ಕೇಂದ್ರ ಬಜೆಟ್ 2022: ಕೊಡುಗೆಗಳು ಸಾಮಾನ್ಯ ವರ್ಗದ ಪರವಾಗಿರಲಿ ಎಂದ ನೆಟ್ಟಿಗರು!
Team Udayavani, Jan 31, 2022, 3:16 PM IST
ಬೆಂಗಳೂರು: 2022ರ ಕೇಂದ್ರ ಬಜೆಟ್ ಅಧಿವೇಶನ ಸೋಮವಾರ ಶುರುವಾಗಿದ್ದು, ಮಂಗಳವಾರ (ಫೆ.1)ದಂದು ಕೇಂದ್ರ ಬಜೆಟ್ ನಡೆಯಲಿದೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿಯೂ ನೆಟ್ಟಿಗರು ಬಜೆಟ್ ನಿರೀಕ್ಷೆಯ ಕುರಿತು ಚರ್ಚೆ ಶುರುಮಾಡಿದ್ದಾರೆ.
ಈ ಬಾರಿಯ ಬಜೆಟ್ ಕುರಿತು ಹಲವರು ತಮ್ಮತಮ್ಮ ಅಭಿಪ್ರಾಯ ಹಾಗು ನಿರೀಕ್ಷೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ವ್ಯಕ್ತಪಡಿಸುತ್ತಿದ್ದಾರೆ.
‘ಈ ಬಾರಿ ಬಜೆಟ್ ಪೆಟ್ಟಿಗೆಯಿಂದ ಏನೇನು ಸವಲತ್ತುಗಳು ಬರುವುದೋ ಕಾದು ನೋಡಬೇಕು. ಪ್ರಮುಖವಾಗಿ ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್ ಗಳ ಬೆಲೆಯಲ್ಲಿ ವಿನಾಯಿತಿ ಸಿಗಬಹುದೇ ಹಾಗೆಯೇ ಗ್ಯಾಸ್ ಬಳಕೆದಾರರ ಸಬ್ಸಿಡಿ ಮತ್ತೆ ಜಾರಿಗೆ ಬರುವುದೇ ಎಂಬ ನಿರೀಕ್ಷೆ ಇದೆ. ಅಂತೆಯೆ ಅಗತ್ಯ ವಸ್ತುಗಳು, ದಿನಸಿ ಪದಾರ್ಥಗಳ ಬೆಲೆಯೂ ಗಗನಕ್ಕೇರಿವುದರಿಂದ ಬೆಲೆ ಇಳಿಕೆಯ ನಿರೀಕ್ಷೆ ಇದೆ. ಈ ಬಾರಿ ಸಾಮಾನ್ಯ ಜನಸ್ನೇಹಿ ಬಜೆಟ್ ಆಗಿರಲಿ’ ಎಂದು ಶ್ರೀಕರ ಎನ್ನುವವರು ಆಶಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಮೊಬೈಲ್ ನಲ್ಲಿ ಯೂಟ್ಯೂಬ್ ವಿಡಿಯೋ ಡೌನ್ ಲೋಡ್ ಮಾಡುವುದು ಹೇಗೆ? ಇಲ್ಲಿದೆ ಸುಲಭ ಉಪಾಯ
‘ಬಜೆಟ್ ಅಧಿವೇಶನ ಎಂದಕೂಡಲೇ ರಾಜಕಾರಣಿಗಳಲ್ಲೂ, ಜನರಲ್ಲೂ ಒಂದು ರೀತಿಯಲ್ಲಿ ಕುತೂಹಲವಿರುತ್ತದೆ. ಯಾವ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಸಿಗಲಿದೆ ಯಾವ ರಾಜ್ಯಕ್ಕೆ ಏನೇನು ಸಿಗಲಿದೆ ಎಂಬ ಚರ್ಚೆ ಶುರುವಾಗುತ್ತದೆ. ಹಾಗೆಯೇ, ಈ ಬಾರಿಯ ಬಜೆಟ್ ನಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಗಲಿ ಎಂದು ಆಶಿಸುತ್ತೇನೆ’ ಎಂದು ಚೈತ್ರಾ ರಾವ್ ಎನ್ನುವರು ಕೂ ಮಾಡಿದ್ದಾರೆ.
