ವಿರೋಧದ ನಡುವೆಯೂ ಧ್ವನಿ ಮತದ ಮೂಲಕ ಮತಾಂತರ ನಿಷೇಧ ವಿಧೇಯಕ ಅಂಗೀಕಾರ
Team Udayavani, Sep 15, 2022, 8:15 PM IST
ಬೆಂಗಳೂರು: ವಿರೋಧಪಕ್ಷಗಳ ತೀವ್ರ ವಿರೋಧದ ನಡುವೆಯೂ ಧ್ವನಿ ಮತದ ಮೂಲಕ ಗರುವಾರ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ ವಿಧಾನ ಪರಿಷತ್ ನಲ್ಲಿ ಅಂಗೀಕರವಾಯಿತು.
ಇದನ್ನೂ ಓದಿ:ಶಿರೂರು ಟೋಲ್‌ಗೇಟ್ ಬಳಿ ವಿಶ್ರಾಂತಿಗೆ ನಿಂತಿದ್ದ ಲಾರಿಯಿಂದ 5 ಟಯರ್‌ಗಳು ಕಳವು
ಕಳೆದ ಡಿಸೆಂಬರ್‌ನಲ್ಲಿ ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಸಂರಕ್ಷಣಾ ಮಸೂದೆ’ಯನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಗಿತ್ತು.
ವಿಧಾನ ಪರಿಷತ್ತಿನಲ್ಲಿ ಆಗ ಆಡಳಿತಾರೂಢ ಬಿಜೆಪಿಗೆ ಬಹುಮತದ ಕೊರತೆಯಿದ್ದ ಕಾರಣ, ಸರ್ಕಾರವು ಈ ವರ್ಷದ ಮೇನಲ್ಲಿ ಮಸೂದೆಯನ್ನು ಜಾರಿಗೆ ತರಲು ಸುಗ್ರೀವಾಜ್ಞೆಯನ್ನು ಪ್ರಕಟಿಸಿತ್ತು.
ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಇಂದು ಮೇಲ್ಮನೆಯಲ್ಲಿ ವಿಧೇಯಕವನ್ನು ಪ್ರಾಯೋಗಿಕವಾಗಿ ಮಂಡಿಸಿದರು.
ಕಾಯ್ದೆಯ ಪ್ರತಿಗಳನ್ನು ಹರಿದು ಹಾಕುವ ಮೂಲಕ ಕಾಂಗ್ರೆಸ್ ಜೆಡಿಎಸ್ ಸದಸ್ಯರು ಸಭಾ ತ್ಯಾಗ ಮಾಡಿದರು. ಈ ವೇಳೆ ಬಿಜೆಪಿ ಸದಸ್ಯರು ಭಾರತ್ ಮಾತಾಕೀ ಜೈ, ಹಿಂದೂ ವಿರೋಧಿ,ದೇಶದ್ರೋಹಿ ಕಾಂಗ್ರೆಸ್ ಗೆ ಧಿಕ್ಕಾರ ಎಂದು ಕೂಗಿದರು.
ಇದೇ ವೇಳೆ ನಾಳೆ ಬೆಳಗ್ಗೆ 10,30ಕ್ಕೆ ಪರಿಷತ್ ಕಲಾಪವನ್ನು ಸಭಾಪತಿಗಳು ಮುಂದೂಡಿದರು.
ಹರಿಪ್ರಸಾದ್ ಆಕ್ರೋಶ : ಮಸೂದೆ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡ ಬಿ.ಕೆ. ಹರಿಪ್ರಸಾದ್, “ಈ ಮಸೂದೆಯನ್ನು ತಂದಿರುವುದೇ ಕಾನೂನುಬಾಹಿರ. ಸಂವಿಧಾನಕ್ಕೆ ತಿದ್ದುಪಡಿ ತರುವ ಮೂಲಕ ಆಗಬೇಕಾದ ಕೆಲಸ ಇದು. ಅನಂತರದಲ್ಲಿ ಅದು ಲೋಕಸಭೆ ಮತ್ತು ರಾಜ್ಯ ಸಭೆಯಲ್ಲಿ ಚರ್ಚೆಯಾಗಿ ಅಂಗೀಕಾರಗೊಳ್ಳಬೇಕು. ಇದುವರೆಗೆ ಬಲವಂತದ ಮತಾಂತರದ ವಿರುದ್ಧ ಎಷ್ಟು ಕೇಸು ಹಾಕಿದ್ದೀರಿ’ ಎಂದು ಪ್ರಶ್ನಿಸಿದರು.
