ಆನ್‌ಲೈನ್‌ ಶಿಕ್ಷಣದಿಂದಲೂ ಗುಣಮಟ್ಟ ವರ್ಧನೆ ಸಾಧ್ಯ

ಒತ್ತಡ ನಿರ್ವಹಣೆ ಹೇಗೆ? ಪರಿಣತರ ಸಲಹೆ

Team Udayavani, Oct 22, 2020, 5:30 AM IST

ಆನ್‌ಲೈನ್‌ ಶಿಕ್ಷಣದಿಂದಲೂ ಗುಣಮಟ್ಟ ವರ್ಧನೆ ಸಾಧ್ಯ

ಸಾಂದರ್ಭಿಕ ಚಿತ್ರ

ಆನ್‌ಲೈನ್‌ ಕಲಿಕೆ ಕುರಿತು ಇರುವ ಸ್ಪಷ್ಟತೆಗಿಂತ ಗೊಂದಲವೇ ಹೆಚ್ಚು. ಹಾಗೆ ನೋಡುವುದಾದರೆ ಇದು ಪೂರ್ಣ ಪ್ರಮಾಣದ ಆನ್‌ಲೈನ್‌ ಕಲಿಕೆಯೂ ಅಲ್ಲ; ಆಂಶಿಕವಷ್ಟೇ. ಬಹಳ ಸರಳವಾಗಿ ಹೇಳುವುದಾದರೆ “ವೀಡಿಯೋ ತರಗತಿಗಳು’. ಇದು ಸೃಷ್ಟಿಸುತ್ತಿರುವ ಒತ್ತಡವೇ ಬೇರೆ ತೆರನಾದದ್ದು. ಈ ದಿಶೆಯಲ್ಲಿ  ಇಂದು ಪೋಷಕರ ಒತ್ತಡ ಮತ್ತು ನಿರ್ವಹಣೆ ಬಗೆಗಿನ ವಿವರ ನೀಡಲಾಗಿದೆ. ಇದನ್ನು ಹೊರತುಪಡಿಸಿ ಪ್ರಶ್ನೆಗಳಿದ್ದರೆ ವಾಟ್ಸಾಪ್‌ ಮಾಡಿ. 7618774529
ಬದಲಾದ ಕಾಲಘಟ್ಟದಲ್ಲಿ ಮಕ್ಕಳಿಗೆ “ಡಿಜಿಟಲ್‌ ಕಲಿಕೆ’ಯೇ ಏಕೈಕ ಮಾರ್ಗವಾಗಿದ್ದು, ಎಲ್ಲರೂ ಇದಕ್ಕೆ ಹೊಂದಿಕೊಳ್ಳುವುದು ಅನಿವಾರ್ಯವಾಗಿದೆ. ಈ ಆನ್‌ಲೈನ್‌ ಕಲಿಕೆ ಇನ್ನೂ ಕೆಲವು ತಿಂಗಳುಗಳ ಕಾಲ ಮುಂದುವರಿಯುವ ಸಾಧ್ಯತೆಗಳಿವೆ. ಹೀಗೆ ಮುಂದುವರಿದರೆ ಮಕ್ಕಳ ಕಲಿಕಾ ಗುಣಮಟ್ಟ ಹಾಗೂ ಕೌಶಲದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಲ್ಲಿ ಅನುಮಾನವೇ ಇಲ್ಲ. ಸಾಂಪ್ರದಾಯಿಕ ತರಗತಿಯ ಶಿಕ್ಷಣಕ್ಕೆ ಪರ್ಯಾಯವಾಗಿ ಡಿಜಿಟಲ್‌ ಕಲಿಕೆಯೇ ಈಗ ಮುನ್ನೆಲೆಯಲ್ಲಿದೆ. ಆನ್‌ಲೈನ್‌ ಶಿಕ್ಷಣದ ಜತೆಗೆ ಮಕ್ಕಳ ಕಲಿಕಾ ಕೌಶಲ ಹಾಗೂ ಗುಣಮಟ್ಟವನ್ನು ಹೇಗೆ ಬಲವರ್ಧನೆ ಮಾಡಿಕೊಳ್ಳಬಹುದು ಎನ್ನುವುದರ ಕುರಿತು ಕುಂದಾಪುರದ ಮನಃಶಾಸ್ತ್ರಜ್ಞ ಡಾ| ಅಂಜಲಿ ಬಿನೋಯಿ ಸಲಹೆಗಳನ್ನು ನೀಡಿದ್ದಾರೆ.
ಗುಣಮಟ್ಟ  ಕಡಿಮೆಯಾಗಲು ಕಾರಣ
 ತರಗತಿಯಲ್ಲಿ ಶಿಕ್ಷಕರು ಮಾಡುವ ಪಾಠ ಎಷ್ಟರಮಟ್ಟಿಗೆ ತಲುಪಿದೆ ಎನ್ನುವುದು ತಿಳಿಯುತ್ತದೆ. ಆದರೆ ಆನ್‌ಲೈನ್‌  ಪಾಠದಲ್ಲಿ ಇದು ಅಸಾಧ್ಯ.
ಆನ್‌ಲೈನ್‌ ತರಗತಿಯಲ್ಲಿ ಮಕ್ಕಳು ತದೇಕಚಿತ್ತದಿಂದ ಪಾಠ ಕೇಳುವಂತೆ ಮಾಡುವುದು ಕಷ್ಟಕರ. ತರಗತಿ ಪಠ್ಯದಲ್ಲಿ ಶಿಕ್ಷಕರು ಮಕ್ಕಳನ್ನು ತಮ್ಮ ನಿಯಂತ್ರಣದಲ್ಲಿರುವಂತೆ ಮಾಡಬಹುದು.
