ಬೇಸಗೆಗೆ ಮೊದಲೇ ವಿದ್ಯುತ್‌ ಖರೀದಿ ಆರಂಭ!

ಜಲಾಶಯಗಳು ಭರ್ತಿಯಾಗಿದ್ದರೂ ಖರೀದಿಗೆ ಮುಂದಾದ ಸರ್ಕಾರ

Team Udayavani, Jan 29, 2025, 7:27 AM IST

ಬೇಸಗೆಗೆ ಮೊದಲೇ ವಿದ್ಯುತ್‌ ಖರೀದಿ ಆರಂಭ!

ಬೆಂಗಳೂರು: ಉತ್ತಮ ಮಳೆಯಿಂದ ಜಲಾಶಯಗಳು ಭರ್ತಿಯಾಗಿದ್ದರೂ ಬೇಸಿಗೆಯಲ್ಲಿ ಎದುರಾಗಬಹುದಾದ ವಿದ್ಯುತ್‌ ಸಮಸ್ಯೆ ನೀಗಿಸಲು ಸರ್ಕಾರ ವಿದ್ಯುತ್‌ ಖರೀದಿ ಪ್ರಕ್ರಿಯೆ ಆರಂಭಿಸಿದೆ.

ಬೇಸಿಗೆಗೂ ಮೊದಲೇ ಅಂದರೆ ಜನವರಿಯಲ್ಲೇ ಬೇಡಿಕೆ ಹೆಚ್ಚಳ ಆಗಿಲ್ಲದಿದ್ದರೂ, ಮುನ್ನೆಚ್ಚರಿಕೆ ಕ್ರಮವಾಗಿ ಪ್ರತಿ ಯೂನಿಟ್‌ಗೆ 6.80 ರಿಂದ 7 ರೂ. ದರದಲ್ಲಿ ಸುಮಾರು 200 ಮೆಗಾವಾಟ್‌ ಖರೀದಿ ಮಾಡುತ್ತಿದೆ. ಬರುವ ತಿಂಗಳು ಇನ್ನೂ 600 ಮೆ.ವಾ. ಖರೀದಿಸಲು ಇಂಧನ ಇಲಾಖೆ ಸಿದ್ಧತೆ ನಡೆಸಿದೆ. ಇದರ ಜತೆಗೆ ಉತ್ತರ ಪ್ರದೇಶ ಮತ್ತು ಪಂಜಾಬ್‌ನೊಂದಿಗೆ 1,000-1,100 ಮೆ.ವಾ. ಕೊಡು-ಕೊಳ್ಳುವಿಕೆಯ ಒಡಂಬಡಿಕೆ ಕೂಡ ಮುಂದುವರಿಯಲಿದೆ.

ಪ್ರಸ್ತುತ ಒಂದರಿಂದ 11 ತಿಂಗಳು ಮುಂಚಿತವಾಗಿ ವಿದ್ಯುತ್‌ ಖರೀದಿ ಮಾಡುವ ವ್ಯವಸ್ಥೆಯಾದ ಟರ್ಮ್ ಅಹೆಡ್‌ ಮಾರ್ಕೆಟ್‌ನಲ್ಲಿ (ಟಿಎಎಂ) 200 ಮೆ.ವಾ. ಖರೀದಿ ಮಾಡುತ್ತಿದ್ದು, ಮುಂದಿನ ತಿಂಗಳ ಖರೀದಿ ಕೂಡ ಇದೇ ಮಾದರಿಯಲ್ಲಿ ನಡೆಯಲಿದೆ. ಒಟ್ಟಾರೆ ಬೇಸಿಗೆ ಎದುರಿಸಲು ಹೆಚ್ಚಾ-ಕಡಿಮೆ 2 ಸಾವಿರ ಮೆ.ವಾ.ಗೆ ವಿವಿಧ ರೂಪದಲ್ಲಿ ಇಲಾಖೆ ವ್ಯವಸ್ಥೆ ಮಾಡಿಕೊಳ್ಳುತ್ತಿದೆ ಎಂದು ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ.

