![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Feb 22, 2024, 9:42 PM IST
ವಿಧಾನಸಭೆ: ನಮ್ಮ ಕುಟುಂಬದಿಂದ ಒಂದು ಹೆಣವೂ ಬಿಜೆಪಿಗೆ ಸೇರ್ಪಡೆಯಾಗುವುದಿಲ್ಲ, ನಮ್ಮ ರಕ್ತದಲ್ಲೇ ಆರ್‌ಎಸ್‌ಎಸ್, ಬಿಜೆಪಿ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಬಜೆಟ್ ಚರ್ಚೆ ಸಂದರ್ಭದಲ್ಲಿ, ಬಿಜೆಪಿ ಕಾಲದಲ್ಲಿ 40 ಪರ್ಸೆಂಟ್ ಕಮಿಷನ್ ಹಗರಣ ನಡೆದಿದೆ ಎಂದು ಪ್ರಿಯಾಂಕ್ ಖರ್ಗೆ ಪದೇಪದೆ ಆರೋಪಿಸಿದಾಗ ತಿರುಗೇಟು ಕೊಟ್ಟ ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್, ಇದನ್ನು ಪದೇಪದೆ ಹೇಳುವ ಬದಲು ತನಿಖೆ ನಡೆಸಿ, ಇಲ್ಲ ಸಿಬಿಐಗೆ ಕೊಡಿ. ಸುಮ್ಮನೆ ಆರೋಪ ಮಾಡಬೇಡಿ, ಎಲ್ಲ ಅಡ್ಜೆಸ್ಟ್‌ಮೆಂಟಾ? ಎಂದು ಕೆಣಕಿದರು.
“ನೀವು ಸಹಕರಿಸಿದರೆ ಆಗುತ್ತದೆ’ ಎಂದು ಖರ್ಗೆ ಹೇಳಿದಾಗ, ನಾನು ಸರ್ವಪಕ್ಷಗಳ ವಿರೋಧ ಪಕ್ಷ ನಾಯಕ. ಆದರೆ ನೀವು ಮುಂದಿನ ಮುಖ್ಯಮಂತ್ರಿಯಾಗಬೇಕೆಂದು ಆಕಾಂಕ್ಷೆ ವ್ಯಕ್ತಪಡಿಸಿದ್ದೀರಿ ಎಂದರು. ನೀವು ಶಾಶ್ವತವಾಗಿ ವಿಪಕ್ಷದಲ್ಲಿದ್ದರೆ ನಾನು ಆಗುತ್ತೇನೆ ಎಂದು ಪ್ರಿಯಾಂಕ್ ಹೇಳಿದಾಗ, “ಈ ದೇಶದಲ್ಲಿ ಕಟ್ಟಾ ಕಾಂಗ್ರೆಸಿಗರೇ ಬಿಜೆಪಿಗೆ ಬರುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರ ಹೆಸರೂ ಕೇಳಿ ಬರುತ್ತಿದೆ’ ಎಂದು ಯತ್ನಾಳ್ ಕಾಲೆಳೆದರು. “ನಮ್ಮ ಕುಟುಂಬದ ಒಂದು ಹೆಣವೂ ಬಿಜೆಪಿಗೆ ಬರುವುದಿಲ್ಲ’ ಎಂದು ಪ್ರಿಯಾಂಕ್ ಹೇಳಿದಾಗ, “ಈ ರೀತಿ ಹೇಳಿದ ತುಂಬಾ ಜನರನ್ನು ನೋಡಿದ್ದೇನೆ’ ಎಂದು ಯತ್ನಾಳ್ ಚರ್ಚೆಗೆ ತೆರೆ ಎಳೆದರು.
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
You seem to have an Ad Blocker on.
To continue reading, please turn it off or whitelist Udayavani.