ತಾಜ್ ಮಹಲ್ ಅಲ್ಲ, ಈಶ್ವರನ ತೇಜೋ ಮಹಾಲಯ: ಮುತಾಲಿಕ್
Team Udayavani, May 12, 2022, 10:00 PM IST
ಬಾಗಲಕೋಟೆ: ಉತ್ತರ ಪ್ರದೇಶದ ಆಗ್ರಾದಲ್ಲಿರುವ ತಾಜ್ ಮಹಲ್ ಅದು ನಿಜವಾಗಿ ಈಶ್ವರನ ತೇಜೋ ಮಹಾಲಯ. ಈ ಕುರಿತು ತನಿಖೆಯಾಗಬೇಕು. ಕಳೆದ 25 ವರ್ಷಗಳ ಹಿಂದೆ ಪಿ.ಎನ್. ವೋಕ್ ಎಂಬುವವರು ಈ ಎಲ್ಲ ದಾಖಲೆ ಸಮೇತ ಪುರಾವೆ ಒದಗಿಸಿದ್ದಾರೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ಹೇಳಿದರು.
ಬಾದಾಮಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿ.ಎನ್.ವೋಕ್ ಅವರು ತಾಜ್ ಮಹಲ್ ಅಲ್ಲ, ಅದು ತೇಜೋ ಮಹಾಲಯ ಎಂಬುದನ್ನು ಆಗಲೇ ತಿಳಿಸಿದ್ದರು. ತೇಜೋ ಮಹಾಲಯದ ಹೆಸರು ತೆಗೆದು ತಾಜ್ ಮಹಲ್ ಎಂದು ಬದಲಿಸಲಾಗಿದೆ. ಶಹಜಾನ್ ಪತ್ನಿಯ ಸಮಾಧಿ ಬೇರೆ ಕಡೆ ಇದೆ. ಒಂದು ಕಡೆ ಕಟ್ಟು ಕಥೆಗಳನ್ನು ಸೃಷ್ಟಿಸಿ ವಿಷ್ಣು ಸ್ತಂಭವನ್ನು ಕುತುಬ್ ಮಿನಾರ್ ಎಂದು ಹೇಳುತ್ತಾರೆ. ಸರ್ಕಾರ ತಾಜ್ ಮಹಲ್ ಅಲ್ಲ, ಅದು ತೇಜೋ ಮಹಾಲಯ ಎಂದು ಜಗತ್ತಿಗೆ ತಿಳಿಸಿಕೊಡಲು ತನಿಖೆ ಮಾಡಬೇಕು ಎಂದರು.
ರಾಜ್ಯದಲ್ಲಿ ಮತಾಂತರ ಕಾಯ್ದೆ ಕಡ್ಡಾಯವಾಗಿ ಜಾರಿಗೆ ಬರಬೇಕು. ಬಿಜೆಪಿ ಸರ್ಕಾರಕ್ಕೆ ಹಿಂದೂ ಪರ ಸಂಘಟನೆಗಳು ಬೇಕಾದರೆ ಅವರ ಬೇಡಿಕೆ ಈಡೇರಿಸಬೇಕು. ರಾಜ್ಯದೆಲ್ಲೆಡೆ ಅನಧಿಕೃತವಾಗಿ ನಿರ್ಮಾಣ ಮಾಡಲಾಗಿರುವ ಚರ್ಚಗಳನ್ನು ಜೆಸಿಬಿ ಮೂಲಕ ತೆಗೆದು ಹಾಕಬೇಕು. ಅದನ್ನು ಸುಗ್ರೀವಾಜ್ಞೆ ಮೂಲಕ ಸರ್ಕಾರ ಮಾಡಬೇಕು. ಅದಕ್ಕೆ ಹಿಂದೂಪರ ಸಂಘಟನೆಗಳು ಸಂಪೂರ್ಣವಾಗಿ ಬೆಂಬಲಿಸುತ್ತವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
CID ನೂತನ ಡಿಐಜಿಪಿ ಆಗಿ ಶಾಂತನು ಸಿನ್ಹಾ
Guarantee schemes; ಸಿದ್ದರಾಮಯ್ಯ ವಿರುದ್ಧದ ಅರ್ಜಿ: ವಿಚಾರಣೆ ಡಿ. 6ಕ್ಕೆ ಮುಂದೂಡಿಕೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.