ತಪ್ಪಾಗಿ ಮಾತಾಡಿದ್ದರೆ ಸಾಬೀತು ಮಾಡಿ: ಶಿವಾನಂದ ಪಾಟೀಲ್
Team Udayavani, Jun 5, 2019, 3:04 AM IST
ವಿಜಯಪುರ: ಸಚಿವ ಎಂ.ಬಿ.ಪಾಟೀಲ ಬಗ್ಗೆ ನಾನು ಎಲ್ಲಿಯೂ ಅವಹೇಳನಕಾರಿಯಾಗಿ ಮಾತನಾಡಿಲ್ಲ. ಒಂದೊಮ್ಮೆ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದೇನೆ ಎಂದರೆ ಸಾಬೀತುಪಡಿಸಲಿ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ ಸವಾಲು ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ ಸ್ಪಷ್ಟೀಕರಣ ನೀಡಿದ ಅವರು, ನಾನು ಎಂ.ಬಿ.ಪಾಟೀಲ ವಿರುದ್ಧ ಯಾವ ಹೇಳಿಕೆಯನ್ನೂ ನೀಡಿಲ್ಲ. ಇದು ಕೆಪಿಸಿಸಿ ಅಧ್ಯಕ್ಷರ ಗಮನಕ್ಕೆ ತರುವ ವಿಷಯವೂ ಅಲ್ಲ. ನನ್ನ ಹೇಳಿಕೆಯನ್ನು ಅವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂದರ್ಭದಲ್ಲಿ ಆಲಮಟ್ಟಿ ಡ್ಯಾಂ ಖಾಲಿ ಆಗಿತ್ತು. ಈ ಬಾರಿ ಆಗುವುದು ಬೇಡ ಎಂದಷ್ಟೇ ಉಲ್ಲೇಖೀಸಿದ್ದೇನೆ. ಇದರ ಹೊರತು ಅವರೇ ಡ್ಯಾಂ ಖಾಲಿ ಮಾಡಿದ್ದಾರೆ ಎಂದು ಹೇಳಿಲ್ಲ. ಅಂಥ ಹೇಳಿಕೆ ಹೇಳಿದ್ದೇನೆ ಎಂದಾದರೆ ಅದನ್ನು ಸಾಬೀತುಪಡಿಸಲಿ.
ತೆಲಂಗಾಣಕ್ಕೆ ನೀರು ಹರಿಸಿದ ನಂತರವೂ ಆಲಮಟ್ಟಿ ಡ್ಯಾಂನಲ್ಲಿ ಬಹಳಷ್ಟು ನೀರಿನ ಸಂಗ್ರಹವಿದೆ. ಈ ವರ್ಷ ನದಿ ಪಾತ್ರದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದು ಹೇಳಿದ್ದೆ. ಇದೇ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡಿರುವ ಅವರು, ನನ್ನ ವಿರುದ್ಧ ಹರಿಹಾಯುತ್ತಿರುವುದು ಸರಿಯಲ್ಲ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.