ಆನ್‌ಲೈನ್‌ ಶಿಕ್ಷಣ ಏಕಮುಖವಾಗಿದ್ದು, ಶಿಕ್ಷಕ – ವಿದ್ಯಾರ್ಥಿಗಳ ಮಧ್ಯೆ ದ್ವಿಮುಖ ಸಂವಹನವಿದ್ದಾಗ ಮಾತ್ರ ಕಲಿಕೆ ಮತ್ತು ಕಲಿಸುವುದು ಪರಿಣಾಮಕಾರಿಯಾಗಿರುತ್ತವೆ.
ಮಕ್ಕಳಿಗೆ ಪಾಠ ಮಾಡುವಾಗ ಆಗಾಗ ಅನುಮಾನಗಳು ಹುಟ್ಟಿಕೊಳ್ಳುತ್ತಿದ್ದು, ಇದರಿಂದ ಶಿಕ್ಷಕರಿಗೆ ಅಲ್ಲಿಯೇ ಹೇಳಿ ಪರಿಹರಿಸಿಕೊಳ್ಳಬಹುದು. ಆದರೆ ಆನ್‌ಲೈನ್‌ ಶಿಕ್ಷಣದಿಂದ ಕಷ್ಟ.
ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳು ಪೂರಕವಾಗಿರುತ್ತವೆ. ಡಿಜಿಟಲ್‌ ಕಲಿಕೆಯಲ್ಲಿ ಪಠ್ಯೇತರ ವಿಚಾರಗಳಿಗೆ ಮನ್ನಣೆ ಇಲ್ಲ.
ಶಿಕ್ಷಕರು ಏನು ಮಾಡಬೇಕು?
·  ತಮ್ಮ ತರಗತಿಯಲ್ಲಿರುವ ಎಲ್ಲ ಮಕ್ಕಳೊಂದಿಗೆ ಶಿಕ್ಷಕರು ಸಂವಹನ ಮಾಡುವುದು ಅತೀ ಅವಶ್ಯಕ. ಪ್ರತಿಯೊಬ್ಬ ವಿದ್ಯಾರ್ಥಿಯ ಸಮಸ್ಯೆ, ಅನುಮಾನಗಳಿದ್ದರೆ ಕೇಳಿ ಪರಿಹರಿಸಿಕೊಳ್ಳಲು ಪ್ರತೀ ತರಗತಿಯಲ್ಲಿಯೂ ಅವಕಾಶ ಕೊಡಬೇಕು.
·  ಆನ್‌ಲೈನ್‌ ಶಿಕ್ಷಣದ ಮೂಲಕವೇ ಮಕ್ಕಳನ್ನು ಕ್ರಿಯಾಶೀಲರನ್ನಾಗಿರುವಂತೆ ಮಾಡುವ ಚಟುವಟಿಕೆಗಳನ್ನು ಕೊಡಬೇಕು. ಉದಾಹರಣೆಗೆ ಚಿತ್ರ ಬಿಡಿಸುವಿಕೆ, ಕಸದಲ್ಲಿ ರಸ ತಯಾರಿಕೆ, ತರಕಾರಿ, ತೋಟಗಾರಿಕೆಯಲ್ಲಿ ತೊಡಗುವಂತೆ ಸಲಹೆ ಕೊಡುವುದು ಇತ್ಯಾದಿ.
·  ಶಿಕ್ಷಕರು ವಾರಕ್ಕೊಮ್ಮೆಯಾದರೂ ಮಕ್ಕಳ ಹೆತ್ತವರೊಂದಿಗೆ ಮಾತನಾಡಿ, ಆ ವಾರ ಮಾಡಿದ ಪಾಠ, ಕಲಿಕೆ ವಿಚಾರಗಳ ಬಗ್ಗೆ ಗಮನಹರಿಸಿಕೊಳ್ಳುವುದು ಸೂಕ್ತ.
·  ಮಕ್ಕಳು ಎಲ್ಲವನ್ನು ಮುಕ್ತವಾಗಿ ಹೇಳಿಕೊಳ್ಳಲು ಅವಕಾಶ ಒದಗಿಸಿಕೊಡಬೇಕು. ತಮ್ಮ ಪಾಠ ಮಾಡುವ ರೀತಿಯ ಕುರಿತಂತೆ ವಿದ್ಯಾರ್ಥಿಗಳಿಂದಲೇ ಫೀಡ್‌ ಬ್ಯಾಕ್‌ ಪಡೆಯಿರಿ.
·  ಮಕ್ಕಳು ಆನ್‌ಲೈನ್‌ ತರಗತಿಯಲ್ಲೂ ಲವಲವಿಕೆಯಿಂದ ಪಾಲ್ಗೊಳ್ಳುವಂತೆ ಮಾಡಿ. ಆಗ ನಿಮ್ಮ ಪಾಠ ಮಕ್ಕಳು ಚೆನ್ನಾಗಿ ಗಮನವಿಟ್ಟು ಕಲಿಯುವಂತೆ ಮಾಡಬಹುದು.
ಹೆತ್ತವರು ಏನು ಮಾಡಬೇಕು?