ಅಷ್ಟಕ್ಕೂ ಒಡಿಶಾ ಸೇರಿದಂತೆ 9 ರಾಜ್ಯಗಳಲ್ಲಿ ಈ ಕಾಯ್ದೆ ಜಾರಿಗೊಂಡಿದೆ. ಅಲ್ಲಿ ಏನಾಗುತ್ತಿದೆ ಎಂಬುದರ ಅರಿವು ಸರಕಾರಕ್ಕಿದೆಯೇ? ಮತಾಂತರ ಹೆಸರಿನಲ್ಲಿ ಅಲ್ಲಿ ಮಾರಣಾಂತಿಕ ಹಲ್ಲೆಗಳು ಹೆಚ್ಚಾಗಿವೆ. ಮತಾಂತರ ಜಾಸ್ತಿಯಾಗಿದ್ದರೆ, ಕ್ರೈಸ್ತರು ಮತ್ತು ಮುಸ್ಲಿಮರ ಜನಸಂಖ್ಯೆ ಏರಿಕೆ ಆಗಬೇಕಿತ್ತು. ಆದರೆ, ಕರ್ನಾಟಕದಲ್ಲಿ 2001ರ ಜನಗಣತಿ ಪ್ರಕಾರ ಕ್ರೈಸ್ತರ ಸಂಖ್ಯೆ ಶೇ. 1.91 ಇದ್ದದ್ದು, 2011ಕ್ಕೆ 1.87ಕ್ಕೆ ಇಳಿಕೆಯಾಗಿದೆ. ಈ ಮಧ್ಯೆ ಕ್ರೈಸ್ತರ ಮೇಲೆ ಹಲ್ಲೆಗಳೂ ಹೆಚ್ಚಿವೆ ಎಂದರು.
“ಡಾ| ಅಂಬೇಡ್ಕರ್ ಬೌದ್ಧಧರ್ಮಕ್ಕೆ ಮತಾಂತರ ಆಗಲಿಲ್ಲವೇ? ಅಷ್ಟೇ ಯಾಕೆ 12ನೇ ಶತಮಾನದಲ್ಲಿ ಬಸವಣ್ಣ ಮತಾಂತರಗೊಂಡರು. ಶೋಷಿತ ಸಮುದಾಯವೂ ಜತೆಗೆ ಮತಾಂತರಗೊಂಡಿತು. ಔರಂಗಜೇಬ, ಫ್ರೆಂಚರು, ಬ್ರಿಟಿಷರು ನೂರಾರು ವರ್ಷ ದೇಶವನ್ನು ಆಳಿದರು. ಆಗ ಮತಾಂತರ ಮಾಡಿಬಿಡ ಬಹುದಿತ್ತಲ್ಲವೇ? ಎಲ್ಲರನ್ನೂ ಒಳಗೊಂಡು ಬದುಕುವುದು ನೆಲದ ಗುಣ’ ಎಂದರು.
ಮತಾಂತರ ಮಾಡಬೇಡಿ ಅಂದಿಲ್ಲ :
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, “ಮತಾಂತರ ಹಲ್ಲೆಗಳ ಬಗ್ಗೆ ನೀವು ಹೇಳುವುದಾದರೆ, ಧರ್ಮಯುದ್ಧ ಹೇಗೆ ಆರಂಭವಾಯಿತು ಎಂಬ ಇತಿಹಾಸಕ್ಕೆ ಹೋಗಬೇಕಾದೀತು. ಅದೆಲ್ಲಾ ಈಗ ಬೇಡ. ಸಂವಿಧಾನದ ಕಲಂ 25 ಅನ್ನು ಉಲ್ಲಂ ಸುವ ಅಂಶಗಳು ಇದರಲ್ಲಿ ಯಾವುದೂ ಇಲ್ಲ. ಧರ್ಮ ಪಾಲನೆಗೆ ಯಾವುದೇ ತಕರಾರಿಲ್ಲ. ಹಕ್ಕುಗಳು, ವಿಧಿ-ವಿಧಾನಗಳ ರಕ್ಷಣೆ ಅಷ್ಟೇ ಇದರ ಉದ್ದೇಶ. ಮತಾಂತರ ಮಾಡಬೇಡಿ ಎಂದೂ ಇದರಲ್ಲಿ ಹೇಳಿಲ್ಲ. ಧರ್ಮದ ಹೆಸರಿನಲ್ಲಿ ಭಯೋತ್ಪಾದನೆ, ಅಧರ್ಮ ತಡೆಯಲು ಇದು ಪೂರಕ’ ಎಂದರು.
