ಪ್ರವೀಣ್ ನೆಟ್ಟಾರು ಪ್ರಕರಣದ ಆರೋಪಿ: ಹಿಟ್ ಸ್ಕ್ವಾಡ್’ನ ಕರ್ನಾಟಕ ಮುಖ್ಯಸ್ಥ ತುಫೈಲ್
Team Udayavani, Apr 3, 2023, 6:55 AM IST
ಬೆಂಗಳೂರು: ಹಿಂದೂ ಮುಖಂಡ ಪ್ರವೀಣ್ ನೆಟ್ಟಾರು ಪ್ರಕರಣದಲ್ಲಿ ಇತ್ತೀಚೆಗಷ್ಟೇ ಬಂಧನಕ್ಕೊಳಗಾದ ಕೊಡಗು ಮೂಲದ ತುಫೈಲ್ ಪಿಎಫ್ಐ ಸಂಘಟನೆಯ “ಹಿಟ್ ಸ್ಕ್ವಾಡ್’ನ ಕರ್ನಾಟಕ ಮುಖ್ಯಸ್ಥನಾಗಿದ್ದ. ಜತೆಗೆ ಈತನೇ ಇತರೆ ಕಾರ್ಯಕರ್ತರಿಗೆ ಶಸ್ತ್ರಾಸ್ತ್ರ ಮತ್ತು ಇತರೆ ಸಮರ ಕಲೆಗಳ ತರಬೇತಿ ನೀಡುತ್ತಿದ್ದ ಎಂಬ ಸ್ಫೋಟಕ ಮಾಹಿತಿ ಎನ್‌ಐಎ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
2022ರ ಜುಲೈನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದಲ್ಲಿ ಬಿಜೆಪಿ ಯುವಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರುನನ್ನು ಪಿಎಫ್ಐ ಕಾರ್ಯಕರ್ತರು ಹತ್ಯೆಗೈದಿದ್ದರು. ಈ ಪ್ರಕರಣದ ಪ್ರಮುಖ ಆರೋಪಿಗಳ ಪೈಕಿ ತುಫೈಲ್ ಕೂಡ ಒಬ್ಬ. ಈತ ಸುಮಾರು ಎಂಟು ತಿಂಗಳ ಕಾಲ ತಲೆಮರೆಸಿಕೊಂಡಿದ್ದು, ಈತನಿಗೆ ಕೊಡಗು ಮೂಲದ ಮೊಹಮ್ಮದ್ ಶಫಿ ಎಂಬಾತ ತನ್ನ ಅಮೃತಹಳ್ಳಿ ಮನೆಯಲ್ಲಿ ಆಶ್ರಯ ನೀಡಿದ್ದ. ಈ ಮಾಹಿತಿ ಮೇರೆಗೆ ಎನ್‌ಐಎ ಮಾ.5ರಂದು ಆರೋಪಿಯನ್ನು ಬಂಧಿಸಿತ್ತು. ಅಲ್ಲದೆ, ಈತನ ಪತ್ತೆಗಾಗಿ ಎನ್‌ಐಎ 5 ಲಕ್ಷ ರೂ. ಬಹುಮಾನ ಕೂಡ ಘೋಷಿಸಿತ್ತು.
ಹಿಟ್‌ಸ್ಕ್ವಾಡ್‌ನ ಮುಖ್ಯಸ್ಥ, ತರಬೇತುದಾರ: ಕೊಡಗು ಜಿಲ್ಲೆಯ ಪಿಎಫ್ಐನ ಮಾಜಿ ಕಾರ್ಯದರ್ಶಿಯಾಗಿದ್ದ ತುಫೈಲ್ ಶಸ್ತ್ರಾಸ್ತ್ರ ಬಳಕೆ, ಕುಫೂ, ಕರಾಟೆ, ಮಾರ್ಷಲ್ ಆರ್ಟ್ಸ್ ಹಾಗೂ ಇತರೆ ಸಮರ ಕಲೆಗಳಲ್ಲಿ ಪ್ರಾವೀಣ್ಯತೆ ಹೊಂದಿದ್ದ. ಹೀಗಾಗಿ ಸಂಘಟನೆ ಹಿರಿಯರು ಈತನನ್ನು ಹಿಟ್ ಸ್ಕ್ವಾಡ್‌ನ ಕರ್ನಾಟಕದ ಮುಖ್ಯಸ್ಥನಾಗಿ ನೇಮಿಸಿದ್ದರು. ಈ ಸ್ಕ್ವಾಡ್‌ಗಾಗಿ ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಿರುವ ಯುವಕರನ್ನು ಆಯ್ಕೆ ಮಾಡಿಕೊಂಡಿದ್ದ ತುಫೈಲ್, ಅವರಿಗೆ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರದ ಗಡಿ ಭಾಗದ ಅರಣ್ಯ ಪ್ರದೇಶಗಳಲ್ಲಿ ಖುದ್ದು ತರಬೇತಿ ನೀಡುತ್ತಿದ್ದ. ಮಾರಕಾಸ್ತ್ರ ಮತ್ತು ಗನ್ ಅಥವಾ ಪಿಸ್ತೂಲ್ ಬಳಕೆ ಹೇಗೆ ಎಂಬುದನ್ನು ಬೀದಿ ನಾಯಿಗಳ ಹತ್ಯೆ ಮಾಡುವ ಮೂಲಕ ಕಠಿಣ ತರಬೇತಿ ನೀಡುತ್ತಿದ್ದ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಪ್ರತಿ ಜಿಲ್ಲೆಯಲ್ಲೂ ಹಿಟ್ ಸ್ಕ್ವಾಡ್ ರಚನೆ: ಈತನ ಮುಂದಾಳತ್ವದಲ್ಲಿ ರಾಜ್ಯದ ಪ್ರತಿ ಜಿಲ್ಲೆಯಲ್ಲೂ 20 ಮಂದಿಯ ಹಿಟ್ ಸ್ಕ್ವಾಡ್ ರಚಿಸಲಾಗಿತ್ತು. ತಂಡ ಹಿಂದೂ ಪ್ರಖರ ವಾಗ್ಮಿಗಳು, ಹಿಂದೂ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರ ಮೇಲೆ ನಿಗಾವಹಿಸುವುದು, ಅವರ ಬಗ್ಗೆ ಮಾಹಿತಿ ಸಂಗ್ರಹಿಸಬೇಕಿತ್ತು. ಬಳಿಕ ಈ ತಂಡದಲ್ಲೇ ಕೆಲ ಯುವಕರನ್ನು ಆಯ್ಕೆ ಮಾಡಿ, ಅವರಿಗೆ ಶಸ್ತ್ರಾಸ್ತ್ರ ತರಬೇತಿ ನೀಡಿ ಹಿಂದೂ ಮುಖಂಡರನ್ನು ಹತ್ಯೆಗೈಯಲಾಗುತ್ತಿತ್ತು. ಈ ಮೂಲಕ ಹಿಂದೂ ಮುಖಂಡರು, ಕಾರ್ಯಕರ್ತರ ಧ್ವನಿ ಅಡಗಿಸುವುದು ಹಾಗೂ ಜನರ ಮನಸ್ಸಿನಲ್ಲಿ ಭಯ ಉಂಟು ಮಾಡಲಾಗಿತ್ತು.
ಇನ್ನು ಈ ಹಿಟ್ ಸ್ಕ್ವಾಡ್‌ಗಳಿಗೆ ವಿದೇಶಗಳಿಂದ ಹವಾಲಾ ಮೂಲಕ ಹಣ ಸಂದಾಯವಾಗುತ್ತಿತ್ತು. ಈ ಹಿಂದೆ ಬಿಹಾರ ಮತ್ತು ಕರ್ನಾಟಕದಲ್ಲಿ ಬಂಧನಕ್ಕೊಳಗಾದ ಕೆಲ ಪಿಎಫ್ಐ ಕಾರ್ಯಕರ್ತರ ವಿಚಾರಣೆಯಲ್ಲಿ ಈ ಮಾಹಿತಿ ಬೆಳಕಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ.
ವರದಿಗಾರನ ನೇಮಕ!
ಪಿಎಫ್ಐನ ಹಿಟ್ ಸ್ಕ್ವಾಡ್‌ನಲ್ಲೇ ಕೆಲ ಯುವಕರನ್ನು “ವರದಿಗಾರ’ ಎಂದು ಆಯ್ದುಕೊಳ್ಳಲಾಗಿತ್ತು. ಈ ವರದಿಗಾರ ಹಿಂದೂ ಮುಖಂಡರು, ವಾಗ್ಮಿಗಳ ಪಟ್ಟಿ ಸಿದ್ಧಪಡಿಸಬೇಕು. ಅವರು ಭಾಗವಹಿಸುವ ಕಾರ್ಯಕ್ರಮಗಳು, ಅವರ ಭಾಷಣಗಳ ತುಣುಕುಗಳನ್ನು ಸಂಗ್ರಹಿಸುತ್ತಿದ್ದರು. ಈ ವೇಳೆ ತಮ್ಮ ಸಮುದಾಯದ ವಿರುದ್ಧ ಯಾವುದಾದರೂ ಆಕ್ಷೇಪಾರ್ಹ ಹೇಳಿಕೆಗಳಿದ್ದರೆ, ಅದನ್ನು ಉಲ್ಲೇಖಿಸಿ ತುಫೈಲ್‌ಗೆ ವರದಿ ಮಾಡುತ್ತಿದ್ದರು. ಆನಂತರ ಆತನ ಬಗ್ಗೆ ಇನ್ನಷ್ಟು ಮಾಹಿತಿ ಸಂಗ್ರಹಿಸಿ, ಹಲ್ಲೆ ಅಥವಾ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಈ ರೀತಿ ವರದಿಗಾರನಂತೆ ಕೆಲಸ ಮಾಡುತ್ತಿದ್ದ ಪಿಎಫ್ಐ ಕಾರ್ಯಕರ್ತ, ಕೇರಳ ಮೂಲದ ಮೊಹಮ್ಮದ್ ಸಾದಿಕ್‌ನನ್ನು ಕಳೆದ ಜನವರಿಯಲ್ಲಿ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಬಂಧಿಸಲಾಗಿತ್ತು.
-ಮೋಹನ್ ಭದ್ರಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
MUST WATCH
ಹೊಸ ಸೇರ್ಪಡೆ
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.