· ಮಕ್ಕಳ ಕಲಿಕೆಗೆ ಪ್ರಮುಖವಾಗಿ ಬೇಕಾಗಿರುವುದು ಓದಿಗೆ ಪೂರಕ ವಾತಾವರಣ. ಇದನ್ನು  ಪೋಷಕರು ನಿರ್ಮಿಸಿಕೊಡಬೇಕು.
· ಪುಸ್ತಕ ಓದುವುದರಿಂದ ಮಕ್ಕಳ ಕಲಿಕಾ ಕೌಶಲ ಹೆಚ್ಚಳ ಸಾಧ್ಯ. ಮಕ್ಕಳಿಗೆ  ಪುಸ್ತಕಗಳನ್ನು ಓದುವುದನ್ನು ದಿನಚರಿಯನ್ನಾಗಿಸಿ.
·  ವಿಷಯದ ಬಗ್ಗೆ ಆಸಕ್ತಿ ಮಕ್ಕಳ ಕಲಿಕೆಯನ್ನು ಹೆಚ್ಚಿಸುತ್ತದೆ. ಮಕ್ಕಳು ಉತ್ತಮ ಕಲಿಕೆಯ ಕೌಶಲಗಳನ್ನು ಬೆಳೆಸಿಕೊಳ್ಳಲು ಅವರನ್ನು ಆಕರ್ಷಿಸುವ ವಿಷಯಗಳತ್ತ ಹೆತ್ತವರು ಗಮನ ಹರಿಸಬಹುದು.
·  ಮಕ್ಕಳ ಅಭಿರುಚಿ, ಸಾಮರ್ಥ್ಯ, ವಿಷಯ, ಅರ್ಥೈಸುವ ರೀತಿ ವಿಭಿನ್ನವಾಗಿರುತ್ತದೆ.
ತನ್ನ ಶೈಲಿಗನುಗುಣವಾಗಿ ಮಗು
ಕಲಿಯಲು ಪೋಷಕರು ಉತ್ಸಾಹ ತೋರಬೇಕಾಗುತ್ತದೆ.
·  ಶಾಲೆಯಲ್ಲಿ ಶಿಕ್ಷಕರು ಮಕ್ಕಳ ನೋಟ್ಸ್‌
ಬಗ್ಗೆ ಗಮನಹರಿಸುವಂತೆ ಮನೆಯಲ್ಲಿ ಪೋಷಕರು ಸಹ ಮಕ್ಕಳ ನೋಟ್ಸ್‌, ಪಾಠದ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಇದರೊಂದಿಗೆ ಮಕ್ಕಳ ಅನುಮಾನಗಳನ್ನು ಪರಿಹರಿಸಲು ಪ್ರಯತ್ನಿಸಿ.
·  ಮೊಬೈಲ್‌ ಬಳಕೆ ಕಡಿಮೆ ಮಾಡಿಸಿ. ಕಥೆ, ಪುಸ್ತಕ, ಇತ್ಯಾದಿ ವಿಚಾರಗಳ ಕುರಿತಂತೆ ಗಮನಹರಿಸುವಂತೆ ಮಾಡಬೇಕು.
·  ಮಕ್ಕಳಲ್ಲಿ ಏನೇ ಸಮಸ್ಯೆ ಬಂದರೂ ಶಿಕ್ಷಕರೊಂದಿಗೆ ಮುಕ್ತವಾಗಿ ಚರ್ಚಿಸಿ, ಪರಿಹರಿಸಿಕೊಳ್ಳಿ.
ಉತ್ತಮ ಸಂವಹನ ಅಗತ್ಯ
ತರಗತಿಗೂ, ಈಗಿನ ಆನ್‌ಲೈನ್‌ ಶಿಕ್ಷಣಕ್ಕೂ ಅಜಗಜಾಂತರ ಇದೆ. ಶಾಲಾ ಚಟುವಟಿಕೆ ಇಲ್ಲದಿರುವುದರಿಂದ ಮಕ್ಕಳಲ್ಲಿ ಖನ್ನತೆ, ಆತಂಕ, ಕೆಲವೊಂದು ಸಮಸ್ಯೆಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಹೆತ್ತವರು, ಶಿಕ್ಷಕರು ಗಮಹರಿಸಬೇಕಾಗಿದೆ. ಇವುಗಳ ಬಗೆಗೆ ಒತ್ತು ಕೊಟ್ಟಲ್ಲಿ, ಮಕ್ಕಳು ಆನ್‌ಲೈನ್‌ ಶಿಕ್ಷಣದಲ್ಲೂ ಲವಲವಿಕೆಯಿಂದ ಪಾಲ್ಗೊಳ್ಳುವಂತೆ ಮಾಡಬಹುದು. ಶಿಕ್ಷಕ- ಹೆತ್ತವರು- ವಿದ್ಯಾರ್ಥಿ ಈ ಮೂವರ ಮಧ್ಯೆ ಉತ್ತಮ ಸಂವಹನವಿದ್ದಲ್ಲಿ ಮಾತ್ರ ಆನ್‌ಲೈನ್‌ ಶಿಕ್ಷಣ ಪರಿಣಾಮಕಾರಿಯಾಗಬಹುದು.
– ಡಾ| ಅಂಜಲಿ ಬಿನೋಯಿ, ಮನಃಶಾಸ್ತ್ರಜ್ಞೆ, ಕುಂದಾಪುರ 