2021ರ ಡಿಸೆಂಬರ್ ಅಧಿವೇಶನದಲ್ಲೇ ವಿಧಾನಸಭೆಯಲ್ಲಿ ಉದ್ದೇಶಿತ ವಿಧೇಯಕ
ಅಂಗೀಕಾರಗೊಂಡಿತ್ತು. ಮೇಲ್ಮನೆಯಲ್ಲಿ ಬಹುಮತದ ಕೊರತೆಯಿಂದ ಆಡಳಿತ ಪಕ್ಷ ವಿಧೇಯಕ ಮಂಡಿಸಿ, ಸಂಖ್ಯಾಬಲ ಹೊಂದಿಸಲು ಪ್ರಯತ್ನಿಸಿ ವಿಫಲವಾಗಿತ್ತು.
ಮುಖ್ಯಾಂಶಗಳು:
01. ಬಲವಂತ, ಆಮಿಷ ಮತ್ತು ಮದುವೆ ಯಾಗುವ ಭರವಸೆ ನೀಡಿ ನಡೆಸುವ ಮತಾಂತರಕ್ಕೆ ನಿಷೇಧ
02. ಮತಾಂತರಗೊಂಡ ವ್ಯಕ್ತಿಯ ಮನೆ ಯವರು, ಆಪ್ತರು ದೂರು ನೀಡಿದರೆ ಎಫ್ಐಆರ್ ದಾಖಲಿಸಲು ಅವಕಾಶ
03.ಬಲವಂತದ ಮತಾಂತರಕ್ಕೆ 3 -5 ವರ್ಷ ಜೈಲು, 25 ಸಾವಿರ ರೂ.ವರೆಗೆ ದಂಡ
04. ಮಕ್ಕಳು ಅಥವಾ ಮಹಿಳೆ ಅಥವಾ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ವ್ಯಕ್ತಿಯ ಮತಾಂತರಕ್ಕೆ 3ರಿಂದ 10 ವರ್ಷ ಜೈಲು ಮತ್ತು 50 ಸಾವಿರ ರೂ. ದಂಡ
05. ಮತಾಂತರಗೊಳ್ಳುವ ವ್ಯಕ್ತಿ 2 ತಿಂಗಳು ಮೊದಲು ಜಿಲ್ಲಾಧಿಕಾರಿಗೆ ತಿಳಿಸಬೇಕು. ಈ ಮಾಹಿತಿಯನ್ನು ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಕಚೇರಿ ಸೂಚನ ಫಲಕದಲ್ಲಿ ಹಾಕ ಬೇಕು. 30 ದಿನಗಳ ಒಳಗೆ ಆಕ್ಷೇಪಣೆ ಬಂದರೆ ಕಂದಾಯ ಇಲಾಖೆ ವಿಚಾರಣೆ ನಡೆಸಬೇಕು.06. ತಪ್ಪು ಕಂಡುಬಂದಲ್ಲಿ ಕ್ರಿಮಿನಲ್ ಮೊಕ ದ್ದಮೆ ದಾಖಲಿಸಿ ಕ್ರಮ ಕೈಗೊಳ್ಳಲು ಪೊಲೀಸರಿಗೆ ಅಧಿಕಾರ
07. “ಸಂಬಂಧಪಟ್ಟ ಪ್ರಾಧಿಕಾರ’ ರಚನೆ. ಇದು ಕಂದಾಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾಕರ ಕಲ್ಯಾಣ ಇಲಾಖೆ ಮತ್ತಿತರ ಇಲಾಖೆ, ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರನ್ನು ಒಳಗೊಂಡಿರಲಿದೆ. ಇದು ಮತಾಂತರಗೊಂಡ ವ್ಯಕ್ತಿ ಮೊದಲು ಪಡೆಯು ತ್ತಿದ್ದ ಸಾಮಾಜಿಕ ಸ್ಥಾನಮಾನ ಅನುಭವಿಸುವ ಅಥವಾ ಸರಕಾರದಿಂದ ಪಡೆಯುತ್ತಿದ್ದ ಪ್ರಯೋ ಜನಗಳನ್ನು ಮರುವರ್ಗೀಕರಿಸಬೇಕು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.