ಬೇಡಿಕೆಗೆ ತಕ್ಕಷ್ಟು ಪೂರೈಸಲು ಮುಂಜಾಗ್ರತೆ:
ಆರಂಭದಲ್ಲಿ ಈ ಬಾರಿ ಉತ್ತಮ ಮಳೆಯಾಗಿದ್ದು, ಜಲಾಶಯಗಳೆಲ್ಲವೂ ಭರ್ತಿ ಆಗಿದೆ. ಹಾಗಾಗಿ, ಬೇಸಿಗೆಯಲ್ಲಿ ವಿದ್ಯುತ್‌ ಸಮಸ್ಯೆ ತಲೆದೋರದು. ಖರೀದಿ ಅನಿವಾರ್ಯತೆಯೂ ಉಂಟಾಗದು ಎಂದು ಇಂಧನ ಇಲಾಖೆ ಸಮರ್ಥನೆ ನೀಡುತ್ತಿತ್ತು. ಆದರೆ, ದಿನದಿಂದ ದಿನಕ್ಕೆ ಬೇಡಿಕೆ ಮತ್ತು ಪೂರೈಕೆ ನಡುವಿನ ಅಂತರ ಹೆಚ್ಚುತ್ತಲೇ ಇದೆ. ಇದನ್ನು ಮನಗಂಡು ಈ ಹಿನ್ನೆಲೆಯಲ್ಲಿ ಮುಂಚಿತವಾಗಿಯೇ ಖರೀದಿಗೆ ಬುಕಿಂಗ್‌ ಮಾಡಲಾಗುತ್ತಿದೆ.

ಜನವರಿ ಆರಂಭದಲ್ಲಿ ಬೇಡಿಕೆ ಮತ್ತು ಪೂರೈಕೆಗೆ ಹೋಲಿಸಿದರೆ, 6 ರಿಂದ 8 ದಶಲಕ್ಷ ಯೂನಿಟ್‌ ಕೊರತೆ ಆಗುತ್ತಿತ್ತು. ಈಗ ಆ ಕೊರತೆ 10ರಿಂದ 12 ದಶಲಕ್ಷ ಯೂನಿಟ್‌ಗೆ ಏರಿಕೆ ಆಗಿದೆ. ಈ ಮಧ್ಯೆ ರಾಜ್ಯದ ಶಾಖೋತ್ಪನ್ನಗಳ ಘಟಕಗಳು ಸಂಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿಲ್ಲ. ಇದೇ ಕಾರಣಕ್ಕೆ ಈಗಲೂ ದಿನಕ್ಕೆ 2 ಬಾರಿ ಟ್ರಿಪ್‌ ಆಗುತ್ತಿರುವ ಬಗ್ಗೆ ವರದಿಗಳಾಗುತ್ತಿವೆ. ಬೇಸಿಗೆಗೆ ಇವುಗಳ ಸ್ಥಿತಿ ಇನ್ನೂ ಬಿಗಡಾಯಿಸಲಿದೆ. ಒಮ್ಮೆಲೆ ಖರೀದಿಗೆ ಮಾರುಕಟ್ಟೆ ಪ್ರವೇಶಿಸಿದರೆ, ವಿದ್ಯುತ್‌ ದರ ಯೂನಿಟ್‌ಗೆ 10 ರೂ. ದಾಟುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಇಂಧನ ಮಾರುಕಟ್ಟೆ ಹೀಗಿರುತ್ತೆ
ಸಾಮಾನ್ಯವಾಗಿ ಇಂಧನ ಮಾರುಕಟ್ಟೆಯಲ್ಲಿ ಮೂರು ಪ್ರಕಾರಗಳಿವೆ. ಆ ಪೈಕಿ ಒಂದು ರಿಯಲ್‌ ಟೈಮ್‌ ಮಾರ್ಕೆಟ್‌ (ಆರ್‌ಟಿಎಂ)- ಇದು ಒಂದೂವರೆ ಗಂಟೆ ಮೊದಲು ಬುಕಿಂಗ್‌ ಮಾಡುವುದಾಗಿದೆ. ಇಲ್ಲಿ ವಿದ್ಯುತ್‌ ಸಿಗುವುದು ಗ್ಯಾರಂಟಿ ಇರುವುದಿಲ್ಲ. ಇನ್ನು ಡೇ ಅಹೆಡ್‌ ಮಾರ್ಕೆಟ್‌ (ಡಿಎಎಂ)- ಒಂದು ದಿನ ಮುನ್ನ ಬುಕಿಂಗ್‌ ಮಾಡುವುದಾಗಿದ್ದು, ಇಲ್ಲಿ ವಿದ್ಯುತ್‌ ಸಿಗುವ ಸಾಧ್ಯತೆ 50:50 ಇರುತ್ತದೆ. ಅದೇ ರೀತಿ, ಟರ್ಮ್ ಅಹೆಡ್‌ ಮಾರ್ಕೆಟ್‌ (ಟಿಎಎಂ)- ಒಂದರಿಂದ 11 ತಿಂಗಳು ಮುಂಚಿತವಾಗಿ ವಿದ್ಯುತ್‌ ಖರೀದಿ ಮಾಡುವ ವ್ಯವಸ್ಥೆ ಆಗಿದೆ. ಮೊದಲೇ ಪ್ಲಾನ್‌ ಮಾಡಿದ್ದರೆ, ಟರ್ಮ್ ಅಹೆಡ್‌ ಮಾರ್ಕೆಟ್‌ನಲ್ಲಿ ಖರೀದಿಗಿಳಿಯಬಹುದು. ಆಗ ಆಯ್ಕೆಗಳು ಹೆಚ್ಚಿರುತ್ತವೆ.

