PSI Exam ಚಿನ್ನಾಭರಣ ತೆಗೆದು ಪರೀಕ್ಷೆ ಬರೆದ ಅಭ್ಯರ್ಥಿಗಳು
ಸುಸೂತ್ರವಾಗಿ ನಡೆದ ಪಿಎಸ್‌ಐ ಮರು ಪರೀಕ್ಷೆ, ಕೇಂದ್ರದ ಸುತ್ತಲೂ ಖಾಕಿ ಕಟ್ಟೆಚ್ಚರ
Team Udayavani, Jan 23, 2024, 11:58 PM IST
ಬೆಂಗಳೂರು: ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ 545 ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) ಮರು ಪರೀಕ್ಷೆಯು ರಾಜ್ಯ ರಾಜಧಾನಿ ಬೆಂಗಳೂರಿನ 117 ಕೇಂದ್ರಗಳಲ್ಲಿ ಮಂಗಳವಾರ ಸುಸೂತ್ರವಾಗಿ ನಡೆದಿದೆ. ಆದರೆ, ಪರೀಕ್ಷಾ ಮಾರ್ಗಸೂಚಿ ನಿಯಮ ಉಲ್ಲಂಘಿಸಿ ಉದ್ದ ತೋಳಿನ ಅಂಗಿ, ಜೀನ್ಸ್ ಪ್ಯಾಂಟ್, ಚಿನ್ನಾಭರಣ ಧರಿಸಿಕೊಂಡು ಬಂದಿದ್ದ ಕೆಲವು ಅಭ್ಯರ್ಥಿಗಳು ಪರದಾಡುತ್ತಿರುವ ದೃಶ್ಯ ಕಂಡು ಬಂತು.
ಮಂಗಳವಾರ ಬೆಂಗಳೂರಿನ 117 ಪರೀಕ್ಷಾ ಕೇಂದ್ರಗಳಲ್ಲಿ ಪಿಎಸ್‌ಐ 545 ಹುದ್ದೆಗಳಿಗಾಗಿ 54 ಸಾವಿರ ಅಭ್ಯರ್ಥಿಗಳು ಪರೀಕ್ಷೆ ಎದುರಿಸಿದರು. ಪರೀಕ್ಷೆಯಲ್ಲಿ ನಕಲು ಮಾಡಿರುವುದು ಸೇರಿ ಯಾವುದೇ ಅಕ್ರಮಗಳು ನಡೆದಿರುವ ಬಗ್ಗೆ ವರದಿಯಾಗಿಲ್ಲ. ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಲೋಹ ಶೋಧಕ ಯಂತ್ರದ ಮೂಲಕ ಪ್ರತಿ ಅಭ್ಯರ್ಥಿಯನ್ನು ತೀವ್ರ ತಪಾಸಣೆಗೆ ಒಳಪಡಿಸಲಾಗಿತ್ತು. ಆ ವೇಳೆ ಕೆಲವು ಅಭ್ಯರ್ಥಿಗಳ ಕೈಯಲ್ಲಿದ್ದ ಮೊಬೈಲ್ ಬ್ಲೂಟೂತ್, ಸ್ಮಾರ್ಟ್ ವಾಚ್ ಸೇರಿ ಎಲೆಕ್ಟ್ರಾನಿಕ್ ಡಿವೈಸ್‌ಗಳನ್ನು ಪರೀಕ್ಷಾ ಕೇಂದ್ರದ ಒಳಗೆ ತರದಂತೆ ನಿರ್ಬಂಧಿಸಲಾಯಿತು. ಪ್ರತೀ ಪರೀಕ್ಷಾ ಕೇಂದ್ರದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಖಡಗ ತೆಗೆಯಲು ಹರಸಾಹಸ
ಮತ್ತೊಂದು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಎದುರಿಸಲು ಗದಗದಿಂದ ಬೆಂಗಳೂರಿಗೆ ಆಗಮಿಸಿದ್ದ ಅಭ್ಯರ್ಥಿಯೊಬ್ಬ ಧರಿಸಿದ್ದ ಕೈ ಖಡಗ ತೆಗೆಸಲು ಪರೀಕ್ಷಾ ಕೇಂದ್ರದ ಸಿಬಂದಿ ಹರಸಾಹಸ ಪಟ್ಟರೂ ಅದು ಕೈಯಿಂದ ಬರಲಿಲ್ಲ. ಇತ್ತ ಎರಡು ವರ್ಷದ ಹಿಂದೆ ಕೈಗೆ ಹಾಕಿದ್ದ ಖಡಗ ತೆಗೆಯಲು ಅಭ್ಯರ್ಥಿಯೂ ಸಾಕಷ್ಟು ಪ್ರಯತ್ನಿಸಿದ್ದ. ಅನಂತರ ಶಾಂಪೂ ಬಳಸಿ ಕಡಗ ತೆಗೆಯಲಾಯಿತು. ಈ ವೇಳೆ ಆತನ ಕೈಗೆ ತರಚಿದ ಗಾಯವಾಯಿತು.
