಹಿಳೆ ದೂರು ನೀಡಿದ್ದರಿಂದ ಇವತ್ತು ತನಿಖೆ ಈ ಹಂತಕ್ಕೆ ತಲುಪಿದೆ. ಈಗ ಇನ್ನೊಬ್ಬ ಮಹಿಳೆಯೂ ದೂರು ನೀಡಿದ್ದಾರೆ. ದೂರುದಾರರಿಬ್ಬರ ಕುಟುಂಬದ ರಕ್ಷಣೆ ಸರಕಾರದ ಹೊಣೆ. ಅವರಿಗೆ ಸೂಕ್ತ ಭದ್ರತೆ ನೀಡಲಾಗುವುದು. ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್.ಯಡಿಯೂರಪ್ಪ ಭವಿಷ್ಯ
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.