Priyank Kharge ಗುಜರಾತಿನಲ್ಲೇ ಬಂಡವಾಳ ಹೂಡಲು ಕಂಪನಿಗಳಿಗೆ ಪ್ರಧಾನಿ ಒತ್ತಡ
Team Udayavani, Jun 25, 2024, 8:50 PM IST
ಬೆಂಗಳೂರು: ತಮ್ಮ ತವರು ರಾಜ್ಯ ಗುಜರಾತ್‌ನಲ್ಲೇ ಬಂಡವಾಳ ಹೂಡಿಕೆ ಮಾಡುವಂತೆ ಕಂಪನಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಒತ್ತಡ ಹಾಕುತ್ತಿದ್ದಾರೆ ಎಂದು ಐಟಿ-ಬಿಟಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದರು.
ವಿಕಾಸಸೌಧದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೂಡಿಕೆದಾರರನ್ನು ರಾಜ್ಯಕ್ಕೆ ಕರೆತರುವವರು ನಾವು, ಹೂಡಿಕೆ ಮಾಡುವಂತೆ ಅವರ ಮನವೊಲಿಸುವವರು ನಾವು. ಅದಕ್ಕಾಗಿ ಕಷ್ಟಪಡುವವರು ನಾವು. ಅದರ ಫಲ ತೆಗೆದುಕೊಂಡು ಹೋಗುವವರು ಅವರು (ಪ್ರಧಾನಿಗೆ) ಎಂದರೆ ಹೇಗೆ? ಪ್ರಧಾನಿಯೇ ಫೋನ್ ಮಾಡಿ ಹೇಳಿದರೆ, ಉದ್ಯಮಿಗಳಾದರೂ ಏನು ಮಾಡುತ್ತಾರೆ. ನೀವೇ ಹೇಳಿ?’ ಎಂದು ಕೇಳಿದರು.
ಹಾಗಿದ್ದರೆ ಕೈಗಾರಿಕೋದ್ಯಮಿಗಳಿಗೆ ಗುಜರಾತಿನಲ್ಲೇ ಹೂಡಿಕೆ ಮಾಡುವಂತೆ ಪ್ರಧಾನಿ ಬೆದರಿಕೆ ಹಾಕುತ್ತಿದ್ದಾರಾ ಎಂದು ಕೇಳಿದಾಗ, ಬೆದರಿಕೆ ಮಾಡುತ್ತಿದ್ದಾರೋ ಅಥವಾ ಮುದ್ದು ಮಾಡಿ ಕರೆಯುತ್ತಿದ್ದಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಐದಾರು ಇಂತಹ ಘಟನೆಗಳು ನಡೆದಿವೆ. ರಾಜ್ಯಕ್ಕೆ ಬಂದವರು ನಂತರ ಅಲ್ಲಿಗೆ ಹೋಗಿದ್ದಾರೆ.
ಒಂದು ಕಂಪನಿ ರಾಜ್ಯಕ್ಕೆ ಬಂದಿತ್ತು. ನಂತರ ಆಂಧ್ರಪ್ರದೇಶಕ್ಕೆ ಹೋಯ್ತು. ಅಲ್ಲಿಂದ ಗುಜರಾತ್‌ಗೆ ಶಿಫ್ಟ್ ಆಯ್ತು. ಇದಾದ ಬಳಿಕ ಮತ್ತೂಂದು ಕಂಪನಿ ಇಲ್ಲಿ ಹೂಡಿಕೆಗೆ ಆಸಕ್ತಿ ತೋರಿಸಿತ್ತು. ನಂತರದಲ್ಲಿ ಗುಜರಾತ್‌ಗೆ ಹೋಯಿತು ಎಂದು ಕಂಪನಿಗಳ ಹೆಸರು ಪ್ರಸ್ತಾಪಿಸದೆ ಸೂಚ್ಯವಾಗಿ ಹೇಳಿದರು.
ಗುಜರಾತ್ ಮಾದರಿಗೆ ಒತ್ತಾಯ:
ಈ ಮಧ್ಯೆ ಬಂಡವಾಳ ಹೂಡಿಕೆ ಆಕರ್ಷಣೆ ವಿಚಾರದಲ್ಲಿ ಗುಜರಾತ್ ಮಾದರಿಯ ಸಬ್ಸಿಡಿ ಸೇರಿದಂತೆ ಮತ್ತಿತರ ಉತ್ತೇಜನಕರ ಸೌಲಭ್ಯಗಳನ್ನು ನೀಡಬೇಕು ಎಂಬ ಕೂಗು ದಿನದಿಂದ ದಿನಕ್ಕೆ ಪ್ರಬಲವಾಗುತ್ತಿದ್ದು, ಈ ಸಂಬಂಧ ಖುದ್ದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗುವುದಾಗಿ ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದರು.
ಗುಜರಾತ್ ಸಬ್ಸಿಡಿ ವಿಚಾರದಲ್ಲಿ ಮೊದಲಿಗೆ ಕುಮಾರಸ್ವಾಮಿ ಅಸಮಾಧಾನ ಹೊರಹಾಕಿದ್ದರು. ನಂತರ ತಮ್ಮ ಹೇಳಿಕೆ ತಿರುಚಲಾಗಿದೆ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಈಚೆಗೆ ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ಹೂಡಿಕೆದಾರರನ್ನು ಆಕರ್ಷಿಸಲು ಪ್ರಧಾನಿ ನರೇಂದ್ರ ಮೋದಿ ಅವರ ತವರು ಗುಜರಾತಿಗೆ ನೀಡುವ ಪ್ರೋತ್ಸಾಹಕ ಸೌಲಭ್ಯಗಳನ್ನು ಕೇಂದ್ರ ಸರ್ಕಾರ ಕರ್ನಾಟಕ್ಕೂ ನೀಡಬೇಕು ಎಂದು ಒತ್ತಾಯಿಸಿದ್ದರು. ಈಗ ಇದಕ್ಕೆ ಪ್ರಿಯಾಂಕ ಖರ್ಗೆ ಕೂಡ ದನಿಗೂಡಿಸಿದ್ದು, ಜೂನ್ 27ರಂದು ದೆಹಲಿಗೆ ಹೊರಟಿದ್ದೇನೆ. ಈ ವೇಳೆ ಹಣಕಾಸು ಸಚಿವರಿಗೆ ಈ ಸಂಬಂಧ ಒತ್ತಾಯಿಸಲಾಗುವುದು ಎಂದು ಹೇಳಿದರು.
ಗುಜರಾತಿಗೆ ನೀಡುವ ಸೌಲಭ್ಯಗಳನ್ನು ಇತರ ರಾಜ್ಯಗಳಿಗೂ ನೀಡಬೇಕು ಎಂಬ ಒತ್ತಾಯ ಬಹುತೇಕರದ್ದಾಗಿದೆ. ಈಚೆಗೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಕೂಡ ಈ ನಿಟ್ಟಿನಲ್ಲಿ ಪ್ರಸ್ತಾಪಿಸಿದ್ದನ್ನು ಸ್ಮರಿಸಬಹುದು ಎಂದೂ ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.