ಮಾತೆ ಮಹಾದೇವಿ ಕ್ರಿಯಾ ಸಮಾಧಿಗೆ ಸಕಲ ಸಿದ್ಧತೆ
Team Udayavani, Mar 16, 2019, 1:51 AM IST
ಕೂಡಲಸಂಗಮ: ಲಿಂಗೈಕ್ಯರಾದ ಕೂಡಲಸಂಗಮ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಜಗದ್ಗುರು ಡಾ| ಮಾತೆ ಮಹಾದೇವಿ ಅವರ ಕ್ರಿಯಾ ಸಮಾಧಿಗೆ ಕೂಡಲಸಂಗಮದ ಬಸವ ಧರ್ಮ ಪೀಠದಲ್ಲಿ ಸಕಲ ಸಿದ್ಧತೆ ಮಾಡಿದ್ದು, ಶನಿವಾರ ಅವರ ಕ್ರಿಯಾ ಸಮಾಧಿ ಕಾರ್ಯ ನೆರವೇರಲಿದೆ. ಕೂಡಲಸಂಗಮ ಬಸವ ಧರ್ಮ ಪೀಠದ ಆವರಣದ ಶರಣ ಲೋಕದ ಘಣಲಿಂಗ ಮಂಟಪದಲ್ಲಿರುವ ಅಕ್ಕಮಹಾದೇವಿ ಮತ್ತು ಅಂತರ್ಜಾತಿ ವಿವಾಹ ಚಿತ್ರಪಟದ ಬಳಿ ಅವರ ಜೀವಿತ ಅವಧಿಯಲ್ಲಿಯೇ (24 ವರ್ಷಗಳ ಹಿಂದೆ) ಸಮಾಧಿ ನಿರ್ಮಾಣಗೊಂಡಿದ್ದು, ಮಾತೆ ಮಹಾದೇವಿ ಅವರು ಇದೇ ಸ್ಥಳದಲ್ಲಿ ಲಿಂಗೈಕ್ಯವಾಗಿ ಲಿಂಗದ ರೂಪದಲ್ಲಿ ದರ್ಶನ ನೀಡಲಿದ್ದಾರೆ.
ಭಕ್ತರ ದರ್ಶನಕ್ಕೆ ಅವಕಾಶ: ಶುಕ್ರವಾರ ರಾತ್ರಿ ಕೂಡಲಸಂಗಮಕ್ಕೆ ಆಗಮಿಸುವ ಮಾತೆ ಮಹಾದೇವಿಯವರ ಲಿಂಗ ಶರೀರವನ್ನು ಚಾಲುಕ್ಯ ಮಹಾದ್ವಾರದಿಂದ ಬಸವಣ್ಣನವರ ಐಕ್ಯ ಮಂಟಪದವರೆಗೆ ಮೆರವಣಿಗೆ ನಡೆಸಿ, ಮರಳಿ ಬಸವ ಧರ್ಮ ಪೀಠದ ಮಹಾಮನೆ ಆವರಣಕ್ಕೆ ತಂದು ಬಸವ ತತ್ವದಡಿ ಪ್ರಾರ್ಥನೆ ಸಲ್ಲಿಸಿದ ನಂತರ ಶನಿವಾರ ಮಧ್ಯಾಹ್ನ 12ರವರೆಗೆ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು. 200/300 ಅಡಿ ಅಳತೆ ಮುಖ್ಯ ವೇದಿಕೆಯಲ್ಲಿ ಅಂತಿಮ ದರ್ಶನಕ್ಕೆ ಸಿದಟಛಿತೆ ನಡೆದಿದ್ದು, ಇಲ್ಲಿ 75 ಸಾವಿರ ಭಕ್ತರು ಏಕಕಾಲದಲ್ಲಿ ಕುಳಿತುಕೊಳ್ಳಲು ಅವಕಾಶವಿದೆ. ವಚನ ಸಂಗೀತಕ್ಕಾಗಿ 15/20 ಅಳತೆಯ ಪ್ರತ್ಯೇಕ ವೇದಿಕೆ ಸಿದಟಛಿಗೊಂಡಿದೆ. 200/300 ಅಡಿ ಅಳತೆಯ ಮತ್ತೂಂದು ಪೆಂಡಾಲ್‌ನಲ್ಲಿ ಪ್ರಸಾದದ ವ್ಯವಸ್ಥೆ ಮಾಡಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್?
Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?
BJP: ಇಂದು ಅಶೋಕ್ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್ ಕಮಿಟಿ ಸಭೆ
ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂ ಸಿದ್ದರಾಮಯ್ಯಗೆ ಪತ್ರ
Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Udupi: ವಿಮಾನಯಾನ ವಿಳಂಬದ ವಿರುದ್ಧ ನ್ಯಾಯಾಲಯದಲ್ಲಿ ಜಯ
Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್?
Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?
Assembly Election: ಮಹಾರಾಷ್ಟ್ರಕ್ಕೆ ಫಡ್ನವೀಸ್ ಸಿಎಂ?: 2-3 ದಿನಗಳಲ್ಲೇ ಪ್ರಮಾಣವಚನ
BJP: ಇಂದು ಅಶೋಕ್ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್ ಕಮಿಟಿ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.