ಜನವರಿ 27ಕ್ಕೆ ರಾಜ್ಯದ ವಿದ್ಯುತ್‌ ಬೇಡಿಕೆ ಮತ್ತು ಪೂರೈಕೆ ವಿವರ ಹೀಗಿದೆ.
* 298 ದಶಲಕ್ಷ ಯೂನಿಟ್‌ ಬೇಡಿಕೆ
* 285 ದಶಲಕ್ಷ ಯೂನಿಟ್‌ ಪೂರೈಕೆ

ಯಾವ ಮೂಲದಿಂದ ಎಷ್ಟು? (ದಶಲಕ್ಷ ಯೂನಿಟ್‌ಗಳಲ್ಲಿ)
* 45 ಜಲ ವಿದ್ಯುತ್‌ನಿಂದ
* 69.97 ಶಾಖೋತ್ಪನ್ನ ಘಟಕಗಳಿಂದ
* 50.15 ಸೌರವಿದ್ಯುತ್‌ನಿಂದ
* 80.44 ಕೇಂದ್ರ ವಿದ್ಯುತ್‌ ಉತ್ಪಾದನಾ ಘಟಕಗಳಿಂದ
* 20 ಯುಪಿಸಿಎಲ್‌ನಿಂದ
* 13.35 ಪವನ ವಿದ್ಯುತ್‌ನಿಂದ (ಇದು ಅನಿಶ್ಚಿತತೆಯಿಂದ ಕೂಡಿದ್ದಾಗಿದೆ)

-ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

Delhi-Stampede-Railway

Maha Kumbh Rush: ಹೊಸದಿಲ್ಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತದಿಂದ 16 ಮಂದಿ ದುರ್ಮರಣ!

Kottigehara-Bill

Kottigehara: 35 ವರ್ಷಗಳ ಹಿಂದೆ ಸೇವಿಸಿದ್ದ ಊಟದ ಬಿಲ್‌ ಪಾವತಿ!

Ranveer Allahbadia: ನಾನು ಎಲ್ಲೂ ಓಡಿ ಹೋಗಿಲ್ಲ: ಅಲಹಬಾದಿಯಾ

Ranveer Allahbadia: ನಾನು ಎಲ್ಲೂ ಓಡಿ ಹೋಗಿಲ್ಲ: ಅಲಹಬಾದಿಯಾ

‘Y’ security: ತಮಿಳು ನಟ ವಿಜಯ್‌ಗೆ ಭದ್ರತೆ ಕೊಟ್ಟ ಕೇಂದ್ರ ಸರ್ಕಾರ

‘Y’ security: ತಮಿಳು ನಟ ವಿಜಯ್‌ಗೆ ಭದ್ರತೆ ಕೊಟ್ಟ ಕೇಂದ್ರ ಸರ್ಕಾರ

Justice Abhay Oka: ಕೋರ್ಟ್ ಗೆ “ಮಹಾ’ಗಿಂತ ಕರ್ನಾಟಕದಲ್ಲಿ ಹೆಚ್ಚು ಮೂಲಸೌಕರ್ಯ: ಜಡ್ಜ್

Justice Abhay Oka: ಕೋರ್ಟ್ ಗೆ “ಮಹಾ’ಗಿಂತ ಕರ್ನಾಟಕದಲ್ಲಿ ಹೆಚ್ಚು ಮೂಲಸೌಕರ್ಯ: ಜಡ್ಜ್

Delhi-BJp

Setback: ಕೇಜ್ರಿವಾಲ್‌ಗೆ ಮತ್ತೊಂದು ಶಾಕ್‌..ಆಪ್‌ನ 3 ಕೌನ್ಸಿಲರ್‌ಗಳು ಬಿಜೆಪಿ ಸೇರ್ಪಡೆ

Arrested: ಬಾಕಿ ಹಣ ಬಿಡುಗಡೆಗೆ 10 ಲಕ್ಷ ರೂ. ಲಂಚ… ರಕ್ಷಣಾ ಖಾತೆಯ 3 ಮಂದಿ ಬಂಧನ

Arrested: ಬಾಕಿ ಹಣ ಬಿಡುಗಡೆಗೆ 10 ಲಕ್ಷ ರೂ. ಲಂಚ… ರಕ್ಷಣಾ ಖಾತೆಯ 3 ಮಂದಿ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DK Shivakumar: ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ನೀನೇನು ಮಾಡಿದ್ದೆ ಹೇಳಪ್ಪಾ?- ಡಿಕೆಶಿ

DK Shivakumar: ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ನೀನೇನು ಮಾಡಿದ್ದೆ ಹೇಳಪ್ಪಾ?- ಡಿಕೆಶಿ

ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ಕೆಳಗೆ ಬಿದ್ದ ಟಿಪ್ಪರ್… ಓರ್ವ ಮೃತ್ಯು. ಇನ್ನೋರ್ವ ಗಂಭೀರ

ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ಕೆಳಗೆ ಬಿದ್ದ ಟಿಪ್ಪರ್… ಓರ್ವ ಮೃತ್ಯು. ಇನ್ನೋರ್ವ ಗಂಭೀರ

Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ

Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ

Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…

Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…

Ashwin Vaishnav

Bengaluru; ನಗರದಿಂದ ವಿಮಾನ ನಿಲ್ದಾಣಕ್ಕೆ ರೈಲು ಸಂಪರ್ಕ: ಅಶ್ವಿನಿ ವೈಷ್ಣವ್

MUST WATCH

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

udayavani youtube

ಪ್ರಥಮ ಶಿವಮೊಗ್ಗ ಕಂಬಳಕ್ಕೆ ಸರ್ವ ಸಿದ್ದತೆ: ಮಾಹಿತಿ ನೀಡಿದ ಈಶ್ವರಪ್ಪ

udayavani youtube

ಮಹಿಳೆಯರ ಸಣ್ಣ ಉದ್ದಿಮೆಗಳ ಬೆಂಬಲಕ್ಕೆ ‘ ಪವರ್ ಪರ್ಬ’

ಹೊಸ ಸೇರ್ಪಡೆ

Delhi-Stampede-Railway

Maha Kumbh Rush: ಹೊಸದಿಲ್ಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತದಿಂದ 16 ಮಂದಿ ದುರ್ಮರಣ!

Kottigehara-Bill

Kottigehara: 35 ವರ್ಷಗಳ ಹಿಂದೆ ಸೇವಿಸಿದ್ದ ಊಟದ ಬಿಲ್‌ ಪಾವತಿ!

Ranveer Allahbadia: ನಾನು ಎಲ್ಲೂ ಓಡಿ ಹೋಗಿಲ್ಲ: ಅಲಹಬಾದಿಯಾ

Ranveer Allahbadia: ನಾನು ಎಲ್ಲೂ ಓಡಿ ಹೋಗಿಲ್ಲ: ಅಲಹಬಾದಿಯಾ

‘Y’ security: ತಮಿಳು ನಟ ವಿಜಯ್‌ಗೆ ಭದ್ರತೆ ಕೊಟ್ಟ ಕೇಂದ್ರ ಸರ್ಕಾರ

‘Y’ security: ತಮಿಳು ನಟ ವಿಜಯ್‌ಗೆ ಭದ್ರತೆ ಕೊಟ್ಟ ಕೇಂದ್ರ ಸರ್ಕಾರ

Justice Abhay Oka: ಕೋರ್ಟ್ ಗೆ “ಮಹಾ’ಗಿಂತ ಕರ್ನಾಟಕದಲ್ಲಿ ಹೆಚ್ಚು ಮೂಲಸೌಕರ್ಯ: ಜಡ್ಜ್

Justice Abhay Oka: ಕೋರ್ಟ್ ಗೆ “ಮಹಾ’ಗಿಂತ ಕರ್ನಾಟಕದಲ್ಲಿ ಹೆಚ್ಚು ಮೂಲಸೌಕರ್ಯ: ಜಡ್ಜ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.