‘ಈ ಬಾರಿಯ ಬಜೆಟ್ ಮಂಡನೆಯಲ್ಲಿ ಕೊರೊನಾ ಮುಂದಿನ ಬೆಳವಣಿಗೆಯನ್ನು ಗಮನದಲ್ಲಿ ಇಟ್ಟುಕೊಂಡು ಆರೋಗ್ಯ ಸೌಲಭ್ಯಗಳನ್ನು ಉತ್ತೇಜಿಸಬೇಕು. ಹಾಗೂ ದೇಶದ ಆರ್ಥಿಕತೆ ಪ್ರಗತಿ ಹೊಂದುವ ನಿಟ್ಟಿನಲ್ಲಿ ಬಜೆಟ್ ಇದ್ದರೆ ಬಹಳ ಉತ್ತಮ ಎನಿಸುತ್ತದೆ’ ಎಂದು ಚಂದನ ಎನ್ನುವವರು ಕೂ ಮಾಡಿದ್ದಾರೆ.
‘ದಿನಬಳಕೆ ವಸ್ತುಗಳ ತೆರಿಗೆ ಕಡಿಮೆ ಮಾಡಿದರೆ ಒಳ್ಳೆದು. ಅಂದರೆ ಬೇಳೆ, ಅಡುಗೆ ಎಣ್ಣೆ, ಗ್ಯಾಸ್ ಸಿಲಿಂಡರ್, ಅಕ್ಕಿ, ವಿದ್ಯುತ್, ನೀರು ಇವುಗಳ ಮೇಲೆ ತೆರಿಗೆ ಕಡಿಮೆ ಮಾಡಿದರೆ ಒಳ್ಳೆದು. ರೈತರಿಗೆ, ಬಡವರ ಸಹಾಯವಾಗುವ ಯೋಜನೆ ಬರಬೇಕು. ಮಧ್ಯಮ ವರ್ಗದವರಿಗೂ ಸಹಾಯವಾಗಬೇಕು. ಉದ್ಯೋಗ ಸೃಷ್ಟಿಯಾಗಬೇಕು’ ಎಂದು ಗೃಹಿಣಿ ಭಾರತಿ ಎನ್ನುವರು ಹೇಳಿದ್ದಾರೆ.
‘ಕೃಷಿ ಕಾಯ್ದೆ ಬಗ್ಗೆ ಮತ್ತು ಅದರ ಹಿಂಪಡೆದ ಬಗ್ಗೆ ಸರಿಯಾಗಿ ಚರ್ಚೆಯಾಗಲಿ, ಅದನ್ನ ವಾಪಸ್ ತರುವುದಾದರೆ ತರಲಿ. ಚುನಾವಣಾ ಸಮಯದ ಬಜೆಟ್ ಕಮರ್ಷಿಯಲ್ ಆಗಿರತ್ತೆ’ ಎಂದಿದ್ದಾರೆ ಸುನೀಲ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Rebels Team: ಜನವರಿಯಲ್ಲಿ ಮತ್ತೆ ರೆಬಲ್ಸ್ ಬಿಜೆಪಿ ವಕ್ಫ್ ಪ್ರವಾಸ
Belagavi Congress Session: ಮಹಾ ಜನಾಂದೋಲನ: ಕಾಂಗ್ರೆಸ್ ಪಣ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bajpe: ತರಕಾರಿ ಬೀಜ ಬಿತ್ತನೆಗೆ ಹಿಂದೇಟು
Manmohan Singh: ಮನಮೋಹನ್ ಸಿಂಗ್ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ
Puttur ನಗರಕ್ಕೂ ಬೇಕು ಟ್ರಾಫಿಕ್ ಸಿಗ್ನಲ್
INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ
Puttur: ಪೆನ್ ಪಾಯಿಂಟ್ ಕ್ರಿಕೆಟ್: ಸತತ 2ನೇ ಬಾರಿ ಬ್ಲೂ ಹಂಟರ್ಸ್ ಚಾಂಪಿಯನ್ಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.