ಟಾಪ್ ನ್ಯೂಸ್

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು;

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು

Delhi; Roads should be like Priyanka Gandhi’s cheeks: BJP leader’s statement criticized

Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ

4(1

Snuff: ನಶ್ಯ ತಂದಿಟ್ಟ ಸಮಸ್ಯೆ

Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್‌ʼ ಟ್ರೇಲರ್‌ ಔಟ್- ಮಿಂಚಿದ ಅಕ್ಷಯ್

Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್‌ʼ ಟ್ರೇಲರ್‌ ಔಟ್- ಮಿಂಚಿದ ಅಕ್ಷಯ್

Six Naxalites to be brought into the mainstream soon: Process is fast

Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು

11-heart

Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Six Naxalites to be brought into the mainstream soon: Process is fast

Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು

Davanagere: Opposition parties should not make baseless allegations: CM Siddaramaiah

Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ

Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

Private-Bus

Private Bus fare: ಶೀಘ್ರದಲ್ಲೇ ಖಾಸಗಿ ಬಸ್‌ ಪ್ರಯಾಣ ದರವೂ ಏರಿಕೆ?

BNG-winter

Minimum Temperature: ಬೆಂಗಳೂರಿನಲ್ಲಿ ಶೀಘ್ರ 11 ಡಿಗ್ರಿ ತಾಪ?: 12 ವರ್ಷದಲ್ಲೇ ದಾಖಲೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

15-

Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು;

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು

Delhi; Roads should be like Priyanka Gandhi’s cheeks: BJP leader’s statement criticized

Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ

4(1

Snuff: ನಶ್ಯ ತಂದಿಟ್ಟ ಸಮಸ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.