ಚಿನ್ನಾಭರಣ ತೆಗೆದಿಟ್ಟ ಮಹಿಳೆಯರು
ಕೆಲವು ಮಹಿಳಾ ಅಭ್ಯರ್ಥಿಗಳ ಮೈ ತುಂಬಾ ಧರಿಸಿದ್ದ ಚಿನ್ನಾಭರಣಗಳನ್ನು ತೆಗೆದಿಟ್ಟು ಪರೀಕ್ಷಾ ಕೇಂದ್ರದೊಳಗೆ ಪ್ರವೇಶಿಸಿದರೆ, ಮತ್ತೆ ಕೆಲವು ಮಹಿಳೆಯರು ಚಿನ್ನಾಭರಣ ಕಳಚಲು ಆಕ್ಷೇಪಣೆ ಸಲ್ಲಿಸಿದರು. ಕೊನೆಗೆ ಅಧಿಕಾರಿಗಳ ಮಾತಿಗೆ ಸಮ್ಮತಿಸಿ ಪರೀಕ್ಷೆ ಬರೆಯಬೇಕಾಯಿತು. ಈ ಪೈಕಿ ಕೆಲವು ಮಹಿಳೆಯರು ಆಕ್ರೋಶಗೊಂಡು ಪರೀಕ್ಷೆ ಬರೆಯದೆ ವಾಪಸ್ ಹೋದ ಘಟನೆಯೂ ನಡೆದಿದೆ.
ಪ್ಯಾಂಟ್ ಬದಲಿಸಿ ಬಂದರು!
ಜೀನ್ಸ್ ಪ್ಯಾಂಟ್ ಧರಿಸಿ ಬಂದ ಪರೀಕ್ಷಾರ್ಥಿ ಗಳನ್ನು ಪೊಲೀಸ್ ಸಿಬಂದಿ ವಾಪಸ್ ಕಳುಹಿಸಿ ರುವ ಘಟನೆಯೂ ನಡೆಯಿತು. ಈ ಪೈಕಿ ಕೆಲವು ಅಭ್ಯರ್ಥಿಗಳು ಪ್ಯಾಂಟ್ ಬದಲಾಯಿಸಿಕೊಂಡು ಬಂದು ಪರೀಕ್ಷೆ ಬರೆದರೆ, ಇನ್ನು ಕೆಲವರು ಹಿಡಿ ಶಾಪ ಹಾಕಿ ಮನೆಗೆ ಮರಳಿದರು.
ಉದ್ದ ತೋಳಿನ ಅಂಗಿಗೆ ಕತ್ತರಿ
ಪರೀಕ್ಷಾ ಪ್ರಾಧಿಕಾರವು ಕಡ್ಡಾಯ ವಸ್ತ್ರ ಸಂಹಿತೆ ಸೇರಿದಂತೆ ಇನ್ನಿತರ ನಿಯಮ ವಿಧಿಸಿತ್ತು. ಆದರೆ, ಕೆಲವು ಪರೀಕ್ಷಾರ್ಥಿಗಳು ಇದನ್ನು ಉಲ್ಲಂ ಸಿದ್ದರು. ನಗರದ ಸೆಂಟ್ ಜೋಸೆಫ್ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಫುಲ್ ಶರ್ಟ್ ಧರಿಸಿ ಬಂದಿದ್ದ ಅಭ್ಯರ್ಥಿಯೊಬ್ಬ ಶರ್ಟ್ ತೋಳು ಕತ್ತರಿಸುವುದಾದರೆ ಪರೀಕ್ಷೆ ಬರೆಯದೆ ಹೊರಡುತ್ತೇನೆ ಎಂದು ಭದ್ರತ ಸಿಬಂದಿ ಜತೆಗೆ ಹಠ ಹಿಡಿದ ಪ್ರಸಂಗ ನಡೆಯಿತು. ಪರೀಕ್ಷಾ ಕೇಂದ್ರದ ಸಿಬಂದಿ ಜಗ್ಗದಿದ್ದಾಗ ಶರ್ಟ್ ತೋಳು ಕತ್ತರಿಸಲು ಸಮ್ಮತಿಸಿ ಪರೀಕ್ಷೆಗೆ ಹಾಜರಾಗಿ¨ªಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಕ್ರಮ: ಸಚಿವೆ ಲಕ್ಷ್ಮೀ
Shimoga: ಕಾಲೇಜಿನಲ್ಲಿ ಕುಸಿದು ಬಿದ್ದು 17 ವರ್ಷದ ವಿದ್ಯಾರ್ಥಿನಿ ಮೃ*ತ್ಯು
Actor Darshan: ಕೊನೆಗೂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ದರ್ಶನ್
New Bill: ಇನ್ನು ಪಂಚಾಯತ್‌ರಾಜ್ ವಿಶ್ವವಿದ್ಯಾನಿಲಯಕ್ಕೆ ಮುಖ್ಯಮಂತ್ರಿ ಕುಲಾಧಿಪತಿ
BYV vs Yatnal: ರಾಜ್ಯ ಬಿಜೆಪಿಯಲ್ಲಿ ಬಣ ಕದನ ಮತ್ತಷ್ಟು ಉಲ್ಬಣ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.